ಶಾಲೆಗಳಲ್ಲಿ ಮಧ್ಯಾಹ್ನದೂಟ ಮೊಟಕಿನತ್ತ!
ಹಣ ಬಿಡುಗಡೆ ವಿಳಂಬ; ಮುಖ್ಯೋಪಾಧ್ಯಾಯರು ಸಂಕಷ್ಟದಲ್ಲಿ
Team Udayavani, Dec 10, 2019, 4:53 AM IST
ಕಾಸರಗೋಡು: ಹಣ ಬಿಡುಗಡೆಗೆ ವಿಳಂಬವಾಗುತ್ತಿರುವುದರಿಂದ ವಿದ್ಯಾ ರ್ಥಿಗಳಿಗೆ ಶಾಲೆಗಳಲ್ಲಿ ನೀಡುತ್ತಿದ್ದ ಮಧ್ಯಾಹ್ನ ದೂಟ ಮೊಟಕಿನತ್ತ ಸಾಗುತ್ತಿದೆ. ಇದೇ ವೇಳೆ ಹಣ ಹೊಂದಿಸಲು ಸಾಧ್ಯವಾಗದೆ ಬಹು ತೇಕ ಶಾಲಾ ಮುಖ್ಯೋಪಾಧ್ಯಾಯರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಜಿಲ್ಲೆಯ ಶಾಲೆಗಳಲ್ಲಿ ವಿದ್ಯಾರ್ಥಿ ಗಳಿಗೆ ನೀಡುತ್ತಿರುವ ಮಧ್ಯಾಹ್ನದೂಟಕ್ಕೆ ಅಗತ್ಯವಾದ ಹಣ ಬಿಡುಗಡೆಯಾಗದಿ ರುವುದರಿಂದ ಮಧ್ಯಾಹ್ನದೂಟದ ಜವಾ ಬ್ದಾರಿಯುಳ್ಳ ಶಾಲಾ ಮುಖ್ಯೋ ಪಾಧ್ಯಾಯರು ಸಮಸ್ಯೆಗೆ ಸಿಲುಕಿದ್ದಾರೆ. ಹಲವು ಶಾಲೆಗಳಲ್ಲಿ ಮಧ್ಯಾಹ್ನದೂಟಕ್ಕೆ ಅಗತ್ಯದ ಹಣ ಬಿಡುಗಡೆಯಾಗದೆ ಎರಡು ತಿಂಗಳಾಯಿತು. ಇಂತಹ ಸಮಸ್ಯೆ ಕಾಸರಗೋಡು ಜಿಲ್ಲೆಗೆ ಮಾತ್ರ ಸೀಮಿತವಲ್ಲ. ರಾಜ್ಯದ ಇತರ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಪ್ರತಿ ತಿಂಗಳು ಒಂದು ಲಕ್ಷಕ್ಕೂ ಅಧಿಕ ರೂಪಾಯಿ ಅಗತ್ಯವಿರುವ ಶಾಲೆಗಳೂ ಇವೆ. ಸರಕಾರದಿಂದ ಅಕ್ಕಿ ಮಾತ್ರವೇ ಉಚಿತವಾಗಿ ಶಾಲೆಗಳಿಗೆ ಲಭಿಸುತ್ತಿದೆ. ಆದರೆ ಇತರ ಸಾಮಗ್ರಿಗಳನ್ನು ಹಣಕೊಟ್ಟು ಖರೀದಿಸಬೇಕಾಗುತ್ತದೆ. ಈ ಮೊತ್ತವನ್ನು ಸರಕಾರ ಬಿಡುಗಡೆಗೊಳಿಸುತ್ತಿದ್ದರೂ, ಇದೀಗ ಎರಡು ತಿಂಗಳಿಂದ ಮಧ್ಯಾಹ್ನದೂಟದ ವೆಚ್ಚದ ಹಣವನ್ನು ಬಿಡುಗಡೆ ಗೊಳಿಸದೆ ಮೊಟಕುಗೊಂಡಿದೆ.
ಅಗತ್ಯದ ಸಾಮಗ್ರಿಗಳಿಗೆ ಕಳೆದ ಜೂನ್ ತಿಂಗಳಲ್ಲಿ ನಿಗದಿಪಡಿಸಿದ ಮೊತ್ತವನ್ನು ಸಾರ್ವಜನಿಕ ವಿದ್ಯಾಭ್ಯಾಸ ಇಲಾಖೆ ಶಾಲೆಗಳ ಬ್ಯಾಂಕ್ ಅಕೌಂಟ್‌ಗಳಿಗೆ ನೇರವಾಗಿ ಜಮೆ ಮಾಡುತ್ತಿತ್ತು. ಅಗತ್ಯದ ಮೊತ್ತವನ್ನು ಶಾಲಾ ಅಧಿಕೃತರು ಹಿಂಪಡೆದುಕೊಂಡಿರುವುದರಿಂದ ಬ್ಯಾಂಕ್ ಅಕೌಂಟ್‌ಗಳಲ್ಲಿ ಹಣ ಖಾಲಿಯಾಗಿದೆ. ಈ ಕಾರಣದಿಂದ ಮಧ್ಯಾಹ್ನದೂಟಕ್ಕೆ ಅಗತ್ಯದ ಸಾಮಗ್ರಿ ಖರೀದಿಸಲು ಹಣದ ಸಮಸ್ಯೆ ಎದುರಾಗಿದೆ. ಹಲವು ಶಾಲಾ ಮುಖ್ಯೋಪಾಧ್ಯಾಯರು ಮಧ್ಯಾಹ್ನದೂಟಕ್ಕೆ ಅಗತ್ಯದ ಹಣ ಹೊಂದಿಸಲು ಅಲೆದಾಡಬೇಕಾದ ಪರಿ ಸ್ಥಿತಿ ಎದುರಾಗಿದೆ. ಶಾಲಾ ಅಧಿಕೃತ ರಿಗೆ ಮಧ್ಯಾಹ್ನದೂಟಕ್ಕೆ ಅಗತ್ಯದ ಮೊತ್ತ ವನ್ನು ಅಕೌಂಟ್‌ಗಳಿಂದ ನೇರವಾಗಿ ಹಿಂಪಡೆದುಕೊಳ್ಳುವ ವ್ಯವಸ್ಥೆ ಪ್ರಸ್ತುತವಿದೆ.
ಮಧಾಹ್ನದೂಟಕ್ಕೆ ವೆಚ್ಚವಾದ ಮೊತ್ತದ ಬಗ್ಗೆ ಬಿಲ್‌ಗಳನ್ನು ಎ.ಇ.ಒ. ಕಚೇರಿಗೆ ಸಲ್ಲಿಸಬೇಕು. ಈ ಬಿಲ್‌ಗಳನ್ನು ಎ.ಇ.ಒ. ಪರಿಶೀಲಿಸಿದ ಬಳಿಕ ಪ್ರತಿ ತಿಂಗಳ ಹಣ ವಿನಿಯೋಗಕ್ಕೆ ಅನುಮತಿ ನೀಡಲಾಗುತ್ತಿದೆ. ಆದರೆ ಇದೀಗ ಕಳೆದ ಎರಡು ತಿಂಗಳಿಂದ ಹಣ ಲಭಿಸದ ಹಲವು ಶಾಲೆಗಳಲ್ಲಿ ಮಧ್ಯಾಹ್ನದೂಟ ಮೊಟಕುಗೊಳ್ಳುವ ಸಾಧ್ಯತೆ ಬಗ್ಗೆ ಆತಂಕ ವ್ಯಕ್ತವಾಗಿದೆ. ಈಗ ಹೇಗೋ ಅಲ್ಲಿ ಇಲ್ಲಿ ಎಂಬಂತೆ ಸಾಲ ಮಾಡಿ ಹಣ ಹೊಂದಿಸಿಕೊಳ್ಳುತ್ತಿ ರುವ ಮುಖ್ಯೋಪಾಧ್ಯಾಯರು ಮುಂದಿನ ಹಣಕ್ಕಾಗಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಲು, ಮೊಟ್ಟೆ, ನೀರುಳ್ಳಿ ಬೆಲೆಯೇರಿಕೆಯಿಂದಾಗಿ ಹೊರೆ ಅಧಿಕವಾಗಿದೆ.
ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹಾರ
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ದಿನ ತಲಾ 150 ಮಿಲಿ ಲೀಟರ್ ಹಾಲು, ಒಂದು ದಿನ ಮೊಟ್ಟೆ, ಎಲ್ಲ ಅಧ್ಯಯನ ದಿನಗಳಲ್ಲಿ ಊಟ, ಎರಡು ರೀತಿಯ ಖಾದ್ಯ ನೀಡಬೇಕು. ಈ ಪೈಕಿ ಮಧ್ಯಾಹ್ನದೂಟಕ್ಕೆ ಅಗತ್ಯವಾದ ಅಕ್ಕಿ ಸರಕಾರದಿಂದ ಉಚಿತವಾಗಿ ಲಭಿಸುತ್ತದೆ. ಅಡುಗೆ ಅನಿಲ, ಹಾಲು, ಮೊಟ್ಟೆ, ತರಕಾರಿಗಾಗಿ ಒಬ್ಬ ವಿದ್ಯಾರ್ಥಿಗೆ 6 ರಿಂದ 8 ರೂ. ಯಂತೆ ಪ್ರತಿದಿನ ಸರಕಾರ ಮೊತ್ತ ಮಂಜೂರು ಮಾಡುತ್ತದೆ.
ಹಣ ಇದೆ, ಬಿಡುಗಡೆಗೆ ವಿಳಂಬ
ಶಾಲೆಗಳಿಗೆ ಬ್ಯಾಂಕ್ ಅಕೌಂಟ್‌ಗಳಿಂದ ಅಗತ್ಯದ ಮೊತ್ತವನ್ನು ನೇರವಾಗಿ ಹಿಂಪಡೆಯುವ ವ್ಯವಸ್ಥೆಯನ್ನು ಟ್ರೆಶರಿ (ಖಜಾನೆ)ಗೆ ಬದಲಾಯಿಸಿದ್ದರಿಂದ ಹಣ ಲಭಿಸಲು ವಿಳಂಬವಾಗಲಿದೆ. ಇನ್ನು ಮುಂದೆ ಎಲ್ಲ ಬಿಲ್‌ಗಳು ನೂತನ ಸಾಫ್ಟ್ ವೇರ್ “ಬಿಂಸ್’ ಅಕೌಂಟ್ ಮೂಲಕವೇ ಸಾಧ್ಯವಾಗುವುದು. ಆಯಾಯ ಶಾಲೆಗಳು ಎ.ಇ.ಒ. ಕಚೇರಿಗೆ ಬಿಲ್‌ಗಳನ್ನು ನೀಡಿ ಪಾಸ್ ಮಾಡುವುದಕ್ಕೆ ಅನುಸರಿಸಿ ಈ ಅಕೌಂಟ್‌ಗಳಿಗೆ ಮೊತ್ತ ಲಭಿಸಲಿದೆ. ನೂತನ ವ್ಯವಸ್ಥೆ ಅರಿತುಕೊಳ್ಳಲು ಡಾಟಾ ಎಂಟ್ರಿ ಆಪರೇಟರ್, ಸೆಕ್ಷನ್ ಕ್ಲರ್ಕ್‌ಗಳಿಗೆ ಕಲ್ಲಿಕೋಟೆಯಲ್ಲಿ ತರಬೇತಿ ನೀಡಲಾಗುವುದು. ಪ್ರತಿ ಶಾಲೆಯ ಸಮಗ್ರ ವಿವರಗಳನ್ನು ನೂತನ ವ್ಯವಸ್ಥೆಗೆ ಅಪ್‌ಲೋಡ್ ಮಾಡುವ ಪ್ರಕ್ರಿಯೆ ನಡೆ ಯುತ್ತಿದೆ. ಮಧ್ಯಾಹ್ನದೂಟಕ್ಕೆ ಅಗತ್ಯದ ಮೊತ್ತವನ್ನು ಕಂಟಿಂಜೆನ್ಸಿ ಫಂಡ್ ಆಗಿ ಜಿಲ್ಲೆಗೆ 10 ಕೋಟಿ ರೂಪಾಯಿ ಟ್ರೆಶರಿ ಅಕೌಂಟ್‌ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಜೂರು ಮಾಡಿದೆ. ಪ್ರಸ್ತುತ ಇರುವ ಹಣಕಾಸು ಸಮಸ್ಯೆ ನೂತನ ವ್ಯವಸ್ಥೆಯಲ್ಲಿನ ಕುಂದುಕೊರತೆಗಳನ್ನು ನೀಗಿಸಿ ಶೀಘ್ರವೇ ಪರಿಹಾರ ಕಂಡುಕೊಳ್ಳಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
1.47 ಕೋಟಿ ವೆಚ್ಚ
ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಶಾಲೆ ತರಗತಿಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದೂಟ ನೀಡಲಾಗುತ್ತಿದೆ. ಇದಕ್ಕಾಗಿ ತಿಂಗಳಿಗೆ ಒಟ್ಟು 1.47 ಕೋ.ರೂ. ಅಗತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.