ತೆರಿಗೆ ಏರಿಕೆ ಸರಿಯಲ್ಲ ಜಿಎಸ್‌ಟಿ ಹೊರೆಯಾಗುವುದು ಬೇಡ


Team Udayavani, Dec 9, 2019, 5:34 AM IST

GST

ಒಂದು ದೇಶ, ಒಂದು ಮಾರುಕಟ್ಟೆ ಮತ್ತು ಒಂದು ತೆರಿಗೆ ಎಂಬ ಧ್ಯೇಯದೊಂದಿಗೆ ಎರಡೂವರೆ ವರ್ಷದ ಹಿಂದೆ ಜಾರಿಗೆ ತರಲಾಗಿದ್ದ, ದೇಶದ ಅತಿ ದೊಡ್ಡ ತೆರಿಗೆ ಸುಧಾರಣೆ ಎಂದು ವ್ಯಾಖ್ಯಾನಿಸಲ್ಪಟ್ಟ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸುವ ಚಿಂತನೆ ಸರಕಾರಕ್ಕಿದೆ. ಜಿಎಸ್‌ಟಿ ಬದಲಾವಣೆ ಆಗಬೇಕಾದದ್ದೇ. ಜಾರಿಗೆ ಬಂದು ಎರಡೂವರೆ ವರ್ಷವಾಗಿದ್ದರೂ ಜಿಎಸ್‌ಟಿಯ ಗೊಂದಲಗಳಿನ್ನೂ ಮುಗಿದಿಲ್ಲ.

ಈ ತೆರಿಗೆ ವ್ಯವಸ್ಥೆಯಲ್ಲಿರುವ ಕೆಲವು ವಿರೋಧಾಭಾಸಗಳು ನಿರಂತರ ಟೀಕೆಗೂ, ಗೇಲಿಗೂ ಒಳಗಾಗುತ್ತಿವೆ. ಜಿಎಸ್‌ಟಿಯಲ್ಲಿರುವ ಇಂಥ ಹಲವು ಲೋಪದೋಷಗಳು ನಿವಾರಣೆಯಾಗಬೇಕಾದರೆ ಅದನ್ನು ಆಮೂಲಾಗ್ರವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ. ಆದರೆ ಈ ಬದಲಾವಣೆಯಿಂದ ಜನರ ತೆರಿಗೆ ಹೊರೆ ಇನ್ನಷ್ಟು ಹೆಚ್ಚಾಗುವುದು ಮಾತ್ರ ಸಮ್ಮತವಲ್ಲ.

ಆದರೆ ಸದ್ಯಕ್ಕೆ ಲೋಪದೋಷಗಳ ನಿವಾರಣೆಗಿಂತಲೂ ತೆರಿಗೆ ಸಂಗ್ರಹವನ್ನು ಹೆಚ್ಚಿಸಿಕೊಳ್ಳುವುದು ಸರಕಾರದ ಆದ್ಯತೆಯಾಗಿರುವಂತೆ ಕಾಣಿಸುತ್ತಿದೆ. ಈ ಉದ್ದೇಶದಿಂದ ಶೇ.5 ತೆರಿಗೆ ಪ್ರಮಾಣವನ್ನು ಶೇ.9-10ಕ್ಕೆ ಏರಿಸುವ ಮತ್ತು ಶೇ. 12 ತೆರಿಗೆ ಸ್ಲಾéಬ್‌ ಕಿತ್ತು ಹಾಕುವ ಚಿಂತನೆ ನಡೆದಿದೆ. ಹೀಗಾದರೆ ಜಿಎಸ್‌ಟಿ ಎಂಬ ರಮ್ಯ ಕನಸು ಜನ ಸಾಮಾನ್ಯರಿಗೆ ಮಾತ್ರವಲ್ಲದೆ ಉದ್ಯಮಿಗಳ ಪಾಲಿಗೂ ದುಃಸ್ವಪ್ನವಾಗಿ ಕಾಡಬಹುದು.

ಪ್ರಸ್ತುತ ಶೇ. 12 ಸ್ಲಾಬ್‌ನಲ್ಲಿರುವ 243 ಸರಕು ಮತ್ತು ಸೇವೆಗಳು ಬಹುತೇಕ ಮಧ್ಯಮ ವರ್ಗದವರು ಮತ್ತು ಕೆಳ ಮಧ್ಯಮ ವರ್ಗದವರು ಬಳಸುವಂಥದ್ದು. ಇದನ್ನು ಶೇ.18ರ ಸ್ಲಾಬ್‌ಗ ತಂದರೆ ಖಂಡಿತ ಅದು ಹೊರೆಯಾಗಿ ಪರಿಣಮಿಸಲಿದೆ.

ಜಿಎಸ್‌ಟಿ ಜಾರಿಗೆ ತರುವಾಗ ಉತ್ಪಾದಕರು ಮತ್ತು ವರ್ತಕರು ಒಂದೇ ತೆರಿಗೆಯಿಂದ ತಮಗೆ ಬಹಳ ಅನುಕೂಲವಾಗಬಹುದು ಎಂದು ಭಾವಿಸಿದ್ದರು. ಪಾರದರ್ಶಕ ಕಾನೂನುಗಳು, ಸರಳ ಲೆಕ್ಕಪತ್ರಗಳು…ಹೀಗೆ ವರ್ತಕರು ಕಂಡ ಕನಸುಗಳು ಹಲವು. ಗ್ರಾಹಕರು ಕೂಡ ತಮ್ಮ ಜೀವನಾವಶ್ಯಕ ವಸ್ತುಗಳ ಬೆಲೆ ಕಡಿಮೆಯಾಗಬಹುದು. ಈ ಮೂಲಕ ಉಳಿತಾಯ ವಾಗುವ ಹಣ ಮಕ್ಕಳ ಶಿಕ್ಷಣಕ್ಕೋ, ವೃದ್ಧರ ಔಷಧಿಗೋ ಉಪಯೋಗಬಹುದು ಎಂದು ಲೆಕ್ಕಾಚಾರ ಹಾಕಿದ್ದರು. ತೆರಿಗೆ ಸೋರಿಕೆ ಕಡಿಮೆಯಾಗಿ ಸರಕಾರದ ಬೊಕ್ಕಸ ತುಂಬಿ ತುಳುಕಲಿದೆ ಎಂದು ನಂಬಿಸಲಾಗಿತ್ತು. ಆದರೆ ಎರಡೂವರೆ ವರ್ಷ ಕಳೆದ ಬಳಿಕ ನೋಡಿದಾಗ ಈ ಇದ್ಯಾವುದೂ ಆದಂತೆ ಕಾಣಿಸುವುದಿಲ್ಲ. ಸರಕಾರ ಹೇಳಿರುವುದೇ ಬೇರೆ ವಾಸ್ತವ ಸ್ಥಿತಿಯೇ ಬೇರೆ. ಜನರು ಹಿಂದಿನಂತೆಯೇ ತೆರಿಗೆ ಪಾವತಿಸುತ್ತಿದ್ದಾರೆ. ವಸ್ತುಗಳ ಮತ್ತು ಸೇವೆಗಳ ಬೆಲೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಜಿಎಸ್‌ಟಿಯಿಂದಾಗಿ ಯಾವ ವಸ್ತುವೂ ಅಗ್ಗವಾಗಿರುವುದು ಕಂಡು ಬಂದಿಲ್ಲ. ಹೀಗಿರುವಾಗ ಇಂಥ ಒಂದು ಅಗಾಧ ಸ್ಥಿತ್ಯಂತರವನ್ನು ಮಾಡಿ ಆದ ಲಾಭವೇನು? ಈ ಪ್ರಶ್ನೆಗೆ ಉತ್ತರಿಸುವ ಬಾಧ್ಯತೆ ನಮ್ಮನ್ನು ಆಳುವವರ ಮೇಲಿದೆ.

ಜಿಎಸ್‌ಟಿಯಿಂದಾಗಿ ತೆರಿಗೆ ಕಡಿಮೆಯಾಗ ಬೇಕಿರುವುದು ಮಾತ್ರವಲ್ಲದೆ ತೆರಿಗೆ ಸ್ಲಾಬ್‌ಗಳೂ ಕಡಿಮೆಯಾಗಬೇಕು. ಪ್ರಸ್ತುತ ನಮ್ಮಲ್ಲಿ ನಾಲ್ಕು ಸ್ಲಾಬ್‌ಗಳಿವೆ. ಇದನ್ನು ಕ್ರಮೇಣ ಎರಡು ಸ್ಲಾಬ್‌ಗ ತರಬೇಕೆಂದು ಆರಂಭದಿಂದಲೇ ಅರ್ಥ ಶಾಸ್ತ್ರಜ್ಞರು ಸಲಹೆ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಚಿಂತನೆಗಳನ್ನು ನಡೆಸಬೇಕು. ಅಂತೆಯೇ ಪೆಟ್ರೋಲಿಯಂ ಸೇರಿದಂತೆ ಹಲವು ಜೀವನಾವಶ್ಯಕ ವಸ್ತುಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಇವುಗಳಿಗೂ ಜಿಎಸ್‌ಟಿ ಅನ್ವಯಿಸುವಂತೆ ಮಾಡಿ ಅವುಗಳ ಬೆಲೆ ಕಡಿಮೆಯಾಗುವಂತೆ ಮಾಡಬೇಕು. ಜಿಎಸ್‌ಟಿ ಪಾರದರ್ಶಕ ಎಂದು ಸರಕಾರ ಹೇಳುತ್ತಿದ್ದರೂ ರಂಗೋಲಿ ಕೆಳಗೆ ತೂರಿ ಹೋಗುವವರು ಇಲ್ಲೂ ಇದ್ದಾರೆ.

ಇತ್ತೀಚೆಗಷ್ಟೆ ಬಯಲಾದ ನಕಲಿ ರಸೀದಿ ಸೃಷ್ಟಿಸಿ ಕ್ರೆಡಿಟ್‌ ಇನ್‌ಪುಟ್‌ ಪಡೆದುಕೊಂಡ ಪ್ರಕರಣವೇ ಇದಕ್ಕೆ ಸಾಕ್ಷಿ.ಇದರಿಂದ ಜಿಎಸ್‌ಟಿ ಸಂಪೂರ್ಣ ಸುರಕ್ಷಿತ ಅಲ್ಲ ಎನ್ನುವುದು ಸಾಬೀತಾಗುತ್ತದೆ. ಇಂಥ ಲೋಪಗಳನ್ನು ಮೊದಲು ಸರಿಪಡಿಸಬೇಕು. ಜೊತೆಗೆ ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ, ಸಿಜಿಎಸ್‌ಟಿ ಎಂಬ ಬೇರೆ ಬೇರೆ ರೂಪದ ತೆರಿಗೆ ಸಂಗ್ರಹ ಗೊಂದಲ ನಿವಾರಣೆಯಾಗಿ ಸರಕಾರವೇ ಹೇಳಿಕೊಂಡಂತೆ ಒಂದೇ ತೆರಿಗೆ ಎಂಬ ಪರಿಕಲ್ಪನೆ ಸಾಕಾರವಾಗಬೇಕು. ಜಿಎಸ್‌ಟಿಯನ್ನು “ಗುಡ್‌ ಆ್ಯಂಡ್‌ ಸಿಂಪಲ್‌ ಟ್ಯಾಕ್ಸ್‌’ ಪದ್ಧತಿಯನ್ನಾಗಿ ಮಾಡಲು ಮೊದಲ ಆದ್ಯತೆ ನೀಡಬೇಕು.

ಟಾಪ್ ನ್ಯೂಸ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

8-uv-fusion

Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.