ಉಳ್ಳಾಗಡ್ಡಿ ಸೊಪ್ಪಿಗೂ ದುಪ್ಪಟ್ಟು ದರ


Team Udayavani, Dec 6, 2019, 10:51 AM IST

huballi-tdy-2

ಹುಬ್ಬಳ್ಳಿ: ಕಂಡರಿಯದ ದರ ಇದ್ದರೂ ನೀಡುವುದಕ್ಕೆ ಉಳ್ಳಾಗಡ್ಡಿಯೇ ಇಲ್ಲವಲ್ಲ ಎಂದು ರೈತ ಸಂಕಷ್ಟ ಪಡುತ್ತಿದ್ದರೆ, ಗಂಟೆಗೊಮ್ಮೆ ಹೆಚ್ಚುತ್ತಿರುವ ಉಳ್ಳಾಗಡ್ಡಿ ದರ ಕಂಡು ಗ್ರಾಹಕ ದಂಗಾಗಿದ್ದಾನೆ. ಕೇಳುವವರೆ ಇಲ್ಲ ಎನ್ನುವಂತಿದ್ದ ಉಳ್ಳಾಗಡ್ಡಿ ಸೊಪ್ಪಿಗೂ ಇದೀಗ ದುಪ್ಪಟ್ಟು ದರ ಬಂದಿದೆ.

ಬರಅತಿವೃಷ್ಟಿ, ನೆರೆ ನಡುವೆ ರೈತರಿಗೆ ದಕ್ಕಿದ್ದ ಅಷ್ಟು ಇಷ್ಟು ಉಳ್ಳಾಗಡ್ಡಿಯಲ್ಲಿ ಬಹುತೇಕ ಮಾರುಕಟ್ಟೆಗೆ ಬಂದು ಮಾರಾಟವಾದ ಕೆಲವೇ ದಿನಗಳಲ್ಲಿ ಬೆಲೆ ನಾಲ್ಕೈದು ಪಟ್ಟು ಹೆಚ್ಚಳವಾಗಿರುವುದು ಕಂಡು ರೈತರು, ಈಗ ಉಳ್ಳಾಗಡ್ಡಿ ಇದ್ದಿದ್ದರೆ ಒಂದಿಷ್ಟು ಹಣವಾದರೂ ಕೈಗೆ ಹತ್ತುತ್ತಿತ್ತು ಎಂದು ನೋವು ಪಡುವಂತಾಗಿದೆ. ಉಳ್ಳಾಗಡ್ಡಿ ಕೇವಲ ರೈತರು ಹಾಗೂ ಗ್ರಾಹಕರಿಗಷ್ಟೇ ಸಂಕಷ್ಟನೋವು ತರುತ್ತಿಲ್ಲ. ಬದಲಾಗಿ ದೇಶದ ರಾಜಕೀಯ ಮೇಲು ಪರಿಣಾಮ ಬೀರುತ್ತ ಬಂದಿದ್ದು, ಹಲವು ಚುನಾವಣೆಗಳಲ್ಲಿ ಉಳ್ಳಾಗಡ್ಡಿ ದರವೇ ಚುನಾವಣಾ ಪ್ರಮುಖ ಪ್ರಚಾರದ ವಿಷಯವಾಗಿದ್ದು, ಹಲವು ಸರಕಾರಗಳನ್ನು ಏರುಪೇರು ಮಾಡಿದ್ದು ಇದೆ. 80ರ ದಶಕದಿಂದಲೂ ಉಳ್ಳಾಗಡ್ಡಿ ಒಂದಿಲ್ಲ ಒಂದು ರೀತಿಯಲ್ಲಿ ರಾಜಕೀಯದಲ್ಲಿ ಪ್ರಭಾವ ತೋರುತ್ತ ಬಂದಿದೆ. ಈ ಬಾರಿ ಉಳ್ಳಾಗಡ್ಡಿ ದರ ಸರ್ವಕಾಲಿಕ ದಾಖಲೆ ಎನ್ನುವಂತಾಗಿದೆ.

ದುಪ್ಪಟ್ಟು ದರ: ಅತಿವೃಷ್ಟಿಯಿಂದ ಬಹುತೇಕ ಉಳ್ಳಾಗಡ್ಡಿ ಬೆಳೆ ಭೂಮಿಯಲ್ಲಿಯೇ ಕೊಳೆತಿದ್ದು, ನಂತರದಲ್ಲಿ ಉಳ್ಳಾಗಡ್ಡಿ ಬಿತ್ತನೆ ಮಾಡಿದ ಕೆಲ ರೈತರು, ಉಳ್ಳಾಗಡ್ಡಿ ಸೊಪ್ಪು ಮಾರಾಟಕ್ಕೆ ಮುಂದಾಗಿದ್ದಾರೆ. ಮಾರುಕಟ್ಟೆಯಲ್ಲಿ ಈ ಸೊಪ್ಪಿಗೂ ಉತ್ತಮ ದರ ಸಿಗತೊಡಗಿದೆ. ಈ ಹಿಂದೆ ಸಗಟು ಮಾರುಕಟ್ಟೆಯಲ್ಲಿ ಒಂದು ಸೂಡು ಉಳ್ಳಾಗಡ್ಡಿ ಸೊಪ್ಪನ್ನು ರೈತರಿಂದ 2 ರೂ.ಗೆ ಖರೀದಿಸಲಾಗುತ್ತಿತ್ತು. ಇದೀಗ ಅದೇ ಸೂಡಿಗೆ 6 ರೂ.ನಂತೆ ಖರೀದಿಸಲಾಗುತ್ತಿದೆ.

ಅದೇ ಉಳ್ಳಾಗಡ್ಡಿ ಸೊಪ್ಪನ್ನು 10-12 ರೂ. ಗೆ ಒಂದಂತೆ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ. ಉಳ್ಳಾಗಡ್ಡಿ ದರ ಕೆಜಿಗೆ 100-130 ರೂ. ಆಗಿರುವುದರಿಂದ ಕೆಲವರು 10 ರೂ. ನೀಡಿ ಒಂದು ಸೂಡು ಉಳ್ಳಾಗಡ್ಡಿ ಸೊಪ್ಪು ಖರೀದಿಗೆ ಮುಂದಾಗುತ್ತಿದ್ದಾರೆ. ಈ ಸೊಪ್ಪಿನ ಜತೆಗೆ ಸಣ್ಣ ಗಾತ್ರದ ಉಳ್ಳಾಗಡ್ಡಿಯೂ ಸಿಗುತ್ತದೆ ಎಂಬ ಉದ್ದೇಶದಿಂದ. ಒಂದು ಸೂಡಿನಲ್ಲಿ ಕನಿಷ್ಠ ಏನಿಲ್ಲವೆಂದರೂ 7-8 ಸಣ್ಣ ಗಾತ್ರದ ಉಳ್ಳಾಗಡ್ಡಿ ಸಿಗುತ್ತವೆ. ಮಾಡುವುದಕ್ಕೆ ಪಲ್ಯ ಆಯಿತು, ಬಳಸುವುದಕ್ಕೆ ಉಳ್ಳಾಗಡ್ಡಿಯೂ ಸಿಕ್ಕಂತಾಯಿತು ಎಂಬುದು ಕೆಲವರ ಲೆಕ್ಕಾಚಾರವಾಗಿದೆ.

ಶೇ.10 ಬೆಳೆಯೂ ಬಂದಿಲ್ಲ: ಉಳ್ಳಾಗಡ್ಡಿ ಉತ್ಪನ್ನದಲ್ಲಿ ಚೀನಾ ಹೊರತು ಪಡಿಸಿದರೆ ವಿಶ್ವದಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಟರ್ಕಿ, ಪಾಕಿಸ್ಥಾನ, ಬ್ರೆಜಿಲ್‌, ಇರಾನ್‌, ಸ್ಪೇನ್‌ ಹಾಗೂ ಜಪಾನ್‌ ಬರುತ್ತವೆ.

ಭಾರತದಲ್ಲಿ ಮಹಾರಾಷ್ಟ್ರದ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ, ಮಧ್ಯಪ್ರದೇಶ, ತಮಿಳುನಾಡು, ರಾಜಸ್ಥಾನ, ಓಡಿಶಾ, ಉತ್ತರ ಪ್ರದೇಶ ಇನ್ನಿತರ ರಾಜ್ಯಗಳಲ್ಲಿ ಉಳ್ಳಾಗಡ್ಡಿ ಬೆಳೆಯಲಾಗುತ್ತಿದೆ. ಇದರಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೊಡುಗೆ ಹೆಚ್ಚಿನದಾಗಿದೆ. ಮಹಾರಾಷ್ಟ್ರದ ಲಾಸಲ್‌ ಗಾಂವ್‌ ದೇಶದ ಅತಿದೊಡ್ಡ ಉಳ್ಳಾಗಡ್ಡಿ ಮಾರುಕಟ್ಟೆಯಾಗಿದೆ. 1951-52ರಲ್ಲಿಯೇ ಭಾರತ ಸುಮಾರು 5,000 ಟನ್‌ ಉಳ್ಳಾಗಡ್ಡಿ ರಫ್ತು ಮಾಡಿತ್ತು. ರಾಜ್ಯದಲ್ಲಿ ಹುಬ್ಬಳ್ಳಿ ಹಾಗೂ ಬೆಳಗಾವಿ ಉಳ್ಳಾಗಡ್ಡಿಗೆ ದೊಡ್ಡ ಮಾರುಕಟ್ಟೆಯಾಗಿವೆ.

ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ, ರಾಯಚೂರು, ದಾವಣಗೆರೆ, ಚಿತ್ರದುರ್ಗಗಳಲ್ಲಿ ಹೆಚ್ಚಾಗಿ ಉಳ್ಳಾಗಡ್ಡಿ ಬೆಳೆಯಲಾಗುತ್ತದೆ. ಈ ಬಾರಿ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅತಿವೃಷ್ಟಿ ಕಾರಣದಿಂದಾಗಿ ಉಳ್ಳಾಗಡ್ಡಿ ಬೆಳೆ ಶೇ.10 ಸಹ ಬಂದಿಲ್ಲವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಒಂದು ಎಕರೆಗೆ ಸುಮಾರು 50 ಪಿಸಿ(ಅಂದಾಜು 55-60ಕೆಜಿ ಚೀಲ)ಬರಬೇಕಾದ ಉಳ್ಳಾಗಡ್ಡಿ ಫ‌ಸಲು ಕೇವಲ 5 ಚೀಲದಷ್ಟು ಮಾತ್ರ ಬಂದಿದೆ ಎಂಬುದು ರೈತರ ಅನಿಸಿಕೆಯಾಗಿದೆ. ಈ ಬಾರಿ ಆರಂಭದಲ್ಲಿ ಉಳ್ಳಾಗಡ್ಡಿ ಮಾರುಕಟ್ಟೆಗೆ ಬಂದಾಗ 500ರೂ.ನಿಂದ ದರ ಆರಂಭವಾಗಿತ್ತು. 3,000ರೂ. ನಿಂದ 4,000-4,500ರೂ.ವರೆಗೆ ಮಾರಾಟ ಆಗಿದ್ದು, ಇದೀಗ 9,000ರಿಂದ 10,000 ರೂ. ದಾಟಿದೆ.

 

ಅಮರೇಗೌಡ ಗೋನವಾರ

ಟಾಪ್ ನ್ಯೂಸ್

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

1-JMM

Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

Renukaswamy Case: ಬೆನ್ನುನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Karkala: ದುರ್ಗಾಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bellad

Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನ‌ಪ್ಪನವರ ವಿರುದ್ದ ಬೆಲ್ಲದ್‌ ಟೀಕೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

vijayendra

Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್‌ ಕಾರ್ಡ್‌ ರದ್ದು: ವಿಜಯೇಂದ್ರ ಆರೋಪ

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ

1-qeqwewq

Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.