ಕೇರಳ ರಾಜ್ಯದಲ್ಲಿ 8 ತಿಂಗಳು 1,537 ಅತ್ಯಾಚಾರ ಪ್ರಕರಣ
ಫೊರೆನ್ಸಿಕ್ ವರದಿಗೆ ಕಾಯುತ್ತಿವೆ 4,000 ಮೊಕದ್ದಮೆಗಳು
Team Udayavani, Dec 11, 2019, 4:56 AM IST
ಕಾಸರಗೋಡು : ಈಗ ದಿನಾ ಅತ್ಯಾಚಾರ, ಲೈಂಗಿಕ ಕಿರುಕುಳ, ಹಿಂಸೆ ಇವುಗಳದ್ದೇ ಸುದ್ದಿ. ದೇಶದ ಮೂಲೆ ಮೂಲೆಯಲ್ಲೂ ಲೈಂಗಿಕ ಕಿರುಕುಳ ಸುದ್ದಿಯಾಗುತ್ತಿರುವಂತೆ ಕೇರಳದಲ್ಲೂ ಈ ವಿಚಾರದಲ್ಲಿ ಹಿಂದಿಲ್ಲ. ಕಳೆದ ಎಂಟು ತಿಂಗಳಲ್ಲಿ ಕೇರಳದಲ್ಲಿ ಒಟ್ಟು 1537 ಪ್ರಕರಣಗಳನ್ನು ದಾಖಲಿಸಲಾಗಿದೆ. ಹಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, 4,000 ಪ್ರಕರಣಗಳು ಫೊರೆನ್ಸಿಕ್ ವರದಿಗಾಗಿ ಕಾಯುತ್ತಿವೆ. ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಐದು ಪಾಲು ಹೆಚ್ಚಳವಾಗಿದೆ. ಕಳೆದ 10 ವರ್ಷಗಳಲ್ಲಿ ಕೇರಳದಲ್ಲಿ ಮೂರು ಪಾಲು ಅತ್ಯಾಚಾರ ಪ್ರಕರಣಗಳು ಅಧಿಕವಾಗಿವೆ.
ಅತ್ಯಾಚಾರ, ಮಕ್ಕಳಿಗೆ ಲೈಂಗಿಕ ಕಿರುಕುಳ ಮೊದಲಾದ ಪ್ರಕರಣಗಳಲ್ಲಿ ಕೇರಳವು ಹಿಂದಿಲ್ಲ. 2019 ನೇ ವರ್ಷದ ಎಂಟು ತಿಂಗಳಲ್ಲಿ ಕೇರಳದಲ್ಲಿ ಒಟ್ಟು ದಾಖಲಾದ ಪ್ರಕರಣಗಳ ಸಂಖ್ಯೆ 1537. ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಪ್ರಕರಣ ದಾಖಲಾಗಿವೆೆ. ಅತ್ಯಾಚಾರ, ಮಕ್ಕಳಿಗೆ ಲೈಂಗಿಕ ಕಿರುಕುಳ ಇವೇ ಮೊದಲಾದ ಪ್ರಕರಣಗಳ ವಿಚಾರಣೆಯ ತೀರ್ಪು ಹೊರ ಬರಲು ನ್ಯಾಯಾಲಯದಲ್ಲಿ ವಿಳಂಬವಾಗುತ್ತಿದೆ. ಅಲ್ಲದೆ ಇಂತಹ ಪ್ರಕರಣಗಳಲ್ಲಿ ಸಾಕ್ಷಿದಾರರು ನ್ಯಾಯಾಲಯದಲ್ಲಿ ಸಾಕ್ಷಿ ತಿರುಚುವುದರಿಂದಾಗಿ ಅತ್ಯಾಚಾರ, ಲೈಂಗಿಕ ಕಿರುಕುಳಕ್ಕೆ ತುತ್ತಾದವರಿಗೆ ನ್ಯಾಯ ದೊರೆಯದಂತಾಗಿದೆ. ಬಹುತೇಕ ಪ್ರಕರಣಗಳಲ್ಲಿ ಸಾಕ್ಷಿದಾರರು ಸಾಕ್ಷಿ ತಿರುಚುವುದು, ಆರೋಪಿಗಳ ಬೆದರಿಕೆ, ಅತ್ಯಾಚಾರಕ್ಕೊಳಗಾದವರೂ ಕೂಡ ನ್ಯಾಯಾಲಯದಲ್ಲಿ ಹಲವು ಒತ್ತಡಗಳಿಗೆ ಮಣಿದು ಸ್ಪಷ್ಟವಾಗಿ ಸಾಕ್ಷಿಗಳನ್ನು ಹೇಳದಿರುವುದು ಮೊದಲಾದವುಗಳಿಂದಾಗಿ ಆರೋಪಿಗಳು ಶಿಕ್ಷೆಯಿಂದ ಪಾರಾಗುತ್ತಿದ್ದಾರೆ. ಇದು ಇನ್ನಷ್ಟು ಇಂತಹ ಅಪರಾಧ ಹೆಚ್ಚಳಕ್ಕೆ ಕಾರಣವಾಗುತ್ತಿದೆ.
2017ರ ವರೆಗಿನ 1,28,000 ಪ್ರಕರಣಗಳು ನ್ಯಾಯಾಲಯ ದಲ್ಲಿ ವಿಚಾರಣೆಯ ಹಂತದಲ್ಲಿವೆೆ. ದೇಶದಲ್ಲಿ ವರ್ಷಂಪ್ರತಿ ಸರಾಸರಿ ಶೇ. 15 ರಷ್ಟು ಕೇಸುಗಳ ವಿಚಾರಣೆ ಪೂರ್ತಿಯಾಗುತ್ತಿದೆ ಎಂಬುದು ಲೆಕ್ಕಾಚಾರವಾಗಿದೆ. ಕೇರಳದಲ್ಲಿ ಶೇ.5 ಕ್ಕೂ ಕಡಿಮೆ ಪ್ರಮಾಣದಲ್ಲಿ ಪ್ರಕರಣಗಳ ವಿಚಾರಣೆ ಪೂರ್ತಿಗೊಳ್ಳುತ್ತಿದೆ. ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಪಟ್ಟಂತೆ ವೈದ್ಯಕೀಯ ಪರಿಶೋಧನೆ ನಡೆಸಲು ಲ್ಯಾಬ್‌ಗಳ ಸಹಿತ ಅತ್ಯಾಧುನಿಕ ವ್ಯವಸ್ಥೆಗಳಿಲ್ಲ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ವೈಜ್ಞಾನಿಕ ಪರಿಶೋಧನೆಯ ವರದಿ ಸೂಕ್ತ ಕಾಲಕ್ಕೆ ಲಭಿಸುವುದಿಲ್ಲ. ಕೇರಳದಲ್ಲಿ 4,000 ದಷ್ಟು ಪ್ರಕರಣಗಳು ಫಾರೆನ್ಸಿಕ್ ವರದಿಗಾಗಿ ಕಾಯುತ್ತಿವೆ. ಫಾರೆನ್ಸಿಕ್ ವಿಭಾಗದಲ್ಲಿ ತಜ್ಞರ ಕೊರತೆಯಿದೆ. ಕೇರಳದಲ್ಲಿ ಫಾರೆನ್ಸಿಕ್ ವಿಭಾಗದಲ್ಲಿ 400 ಮಂದಿ ತಜ್ಞರ ಅಗತ್ಯವಿದ್ದರೂ, ಕೇವಲ 100 ಕ್ಕೂ ಕಡಿಮೆ ತಜ್ಞರಿದ್ದಾರೆ.
ಕಾರಣಗಳು: ಮದ್ಯಪಾನ, ದಾರಿದ್ರ್ಯ, ಮಾದಕ ವಸ್ತು ಸೇವನೆ, ಮೊಬೈಲ್ ಫೋನ್-ಇಂಟರ್‌ನೆಟ್ ದುರುಪಯೋಗ ಮೊದಲಾದವುಗಳ ಕಾರಣದಿಂದ ಅತ್ಯಾಚಾರ, ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಹೆಚ್ಚಳಕ್ಕೆ ಕಾರಣವೆಂಬುದಾಗಿ ತಜ್ಞರು ಅಭಿಮತ ವ್ಯಕ್ತಪಡಿಸುತ್ತಿದ್ದಾರೆ.
ಅತ್ಯಂತ ಹೆಚ್ಚು ಪ್ರಕರಣ: ಕೇರಳದ ಎರ್ನಾಕುಳಂ ಜಿಲ್ಲೆ 2019ರಲ್ಲಿ ಆಗಸ್ಟ್ ತಿಂಗಳ ವರೆಗಿನ ಅತ್ಯಾಚಾರ ಪ್ರಕರಣಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ಈ ಜಿಲ್ಲೆಯಲ್ಲಿ 1601 ಪ್ರಕರಣಗಳು ದಾಖಲಾಗಿವೆ. ಅತ್ಯಂತ ಕಡಿಮೆ ಪ್ರಕರಣಗಳು ದಾಖಲಾದ ಜಿಲ್ಲೆ ವಯನಾಡು-67. ಕೇರಳದ ರಾಜಧಾನಿ ತಿರುವನಂತಪುರದಲ್ಲಿ ದಾಖಲಾದ ಪ್ರಕರಣಗಳು 211 ಆಗಿದ್ದರೆ, ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳು 70.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.