ಅಭ್ಯರ್ಥಿಗಳಿಗೀಗ ರಿಲ್ಯಾಕ್ಸ್ ಮೂಡ್
Team Udayavani, Dec 7, 2019, 4:36 PM IST
ಹಾವೇರಿ: ಹಿರೇಕೆರೂರು ಹಾಗೂ ರಾಣಿಬೆನ್ನೂರು ಉಪಚುನಾವಣೆ ಹಿನ್ನೆಲೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಒಂದು ತಿಂಗಳಿಂದ ಸುತ್ತಾಡಿದ ಅಭ್ಯರ್ಥಿಗಳು ಮತದಾನದ ಮರುದಿನ ರಿಲ್ಯಾಕ್ಸ್ ಮೂಡ್‌ಗೆ ಜಾರಿದರು.
ರಾಣಿಬೆನ್ನೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಶುಕ್ರವಾರ ಮನೆಯಲ್ಲೇ ಕಾಲ ಕಳೆದರು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬೆಳಗ್ಗೆಯಿಂದಲೇ ಕೋಳಿವಾಡರ ಮನೆಗೆ ಆಗಮಿಸುತ್ತಿದ್ದರು. ಬಂದ ಎಲ್ಲರೊಂದಿಗೆ ಮತದಾನ, ಫಲಿತಾಂಶದ ಬಗ್ಗೆ ಚರ್ಚಿಸಿದರು.
ರಾಣಿಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ತನ್ನ ನೆಚ್ಚಿನ ಮನೆ ಶ್ವಾನದ ಜೊತೆ ಕೆಲ ಹೊತ್ತು ಕಳೆದರು. ನಂತರ ತಮ್ಮ ಇಟ್ಟಂಗಿ ಭಟ್ಟಿ ಕಡೆ ಸುತ್ತಾಡಿದರು. ಬಳಿಕ ತಮ್ಮ ಕುಟುಂಬದ ಜತೆ ಸಮಯ ಕಳೆದರು. ಸಂಜೆ ಹೊತ್ತು ತಮ್ಮ ಆಪರೊಂದಿಗೆ ಮತದಾನ, ಪ್ರಚಾರ ಪ್ರಕ್ರಿಯೆ, ಗೆಲುವಿನ ಲೆಕ್ಕಾಚಾರದ ಬಗ್ಗೆ ಚರ್ಚೆ ನಡೆಸಿದರು.
ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ ಶುಕ್ರವಾರ ತಮ್ಮ ಮನೆಯಲ್ಲಿ ಕುಟುಂಬದವರೊಂದಿಗೆ ಉಪಹಾರ ಸೇವಿಸಿ, ಸದಸ್ಯರೊಂದಿಗೆ ಕಾರ್ಯಕರ್ತರ ಮಿತ್ರರ ಮದುವೆ, ಶುಭ ಸಮಾರಂಭಗಳಲ್ಲಿ ಭಾಗಿಯಾಗಿದರು. ಬಳಿಕ ಕಾರ್ಯಕರ್ತರು, ಮುಖಂಡರೊಂದಿಗೆ ಮತ ಲೆಕ್ಕಾಚಾರದಲ್ಲಿ ತೊಡಗಿದರು.
ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್. ಬನ್ನಿಕೋಡ, ಮನೆಗೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಮತದಾನದ ಲೆಕ್ಕಚಾರ ಹಾಕಿದರು. ಬೆಳಗ್ಗೆಯಿಂದ ಸಂಜೆವರೆಗೂ ಮನೆಯಲ್ಲೇ ಕಾಲಕಳೆದ ಬನ್ನಿಕೋಡ ಸಂಪೂರ್ಣ ದಿನವನ್ನು ಕಾರ್ಯಕರ್ತರೊಡನೆ ಚರ್ಚೆ ಮಾಡುವ ಮೂಲಕವೇ ಕಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.