ಪಾಕ್ ಗೆ ಮುಖಭಂಗ; ಉಗ್ರ ಕೃತ್ಯಕ್ಕೆ ಹಣಕಾಸು ನೆರವು-ಸಯೀದ್ ವಿರುದ್ಧ ಪಾಕ್ ಕೋರ್ಟ್ ದೋಷಾರೋಪ
Team Udayavani, Dec 11, 2019, 5:28 PM IST
ಇಸ್ಲಾಮಾಬಾದ್: ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಜಮಾತ್ ಉದ್ ದಾವಾದ ಉಗ್ರ ಹಫೀಜ್ ಉಗ್ರ ಕೃತ್ಯಕ್ಕೆ ಹಣಕಾಸು ನೆರವು ನೀಡಿರುವುದಾಗಿ ಪಾಕಿಸ್ತಾನದ ಭಯೋತ್ಪಾದನ ನಿಗ್ರಹ ಕೋರ್ಟ್ ಬುಧವಾರ ದೋಷಾರೋಪ ಹೊರಿಸಿದೆ.
ಪಂಜಾಬ್ ನ ಭಯೋತ್ಪಾದನಾ ಇಲಾಖೆ(ಸಿಟಿಡಿ)ಯ ಪೊಲೀಸರು ಜುಲೈ 17ರಂದು ಹಫೀಜ್ ಹಾಗೂ ಆತನ ನಿಕಟವರ್ತಿಗಳ ವಿರುದ್ಧ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಡಿ 23 ಎಫ್ ಐಆರ್ ಗಳನ್ನು ದಾಖಲಿಸಿತ್ತು. ಪಂಜಾಬ್ ಪ್ರಾಂತ್ಯ ಸೇರಿದಂತೆ ವಿವಿಧ ನಗರದಲ್ಲಿ ಉಗ್ರ ಕೃತ್ಯಕ್ಕೆ ಹಣಕಾಸು ನೀಡಿರುವುದಾಗಿ ಎಫ್ ಐಆರ್ ನಲ್ಲಿ ತಿಳಿಸಿತ್ತು.
ನಂತರ ಪಂಜಾಬ್ ಪೊಲೀಸರು ಜಮಾತ್ ಉದ್ ದಾವಾದ ಮಾಜಿ ಮುಖ್ಯಸ್ಥ, ಉಗ್ರ ಸಯೀದ್ ನನ್ನು ಬಂಧಿಸಿದ್ದರು. ಭಯೋತ್ಪಾದನೆಗೆ ನೆರವು ನೀಡಲು ಸಯೀದ್ ಲಾಹೋರ್, ಗುಜ್ರಾನ್ ವಾಲಾ ಮತ್ತು ಮುಲ್ತಾನ್ ನಗರಗಳಲ್ಲಿ ಅಲ್ ಅನ್ಫಾಲ್ ಟ್ರಸ್ಟ್, ದಾವಾತುಲ್ ಇರ್ಷಾದ್ ಟ್ರಸ್ಟ್ ಹಾಗೂ ಮೌಆಝ್ ಬಿನ್ ಜಬಾಲ್ ಟ್ರಸ್ಟ್ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿರುವುದಾಗಿ ವರದಿ ವಿವರಿಸಿದೆ.
ಉಗ್ರ ಹಫೀಜ್ ಸಯೀದ್ ವಿಚಾರದಲ್ಲಿ ಮೃದು ಧೋರಣೆ ತಳೆದಿದ್ದ ಪಾಕಿಸ್ತಾನ ಅಂತಾರಾಷ್ಟ್ರೀಯ ಸಮುದಾಯದ ಒತ್ತಡದ ನಂತರ ಲಷ್ಕರ್ ಎ ತೊಯ್ಬಾದ ವಿರುದ್ಧ ಪಾಕ್ ಅಧಿಕಾರಿಗಳು ತನಿಖೆ ಆರಂಭಿಸಿದ್ದರು. ಆದರೂ ಸಯೀದ್ ಬಗ್ಗೆ ತಟಸ್ಥವಾಗಿದ್ದ ಪಾಕಿಸ್ತಾನಕ್ಕೆ ಇದೀಗ ಮತ್ತೆ ಮುಖಭಂಗವಾದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.