ದಿವ್ಯಾಂಗರ ಕಲ್ಯಾಣಕ್ಕೆ ಸರ್ಕಾರ ಬದ್ಧ: ಸಚಿವ
Team Udayavani, Dec 12, 2019, 3:06 AM IST
ಬೆಂಗಳೂರು: ಶಿಕ್ಷಣದ ಮೂಲಕ ದಿವ್ಯಾಂಗರನ್ನು ಮುಖ್ಯವಾಹಿನಿಗೆ ತರಲು ಸಾಧ್ಯ ಮತ್ತು ಅವರ ಕಲ್ಯಾಣಕ್ಕಾಗಿ ಸರ್ಕಾರ ಬದ್ಧವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಯುನೆಸ್ಕೋ, ಸರ್ವಶಿಕ್ಷಾ ಅಭಿಯಾನದ ಜಂಟಿ ಸಹಯೋಗದಲ್ಲಿ ಸಿಬಿಎಂ ನಗರದ ಶಿಕ್ಷಕ ಸದನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ವಿಶೇಷ ಚೇತನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಾದೇಶಿಕ ವರದಿ – 2019′ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ದಿವ್ಯಾಂಗರ ಶಿಕ್ಷಣ ನೀತಿಯನ್ನು ಸಮರ್ಪ ಕವಾಗಿ ಅನುಷ್ಠಾನಕ್ಕೆ ತಂದಿದೆ ಎಂದರು.
ಪ್ರತಿಯೊಬ್ಬ ದಿವ್ಯಾಂಗರಿಗೂ ಶಿಕ್ಷಣ ಸಿಗಲೇ ಬೇಕು. ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗಬಾರದು. ದಿವ್ಯಾಂಗ ಮಕ್ಕಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಎಲ್ಲ ಶಾಲೆಗಳಲ್ಲೂ ದಿವ್ಯಾಂಗ ಮಕ್ಕಳನ್ನು ಸಾಮಾನ್ಯ ವಿದ್ಯಾರ್ಥಿಗಳಂತೆ ಉಪಚರಿಸಬೇಕು.
ಅವರನ್ನು ಪ್ರತ್ಯೇಕ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಂಗವಿ ಕಲರ ಅಧಿನಿಯಮದ ಆಯುಕ್ತ ವಿ.ಎಸ್.ಬಸವರಾಜು, ಯುನೆಸ್ಕೋ ನಿರ್ದೇಶಕ ಎರಿಕ್ ಫಾಲ್ಟ್, ಸಿಬಿಎಂ ಇಂಡಿಯಾ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಡಾ.ಸಾರಾ ವರ್ಗಿಸ್ ಮೊದಲಾದವರು ಇದ್ದರು.
ವರದಿಯ ಪ್ರಮುಖ ಶಿಫಾರಸುಗಳು
* ದಿವ್ಯಾಂಗರ ಶಿಕ್ಷಣಕ್ಕೆ ಸಂಬಂಧಿಸಿದಂತೆ ವರದಿಯಲ್ಲಿ ಪ್ರಮುಖ 10 ಶಿಫಾರಸುಗಳನ್ನು ಮಾಡಲಾಗಿದೆ. ವರದಿಯನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಯುನೆಸ್ಕೋ ವತಿಯಿಂದ ಒಪ್ಪಿಸಲಾಯಿತು.
* ಅಂಗವಿಕಲರ ಹಕ್ಕುಗಳ ಕಾಯ್ದೆ 2016ರರೊಂದಿಗೆ ಹೊಂದಾಣಿಕೆಯಾಗುವಂತೆ ಆರ್‌ಟಿಇ ಕಾಯ್ದೆಯಲ್ಲಿ ಅಂಗವಿಕಲ ಮಕ್ಕಳ ನಿರ್ದಿಷ್ಟ ಕಾಳಜಿಗಳನ್ನು ಸೇರಿಸುವುದು.
* ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಡಿ ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಇರುವ ಎಲ್ಲ ಶೈಕ್ಷಣಿಕ ಕಾರ್ಯಕ್ರಮಗಳ ಸಮನ್ವಯ ಸಾಧಿಸಲು ಒಂದು ಸಮನ್ವಯ ಕಾರ್ಯತಂತ್ರ ರೂಪಿಸುವುದು.
* ಶಿಕ್ಷಣಕ್ಕಿರುವ ಆಯವ್ಯಯದಲ್ಲಿ ನ್ಯೂನತೆಯುಳ್ಳ ಮಕ್ಕಳ ಕಲಿಕೆಗೆ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ಮತ್ತು ನಿರ್ದಿಷ್ಟ ಅನುದಾನ ಒದಗಿಸುವುದನ್ನು ಖಚಿತಪಡಿಸುವುದು.
* ದತ್ತಾಂಶ ವ್ಯವಸ್ಥೆಗಳನ್ನು ಬಲಪಡಿಸಿ, ಅವುಗಳನ್ನು ಸಾಮರ್ಥ್ಯವುಳ್ಳ, ವಿಶ್ವಸನೀಯ ಹಾಗೂ ಯೋಜನೆ, ಅನುಷ್ಠಾನ ಮತ್ತು ಪರಿವೀಕ್ಷಣೆಗೆ ಉಪಯೋಗಿಸಿಕೊಳ್ಳುವುದು.
* ನ್ಯೂನತೆಯುಳ್ಳ ಮಕ್ಕಳ ಬೆಂಬಲಕ್ಕಾಗಿ ಶಾಲಾ ಪರಿಸರವನ್ನು ಸಂಪದ್ಭರಿತಗೊಳಿಸುವುದು ಮತ್ತು ಎಲ್ಲ ಭಾಗೀದಾರರು ಈ ವ್ಯವಸ್ಥೆಯಲ್ಲಿ ಸೇರಿಕೊಳ್ಳುವಂತೆ ಮಾಡುವುದು.
* ನ್ಯೂನತೆಯುಳ್ಳ ಮಕ್ಕಳ ಶಿಕ್ಷಣಕ್ಕಾಗಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಬೈಹತ್ ಪ್ರಮಾಣದಲ್ಲಿ ವಿಸ್ತರಿಸಬೇಕು.
* ಪ್ರತಿ ಮಗುವಿಗೂ ಅವಕಾಶ ಒದಗಿಸುವುದು ಮತ್ತು ಯಾವುದೇ ನ್ಯೂನತೆಯುಳ್ಳ ಮಗುವು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು.
* ವೈವಿಧ್ಯಮಯ ಕಲಿಯುವವರ ಒಳಪಡಿಸುವಿಕೆಯಿಂದ ಬೋಧನಾ ಕ್ರಮದಲ್ಲಿ ಮಾರ್ಪಾಡು ಮಾಡಬೇಕು.
* ಪ್ರಚಲಿತದಲ್ಲಿರುವ ರೂಢ ಮಾದರಿಯನ್ನು ಮೆಟ್ಟಿ ನಿಂತು ನ್ಯೂನತೆಯುಳ್ಳ ಮಕ್ಕಳಿಗೆ ಸಂಬಂಧಿಸಿದಂತೆ ವರ್ಗ ಕೋಣೆಗಳಲ್ಲಿ ಮತ್ತು ಇತರೆಡೆಗಳಲ್ಲಿ ಧನಾತ್ಮಕ ಮನೋಧೋರಣೆಗಳನ್ನು ನಿರ್ಮಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.