ಗರ್ಮಾಗರಂ ರುಚಿಯ ಕಂದಕೂರು ಮಂಡಕ್ಕಿ


Team Udayavani, Dec 9, 2019, 6:06 AM IST

gsrmsgsrm

ಯಾದಗಿರಿ ಜಿಲ್ಲೆಯ ಕಂದಕೂರು ಒಗ್ಗರಣೆ ಮಂಡಕ್ಕಿಗೆ ಹೆಸರುವಾಸಿ. ಒಮ್ಮೆ ಇಲ್ಲಿನ ಒಗ್ಗರಣೆ ಮಂಡಕ್ಕಿ ರುಚಿ ನೋಡಿದವರು ಯಾವತ್ತೂ ಮರೆಯುವುದಿಲ್ಲ. ಮತ್ತೆ ಈ ಕಡೆ ಬಂದಾಗ ಮಂಡಕ್ಕಿ ಸವಿಯದೇ ಹೋಗುವುದಿಲ್ಲ.

ಯಾದಗಿರಿ ಜಿಲ್ಲಾ ಕೇಂದ್ರದಿಂದ 24 ಕಿ.ಮೀ. ಇರುವ ಕಂದಕೂರಿನಲ್ಲಿ ಇತಿಹಾಸ ಪ್ರಸಿದ್ಧ ಕೊಂಡಮಾಯಿದೇವಿ ಮಂದಿರ ಎಷ್ಟು ಪ್ರಸಿದ್ಧಿ ಪಡೆದಿದೆಯೋ, ಅಷ್ಟೇ ಜನಪ್ರಿಯತೆಯನ್ನು ಲಕ್ಷ್ಮಣ್‌ ಅವರ ಭವಾನಿ ಹೋಟೆಲಿನ ಮಂಡಕ್ಕಿ ಒಗ್ಗರಣೆಯೂ ಪಡೆದುಕೊಂಡಿದೆ. ಶುದ್ಧ ಎಣ್ಣೆ, ಹಾಲು, ಟೊಮೆಟೋ, ಉಳ್ಳಾಗಡ್ಡಿ, ಮೆಣಸಿನಕಾಯಿ, ಜೀರಿಗೆ, ಸಾಸಿವೆ, ಅರಶಿಣ, ಬೆಳ್ಳುಳ್ಳಿ, ಶುಂಠಿಯನ್ನು ಬಳಸಿ ಮಾಡಿದ ಬಿಸಿ ಬಿಸಿಯಾದ, ಘಮಘಮಿಸುವ ಮಂಡಕ್ಕಿ ಒಗ್ಗರಣೆ ಎಂಥವರ ಬಾಯಲ್ಲೂ ನೀರು ತರಿಸುತ್ತದೆ.

1974ರಲ್ಲಿ, ತಮ್ಮ ಜಮೀನಿಗೆ ಹೋಗುವ ದಾರಿಯಲ್ಲೇ ಸ್ವಲ್ಪ ಜಾಗ ಖರೀದಿಸಿದ ಲಕ್ಷ್ಮಣ್‌ ಅವರ ತಂದೆ ನಾಗೋಜಿ, ಅಲ್ಲಿ ಪುಟ್ಟದಾಗಿ ಗುಡಿಸಲು ಹಾಕಿ ಟೀ, ಕಾಫಿ, ಮಂಡಕ್ಕಿ ಒಗ್ಗರಣೆ ಮಾಡಲು ಶುರು ಮಾಡಿದ್ರು. ಆರಂಭದಲ್ಲಿ 15 ಪೈಸೆಗೆ ಒಂದು ಪ್ಲೇಟ್‌ ಮಂಡಕ್ಕಿ ಒಗ್ಗರಣೆ ಸಿಗುತ್ತಿತ್ತು. ದಿನಕಳೆದಂತೆ ಗ್ರಾಮವು ಪ್ರಗತಿಯತ್ತ ಸಾಗಿದ್ದು, 1986ರಲ್ಲಿ, ಇದ್ದ ಜಾಗದಲ್ಲೇ ಮನೆ ಕಟ್ಟಿಕೊಂಡು ಅದಕ್ಕೆ ಶ್ರೀ ಭವಾನಿ ಹೋಟೆಲ್‌ ಎಂದು ಹೆಸರಿಟ್ಟು, ತಿಂಡಿ -ಊಟ ಮಾರಾಟ ಮಾಡಲು ಶುರು ಮಾಡಿದ್ದರು. ಇದಕ್ಕೆ ಮನೆಯ ಸದಸ್ಯರೂ ಸಾಥ್‌ ನೀಡುತ್ತಿದ್ದರು.

10 ವರ್ಷದಿಂದ ಒಂದೇ ಬೆಲೆ: ಒಗ್ಗರಣೆ ಮಂಡಕ್ಕಿಯ ಬೆಲೆ ಪ್ಲೇಟ್‌ಗೆ 15 ಪೈಸೆ ಇದ್ದಾಗ, ಇಡೀ ದಿನದಲ್ಲಿ 20 ರೂ. ವ್ಯಾಪಾರ ಆದ್ರೆ ಅದೇ ಹೆಚ್ಚು ಎನ್ನಲಾಗುತ್ತಿತ್ತು. ಆದ್ರೆ, ಈಗ ದಿನಸಿ ಸಾಮಗ್ರಿ, ತರಕಾರಿ ಬೆಲೆ ಹೆಚ್ಚಾದಂತೆಲ್ಲ ಮಂಡಕ್ಕಿ ಒಗ್ಗರಣೆಯ ಬೆಲೆ 15 ರೂ.ಗೆ ಹೆಚ್ಚಿಸಲಾಗಿದೆ. 10 ವರ್ಷಗಳಿಂದಲೂ ಒಂದೇ ದರ ಇದೆ ಎನ್ನುತ್ತಾರೆ ಲಕ್ಷ್ಮಣ್‌.

ಕಟ್ಟಿಗೆ ಒಲೆ: ಇಂದಿಗೂ ಕಟ್ಟಿಗೆಯನ್ನು ಬಳಕೆ ಮಾಡಿ ಉಪಾಹಾರದ ತಯಾರಿ ಮಾಡುವ ಲಕ್ಷ್ಮಣ್‌ಗೆ, ಪತ್ನಿ ತಾರಾಬಾಯಿ, ಪುತ್ರ ಈಶ್ವರ ಮತ್ತು ಸೊಸೆ ಸಂಧ್ಯಾ ಸಾಥ್‌ ನೀಡುತ್ತಾರೆ. ಗ್ರಾಹಕರ ಸಂಖ್ಯೆ ಹೆಚ್ಚಾದ ಕಾರಣ ಇಬ್ಬರು ನೌಕರರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ.

“ಈ ಪುಟ್ಟ ಹೋಟೆಲ್‌ ನಡೆಸಿಕೊಂಡೇ ಬದುಕು ಕಟ್ಟಿಕೊಂಡಿರುವೆ. ಮೂವರು ಮಕ್ಕಳಿಗೂ ಉನ್ನತ ಶಿಕ್ಷಣ ಕೊಡಿಸಿರುವೆ. ಮುಖ್ಯವಾಗಿ, ಗ್ರಾಹಕರು ಸಂತೃಪ್ತರಾದರೆ, ಅದಕ್ಕಿಂತ ಖುಷಿ ಮತ್ತೂಂದಿಲ್ಲ’ ಎನ್ನುತ್ತಾರೆ ಲಕ್ಷ್ಮಣ್‌. ಮೊದಲು ಮಧ್ಯಾಹ್ನದ ಊಟದ ವ್ಯವಸ್ಥೆ ಇತ್ತು. ಈಗ ಪಕ್ಕದಲ್ಲೇ ಅಣ್ಣನ ಮಗಳು ಖಾನಾವಳಿ ಪ್ರಾರಂಭಿಸಿದ ನಂತರ ಊಟ ಕೊಡುವುದನ್ನು ನಿಲ್ಲಿಸಿದ್ದಾರೆ. ಇಲ್ಲಿ ಮಂಡಕ್ಕಿಯ ಜೊತೆಗೆ ಮಿರ್ಚಿ, ಬಜ್ಜಿ, ಪೂರಿ-ಪಿಟ್ಲಾ ಕೂಡ ತಯರಾಗುತ್ತದೆ.

ಲಭ್ಯವಿರುವ ತಿಂಡಿ: ಬೆಳಗ್ಗೆ 6.30ಯಿಂದ ಮಧ್ಯಾಹ್ನ 12.30ರವರೆಗೆ ಪೂರಿ(ನಾಲ್ಕಕ್ಕೆ 20 ರೂ.), ಒಗ್ಗರಣೆ ಮಂಡಕ್ಕಿ ಸಿಗುತ್ತೆ. ಮಧ್ಯಾಹ್ನದ ನಂತರ ಒಗ್ಗರಣೆ ಮಂಡಕ್ಕಿ, ಬಜ್ಜಿ, ಟೀ, ಕಾಫಿ, ತಂಪು ಪಾನೀಯ ಸಿಗುತ್ತದೆ. ದರ 20 ರೂ. ಒಳಗೆ.

ಪಿಟ್ಲಾ ಸೂಪರ್‌: ಪೂರಿ ಜೊತೆ ಕೊಡುವ ಪಿಟ್ಲಾ(ಸಾಗು) ತಿಂಡಿಯ ರುಚಿಯನ್ನು ಹೆಚ್ಚಿಸುತ್ತೆ. ಹುಳಗಟ್ಟಿ, ಟೊಮೆಟೋ, ಖಾರದ ಪುಡಿ, ಮಸಾಲೆ ಹಾಕಿ ಕಡ್ಲೆ ಇಟ್ಟು ಹಾಕಿ ಮಾಡುವ ಪಿಟ್ಲಾ ಪೂರಿ ರುಚಿಯನ್ನು ಹೆಚ್ಚಿಸಿದೆ.

ಹೋಟೆಲ್‌ ಸಮಯ: ಬೆಳಗ್ಗೆ 6.30ರಿಂದ ರಾತ್ರಿ 7.30ರವರೆಗೆ, ವಾರದ ರಜೆ ಇಲ್ಲ.

ಹೋಟೆಲ್‌ ವಿಳಾಸ: ಯಾದಗಿರಿಯಿಂದ 24 ಕಿ.ಮೀ., ಕಂದಕೂರ ಗ್ರಾಮ, ಬಸ್‌ ನಿಲ್ದಾಣ ಎದುರು. ಶ್ರೀ ಭವಾನಿ ಹೋಟೆಲ್‌

* ಭೋಗೇಶ ಆರ್‌. ಮೇಲುಕುಂಟೆ

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.