ಮೋತಕಪಲ್ಲಿ ಬಲಭೀಮಸೇನ ಜಾತ್ರೆ
ತಿರುಪತಿ ಮಾದರಿಯಲ್ಲಿ ಸೇವೆ 12ರಂದು ಮಧ್ಯರಾತ್ರಿ ರಥೋತ್ಸವ
Team Udayavani, Dec 9, 2019, 10:42 AM IST
ಶಿವಕುಮಾರ ಬಿ. ನಿಡಗುಂದಾ
ಸೇಡಂ: ಈ ದೇವಾಲಯಕ್ಕಿದೆ 1200 ವರ್ಷಗಳ ಇತಿಹಾಸ. ಈ ದೇವನಿಗೆ ಭಕ್ತಿಯಿಂದ ನಮಿಸಿದರೆ ಸರ್ವ ದುಃಖ ಪರಿಹಾರವಾಗಿ, ಸುಖ-ಶಾಂತಿ ನೆಲೆಸುತ್ತದೆ. ತೆಲಂಗಾಣ, ಮಹಾರಾಷ್ಟ್ರ , ಕರ್ನಾಟಕ ರಾಜ್ಯದ ಅನೇಕ ಭಕ್ತರಿಗೆ ಈತ ಆರಾಧ್ಯ ದೈವ. ಈ ದೇವಾಲಯಕ್ಕೆ ತಿರುಪತಿ ತಿಮ್ಮಪ್ಪನ ಮಹಾದ್ವಾರವೆಂದು ಕರೆಯಲಾಗುತ್ತದೆ.
ಸ್ವಯಂ ಉದ್ಭವ ಮೂರ್ತಿಯಾಗಿ ಭಕ್ತರ ಇಷ್ಟಾರ್ಥ ಪೂರೈಸುತ್ತಿರುವ ಈ ಮಹಾಬಲನಿಗೆ ತಿರುಪತಿ ತಿಮ್ಮಪ್ಪನಿಗೆ ಸಲ್ಲುವ ಎಲ್ಲ ಸೇವೆಗಳು ಯಥಾವತ್ತಾಗಿ ಸಲ್ಲುತ್ತವೆ. ತಾಲೂಕಿನ ಮೋತಕಪಲ್ಲಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಬಲಭೀಮಸೇನ ದೇವರ ಜಾತ್ರಾ ಮಹೋತ್ಸವಕ್ಕೆ ಈಗಾಗಲೇ ಚಾಲನೆ ದೊರೆತಿದ್ದು, ಡಿ. 12ರಂದು ಮಧ್ಯರಾತ್ರಿ ಮಹಾ ರಥೋತ್ಸವ ನಡೆಯಲಿದೆ.
ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ದೇವಾಲಯದ ಜಾತ್ರಾ ಮಹೋತ್ಸವ ನಿಮಿತ್ತ ಪೂರ್ವ ತಯಾರಿ ಜೋರಾಗಿ ನಡೆದಿದೆ. ಗಡಿ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ ಹಾಗೂ ರಾಜ್ಯದ ಅನೇಕ ಕಡೆಗಳಿಂದ ಸಾವಿರಾರು ಭಕ್ತರು ಆಗಮಿಸಲಿರುವ ಹಿನ್ನೆಲೆಯಲ್ಲಿ, ಸೂಕ್ತ ವ್ಯವಸ್ಥೆ ಕಲ್ಪಿಸಲು ತಾಲೂಕು ಆಡಳಿತ, ದೇವಾಲಯ ಸಮಿತಿ, ಪೂಜಾರಿಗಳ ವೃಂದ ಶ್ರಮಿಸುತ್ತಿದೆ.
ಸತತ 11 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ನಿಮಿತ್ತ ಹೊಸ್ತಿಲ ಹುಣ್ಣಿಮೆ ಮಧ್ಯರಾತ್ರಿ 12:10ಕ್ಕೆ ರಥೋತ್ಸವ ನಡೆಯುತ್ತದೆ. ಇದಾದ ನಂತರ ಶ್ರೀ ಬಲಭೀಮ ದೇವರ ಉತ್ಸವ ಮೂರ್ತಿಗೆ ಹೂವಿನ ಅಲಂಕಾರ ಮಾಡಿ, ಹೂವಿನ ತೇರು ಸೇವೆ, ಆನೆ ಮೇಲೆ ಮೆರವಣಿಗೆ ಮಾಡುವ ಗಜ ಸೇವೆ ನಡೆಸಲಾಗುತ್ತದೆ. ಜಾತ್ರೆಗೆ ಬರುವ ಭಕ್ತರಿಗಾಗಿ ಗುರುಮಠಕಲ್, ಯಾದಗಿರಿ, ನಾರಾಯಣಪೇಟ, ಕೊಡಂಗಲ್, ಮುಧೋಳ, ಸೇಡಂನಿಂದ ವಿಶೇಷ ಬಸ್ ಕಲ್ಪಿಸಲಾಗಿದೆ. ನೆಲೆಸಲು ಯಾತ್ರಿಕ ನಿವಾಸದ ವ್ಯವಸ್ಥೆ ಮಾಡಲಾಗಿದೆ.
ಪ್ರತಿ ವರ್ಷ ಶ್ರೀ ಬಲಭೀಮಸೇನ ದೇವರ ದರ್ಶನ ಪಡೆಯುವ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ. ದೇವಾಲಯದ ಎದುರಿಗಿರುವ ಪುಷ್ಕರಣಿಯಲ್ಲಿ ಮಿಂದೆದ್ದು, ಆರಾಧ್ಯ ದೇವರ ದರ್ಶನ ಪಡೆಯುವ ಲಕ್ಷಾಂತರ ಭಕ್ತರ ಮನೋಕಾಮನೆಗಳು ಪೂರ್ತಿಯಾಗಿವೆ.
ಭೀಮಾಚಾರಿ,
ಅರ್ಚಕರು, ಮೋತಕಪಲ್ಲಿ
ಭಕ್ತರಿಗಾಗಿ ಸೌಕರ್ಯ ಕಲ್ಪಿಸುವ ಸಂಬಂಧ ತಾಲೂಕು ಆಡಳಿತ ವತಿಯಿಂದ ಸಕಲ ಸಿದ್ಧತೆ ಕಾರ್ಯ ಕೈಗೊಳ್ಳಲಾಗಿದೆ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗಾಗಿ ಸಾರಿಗೆ ಇಲಾಖೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.
ಬಸವರಾಜ ಬೆಣ್ಣೆಶಿರೂರ್,
ತಹಶೀಲ್ದಾರ್, ಸೇಡಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.