ವಿಳಾಸ ಹುಡುಕಿ ಹೊರಟವರ ಕಥೆ ವ್ಯಥೆ !

ತಂದೆ ತಾಯಿಯ ಬಿಟ್ಟುಬಂದ ಮೇಲೆ...

Team Udayavani, Dec 6, 2019, 5:59 AM IST

ws-31

ಪ್ರತಿಯೊಬ್ಬರಿಗೂ ಅವರದ್ದೇ ಆದ ವಿಳಾಸ ಅಂಥ ಇರುತ್ತದೆ. ನೋಡಲು, ಮಾತನಾಡಲು ಅಥವಾ ಸಂಪರ್ಕ ಸಾಧಿಸಲೋ ಒಬ್ಬರ ವಿಳಾಸವನ್ನು ಮತ್ತೂಬ್ಬರು ಹುಡುಕಿಕೊಂಡು ಹೋಗುವುದು ಸಹಜ. ಆದರೆ ಇಲ್ಲೊಂದು ತಂಡ ಗಾಂಧಿನಗರದಲ್ಲಿ ತಮ್ಮ ವಿಳಾಸವನ್ನು ತಾವೇ ಹುಡುಕಿಕೊಂಡು ಹೊರಟಿದೆ!

ಹೌದು, ಕನ್ನಡದಲ್ಲಿ ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ ಮತ್ತೂಂದು ವಿಭಿನ್ನ ಟೈಟಲ್‌ನ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ಎಲ್ಲಿ ನನ್ನ ವಿಳಾಸ’ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಅಂತಿಮ ಹಂತದಲ್ಲಿರುವ ಈ ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿವೆ.

ಚಿತ್ರರಂಗದಲ್ಲಿ ನೆಲೆಯೂರುವ ಕನಸು ಕಾಣುತ್ತಿರುವ ನವ ಪ್ರತಿಭೆ ಅಜಯ್‌ ಅದಿತ್‌ ನಾಯಕನಾಗಿ, ಶಿವಮೊಗ್ಗ ಮೂಲದ ಪವಿತ್ರ ನಾಯಕ್‌ ನಾಯಕಿಯಾಗಿ ಈ ಚಿತ್ರದಲ್ಲಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಸೂರ್ಯದೀಪ್‌, ಲಕ್ಕಿ ರಘು, ಸಾಕ್ಷಿ, ಸುನಂದಾ ಮುಂತಾದವರು ಚಿತ್ರದ ಇತರ ಪಾತ್ರಗಳಲ್ಲಿ ಅಭಿನಯಿ­ಸಿದ್ದಾರೆ. ಸಾಗರ ಎಸ್‌. ಗಾವಡೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿದೇಶಿ­ಸುತ್ತಿದ್ದಾರೆ.

ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ಚಿತ್ರತಂಡ, “ಪ್ರಪಂಚದಲ್ಲಿ ತಂದೆ- ತಾಯಿ ಮತ್ತವರ ಪ್ರೀತಿಗೆ ಬೆಲೆ ಕಟ್ಟ ಲಾಗದು. ನಾವು ಹುಟ್ಟಿದ ಮೇಲೆ ತಂದೆ-ತಾಯಿ ವಿಳಾಸವೇ ನಮ್ಮ ವಿಳಾಸವಾಗಿರುತ್ತದೆ. ಅವರಿಗೂ ನಾವೇ ಪ್ರೀತಿಯ ವಿಳಾಸವಾಗಿರುತ್ತೇವೆ. ಅಂತಹ ಒಂದು ಪ್ರೀತಿಯ ಪ್ರತೀಕವಾದ ವಿಳಾಸವನ್ನು ಬಿಟ್ಟು ನಮ್ಮದೆ ಆದ ವಿಳಾಸವನ್ನು ಹುಡುಕಿಕೊಂಡು ಹೊರಟಾಗ ಆಗುವ ತೊಂದರೆ, ಅನಾಹುತಗಳು ಏನೆಂಬುದನ್ನು ಈ ಚಿತ್ರದಲ್ಲಿ ಹೇಳಲು ಹೊರಟಿದ್ದೇವೆ. ಸೆಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯಲ್ಲಿ ಚಿತ್ರ ಸಾಗುತ್ತದೆ’ ಎಂದು ವಿವರಣೆ ಕೊಡುತ್ತದೆ.

“ಎಲ್ಲಿ ನನ್ನ ವಿಳಾಸ’ ಚಿತ್ರಕ್ಕೆ ಸಿ.ಎಸ್‌ ಸತೀಶ್‌ ಛಾಯಾಗ್ರಹಣ, ಸುಜೇಂದ್ರ ಸಂಕಲನ ಕಾರ್ಯವಿದೆ. ಚಿತ್ರದ ನಾಲ್ಕು ಹಾಡುಗಳಿಗೆ ಮಹೇಶ್‌ ಜೋಗಿ ಸಂಗೀತ ಸಂಯೋಜನೆಯಿದ್ದು, ಕಿನ್ನಾಳ್‌ ರಾಜು, ಶಿವು, ವಿನಯ ಪಾಂಡವಪುರ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಚಿತ್ರಕ್ಕೆ ಅಕುಲ್‌.ಎನ್‌ ನೃತ್ಯ, ವಿ. ರಾವ್‌ದೇವ್‌ ಮತ್ತು ಕುಂಗ್‌ಫ‌ು ಚಂದ್ರು ಸಾಹಸ ಸಂಯೋಜಿಸಿದ್ದಾರೆ. “ಶ್ರೀ ಖಾಸYತೇಶ್ವರ ಪೊ›ಡಕ್ಷನ್‌’ ಬ್ಯಾನರ್‌ ಅಡಿಯಲ್ಲಿ ತಾಳಿಕೋಟೆ ಮೂಲದ ಸಂತೋಷ್‌ ಎಸ್‌. ಗಾವಡೆ, ಕಲಬುರ್ಗಿಯ ಲತೀಫ್.ಎನ್‌ ನಧಾಫ್ ಮತ್ತು ಮಿರ್ಜಾ ನಾದೀರ್‌ ಬೇಗ್‌ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಇನ್ನು “ಎಲ್ಲಿ ನನ್ನ ವಿಳಾಸ’ ಚಿತ್ರವನ್ನು ತಾಳಿಕೋಟೆ, ಯಲ್ಲಾಪುರ, ಶಿರಸಿ, ಮಂಗಳೂರು, ಉಡುಪಿ, ಹುಣಸಗಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಕನ್ನಡದ ಜೊತೆ ಜೊತೆಗೇ ತಮಿಳಿನಲ್ಲೂ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಏಕಕಾಲಕ್ಕೆ ಎರಡೂ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದು. ಚಿತ್ರತಂಡದ ಯೋಜನೆಯಂತೆ ನಡೆದರೆ, ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aaram aravinda swamy movie song hudukuta hoda

Aaram Aravinda Swamy: ಹುಡುಕತ್ತಾ ಹೋದ ಅರವಿಂದ್‌ ಸ್ವಾಮಿ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

abhimanyu kashinath ellige payana yavudo daari movie

Ellige Payana Yavudo Daari Movie; ದಾರಿ ಹೊಸದಾಗಿದೆ ಗೆಲುವು ಬೇಕಾಗಿದೆ

Komal Kumar: ಯಲಾಕುನ್ನಿ ಪೈಸಾ ವಸೂಲ್‌ ಸಿನಿಮಾ

Komal Kumar: ಯಲಾಕುನ್ನಿ ಪೈಸಾ ವಸೂಲ್‌ ಸಿನಿಮಾ

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

7

Urwa: ಬಾಯ್ದೆರೆದ ಕಾಂಕ್ರೀಟ್‌ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

6

Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.