ಇತಿಹಾಸ ಪ್ರಸಿದ್ದ ತಗ್ಗರ್ಸೆ ಕಂಬಳೋತ್ಸವ ಸಂಪನ್ನ
Team Udayavani, Dec 10, 2019, 9:13 PM IST
ಬೈಂದೂರು: ನಿರಂತರ ಕೃಷಿ ಕಾಯಕದ ನಡುವೆ ಕೃಕರ ಜೀವಾಳ ಸಾಕು ಪ್ರಾಣಿಗಳು. ಅವುಗಳನ್ನು ಸಲಹಿ ಕ್ರೀಡೆಯಲ್ಲಿ ಭಾಗವಹಿಸುವಂತೆ ತರಬೇತಿ ನೀಡಿ ಊರಿನ ಜನರೆಲ್ಲಾ ಸಂಭ್ರಮಿಸುವ ಕಂಬಳೋತ್ಸವ ನಿರಂತರವಾಗಿ ನಡೆಯುತ್ತಿರಲಿ ಎಂದು ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಹೇಳಿದರು ಅವರು ತಗ್ಗರ್ಸೆ ಹೆಗ್ಡೆಯವರ ಮನೆ ಕಂಬಳಗದ್ದೆಯಲ್ಲಿ ನಡೆದ ಸಾಂಪ್ರದಾಯಿಕ ಕಂಬಳೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಈ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಐಎಫ್‌ಎಸ್ ಅಧಿಕಾರಿ ಜಗನ್ನಾಥ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ, ಕಂಬಳ ಸಮಿತಿ ಬೈದೂರು ತಾಲೂಕು ಅಧ್ಯಕ್ಷ ವೆಂಕಟ ಪೂಜಾರಿ ಸಸಿಹಿತ್ಲು ಉಪಸ್ಥಿತರಿದ್ದರು. ತಗ್ಗರ್ಸೆ ಹೆಗ್ಡೆ ಕುಟುಂಬದ ಟಿ. ನಾರಾಯಣ ಹೆಗ್ಡೆ ತಗ್ಗರ್ಸೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರ್ವಹಿಸಿದರು.ಜನ್ಮನೆ ರತ್ನಾಕರ ಶೆಟ್ಟಿ ಅರೆಶಿರೂರು ವಂದಿಸಿದರು.
ತಗ್ಗರ್ಸೆ ಕಂಬಳೋತ್ಸವದ ಫಲಿತಾಂಶ
ಕಂಬಳೋತ್ಸವ ಹಲಗೆ ವಿಭಾಗದಲ್ಲಿ ಆತ್ಮಜ ನೀರಜ್ ಅವರ ಕೋಣ ಪ್ರಥಮ ಸ್ಥಾನ, ವೆಂಕಟ ಪೂಜಾರಿ ಸಸಿಹಿತ್ಲು ಅವರ ಕೋಣ ದ್ವಿತಿಯ ಸ್ಥಾನವನ್ನು, ಹಗ್ಗ ವಿಭಾಗ ದಿಶಾ ಶ್ರೇಯಸ್ ನಾರಾಯಣ ದೇವಾಡಿಗ ಅವರ ಕೋಣ ಪ್ರಥಮ, ದಿ. ಕಾರಿಕಟ್ಟೆ ಮಹಾಬಲ ಶೆಟ್ಟಿ ಅವರ ಕೋಣ ದ್ವಿತೀಯ ಸ್ಥಾನ.
ಹಗ್ಗ ವಿಭಾಗ ಕಿರಿಯ ಸುಧಾಕರ ಶೆಟ್ಟಿ ನೆಲ್ಯಾಡಿ ಪ್ರಥಮ, ಪನ್ನಗ ಹೆಬ್ಟಾರ್ ಭಟ್ಕಳ ದ್ವೀತಿಯ, ಹಗ್ಗ ವಿಭಾಗ ಕಿರಿಯ ಎಚ್. ಎನ್. ನಿವಾಸ್ ಪಿನ್ನುಪಾಲ್ ಭಟ್ಕಳ ಪ್ರಥಮ, ಸುಪ್ರಿತ್ ಸುಜಿತ್ ಗಂಗನಾಡು ದ್ವಿತೀಯ,ವಿಜೇತ ಕೋಣಗಳನ್ನು ಓಡಿಸಿದ ಗೋಪಾಲ ನಾಯ್ಕ, ಭಾಸ್ಕರ್, ವಿವೇಕ ಪೂಜಾರಿ, ಮಂಜುನಾಥ ಗೌಡ, ಶಂಕರ್ ನಾಯ್ಕ ಅವರಿಗೆ ನಗದು ಪುರಸ್ಕಾರ ನೀಡಲಾಯಿತು.
ಆಕರ್ಷಕ ಶೋಭಾಯಾತ್ರೆಯೊಂದಿಗೆ ಪಾಲ್ಗೊಂಡ ವೆಂಕಟ ಪೂಜಾರಿ ಸಸಿಹಿತ್ಲು ರವರಿಗೆ ಬಹುಮಾನ ವಿತರಿಸಲಾಯಿತು. ಕೆಸರು ಗದ್ದೆ ಓಟದಲ್ಲಿ ಮಂಜುನಾಥ ಗೌಡ ಪ್ರಥಮ, ಹರೀಶ್ ಪೂಜಾರಿ ದ್ವಿತೀಯ, ಧನರಾಜ್ ತೃತೀಯ ಬಹುಮಾನ ಪಡೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
MUST WATCH
ಹೊಸ ಸೇರ್ಪಡೆ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.