ಯೋಧರೆಂದು ನಂಬಿಸಿ ಸೈಬರ್‌ ವಂಚನೆ

ಮೋಸಕ್ಕೆ ಹೊಸ ದಾರಿ; ಮಂಗಳೂರಿನಲ್ಲಿ  117 ಪ್ರಕರಣ ದಾಖಲು

Team Udayavani, Dec 12, 2019, 5:04 AM IST

sx-41

ಮಂಗಳೂರು: ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ವಂಚಕರು ದೇಶ ಕಾಯುವ ಸೈನಿಕರ ಸೋಗಿನಲ್ಲಿ ಟೋಪಿ ಹಾಕುವ ಹೊಸ ದಾರಿ ಕಂಡುಕೊಂಡಿದ್ದಾರೆ. ಸೈಬರ್‌ ಕ್ರೈಂ ವಿಭಾಗದ ಪೊಲೀಸರ ಜನಜಾಗೃತಿಯ ಹೊರತಾಗಿಯೂ ಯಾವುದೋ ಊರಿನಲ್ಲಿದ್ದುಕೊಂಡು ಅಪರಿಚಿತರು ಹೆಣೆಯುವ ಮೋಸದ ಜಾಲಕ್ಕೆ ಅಮಾಯಕರು ಬಲಿಯಾಗಿ ಸಾವಿರಾರು ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುವ ಸೈನಿಕರ ಫೋಟೊ, ಹೆಸರು, ಗುರುತಿನ ಚೀಟಿ ಮತ್ತು ಸೇನಾ ಶಿಬಿರಗಳ ಫೋಟೊ ಬಳಸಿ ವಂಚಿಸುವುದು ಸೈಬರ್‌ ಕಳ್ಳರ ಹೊಸ ವಿಧಾನ. ಯೋಧರ ಬಗ್ಗೆ ಗೌರವ ಮತ್ತು ಹೆಮ್ಮೆ ಹೊಂದಿರುವ ನಾಗರಿಕರು ಸುಲಭವಾಗಿ ವಂಚನೆಗೆ ಒಳಗಾಗುತ್ತಿದ್ದಾರೆ.

ವಂಚನೆ ನಡೆಯುವುದು ಹೀಗೆ
ಒಎಲ್‌ಎಕ್ಸ್‌, ಕ್ವಿಕರ್‌, ಫೇಸ್ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಕಾರು, ಬೈಕ್‌, ದುಬಾರಿ ಬೆಲೆಯ ಮೊಬೈಲನ್ನು ಮಾರಾಟಕ್ಕೆ ಇರಿಸಿ ಮೊಬೈಲ್‌ ನಂಬರ್‌ ಅಪ್‌ಲೋಡ್‌ ಮಾಡುತ್ತಾರೆ. ಕರೆ ಮಾಡುವವರಿಗೆ ತಾವು ಸೈನಿಕರೆಂದು ಪರಿಚಯಿಸಿಕೊಂಡು ಯೋಧರ ವೇಷದಲ್ಲಿರುವ ನಕಲಿ ಫೋಟೊ, ಸೇನಾ ಶಿಬಿರದ ಫೋಟೋ, ಐ.ಡಿ. ಕಾರ್ಡ್‌ಗಳನ್ನು ವಾಟ್ಸ್‌ಆ್ಯಪ್‌ ಮಾಡುತ್ತಾರೆ. “ಸೇನಾ ಕ್ಯಾಂಪ್‌ನಿಂದ ಹೊರ ಬರಲು ಸಾಧ್ಯವಿಲ್ಲ. ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇನೆ’ ಎಂದು ಸುಳ್ಳು ಆಮಿಷ ಒಡ್ಡುತ್ತಾರೆ. “ಹತ್ತಿರದ ಸಂಬಂಧಿಕರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಹಣದ ತುರ್ತು ಆವಶ್ಯಕತೆ ಇರುವುದರಿಂದ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇನೆ’ ಎಂಬುದು ಇನ್ನೊಂದು ನೆಪ. ಗ್ರಾಹಕರು ಕಡಿಮೆ ಬೆಲೆಯ ಆಸೆಗೆ ಬಲಿಬಿದ್ದು ಖರೀದಿಗೆ ಮುಂದಾದರೆ, ಹಣವನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಲು ಸೂಚಿಸುತ್ತಾರೆ. ಅದಾದ ಕೂಡಲೇ ಖದೀಮರು ಹಣ ಡ್ರಾ ಮಾಡಿ ಕೊಂಡು ಮೊಬೈಲ್‌ ಸಂಪರ್ಕ ಕಡಿತಗೊಳಿಸುತ್ತಾರೆ.

ಮಂಗಳೂರಿನಲ್ಲಿ ಹಲವು ಪ್ರಕರಣ
ಮಂಗಳೂರಿನ ಸೈಬರ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ 8 ತಿಂಗಳ ಅವಧಿಯಲ್ಲಿ ಇಂತಹ 70-80ರಷ್ಟು ಪ್ರಕರಣಗಳು ದಾಖಲಾಗಿವೆ. 25 ಸಾವಿರ ರೂ.ಗಳಿಂದ 1.5 ಲಕ್ಷ ರೂ. ವರೆಗೆ ಮೋಸ ಹೋದವರಿದ್ದಾರೆ. ಇದಲ್ಲದೆ ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ ವಂಚನೆ, ನೈಜೀರಿಯನ್‌ ಪಾಂಜಿ ಸ್ಕೀಮ್‌ ಅಥವಾ ವಿವಿಧ ಆಮಿಷ ಒಡ್ಡಿ ವಂಚನೆ, ಆನ್‌ಲೈನ್‌ ವಿವಾಹಕ್ಕೆ ಸಂಬಂಧಿಸಿದ ವಂಚನೆಯಂತಹ ಪ್ರಕರಣಗಳೂ ಸಾಕಷ್ಟು ವರದಿಯಾಗುತ್ತಿವೆ.

11 ತಿಂಗಳಲ್ಲಿ 117 ಪ್ರಕರಣ
ದ.ಕ. ಜಿಲ್ಲಾ ಪೊಲೀಸ್‌ಗೆ ಹೋಲಿಸಿದರೆ ಮಂಗಳೂರು ನಗರದಲ್ಲಿ ಅಧಿಕ ಸೈಬರ್‌ ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ. ಮಂಗಳೂರು ನಗರ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ 2019ರ ಜನವರಿಯಿಂದ ನವೆಂಬರ್‌ ತನಕ 117 ಪ್ರಕರಣಗಳು ದಾಖಲಾಗಿವೆ. 2018ರಲ್ಲಿ 75 ಮತ್ತು 2017ರಲ್ಲಿ 24 ಕೇಸುಗಳು ದಾಖಲಾಗಿದ್ದವು. ಈ ಪೈಕಿ ಬೆರಳೆಣಿಕೆಯವು ಮಾತ್ರ ಪತ್ತೆಯಾಗಿದ್ದು, 3 ವರ್ಷಗಳಲ್ಲಿ 14 ಮಂದಿ ಬಂಧಿತ ರಾಗಿದ್ದಾರೆ. ಜಿಲ್ಲಾ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ 2018ರಲ್ಲಿ 3 ಮತ್ತು 2019ರಲ್ಲಿ ಇದು ತನಕ 12 ಪ್ರಕರಣಗಳು ದಾಖಲಾಗಿವೆ.

ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಜನರಿಗೆ ಎಷ್ಟು ತಿಳಿವಳಿಕೆ ನೀಡಿದರೂ ಸಾಕಾಗುವುದಿಲ್ಲ. ಆದ್ದರಿಂದ ಈ ಬಗ್ಗೆ ಸೈಬರ್‌ ಅಪರಾಧ ಜಾಗೃತಿ ಕಾರ್ಯಕ್ರಮವೊಂದನ್ನು ನಡೆಸಲು ಉದ್ದೇಶಿಸಲಾಗಿದೆ.
– ಡಾ| ಹರ್ಷ ಪಿ. ಎಸ್‌., ಮಂಗಳೂರು ಪೊಲೀಸ್‌ ಆಯುಕ್ತ

ನೀವು ಮಾಡಬೇಕಾದದ್ದು
 ಒಎಲ್‌ಎಕ್ಸ್‌ ಮತ್ತು ಕ್ವಿಕರ್‌ನಲ್ಲಿ ಪರಿಕರಗಳನ್ನು ಖರೀದಿಸುವ ಮುನ್ನ ಎಚ್ಚರಿಕೆಯಿಂದ ಪರಿಶೀಲಿಸಿ.
 ವಾಹನ ಮತ್ತಿತರ ಪರಿಕರಗಳನ್ನು ಖುದ್ದಾಗಿ ನೋಡದೆ ಯಾವ ಕಾರಣಕ್ಕೂ ಹಣ ವರ್ಗಾವಣೆ ಮಾಡಬೇಡಿ.
 ಡೆಬಿಟ್‌ ಕಾರ್ಡ್‌/ ಕ್ರೆಡಿಟ್‌ ಕಾರ್ಡ್‌ ವಿವರ ಮತ್ತು ಒಟಿಪಿ ಮಾಹಿತಿ ಯನ್ನು ಯಾರು ಕೇಳಿದರೂ ಕೊಡಬೇಡಿ. ಅನುಮಾನವಿದ್ದರೆ ಸೈಬರ್‌ ಪೊಲೀಸ್‌ ಠಾಣೆಗೆ ತಿಳಿಸಿ.

– ಹಿಲರಿ ಕ್ರಾಸ್ತಾ

ಟಾಪ್ ನ್ಯೂಸ್

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

7-

Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Jharkhand Polls: Coalition of INDIA to power in tribal state; A setback for BJP

Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್‌ ಅಘಾಡಿಗೆ ಮುಖಭಂಗ

banner

Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

Ullala-Balepuni

Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

8-

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

7-

Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.