ಅಪರಾಧಿಗಳು ತಪ್ಪಿಸಿಕೊಂಡಿದ್ದರೆ ಪೊಲೀಸರ ಕ್ಷಮಿಸಲಾಗುತ್ತಿತ್ತೇ?


Team Udayavani, Dec 12, 2019, 6:15 AM IST

aparada

ಆರೋಪ ರುಜುವಾತಾಗಬೇಕಾದ ಮೊದಲೇ ಹತ್ಯೆಗೈಯ್ಯಲ್ಪಡುವುದು ಸಾಮಾನ್ಯ ಸಂದರ್ಭದಲ್ಲಿ ಸರಿಯಾದದ್ದಲ್ಲ ನಿಜ. ಆದರೆ ದೇಶದಲ್ಲಿ ದುರುಳರ ಅಟ್ಟಹಾಸ ಮೇರೆ ಮೀರುತ್ತಿರುವಾಗ, ಜನರಲ್ಲಿ ನ್ಯಾಯ ಪ್ರಕ್ರಿಯೆಯ ವಿಳಂಬಗತಿಯ ಕುರಿತು ಅತೃಪ್ತಿಯ ಕಟ್ಟೆಯೊಡೆಯುತ್ತಿರುವಾಗ ಆರೋಪಿಗಳು ಪೊಲೀಸರ ಕೈಯಿಂದ ತಪ್ಪಿಸಿಕೊಂಡರೆ ಪರಿಸ್ಥಿತಿ ವಿಸ್ಫೋಟಕವಾಗುತ್ತಿರಲಿಲ್ಲವೇ?

ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಅಪರಾಧಿಗಳಿಗೆ ಶಿಕ್ಷೆಯಾಗುವುದರಲ್ಲಿ ಆಗುತ್ತಿರುವ ವಿಳಂಬದ ಕುರಿತು ಜನಸಾಮಾನ್ಯರಲ್ಲಿ ತೀವ್ರ ಆಕ್ರೋಶ ಇದೆ ಎನ್ನುವುದರಲ್ಲಿ ಯಾರಿಗೂ ಸಂದೇಹವಿರಲಾರದು. ಹೈದರಾಬಾದ್‌ ಅತ್ಯಾಚಾರದಿಂದ ಹತಪ್ರಭರಾದ ಜನರ ಕೋಪಾಗ್ನಿಗೆ ಉನ್ನಾವ್‌ನಲ್ಲಿ ಬೇಲ್‌ ಪಡೆದುಕೊಂಡ ಆರೋಪಿಗಳು ಸಂತ್ರಸ್ತೆಯನ್ನು ಜೀವಂತ ಸುಟ್ಟ ಘಟನೆ ತುಪ್ಪ ಸುರಿಯಿತು. ನಿರ್ಭಯಾ ಪ್ರಕರಣದಲ್ಲಿ ಅಪರಾಧಿಗಳಿಗೆ ಇನ್ನೂ ಏಕೆ ಶಿಕ್ಷೆಯಾಗಿಲ್ಲ ಎಂದು ಪುರುಷರು-ಮಹಿಳೆಯರೆನ್ನದೆ ಜನರು ಪ್ರಶ್ನಿಸುತ್ತಿದ್ದರೆ ಸಂಸತ್ತಿನಲ್ಲಿಯೂ ಅಂತಹದೇ ಭಾವನೆ ವ್ಯಕ್ತವಾಯಿತು. ಜಯಾ ಬಚ್ಚನ್‌ರಂತಹ ಹಿರಿಯ ಸದಸ್ಯರು ಕೊಂಚ ಕಟುವಾಗಿಯೇ ಮಾತನಾಡುವಷ್ಟು ಕಾಮಾಂಧ ದುರುಳರ ವಿರುದ್ಧ ಭಾವನೆ ಮೇಲುಗೈ ಸಾಧಿಸಿದ್ದು ಸಂಸತ್ತಿನಲ್ಲೂ ಧ್ವನಿಸಿತು. ಸಂಪೂರ್ಣ ದೇಶವೇ ಅಪರಾಧಿಗಳಿಗೆ ಶೀಘ್ರಾತಿಶೀಘ್ರ ಮರಣದಂಡನೆ ಶಿಕ್ಷೆಯಾಗಲಿ ಎಂದು ಒತ್ತಾಯಿಸುತ್ತಿ¨ªಾಗ ಹೈದರಾಬಾದ್‌ ಅತ್ಯಾಚಾರ ಪ್ರಕರಣದ ಎÇÉಾ ನಾಲ್ಕು ಆರೋಪಿಗಳು ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಸತ್ತಿರುವ ಘಟನೆ ನಡೆದಿದೆ. ಹೈದರಾಬಾದಿನ ಜನತೆ ಪೊಲೀಸರ ಮೇಲೆ ಪುಷ್ಪವೃಷ್ಟಿ ಮಾಡಿ ಅಭಿನಂದಿಸಿದರೆ, ದೇಶದಾದ್ಯಂತ ರಸ್ತೆಗಳಲ್ಲಿ ಮಿಠಾಯಿ ಹಂಚಿ ಸಂಭ್ರಮಿಸಲಾಯಿತೆಂದರೆ ಅಪರಾಧಿಗಳ ವಿರುದ್ಧ ಅದೆಂತಹ ಅತ್ಯುಗ್ರ ಸಿಟ್ಟಿರಬಹುದು ಜನರಲ್ಲಿ?
ಹಲವು ನಾಯಕರು, ಸಂಸತ್‌ ಸದಸ್ಯರು ಪೊಲೀಸರ ಕ್ರಮವನ್ನು ಸಮರ್ಥಿಸಿದರೆ, ನ್ಯಾಯ ಪ್ರಕ್ರಿಯೆ ನಡೆದು ಅಪರಾಧ ಸಾಬೀತಾಗುವ ಮೊದಲೇ ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಕೊಲ್ಲಲಾಯಿತೆನ್ನುವ ಕುರಿತು ಕೆಲವು ನಾಯಕರು ಅಪಸ್ವರ ತೆಗೆದಿ¨ªಾರೆ. ಕಾನೂನಿನ ಚೌಕಟ್ಟಿನಲ್ಲಿ ತನಿಖೆ ನಡೆಸಿ ಅಪರಾಧ ರುಜುವಾತಾದ ನಂತರ ಶಿಕ್ಷೆಯಾಗಬೇಕು ಎನ್ನುವುದು ಕಾನೂನಾತ್ಮಕ ದೃಷ್ಟಿಯಿಂದ ಸರಿಯಾದದ್ದೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿನ ವ್ಯವಸ್ಥಿತ ಕಾನೂನು ಪ್ರಕ್ರಿಯೆ ಹೊಂದಿರುವ, ವಿಶ್ವಸಮುದಾಯದ ಪ್ರಬುದ್ಧ ರಾಷ್ಟ್ರವೆನಿಸಿದ ನಮ್ಮ ದೇಶದಲ್ಲಿ ಆರೋಪ ರುಜುವಾತಾಗಬೇಕಾದ ಮೊದಲೇ ಹತ್ಯೆ ಗೈಯ್ಯಲ್ಪಡುವುದು ಸಾಮಾನ್ಯ ಸಂದರ್ಭದಲ್ಲಿ ಸರಿಯಾದದ್ದಲ್ಲ ನಿಜ. ಆದರೆ ದೇಶದಲ್ಲಿ ದುರುಳರ ಅಟ್ಟಹಾಸ ಮೇರೆ ಮೀರುತ್ತಿರುವಾಗ, ಜನರಲ್ಲಿ ನ್ಯಾಯ ಪ್ರಕ್ರಿಯೆಯ ವಿಳಂಬಗತಿಯ ಕುರಿತು ಅತೃಪ್ತಿಯ ಕಟ್ಟೆಯೊಡೆಯುತ್ತಿರುವಾಗ ಆರೋಪಿಗಳು ಪೊಲೀಸರ ಕೈಯಿಂದ ತಪ್ಪಿಸಿಕೊಂಡರೆ ಪರಿಸ್ಥಿತಿ ವಿಸ್ಫೋಟಕವಾಗುತ್ತಿರಲಿಲ್ಲವೇ? ಕಾನೂನು-ಸುವ್ಯವಸ್ಥೆಯ ಸಮಸ್ಯೆ ಎದುರಾಗುತ್ತಿರಲಿಲ್ಲವೇ?

ಅಪರಾಧವನ್ನು ಒಪ್ಪಿಕೊಂಡ ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ಹಾಗೂ ಪೊಲೀಸರ ಆಯುಧವನ್ನು ಕಿತ್ತುಕೊಂಡಂತಹ ಸಂದರ್ಭದಲ್ಲಿ ಅವರ ಮೇಲೆ ಗುಂಡು ಹಾರಿಸುವುದು ಅನಿವಾರ್ಯವೇ ಆಗಿತ್ತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದÇÉೇ ಅವರ ವಿರುದ್ಧ ಮುಗಿಬಿದ್ದು ಹತ್ಯೆಗೈಯ್ಯಲು ಪ್ರಯತ್ನಿಸಿದ್ದ ಜನತೆ, ಪೋಲೀಸರ ವಶದಲ್ಲಿದ್ದವರು ಪರಾರಿಯಾಗಿದ್ದರೆ ಅವರನ್ನು ಯಾವ ಕಾರಣಕ್ಕೂ ಕ್ಷಮಿಸುತ್ತಿರಲಿಲ್ಲ ಎನ್ನುವುದರಲ್ಲಿ ಸಂಶಯವೇ ಇಲ್ಲ. ಉನ್ನಾವ್‌ ಪೊಲೀಸರ ಅದಕ್ಷತೆಯನ್ನು ಪ್ರಶ್ನಿಸುವ ರಾಜಕಾರಣಿಗಳು ಹೈದರಾಬಾದ್‌ ಪೊಲೀಸರ ಕ್ರಮವನ್ನು ವಿರೋಧಿಸುವುದರಲ್ಲಿ ನ್ಯಾಯಪ್ರಕ್ರಿಯೆಯ ಉಲ್ಲಂಘನೆಗಿಂತ ರಾಜಕೀಯ ಹಿತಸಾಧನೆಯೇ ಎದ್ದು ಕಾಣುತ್ತದೆ. ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿಗಳ ಮೇಲೆ ಕ್ರಮಕೈಗೊಳ್ಳುವುದು ಪೊಲೀಸರಿಗೆ ಆ ಕ್ಷಣ ಅನಿವಾರ್ಯವಾಗಿತ್ತು. ತಕ್ಷಣ ಅವರು ನಿರ್ಣಾಯಕ ತೀರ್ಮಾನ ಮಾಡಬೇಕಿತ್ತು. ಆ ದೃಷ್ಟಿಯಿಂದ ಪೊಲೀಸರ ಕ್ರಮವನ್ನು ಈಗ ಟೀಕಿಸುವುದು ಅವರ ಆತ್ಮಸ್ಥೈರ್ಯಕ್ಕೆ ಹಾನಿ ಮಾಡಿದಂತೆಯೇ ಸರಿ. ನಿಸ್ಸಂದೇಹವಾಗಿಯೂ ಹೈದರಾಬಾದ್‌ ಎನ್‌ಕೌಂಟರ್‌ ಒಂದು ವಿರಳ ಘಟನೆ ಎನ್ನಬೇಕಾಗುತ್ತದೆ ಮತ್ತು ಪೊಲೀಸರನ್ನು ಸಂಶಯಿಸುವುದು ಸರಿಯಲ್ಲ.

ನಮ್ಮ ನ್ಯಾಯ ವ್ಯವಸ್ಥೆಯನ್ನು ಇನ್ನಷ್ಟು ಕ್ರಿಯಾಶೀಲವಾಗಿಸಬೇಕಾಗಿದೆ. ಸಮಯ ಮಿತಿಯೊಳಗೆ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಹಾಗೂ ಜನಸಾಮಾನ್ಯರಲ್ಲಿ ನ್ಯಾಯ ವ್ಯವಸ್ಥೆಯ ಕುರಿತು ವಿಶ್ವಾಸ ಮೂಡುವಂತೆ ಮಾಡಬೇಕಾದ ಅಗತ್ಯವಿದೆ. ವಿಳಂಬಗತಿಯ ನ್ಯಾಯ ವ್ಯವಸ್ಥೆಯಿಂದಾಗಿ ನಾಗರಿಕರು ಕಾನೂನನ್ನು ಕೈಗೆತ್ತಿಕೊಳ್ಳಲು ಮುಂದಾಗುತ್ತಿ¨ªಾರೆ.

ಹೈದರಾಬಾದ್‌ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಬಿಹಾರದ ಪೊಲೀಸ್‌ ಮುಖ್ಯಸ್ಥರು ಹೇಳಿದ ಮಾತು ಹೆಚ್ಚು ಪ್ರಾಸಂಗಿಕ ಎನಿಸುತ್ತದೆ. ಕೇವಲ ಪೊಲೀಸರಿಂದ ಅಪರಾಧಗಳನ್ನು ತಡೆಗಟ್ಟುವುದು ಸಾಧ್ಯವಿಲ್ಲ. ಜಾತಿ, ಧರ್ಮ, ರಾಜಕೀಯ ಪಕ್ಷಗಳ ನಂಟಿನ ಆಧಾರದ ಮೇಲೆ ಅಪರಾಧಿಗಳ ಪರ ಪ್ರಭಾವ ಬೀರುವ, ವಕಾಲತ್ತು ವಹಿಸುವ, ಪೊಲೀಸರ ಕೈ ಕಟ್ಟುವ ಪ್ರವೃತ್ತಿ ನಿಲ್ಲಬೇಕು. ಅಪರಾಧಿ ಯಾರೇ ಆಗಲಿ ಆತನಿಗೆ ಶಿಕ್ಷೆಯಾಗುವಂತಹ ವಾತಾವರಣ ನಿರ್ಮಾಣವಾಗಬೇಕು. ಈ ಕುರಿತು ಜನರು ಜಾಗೃತರಾಗಬೇಕಿದೆ.

– ಬೈಂದೂರು ಚಂದ್ರಶೇಖರ ನಾವಡ

ಟಾಪ್ ನ್ಯೂಸ್

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

Shiggavi-candidate

By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್‌ ಪಠಾಣಗೋ?

Kalinga-King-cobra

King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!

Mysuru-Nirmala

Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

Shiggavi-candidate

By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್‌ ಪಠಾಣಗೋ?

Kalinga-King-cobra

King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!

Mysuru-Nirmala

Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.