ಜನ ಹಿತಕ್ಕೆ ಶ್ರಮಿಸಿದ್ದ ಡಾ| ಬಾಬಾಸಾಹೇಬ್
ಸಂವಿಧಾನ ಗೌರವಿಸುವುದು ಎಲ್ಲರ ಕರ್ತವ್ಯ ಸಂವಿಧಾನ ಬದ್ಧ ಸೌಲಭ್ಯದಿಂದ ಭವಿಷ್ಯ ರೂಪಿಸಿಕೊಳ್ಳಿ
Team Udayavani, Dec 7, 2019, 1:05 PM IST
ಹುಮನಾಬಾದ: ಈ ದೇಶದ ಪ್ರತಿಯೊಬ್ಬ ನಾಗರಿಕರು ಇಂದು ನೆಮ್ಮದಿಯಿಂದ ಬದುಕುತ್ತಿರುವುದರ ಹಿಂದೆ ಸಂವಿಧಾನ ಶಿಲ್ಪಿ ಡಾ|ಅಂಬೇಡ್ಕರ್ ಅವರ ಕಠಿಣ ಪರಿಶ್ರಮವಿದೆ. ಅವರ ನೇತೃತ್ವದಲ್ಲಿ ರಚಿತವಾದ ಸಂವಿಧಾನ ಗೌರವಿಸುವುದು ಈ ದೇಶದ ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯ ಎಂದು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ್ ಪಾಟೀಲ ಸಲಹೆ ನೀಡಿದರು.
ಪಟ್ಟಣದ ಡಾ|ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಡಾ|ಅಂಬೇಡ್ಕರ್ ಅವರ 62ನೇ ಪರಿನಿಬ್ಟಾಣ ದಿನದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಗೌರವ ನಮನ ಕಾರ್ಯಕ್ರಮದಲ್ಲಿ ಡಾ|ಅಂಬೇಡ್ಕರ್ ಅವರ ಪುತ್ಥಳಿಗೆ ಹೂಮಾಲೆ ಸಮರ್ಪಿಸಿ ಅವರು ಮಾತನಾಡಿದರು.
ಭಾರತದ ಸಂವಿಧಾನ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲ. ಅದರಲ್ಲಿ ಈ ದೇಶದ ಪ್ರತಿಯೊಬ್ಬರ ಹಿತ ಕಾಪಾಡಲಾಗಿದೆ. ಸಂವಿಧಾನ ಆಳ ಅಧ್ಯಯನ ಮಾಡದ ವ್ಯಕ್ತಿಗಳು ಅದರ ಬಗ್ಗೆ ಇಲ್ಲಸಲ್ಲದ ಮಾತನಾಡುತ್ತಾರೆ. ಇತಿಹಾಸ ಅರಿಯದ ವ್ಯಕ್ತಿ ಇತಿಹಾಸ ನಿರ್ಮಿಸಲಾರ ಎಂಬ ಮಾತು ಅಕ್ಷರಶಃ ಸತ್ಯ ಎಂದರು. ಸಂವಿಧಾನ ಬದ್ಧವಾಗಿ ಸಿಗುವ ಸೌಲಭ್ಯಗಳನ್ನು ಪಡೆದ ಅರ್ಹ ಫಲಾನುಭವಿಗಳು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದಲಿತ ಸಂಘಟನೆಗಳ ಒಕ್ಕೂಟ ಗೌರವಾಧ್ಯಕ್ಷ ರಮೇಶ ಡಾಕುಳಗಿ ಮಾತನಾಡಿ, ಡಾ|ಅಂಬೇಡ್ಕರ್ ಅವರ ಮಾರ್ಗದರ್ಶನದಂತೆ ಶಿಕ್ಷಣ, ಸಂಘಟನೆ, ಹೋರಾಟ ಮಾರ್ಗದಿಂದ ಮಾತ್ರ ಸರ್ಕಾರದ ಸೌಲಭ್ಯ ಸಮರ್ಪಕ ರೀತಿ ದಕ್ಕಲು ಸಾಧ್ಯ. ದಾಸ್ಯತ್ವ ಮನೋಭಾವ ತೊರೆದು, ಸ್ವಾಭಿಮಾನದಿಂದ ಬದುಕದ ಹೊರತು ದಲಿತರ ಉದ್ಧಾರ ಅಸಾಧ್ಯ. ಈ ನಿಟ್ಟಿನಲ್ಲಿ ನಮ್ಮವರು ಈಗಲಾದರೂ ಎಚ್ಚೆತ್ತುಕೊಳ್ಳುವ ಮೂಲಕ ಡಾ|ಅಂಬೇಡ್ಕರ್ ಅವರು ಕಂಡ ಕನಸು ನನಸಾಗಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಬೌದ್ಧ ಧರ್ಮ ಪ್ರಚಾರಕ ಧರ್ಮರಾಯ್ ಘಾಂಗ್ರೆ, ಪರಿನಿಬ್ಟಾಣ ಕಾರ್ಯಕ್ರಮ ಸಮಿತಿ ಪ್ರಧಾನ ಕಾರ್ಯದರ್ಶಿ ಮತ್ತು ಪ್ರಾಧ್ಯಾಪಕರಾದ ಡಾ|ಜಯಕುಮಾರ ಸಿಂಧೆ, ಸಮಿತಿ ಪ್ರಮುಖರಾದ ಕೆ.ಬಿ.ಹಾಲ್ಗೋರ್ಟಾ, ಹಣಮಂತರಾವ್ ಕಾಂಬ್ಳೆ, ಲಕ್ಷ್ಮೀಪುತ್ರ ಪಿ.ಮಾಳಗೆ, ಪ್ರಭುರಾವ್ ಚಿತ್ತಕೋಟಾ, ಸುರೇಶ ಘಾಂಗ್ರೆ, ವೀರಪ್ಪ ಧುಮ್ಮನಸೂರ, ಮಾಣಿಕರಾವ್ ಬಿ.ಪವಾರ, ಸಿದ್ಧಾರ್ಥ ಕಾಂಬ್ಳೆ, ದಿಲೀಪ ಮರಪಳ್ಳಿ, ಮಾಣಿಕರಾವ್ ಮಾಡಗೂಳ, ಸಮಾಜ ಕಲ್ಯಾಣಾಧಿಕಾರಿ ಸತೀಶಕುಮಾರ, ಬಿಸಿಎಂ ಅ ಧಿಕಾರಿ ವಿಠಲರಾವ್ ಇತರರು ಮಾತನಾಡಿದರು.
ತಹಶೀಲ್ದಾರ್ ನಾಗಯ್ಯಸ್ವಾಮಿ ಹಿರೇಮಠ , ತಾಪಂ ಇಒ ವೈಜಪ್ಪ ಫುಲೆ, ಪುರಸಭೆ ಮುಖ್ಯಾ ಧಿಕಾರಿ ಶಂಭುಲಿಂಗ ದೇಸಾಯಿ, ಪುರಸಭೆ ಹಿರಿಯ ಸದಸ್ಯ ಅಪ್ಸರಮಿಯ್ಯ ಸೇರಿದಂತೆ ಅನೇಕ ಗಣ್ಯರು ಇದ್ದರು. ಇದೇ ಸಂದರ್ಭದಲ್ಲಿ ಆಯೋಜಿಸಿದ್ದ ಭಜನಾ ಮಂಡಳಿಗಳ ಗಾಯನ ಸ್ಪರ್ಧೆಯಲ್ಲಿ ಇಂದಿರಾ ನಗರದ ಮೀರಾತಾಯಿ ಮಹಿಳಾ ಮಂಡಳ, ಸಸ್ತಾಪುರದ ಸಿದ್ಧಾರ್ಥ ಗಾಯನ ತಂಡ, ಚಿತ್ತಕೋಟಾ ಭಜನಾ ಮಂಡಳಿ, ಬೋರಾಳದ ಸುಭಾಶ್ಚಂದ್ರ ಬೋಸ್ ಯುವಕ ಮಂಡಳಿ, ಸೇಡೋಳ ಗ್ರಾಮದ ರಮಾಬಾಯಿ ಮಹಿಳಾ ಮಂಡಲ, ಗಡವಂತಿಯ ಬಸವರಾಜ ಮಾಳಗೆ ಭಜನ ಮಂಡಳಿ, ಹುಮನಾಬಾದ್ ಸಿದ್ಧಾರ್ಥ ನಗರದ ಭಾಗೀರತಿ ಭಜನ ಮಂಡಳಿ ಕಲಾವಿದರು ಭಜನೆಯಲ್ಲಿ ಭಾಗವಹಿಸಿ, ಗಾಯನ ಸೇವೆ ಪ್ರಸ್ತುಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
IPL Auction 2025: ಇಂದು, ನಾಳೆ ಐಪಿಎಲ್ ಬೃಹತ್ ಹರಾಜು
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪಲಾಯನ ಮಾಡಲ್ಲ: ನಿಖಿಲ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.