ಬಕ್ನರ್ ದಾಖಲೆ ಮುರಿಯಲಿರುವ ಅಲೀಂ ದಾರ್
Team Udayavani, Dec 11, 2019, 11:42 PM IST
ಪರ್ತ್: ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್ ನಡುವೆ ಗುರುವಾರದಿಂದ ಪರ್ತ್‌ನಲ್ಲಿ ಆರಂಭ ವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿ ಯುವ ಮೂಲಕ ಪಾಕಿಸ್ಥಾನದ ಅಂಪಾಯರ್ ಅಲೀಂ ದಾರ್ ನೂತನ ದಾಖಲೆಯೊಂದನ್ನು ಬರೆಯಲಿದ್ದಾರೆ. ಅತೀ ಹೆಚ್ಚು ಟೆಸ್ಟ್‌ಗಳಲ್ಲಿ ಫೀಲ್ಡ್ ಅಂಪಾಯರ್ ಆಗಿ ಕರ್ತವ್ಯ ನಿಭಾಯಿಸಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಇದು ಅಲೀಂ ದಾರ್ ಅವರ 129ನೇ ಟೆಸ್ಟ್ ಪಂದ್ಯ. ಸದ್ಯ ಅವರು ವೆಸ್ಟ್ ಇಂಡೀಸಿನ ಸ್ಟೀವ್ ಬಕ್ನರ್ ಜತೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ (128 ಟೆಸ್ಟ್).
ಸ್ಮರಣೀಯ ಪಂದ್ಯಗಳಿಗೆ ಸಾಕ್ಷಿ
“ನನ್ನ ಅಂಪಾಯರಿಂಗ್ ಬದುಕನ್ನು ಆರಂಭಿಸಿದಾಗ ಇಂಥದೊಂದು ಮೈಲಿಗಲ್ಲು ನೆಡಲಿದ್ದೇನೆ ಎಂದು ಭಾವಿಸಿರಲಿಲ್ಲ. ತವರಿನ ಗುಜ್ರನ್‌ವಾಲಾದಲ್ಲಿ ಅಂತಾರಾಷ್ಟ್ರೀಯ ಬದುಕನ್ನು ಆರಂಭಿಸಿದ ನಾನು ಸಾವಿರಾರು ಮೈಲು ದೂರದ ಆಸ್ಟ್ರೇಲಿಯದಲ್ಲಿ ಹೊಸ ಎತ್ತರ ತಲುಪುತ್ತಿದ್ದೇನೆ. ಇದೊಂದು ಅದ್ಭುತ ಪಯಣ, ನನ್ನ ಬದುಕಿನ ಮಹತ್ವದ ಘಟ್ಟ. ಈ ಅವಧಿಯಲ್ಲಿ ಅದೆಷ್ಟೋ ಸ್ಮರಣೀಯ ಟೆಸ್ಟ್ ಪಂದ್ಯಗಳಿಗೆ ಸಾಕ್ಷಿಯಾದ ಸೌಭಾಗ್ಯ ನನ್ನದು…’ ಎಂದು ಅಲೀಂ ದಾರ್ ಹೇಳಿದ್ದಾರೆ.
ಅಲೀಂ ದಾರ್ ಇದಕ್ಕೆ 2 ಉದಾಹರಣೆಗಳನ್ನೂ ಕೊಟ್ಟರು. ಇವುಗಳೆಂದರೆ, ಬ್ರಿಯಾನ್ ಲಾರಾ ಅವರ 400 ರನ್ನುಗಳ ವಿಶ್ವದಾಖಲೆ ಸಂದರ್ಭದಲ್ಲಿ ಹಾಗೂ 2006ರ ಜೊಹಾನ್ಸ್ ಬರ್ಗ್ ಏಕದಿನದಲ್ಲಿ ಆಸ್ಟ್ರೇಲಿಯದ ವಿಶ್ವದಾಖಲೆಯ ಮೊತ್ತವನ್ನು ದಕ್ಷಿಣ ಆಫ್ರಿಕಾ ಚೇಸ್ ಮಾಡಿದ ವೇಳೆ ಅಂಗಳದಲ್ಲಿದ್ದುದು.
51ರ ಹರೆಯದ ಅಲೀಂ ದಾರ್ 2003ರ ಬಾಂಗ್ಲಾ-ಇಂಗ್ಲೆಂಡ್ ನಡುವಿನ ಢಾಕಾ ಪಂದ್ಯದಲ್ಲಿ ಮೊದಲ ಸಲ ಟೆಸ್ಟ್ ಅಂಪಾಯರಿಂಗ್ ನಡೆಸಿದ್ದರು. ಇದಕ್ಕೂ ಮುನ್ನ 2000ದ ಪಾಕಿಸ್ಥಾನ-ಶ್ರೀಲಂಕಾ ನಡುವಿನ ತವರಿನ ಸರಣಿಯ ಏಕದಿನ ಪಂದ್ಯದಲ್ಲಿ ತೀರ್ಪುಗಾರನಾಗಿದ್ದರು. 207 ಏಕದಿನ ಹಾಗೂ 46 ಟಿ20 ಪಂದ್ಯಗಳಲ್ಲೂ ದಾರ್ ಅಂಪಾಯರಿಂಗ್ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
MUST WATCH
ಹೊಸ ಸೇರ್ಪಡೆ
NIA ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಶರಣಾದ ಆರು ನಕ್ಸಲರು
Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.