ಅಡಿಕೆ ಬೆಲೆ ಏರಿಕೆ
Team Udayavani, Dec 8, 2019, 4:42 AM IST
![sd-22](https://www.udayavani.com/wp-content/uploads/2019/12/sd-22-620x465.jpg)
![sd-22](https://www.udayavani.com/wp-content/uploads/2019/12/sd-22-620x465.jpg)
ಈ ವಾರವೂ ಹೊಸ ಅಡಿಕೆ 5 ರೂ. ಹೆಚ್ಚಳಗೊಂಡು 210-245 ರೂ. ತನಕ ಖರೀದಿಯಾಗಿದೆ. ಹಳೆಯ ಅಡಿಕೆ (ಸಿಂಗಲ್ ಚೋಲ್)260 -297 ರೂ. ತನಕ ಖರೀದಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಡಿಕೆ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಪಠೊರಾ 200-210 ಖರೀದಿ ನಡೆಸುತ್ತಿದೆ. ಉಳ್ಳಿಗಡ್ಡೆ 90-110 ರೂ., ಕರಿಕೋಟು 80- 100 ರೂ. ಧಾರಣೆ ಪಡೆಯುತ್ತಿವೆ.
ಕಾಳುಮೆಣಸು ಯಥಾಸ್ಥಿತಿ
ಕಾಳುಮೆಣಸಿಗೆ ಕಳೆದ ವಾರದ ಧಾರಣೆಯೇ ಮುಂದುವರೆದಿದೆ. ಕಾಳುಮೆಣಸು 300 -310 ರೂ. ಗೆ ಈ ವಾರ ಖರೀದಿಯಾಗಿದೆ. ಹಿಂದಿನ ವಾರ 290 -295 ರೂ.ಗೆ ಖರೀದಿಯಾಗಿತ್ತು. ಕೆಲ ಸಮಯಗಳ ಧಾರಣೆಯನ್ನೇ ಗಮನಿಸಿದರೆ, ಕಾಳುಮೆಣಸು ದೊಡ್ಡ ಮಟ್ಟಿನ ಧಾರಣೆ ಪಡೆದುಕೊಳ್ಳದೇ ಇರುವುದನ್ನು ಗಮನಿಸಬಹುದು. ಕಳೆದ ಎರಡು ವರ್ಷಗಳಿಂದ ಇಳಿಕೆಯ ಧಾರಣೆ ಮುಂದುವರಿದಿದೆ.
ರಬ್ಬರ್ ಅಲ್ಪ ಏರಿಕೆ
ರಬ್ಬರ್ ಧಾರಣೆಯಲ್ಲೂ ಈ ವಾರ ಮತ್ತೆ ಏರಿಕೆಯಾಗಿಲ್ಲ. ಈ ವಾರ 127.50 ರೂ.ಗೆ ಖರೀದಿಯಾಗಿದೆ.
ಕರಾವಳಿ ಭಾಗದ ಬೆಳೆಗಾರರ ಪ್ರಮುಖ ವಾಣಿಜ್ಯ ಬೆಳೆ ಎಣಿಸಿಕೊಂಡಿರುವ ರಬ್ಬರ್‌ನ ಕೆಲವು ಸಮಯದ ಹಿಂದೆ ಚೇತೋಹಾರಿ ಏರಿಕೆಯನ್ನು ಕಂಡು ಬೆಳೆಗಾರರಲ್ಲಿ ಖುಷಿಯನ್ನು ತಂದಿತ್ತು. ರಬ್ಬರ್ ಬೆಲೆ ವರ್ಷಗಳ ಬಳಿಕ 150 ರೂ.ಗೆ ತಲುಪಿತ್ತು. ಆದರೆ ಕೆಲವು ವಾರಗಳಿಂದ ಇಳಿಕೆಯ ಹಾದಿಯಲ್ಲಿ ಸಾಗಿತ್ತು. ಆರ್‌ಎಸ್‌ಎಸ್ 4- 127.50 ರೂ., ಆರ್‌ಎಸ್‌ಎಸ್5 – 123 ರೂ.ಗೆ ಖರೀದಿಯಾಗಿದೆ.
ತೆಂಗು ಧಾರಣೆ
ಈ ವಾರ ತೆಂಗಿನ ಕಾಯಿ ಧಾರಣೆಯಲ್ಲೂ ಯಥಾಸ್ಥಿತಿ ಇದೆ. ತೆಂಗಿನಕಾಯಿ ಸಣ್ಣ ಗಾತ್ರ(ಕೆ. ಜಿ.ಗೆ) 20-24 ರೂ., ತೆಂಗಿನಕಾಯಿ ಮಧ್ಯಮ ಗಾತ್ರ (ಕೆ.ಜಿ.ಗೆ) 25-29 ರೂ.,
ತೆಂಗಿನಕಾಯಿ ದೊಡ್ಡ ಗಾತ್ರ (ಕೆ. ಜಿ. ಗೆ) 30-33 ರೂ.ಗೆ ಖರೀದಿಯಾಗಿದೆ.
ಕೊಕ್ಕೋ ಯಥಾಸ್ಥಿತಿ
ಕೆಲ ಸಮಯಗಳಿಂದ ಸ್ಥಿರವಾಗಿ ಸಾಗುತ್ತಿದ್ದ ಕೊಕ್ಕೋ ಧಾರಣೆಯಲ್ಲಿ ಕಳೆದ ವಾರ ಇಳಿಕೆ ಕಂಡಿತ್ತು. ಈ ವಾರವೂ 45-48 ರೂ. ಗೆ ಖರೀದಿಯಾಗಿದೆ. ಕೃಷಿ ಉತ್ಪನ್ನಗಳ ಪೈಕಿ ಸ್ಥಿರತೆ ಸಾಧಿಸಿದ ಏಕೈಕ ಉತ್ಪನ್ನವೆಂದರೆ ಅದು ಕೊಕ್ಕೋ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕೆಲವು ವರ್ಷಗಳಿಂದ ಕೊಕ್ಕೋ ಬೆಳೆಯುವ ಪ್ರಮಾಣವೂ ಧಾರಣೆಯ ಸ್ಥಿರತೆಯ ಕಾರಣದಿಂದ ಹೆಚ್ಚಾಗಿದೆ. ಆದರೆ ಈಗ ಮಾತ್ರ ಬೆಲೆ ಇಳಿಕೆಯಲ್ಲಿದೆ.
- ರಾಜೇಶ್ ಪಟ್ಟೆ