ಸೈಮನ್ ಅಜೇಯ ಸಾಹಸ ; ಪೂರಣ್ ಸ್ಪೋಟಕ ಬ್ಯಾಟಿಂಗ್ : ಭಾರತಕ್ಕೆ ಎಂಟು ವಿಕೆಟ್ ಸೋಲು
ದುಬೆ-ಪಂತ್ ಸಾಹಸ ವ್ಯರ್ಥ ; ಲಿಂಡ್ಲೆ - ಪೂರಣ್ ಸ್ಪೋಟಕ ಜೊತೆಯಾಟಕ್ಕೆ ಗೆಲುವು!
Team Udayavani, Dec 8, 2019, 10:29 PM IST
ತಿರುವನಂತಪುರಂ: ಪ್ರವಾಸಿ ವೆಸ್ಟ್ ವಿಂಡೀಸ್ ವಿರುದ್ದ ಇಲ್ಲಿನ ಗ್ರೀನ್ ಫೀಲ್ಡ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಟಿಂ ಇಂಡಿಯಾ ಎಂಟು ವಿಕೆಟ್ ಗಳಿಂದ ಪರಾಜಯಗೊಂಡಿದೆ. ಭರ್ಜರಿ ಅಜೇಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಲಿಂಡ್ಲೆ ಸಿಮನ್ಸ್ (67* ) ಪಂದ್ಯಶ್ರೇಷ್ಠ ಪುರಸ್ಕಾರ ಪಡೆದರು.
ವೆಸ್ಟ್ ಇಂಡೀಸ್ ಅಂತಿಮವಾಗಿ 18.3 ಓವರುಗಳಲ್ಲಿ 02 ವಿಕೆಟ್ ಗಳನ್ನು ಕಳೆದುಕೊಂಡು 173 ರನ್ ಗಳಿಸಿ ವಿಜಯಿಯಾಯಿತು.
ಆರಂಭಿಕ ಆಟಗಾರ ಲಿಂಡ್ಲೆ ಸೈಮನ್ ಅವರ ಭರ್ಜರಿ ಅಜೇಯ 67 ರನ್ ಗಳ ನೆರವಿನಿಂದ ವೆಸ್ಟ್ ಇಂಡೀಸ್ ಭಾರತ ನೀಡಿದ್ದ 170 ರನ್ ಗಳ ಗುರಿಯನ್ನು 18.3 ಓವರುಗಳಲ್ಲಿ ತಲುಪಿ ಗೆಲುವಿನ ನಗು ಬೀರಿತು. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿ ಇದೀಗ 1-1 ಸಮಬಲದಲ್ಲಿದೆ.
ವೆಸ್ಟ್ ಇಂಡೀಸ್ ಆರಂಭ ಜೋಶ್ ನಿಂದ ಕೂಡಿತ್ತು. ಸೈಮನ್ಸ್ (67 ನಾಟೌಟ್) ಮತ್ತು ಲೆವಿಸ್ (40) ಸೇರಿಕೊಂಡು ಮೊದಲ ವಿಕೆಟಿಗೆ 73 ರನ್ ಗಳ ಜೊತೆಯಾಟವನ್ನು ನೀಡಿದರು. ಭಾರತೀಯ ಬೌಲರ್ ಗಳನ್ನು ಬೆಂಡೆತ್ತಿದ ಈ ಜೋಡಿ ಭರ್ಜರಿ ಆಟವಾಡಿದರು.
ವೆಸ್ಟ್ ಇಂಡೀಸ್ ಪರ ನಾಲ್ಕೂ ಬ್ಯಾಟ್ಸ್ ಮನ್ ಗಳೂ ಉತ್ತಮ ಆಟವಾಡಿದ್ದು ಕೆರಿಬಿಯನ್ನರ ಗೆಲುವಿಗೆ ಸಹಕಾರಿಯಾಯಿತು. ಸಿಮನ್ಸ್ 4 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 45 ಎಸೆತಗಳಲ್ಲಿ 67 ರನ್ ಸಿಡಿಸಿದರೆ, ಇನ್ನೋರ್ವ ಓಪನರ್ ಎವಿನ್ ಲೆವಿಸ್ 40 ರನ್ ಗಳಿಸಿದರು.
ಹೇಯ್ಟ್ ಮೇರ್ 14 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ನೊಂದಿಗೆ 23 ರನ್ ಸಿಡಿಸಿದರೆ ತಂಡಕ್ಕೆ ಪುನರಾಗಮನ ಮಾಡಿದ ವಿಕೆಟ್ ಕೀಪರ್ ಪೂರಣ್ ಅವರ ಆಟ ಇನ್ನಷ್ಟು ಸ್ಪೋಟಕವಾಗಿತ್ತು. ಪೂರಣ್ ಕೇವಲ 18 ಎಸೆತಗಳಲ್ಲಿ ಅಜೇಯ 38 ರನ್ ಸಿಡಿಸಿ ಕೊನೆಯಲ್ಲಿ ತಂಡದ ಗೆಲುವನ್ನು ಸರಾಗಗೊಳಿಸಿದರು.
ಭಾರತದ ಬೌಲಿಂಗ್ ನಿರೀಕ್ಷಿತ ಮಟ್ಟದಲ್ಲಿ ಇರಲೇ ಇಲ್ಲ. ಕೆರಿಬಿಯನ್ ಆರಂಭಿಕರನ್ನು ಕಟ್ಟಿಹಾಕಲು ವಿಫಲವಾಗಿದ್ದು ಮತ್ತು ಅಂತಿಮ ಹಂತದಲ್ಲಿ ಪೂರಣ್ ಸಿಡಿಯಲು ಅವಕಾಶ ಮಾಡಿಕೊಟ್ಟಿದ್ದು ಟಿಂ ಇಂಡಿಯಾ ಬೌಲಿಂಗ್ ಹುಳುಕನ್ನು ತೆರೆದಿಟ್ಟಿತು. ವಿಂಡೀಸ್ ಪರ ಉರುಳಿದ ಎರಡು ವಿಕೆಟ್ ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ಪಾಲಾಯಿತು.
ಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ : ವಿಂಡೀಸ್ ಗೆಲುವಿಗೆ 171 ರನ್ ಗುರಿ
ಬ್ಯಾಟಿಂಗ್ ಗೆ ಅಷ್ಟೇನೂ ಪೂರಕವಲ್ಲದ ಇಲ್ಲಿನ ಪಿಚ್ ನಲ್ಲಿ ಟಾಸ್ ಗೆದ್ದ ವಿಂಡೀಸ್ ಕಪ್ತಾನ ಕೈರನ್ ಪೊಲಾರ್ಡ್ ಅವರು ಭಾರತವನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿದರು. ಯುವ ಆಲ್ ರೌಂಡರ್ ಶಿವಂ ದುಬೆ (54) ಅವರ ಭರ್ಜರಿ ಅರ್ಧಶತಕ ಮತ್ತು ಇನ್ನಿಂಗ್ಸ್ ನ ಕೊನೆಯಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ (33) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 20 ಓವರುಗಳಲ್ಲಿ ಒಟ್ಟು 07 ವಿಕೆಟುಗಳನ್ನು ಕಳೆದುಕೊಂಡು 170 ರನ್ ಗಳನ್ನು ಕಲೆಹಾಕಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಟೀಂ ಇಂಡಿಯಾ ತಂಡದ ಮೊತ್ತ 24 ಆಗುವಷ್ಟರಲ್ಲಿ ರೋಹಿತ್ ಶರ್ಮಾ (15) ಔಟಾದರೆ ಇವರ ಬೆನ್ನಿಗೇ ಕೆ.ಎಲ್. ರಾಹುಲ್ (11) ಸಹ ಪೆವಿಯಲಿಯನ್ ದಾರಿ ಹಿಡಿದರು. ಈ ಹಂತದಲ್ಲಿ ಜೊತೆಯಾದ ದುಬೆ ಮತ್ತು ಕೊಹ್ಲಿ ಜೋಡಿ ಅಮೂಲ್ಯ 34 ರನ್ ಗಳ ಜೊತೆಯಾಟ ನೀಡಿತು. ಇದರಲ್ಲಿ ದುಬೆ ಸಿಡಿದದ್ದೇ ಹೆಚ್ಚು. ನಾಯಕ ಕೊಹ್ಲಿ ಈ ಯುವ ಬ್ಯಾಟ್ಸ್ ಮನ್ ಗೆ ಉತ್ತಮ ಬೆಂಬಲ ನೀಡಿದರು. ಅಂತಿಮವಾಗಿ 30 ಎಸೆತೆಗಳಲ್ಲಿ 54 ರನ್ ಸಿಡಿಸಿದ ದುಬೆ ಕ್ಯಾಚ್ ನೀಡಿ ಔಟಾದರು. ಅವರ ಈ ಸ್ಪೋಟಕ ಇನ್ನಿಂಗ್ಸ್ ನಲ್ಲಿ 4 ಭರ್ಜರಿ ಸಿಕ್ಸರ್ ಮತ್ತು 3 ಬೌಂಡರಿ ಸಿಡಿಸಿದರು. ನಾಯಕ ಪೊಲಾರ್ಡ್ ಓವರಿನಲ್ಲಿ ದುಬೆ ಹ್ಯಾಟ್ರಿಕ್ ಸಿಕ್ಸ್ ಬಾರಿಸಿ ತನ್ನ ಬ್ಯಾಟಿಂಗ್ ತಾಕತ್ತನ್ನು ಪ್ರದರ್ಶಿಸಿದರು.
ಭಾರತೀಯ ಇನ್ನಿಂಗ್ಸ್ ನಲ್ಲಿ ಶಿವಂ ದುಬೆ ಮತ್ತು ರಿಷಭ್ ಪಂತ್ (33 ನಾಟೌಟ್) ಮಾತ್ರವೇ ವಿಂಡೀಸ್ ಬೌಲರ್ ಗಳನ್ನು ಕಾಡಿದರು. ಪಂತ್ ಅವರು 22 ಎಸೆತೆಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 33 ರನ್ ಸಿಡಿಸಿ ಔಟಾಗದೆ ಉಳಿದರು. ಉಳಿದಂತೆ ನಾಯಕ ಕೊಹ್ಲಿ (19), ಶ್ರೇಯಸ್ ಐಯರ್ (10), ರವೀಂದ್ರ ಜಡೇಜಾ (9) ಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದರು.
ವಿಂಡೀಸ್ ಪರ ಕೆಸ್ರಿಕ್ ವಿಲಿಯಮ್ಸ್ ಮತ್ತು ಲೆಗ್ ಬ್ರೇಕ್ ಸ್ಪಿನ್ನರ್ ಹೆಡೇನ್ ರಶೀದಿ ವಾಲ್ಷ್ ತಲಾ 02 ವಿಕೆಟ್ ಪಡೆದು ಮಿಂಚಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
Team Indiaಕ್ಕೆ ಆಸೀಸ್ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು
ICC ಇಂದು ಸಭೆ: ಚಾಂಪಿಯನ್ಸ್ ಟ್ರೋಫಿ; ಹೈಬ್ರಿಡ್ ಮಾದರಿಗೆ ಮತದಾನ?
Test; ದಕ್ಷಿಣ ಆಫ್ರಿಕಾ ಎದುರು ನಿಕೃಷ್ಟ ಮೊತ್ತಕ್ಕೆ ಶ್ರೀಲಂಕಾ ಆಲೌಟ್
Badminton; ಸಯ್ಯದ್ ಮೋದಿ ಇಂಟರ್‌ನ್ಯಾಶನಲ್: ಸಿಂಧು, ಸೆನ್ ಕ್ವಾರ್ಟರ್‌ಫೈನಲಿಗೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.