ರೋಹಿಂಗ್ಯಾಗಳಿಂದ ಆಳ ಸಮುದ್ರ ಮೀನುಗಾರಿಕೆ

ದಕ್ಷಿಣ ಕನ್ನಡ ಸೇರಿ ರಾಜ್ಯದ ಕರಾವಳಿಯಲ್ಲಿ ರೊಹಿಂಗ್ಯಾಗಳ ವಾಸ; ಮಾಹಿತಿ ಸಂಗ್ರಹಕ್ಕೆ ಗುಪ್ತಚರ ಇಲಾಖೆ ಸೂಚನೆ

Team Udayavani, Dec 11, 2019, 6:45 AM IST

ds-53

ಬೆಂಗಳೂರು: ದೇಶ ಹಾಗೂ ರಾಜ್ಯದ ಆಂತರಿಕ ಭದ್ರತೆಗೆ ಆತಂಕ ತಂದಿರುವ ರೊಹಿಂಗ್ಯಾ ಸಮುದಾಯದವರು (ಅಕ್ರಮ ವಲಸಿಗರು) ದಕ್ಷಿಣ ಕನ್ನಡ ಸಹಿತವಾಗಿ ರಾಜ್ಯದ ಕರಾವಳಿ ಭಾಗದಲ್ಲಿ ಆಳದೋಣಿ ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವುದು ಗೃಹ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ಮತ್ತೂಂದೆಡೆ, ಈಗಾಗಲೇ ಸಾವಿರಾರು ಮಂದಿ ಮಧ್ಯವರ್ತಿಗಳ ಮೂಲಕ ಆಧಾರ್‌ಕಾರ್ಡ್‌, ಚುನಾವಣ ಗುರುತಿನ ಚೀಟಿ, ಪಡಿತರ ಚೀಟಿ ಪಡೆದುಕೊಂಡು ಸರಕಾರಿ ಸೌಲಭ್ಯಗಳ ಫ‌ಲಾನುಭವಿಗಳಾಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಸುಮಾರು 5 ಸಾವಿರ ಮಂದಿ ರೊಹಿಂಗ್ಯಾ ಸಮುದಾಯದವರು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಗುಪ್ತಚರ ಮೂಲಗಳು ಹೇಳಿವೆ.

ಇದೇ ಕಾರಣಕ್ಕೆ ಗುಪ್ತಚರ ಇಲಾಖೆ ಇತ್ತೀಚೆಗೆ ರಾಜ್ಯದ ಎಲ್ಲ ಪೊಲೀಸ್‌ ಕಮಿಷನರ್‌ಗಳು, ವಲಯ ಐಜಿಪಿಗಳು, ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದು, ಆಯಾ ಪ್ರದೇಶಗಳಲ್ಲಿ ಅಕ್ರಮವಾಗಿ ವಾಸವಾಗಿರುವ ರೊಹಿಂಗ್ಯಾ ಅಥವಾ ಬಾಂಗ್ಲಾ ದೇಶಿ ಪ್ರಜೆಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಅಂಕಿ ಅಂಶಗಳ ಸಹಿತ ಮಾಹಿತಿ ನೀಡುವಂತೆ ಸೂಚಿಸಿದೆ.

ಆಳದೋಣಿ ಮೀನುಗಾರಿಕೆಯಲ್ಲಿ ಕನಿಷ್ಠ ಎಂಟರಿಂದ ಹತ್ತು ದಿನ ಸಮುದ್ರದ ಮಧ್ಯದಲ್ಲೇ ಕಳೆಯಬೇಕು. ಬೋಟಿನೊಳಗೆ ಯಾರಿರುತ್ತಾರೆ ಎಂಬು ದನ್ನು ಸುಲಭದಲ್ಲಿ ಪತ್ತೆಹಚ್ಚಲು ಸಾಧ್ಯವಿಲ್ಲ. ಹಾಗೆಯೇ ಪ್ರತಿಬಾರಿ ಆಳ ಸಮುದ್ರಕ್ಕೆ ಹೋಗುವಾಗ ಬೋಟಿನ ಚಾಲಕ ಮತ್ತು ಸಹಚಾಲಕ ಹೊರತು ಪಡಿಸಿ ಬೇರೆ ಮೀನುಗಾರಿಕೆ ಸಿಬಂದಿ ಬದ ಲಾಗುವ ಸಾಧ್ಯತೆ ಇದೆ. ಅಂತಹ ಸಂದರ್ಭ ರೊಹಿಂಗ್ಯಾದವರನ್ನು ಬಳಸಿಕೊಳ್ಳಲಾಗು ತ್ತಿದೆ ಎಂದು ಮೂಲಗಳು ತಿಳಿಸಿವೆ.

ಕಡಿಮೆ ಖರ್ಚಿನಲ್ಲಿ ಕೂಲಿ!
ಪೊಲೀಸ್‌ ಮೂಲಗಳ ಪ್ರಕಾರ ಆಳ ದೋಣಿ ಮೀನುಗಾರಿಕೆ ಮತ್ತು ಸಾಮಾನ್ಯ ಮೀನು ಗಾರಿಕೆ (ನಿತ್ಯ ಹೋಗಿ ಬರುವುದು) ಹಾಗೂ ಬಂದರು ಪ್ರದೇಶಗಳಲ್ಲಿನ ಕೆಲಸ ಕಾರ್ಯಗಳಲ್ಲಿ ರೊಹಿಂಗ್ಯಾ ದವರೇ ಅಧಿಕವಾಗಿದ್ದಾರೆ. ಏಕೆಂದರೆ, ಲಕ್ಷಾಂತರ ರೂ.ಗೆ ಟೆಂಡರ್‌ ಪಡೆಯುವ ಗುತ್ತಿಗೆ ದಾರರು ಕಡಿಮೆ ಖರ್ಚಿನಲ್ಲಿ ತಮ್ಮ ಕೆಲಸ ಮುಗಿಸಿಕೊಳ್ಳಲು ಇವರನ್ನು ಬಳಸುತ್ತಿದ್ದಾರೆ. ಹೀಗಾಗಿ ಅತೀ ಕಡಿಮೆ ದಿನಗೂಲಿಗೆ ಸಿಗುವ ರೊಹಿಂಗ್ಯಾದವರನ್ನು ಕೇವಲ 300-400 ರೂ. ಕೊಟ್ಟು ನಿಯೋ ಜಿಸಿ ಕೊಳ್ಳುತ್ತಿದ್ದಾರೆ ಎಂದು ಗುಪ್ತಚರ ವರದಿ ತಿಳಿಸಿದೆ. ಈ ಸಂಬಂಧ ನಿರಂತರವಾಗಿ ಕಾರ್ಯಾ ಚರಣೆ ನಡೆಯುತ್ತಿದೆ. ಜತೆಗೆ ಕರಾವಳಿ ಕಾರ್ಯ ಪಡೆಗಳ ಅಭಿವೃದ್ಧಿಗೆ ಸರಕಾರ 20 ಕೋಟಿ ರೂ. ಬಿಡುಗಡೆ ಮಾಡಿದ್ದು, ಬೋಟ್‌, ಶಸ್ತ್ರಾಸ್ತ್ರ ಹಾಗೂ ಇತರ ಉಪಕರಣ ಗಳ ಖರೀದಿಗೆ ಸೂಚಿಸಿದೆ.

ಚಿಂದಿ ಆಯಲು ಬಂದು ಕಂಟಕವಾದರು
2014ರಲ್ಲಿ ನಡೆದ ಬುದ್ವಾನ್‌ ಸ್ಫೋಟದ ಬಳಿಕ ಸಾವಿರಾರು ಮಂದಿ ರೊಹಿಂಗ್ಯ ಮತ್ತು ಬಾಂಗ್ಲಾದೇಶಿಯರು ಕರ್ನಾಟಕ, ಪಶ್ಚಿಮ ಬಂಗಾಲ ಮತ್ತು ಮುಂಬಯಿಗೆ ಪ್ರವೇಶಿಸಿದ್ದಾರೆ. ಕರ್ನಾಟಕದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಉತ್ತರ ಕರ್ನಾಟಕ, ಚಿಕ್ಕಮಗಳೂರು, ದ.ಕ., ಉಡುಪಿ ಕರಾವಳಿ ಭಾಗದಲ್ಲಿ ಅಕ್ರಮ ನಿವಾಸಿಗಳಾಗಿದ್ದಾರೆ. ಕರಾವಳಿ ಭಾಗದಲ್ಲಿ ಮೀನುಗಾರಿಕೆ, ಚಿಕ್ಕಮಗಳೂರು, ಕೊಡಗು ಮತ್ತು ಮಲೆನಾಡು ಭಾಗಗಳಲ್ಲಿ ಕಾಫಿ, ಅಡಿಕೆ ತೋಟಗಳಲ್ಲಿ ಜೀವನ ಕಟ್ಟಿಕೊಂಡಿದ್ದಾರೆ.

ಭದ್ರತೆಗೆ ಕಂಟಕ
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಸೇರಿ ಬೆಂಗಳೂರು ಸುತ್ತಮುತ್ತ ವಾಸವಾಗಿರುವ ಅವರು ಭದ್ರತೆಗೆ ದೊಡ್ಡ ಕಂಟಕವಾಗಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ಬಂಧನಕ್ಕೊಳಗಾದ ಜಮಾತ್‌ ಉಲ್‌-ಮುಜಾಹಿದ್ದೀನ್‌ (ಜೆಎಂಬಿ) ಸಂಘಟನೆಯ ಉಗ್ರರಿಂದ ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾದೇಶಿಯರ ಬಗ್ಗೆ ಕೆಲವೊಂದು ಸ್ಫೋಟಕ ಮಾಹಿತಿ ದೊರಕಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಸುಮಾರು 5 ಸಾವಿರ ಮಂದಿ ಬಾಂಗ್ಲಾದೇಶಿಯರು ಅಥವಾ ರೊಹಿಂಗ್ಯರು ಇರಬಹುದು ಎಂದು ಶಂಕಿಸಲಾಗಿದೆ. ಕೆಲವು ಎನ್‌ಜಿಒಗಳ ಪ್ರಕಾರ 1 ಲಕ್ಷ ಮೀರಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ಸಿಎಬಿ-ಎನ್‌ಆರ್‌ಸಿಯಿಂದ ಉಪಯೋಗ?
ಕೇಂದ್ರ ಸರಕಾರದ ಎನ್‌ಆರ್‌ಸಿ (ನಾಗರಿಕರ ರಾಷ್ಟ್ರೀಯ ನೋಂದಣಿ) ಕಾಯ್ದೆ ಜಾರಿಗೆ ಬರುತ್ತಿರುವುದು ಅಕ್ರಮ ವಲಸಿಗರ ಪತ್ತೆಗೆ ಸಾಕಷ್ಟು ಸಹಾಯವಾಗಲಿದೆ. ಇದಷ್ಟೇ ಅಲ್ಲ, ಹಾಲಿ ಚರ್ಚೆಗೆ ಗ್ರಾಸವಾಗಿರುವ ಪೌರತ್ವ ತಿದ್ದುಪಡಿ ಮಸೂದೆ (ಸಿಎಬಿ) ಕಾಯ್ದೆಯಾಗಿ ಜಾರಿಗೆ ಬಂದರೆ, ರಾಜ್ಯದಲ್ಲಿ ವಾಸಿಸುತ್ತಿರುವ ರೊಹಿಂಗ್ಯಾಗಳನ್ನು ಗುರುತಿಸಿ ಹೊರಹಾಕಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಬಹಳಷ್ಟು ಅಕ್ರಮ ನಿವಾಸಿಗಳು ಈಗಾಗಲೇ ಆಧಾರ್‌ ಸಹಿತ ಸ್ಥಳೀಯ ವಿಳಾಸ ದೃಢೀಕರಣ ಪತ್ರ ಪಡೆದಿರುವುದರಿಂದ ಇವರನ್ನು ಗುರುತಿಸುವುದು ಕಷ್ಟ ಎಂದೇ ಹೇಳಲಾಗುತ್ತಿದೆ.

– ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

doctor 2

America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ

UGC

UGC; ಪದವಿ ಕಲಿಕೆ ಅವಧಿ ನಿರ್ಧಾರ ಆಯ್ಕೆ ಶೀಘ್ರ: ಚೇರ್ಮನ್‌ ಹೇಳಿದ್ದೇನು?

1-chinn

Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್‌ ಸ್ಪಷ್ಟನೆ

Ashwin Vaishnav

Bullet train ದೇಶದಲ್ಲಿಯೇ ನಿರ್ಮಾಣ: ಸಂಸತ್ತಿಗೆ ಕೇಂದ್ರ ಮಾಹಿತಿ

Farmer

Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್‌ ಇಳುವರಿ!

1-aaasas

Team Indiaಕ್ಕೆ ಆಸೀಸ್‌ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು

Supreme Court

Sambhal ಮಸೀದಿ ಸಮೀಕ್ಷೆ ವಿರುದ್ಧ ಸುಪ್ರೀಂಗೆ ಮೊರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Farmer

Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್‌ ಇಳುವರಿ!

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

doctor 2

America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ

UGC

UGC; ಪದವಿ ಕಲಿಕೆ ಅವಧಿ ನಿರ್ಧಾರ ಆಯ್ಕೆ ಶೀಘ್ರ: ಚೇರ್ಮನ್‌ ಹೇಳಿದ್ದೇನು?

1-chinn

Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್‌ ಸ್ಪಷ್ಟನೆ

Ashwin Vaishnav

Bullet train ದೇಶದಲ್ಲಿಯೇ ನಿರ್ಮಾಣ: ಸಂಸತ್ತಿಗೆ ಕೇಂದ್ರ ಮಾಹಿತಿ

Farmer

Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್‌ ಇಳುವರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.