ದುಡಿಯದ ಮಗನಿಗೆ ಮದುವೆ ಮಾಡಿಲ್ಲವೆಂದು ತಂದೆ ತಾಯಿಗೆ ಹೊಡೆದ !
Team Udayavani, Dec 6, 2019, 4:41 PM IST
ವಿಜಯಪುರ: ದುಡಿಯದ ಮಗನಿಗೆ ಮದುವೆ ಮಾಡಲು ನಿರಾಕರಿಸಿದ ಕಾರಣಕ್ಕೆ ಮಗ ಹೆತ್ತವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ವೃದ್ಧರಾಗಿರುವ ಹೆತ್ತವರು ಆಸ್ಪತ್ರೆ ಸೇರಿರುವ ಘಟನೆ ಜಿಲ್ಲೆಯಲ್ಲಿ ಜರುಗಿದೆ.
ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬಿಸನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.
40 ವರ್ಷದ ಶಂಕ್ರಯ್ಯ ಹಿರೇಮಠ ಎಂಬಾತನೇ ತನ್ನ ತಾಯಿ ಶರಣಮ್ಮ ಹಿರೇಮಠ (70), ಹೇಮಯ್ಯ ಹಿರೇಮಠ ( 75) ಇವರ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಹತಾಷನಾಗಿ ತಾನೂ ಕೂಡ ಬ್ಲೇಡ್ ನಿಂದ ಕೈ, ತಲೆಗೆ ಗಾಯ ಮಾಡಿಕೊಂಡಿದ್ದಾನೆ.
ತೀವ್ರ ಗಾಯಗೊಂಡಿರುವ ಮೂವರನ್ನು ಗ್ರಾಮಸ್ಥರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ದುಡಿಮೆ ಮಾಡದೇ ಊರಲ್ಲಿ ಅಲೆಯುತ್ತಿದ್ದ ಆರೋಪಿ ಶಂಕ್ರಯ್ಯ ತನಗೆ ಮದುವೆ ಮಾಡುವಂತೆ ವೃದ್ದ ತಂದೆತಾಯಿ ಜೊತೆ ಪ್ರತಿದಿನ ಗಲಾಟೆ ಮಾಡುತ್ತಿದ್ದ.
ನಿತ್ಯವೂ ದುಡಿದು ಸ್ವತಂತ್ರ ಜೀವನ ನಿರ್ವಹಣೆ ಮಾಡುವುದನ್ನು ಕಲಿ, ನಂತರ ಮದುವೆ ವಿಷಯ ಎಂದು ಪೋಷಕರು ಬುದ್ದಿ ಹೇಳಿದ್ದರು. ಇದರಿಂದ ಕುಪಿತನಾಗಿ ಹೆತ್ತವರ ಮೇಲೆ ಹಲ್ಲೆ ಮಾಡಿದ್ದಾನೆ.
ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ಜರುಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.