ಹೆಮ್ಮಾಡಿ – ಕಟ್ಟು ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ
Team Udayavani, Dec 10, 2019, 5:59 AM IST
ಹೆಮ್ಮಾಡಿ: ರಾ.ಹೆ. 66ರಿಂದ ಕಟ್ಟು ಮೂಲಕವಾಗಿ ಹಕ್ಲಾಡಿ, ಬಂಟ್ವಾಡಿ ಸಹಿತ ಹತ್ತಾರು ಊರುಗಳಿಗೆ ಸಂಪರ್ಕ ಕಲ್ಪಿಸುವ ಹೆಮ್ಮಾಡಿ – ಕಟ್ಟು ಸಂಪರ್ಕ ರಸ್ತೆ ಹದಗೆಟ್ಟು ಹಲವು ವರ್ಷಗಳೇ ಕಳೆದಿದ್ದು, ಈ ವರ್ಷವಾದರೂ ದುರಸ್ತಿ ಮಾಡಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹೆಮ್ಮಾಡಿಯಿಂದ ಕಟ್ಟು ಮೂಲಕವಾಗಿ ತೋಪು, ಯಳೂರು, ಬಂಟ್ವಾಡಿ, ಹಕ್ಲಾಡಿ, ಆಲೂರು, ಗುಡ್ಡಮ್ಮಾಡಿ, ಹಕೂìರು ಸಹಿತ ಅನೇಕ ಊರುಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ.
ಈ ರಸ್ತೆಯ ಸುಮಾರು 1.5 ಕಿ.ಮೀ. ಉದ್ದಕ್ಕೆ ಅಲ್ಲಲ್ಲಿ ಹೊಂಡ – ಗುಂಡಿಗಳಿದ್ದು, ಅದರಲ್ಲೂ ಸುಮಾರು 500 ಮೀ. ಅಂತೂ ಸಂಪೂರ್ಣ ಹದಗೆಟ್ಟು ಹೋಗಿದೆ. ಪ್ರತಿ ನಿತ್ಯ ಈ ರಸ್ತೆಯಾಗಿ ನೂರಾರು ವಾಹನಗಳು ಸಂಚರಿಸುತ್ತವೆ. ಇದು ಹಕ್ಲಾಡಿ ಮತ್ತಿತರೆಡೆಗಳಿಗೆ ಹತ್ತಿರದ ಮಾರ್ಗ ಕೂಡ ಆಗಿದೆ.
8 ವರ್ಷದ ಹಿಂದೆ ಡಾಮರು
ಈ ರಸ್ತೆಗೆ ಡಾಮರೀಕರಣವಾಗಿದ್ದು ಸುಮಾರು 8 ವರ್ಷಗಳ ಹಿಂದೆ. ಅಲ್ಲಿಂದ ಇಲ್ಲಿಯವರೆಗೆ ಈ ರಸ್ತೆಗೆ ಮರು ಡಾಮರೀಕರಣವಾಗಲಿ ಅಥವಾ ತೇಪೆ ಹಾಕುವ ಕಾರ್ಯವಾಗಲಿ ನಡದೇ ಇಲ್ಲ ಎನ್ನುವುದಾಗಿ ಸ್ಥಳೀಯರು ಹೇಳುತ್ತಾರೆ.
ಮರು ಡಾಮರು ಕಾಮಗಾರಿಯಾಗಲಿ
ಹಲವು ವರ್ಷಗಳಿಂದ ಈ ರಸ್ತೆಯ ಸ್ಥಿತಿ ಹೀಗೆ ಇದೆ. ನಾವು ಪ್ರತಿನಿತ್ಯ ಕಷ್ಟಪಟ್ಟು ಸಂಚರಿಸುತ್ತೇವೆ. 1 ಕಿ.ಮೀ. ರಸ್ತೆಯಲ್ಲಂತೂ ಸಂಚರಿಸುವುದೇ ಕಷ್ಟ. ಈ ವರ್ಷವಾದರೂ ಈ ರಸ್ತೆಗೆ ಮರು ಡಾಮರೀಕರಣ ಮಾಡಲು ಸಂಬಂಧಪಟ್ಟ ಸ್ಥಳೀಯ ಜನಪ್ರತಿನಿಧಿಗಳು ಕ್ರಮಕೈಗೊಳ್ಳಲಿ.
-ಸತೀಶ್ ಯಳೂರು, ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Belman: ಅಣೆಕಟ್ಟಿನ ಹಲಗೆ ಅಳವಡಿಕೆ; ತುಂಬಿದ ಶಾಂಭವಿ ನದಿ
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
Karkala: ಪಾಳು ಬಿದ್ದ ಸರಕಾರಿ ಕಟ್ಟಡಗಳು; ಲಕ್ಷಾಂತರ ಅನುದಾನ ವ್ಯರ್ಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.