ಸಂಚಾರ ಹೆಚ್ಚಿಸಿ, ಪ್ರಯಾಣ ದರ ಇಳಿಸಿ
Team Udayavani, Dec 8, 2019, 3:08 AM IST
ಬೆಂಗಳೂರು: ಬಿಎಂಟಿಸಿ ಬಸ್‌ಗಳ ಸಂಖ್ಯೆ ಹೆಚ್ಚಿಸಿ ಟಿಕೆಟ್ ದರ ಇಳಿಸಿದರೆ ಮಾತ್ರ ಖಾಸಗಿ ವಾಹನಗಳ ಬಳಕೆ ಕಡಿಮೆಯಾಗುತ್ತದೆ ಎಂದು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ತಿಳಿಸಿದೆ.
ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯಿಂದ ನಗರದಲ್ಲಿ ನಡೆದ “ಎಲ್ಲರಿಗೂ ಬಿಎಂಟಿಸಿ: ಬೆಂಗ ಳೂರಿನ ಚಲನಶೀಲತೆಯನ್ನು ಬದಲಿಸುವ ನಿಟ್ಟಿನಲ್ಲಿ’ ಎಂಬ ಮುಕ್ತ ಚರ್ಚಾ ವೇದಿಕೆಯಲ್ಲಿ ಮಾತನಾಡಿದ ವೇದಿಕೆಯ ಸದಸ್ಯ ವಿನಯ್, ಖಾಸಗಿ ವಾಹನದಲ್ಲಿ ಪರಸ್ಪರ ಹಂಚಿಕೊಂಡು ಪ್ರಯಾಣಿಸುವ ಖರ್ಚಿಗಿಂತ ಕಡಿಮೆ ಖರ್ಚಿನಲ್ಲಿ ಬಸ್‌ನಲ್ಲಿ ಪ್ರಯಾಣಿಸಬಹುದು ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಿಸಲು ಬಿಎಂಟಿಸಿ ಬಸ್ ಪ್ರಯಾಣ ದರ ಕಡಿಮೆ ಮಾಡಬೇಕು.
ಖಾಸಗಿ ವಾಹನಗಳ ಬಳಕೆ ಕಡಿಮೆ ಮಾಡಲು ವಾಹನ ನಿಲುಗಡೆ ನೀತಿ ರೂಪಿಸಬೇಕು. ಬಸ್ ಮತ್ತು ನಿಲ್ದಾಣಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಹೇಳಿದರು. ಚರ್ಚೆಯಲ್ಲಿ ಭಾಗವಸಿದ್ದ ಗೃಹ ಕಾರ್ಮಿಕರ ಸಂಘಧ ಪದಾಧಿಕಾರಿ ಯಲ್ಲಮ್ಮ, ಮನೆ ಕೆಲಸಗಳಿಗೆ ಹೋಗುವ ಮಹಿಳೆಯರು ಅನಿವಾರ್ಯವಾಗಿ ಆಟೋ ಬಳಸುವಂತಾಗಿದೆ. ಹೆಚ್ಚಿನ ಬಸ್ ಮತ್ತು ನಿಲ್ದಾಣಗಳಿಲ್ಲದ ಕಾರಣ ಬಸ್ ಬಳಸುವುದು ಕಡಿಮೆ.
ಒಂದು ವೇಳೆ 1200ರೂ ಕೊಟ್ಟು ಬಸ್ ಪಾಸ್ ಪಡೆದು ಕೊಂಡರೂ, ಬೆಳಿಗ್ಗೆ ವೇಳೆ ಬಸ್ ಸಿಗುತ್ತವೆ ರಾತ್ರಿ ವೇಳೆ ಸಿಗುವುದಿಲ್ಲ. ಹೀಗಾಗಿ, ಬಸ್ ಪಾಸ್ ಮತ್ತು ಆಟೋ ಎರಡಕ್ಕೂ ಹಣ ನೀಡಬೇಕಾಗುತ್ತದೆ. ಬಸ್ ಪ್ರಯಾಣ ದರ ಕಡಿಮೆ ಮಾಡಿದರೆ ಗೃಹ ಕಾರ್ಮಿಕರು ಬಿಎಂಟಿಸಿ ಬಸ್‌ಗಳನ್ನು ಬಳಸುತ್ತಾರೆ ಎಂದು ಹೇಳಿದರು. ಗಾರ್ಮೆಂಟ್ಸ್ ಕಾರ್ಮಿಕರ ಸಂಘದ ಅಧ್ಯಕ್ಷೆ ಪ್ರತಿಭಾ ಮಾತನಾಡಿ, ಶೇ.90ರಷ್ಟು ಗಾರ್ಮೆಂಟ್ಸ್ ಕಾರ್ಮಿಕರು ಬಿಎಂಟಿಸಿ ಬಸ್ ಗಳನ್ನು ಬಳಸುತ್ತಿಲ್ಲ.
ಬಿಎಂಟಿಸಿ ಬಸ್ ಪ್ರಯಾಣ ದರ ಖಾಸಗಿ ಬಸ್‌ಗಳಿ ಗಿಂತ ಹೆಚ್ಚಾಗಿರುವ ಕಾರಣ ಎಲ್ಲರೂ ಖಾಸಗಿ ಬಸ್ ಮತ್ತು ಖಾಸಗಿ ವಾಹನ ಗಳನ್ನು ಬಳಸುತಿದ್ದಾರೆ. ಖಾಸಗಿ ಬಸ್‌ಗಳಲ್ಲಿ ಮಹಿಳೆ ಯರಿಗೆ ಹೆಚ್ಚಿನ ಸುರಕ್ಷತೆ ಯಿರುವುದಿಲ್ಲ. ಹೀಗಾಗಿ, ಪ್ರಯಾಣ ದರ ಇಳಿಸಿ, ಹೆಚ್ಚಿನ ಬಸ್‌ಗಳನ್ನು ಗಾರ್ಮೆಂಟ್ಸ್ ಕಾರ್ಖಾನೆಗಳಿಗೆ ಕಳುಹಿಸಿದರೆ ಕಾರ್ಮಿಕರಿಗೆ ಸುರಕ್ಷತೆ ಸಿಕ್ಕಂತಾಗುತ್ತದೆ ಎಂದರು. ಕರ್ನಾಟಕ ಸ್ಲಂ ಜನಗಳ ಸಂಘದ ಅಧ್ಯಕ್ಷ ಮೋಹನ್ ಸೂರ್ಯ ಮಾತನಾಡಿ, ಕೊಳಗೇರಿ ಪ್ರದೇಶಗಳ ಬಳಿ ಬಸ್ ನಿಲ್ದಾಣಗಳಿರುವದೇ ಕಡಿಮೆ.
ನಗರದ ಕೆಲ ಜನ ನಿಬಿಡ ಸ್ಲಂಗಳಿಗೆ ಸರಿಯಾದ ಬಸ್ ಸಂಪರ್ಕ ವ್ಯವಸ್ಥೆ ಯಿಲ್ಲ. ಹೀಗಾಗಿ, ಎಲ್ಲಾ ಸ್ಲಂ ನಿವಾಸಿಗಳು ಅನಿ ವಾರ್ಯವಾಗಿ ದ್ವಿಚಕ್ರ ವಾಹನಗಳನ್ನು ಹೊಂದು ವಂ ತಾಗಿದೆ ಎಂದರು. ಈ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಿದ ಪರಿಸರ ಬೆಂಬಲ ತಂಡದ ಲಿಯೋ ಸಲ್ಡಾನಾ , ಡೇಟಾ ಮೀಟಾ ಸಂಘದ ತೇಜಸ್, ಸಂಚಾರ ತಜ್ಞ ಸುಜಯಾ ಒಳಗೊಂಡ ತಜ್ಞರ ತಂಡ ಎಲ್ಲಾ ಸಂಘ ಟನೆಗಳ ಪ್ರತಿ ನಿಧಿಗಳ ಪ್ರಸ್ತಾವನೆಯನ್ನು ಒಪ್ಪಿಕೊಂಡು ತಮ್ಮ ಶಿಫಾ ರಸ್ಸುಗಳನ್ನು ಮಂಡಿಸಿದರು.
ತಜ್ಞರ ಶಿಫಾರಸುಗಳು: ಹೊಸ ಲೇ ಔಟ್‌ಗಳು ಅಭಿ ವೃದ್ಧಿಪಡಿಸುವಾಗ ಯೋಜನೆ ಶುಲ್ಕದ ಜತೆ ಸಂಚಾರ ಶುಲ್ಕವನ್ನು ಪಡೆಯಬೇಕು. ಈ ಹಣದಲ್ಲಿ ರಸ್ತೆ, ಹೆಚು ವರಿ ಬಸ್ ಮತ್ತು ನಿಲ್ದಾಣಗಳ ನಿರ್ಮಾಣ.
ಪ್ರತಿ ಬಸ್‌ಗೆ ಸಂಚಾರ ಸಮಯ ನಿಗದಿ: ಬಿಎಂಟಿಸಿ ಸಿಬ್ಬಂದಿ ಖುದ್ದಾಗಿ ಪ್ರತಿ ಜನನಿಬಿಡ ಪ್ರದೇಶಕ್ಕೆ ಹೋಗಿ ಅಲ್ಲಿನ ಸಂಚಾರ ಸಮಸ್ಯೆಗಳನ್ನು ತಿಳಿದುಕೊಂಡು ಪರಿ ಹಾರ ಒದಗಿಸಬೇಕು.
ನಿರ್ಭಯಾ ಕೊಠಡಿ ಸ್ಥಾಪನೆಗೆ ಚಿಂತನೆ
ಬೆಂಗಳೂರು: ನಿರ್ಭಯಾ ಯೋಜನೆಯಡಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ನಿರೀಕ್ಷಣಾ ಕೊಠಡಿ ನಿರ್ಮಿಸಲು ಬಿಎಂಟಿಸಿ ಉದ್ದೇಶಿಸಿದೆ. ನಗರದ 12 ಟಿಟಿಎಂಸಿ ಕೇಂದ್ರ ಗಳಲ್ಲಿ ನಿರೀಕ್ಷಣಾ ಕೊಠಡಿ ನಿರ್ಮಿಸಲಿದ್ದು, ಯೋಜನೆ ಯಶ ಸ್ಸಿಗೆ ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಶ್ರಮಿಸಲಿವೆ.
ನಿರೀಕ್ಷಣಾ ಕೊಠಡಿಯಲ್ಲಿ ಉತ್ತಮ ಆಸನಗಳ ವ್ಯವಸ್ಥೆ, ಕುಡಿಯುವ ನೀರು, ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ, ಬಸ್ ಸಂಚಾರ ಗಮನಿ ಸಲು ಗಾಜಿನ ಕಿಟಕಿ ಅಳವಡಿಸಲಾಗುವುದು. ಇನ್ನು ನಿರ್ಭಯಾ ಕೊಠಡಿಗಳಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಿದ್ದು, ಬೆಳಗ್ಗೆ 6ರಿಂದ ಕಾರ್ಯ ನಿರ್ವಹಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
Bunts Hostel, ಕರಂಗಲ್ಪಾಡಿ ಜಂಕ್ಷನ್: ಶಾಶ್ವತ ಡಿವೈಡರ್ ನಿರ್ಮಾಣ ಕಾಮಗಾರಿ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.