ಸ್ಟೀಲ್ ಪಾತ್ರೆಯೊಳಗೆ ಸಿಕ್ಕಿಹಾಕಿಕೊಂಡ 3 ವರ್ಷದ ಮಗುವಿನ ತಲೆ…ಮುಂದೇನಾಯ್ತು
ಆಟವಾಡುತ್ತಿದ್ದ ಮಗು ಸ್ಟೀಲ್ ಪಾತ್ರೆಯನ್ನು ತಲೆಯೊಳಗೆ ತೂರಿಸಿಕೊಂಡಿತ್ತು
Team Udayavani, Dec 12, 2019, 12:01 PM IST
ಜಾಲೋರ್(ರಾಜಸ್ಥಾನ): ಮೂರು ವರ್ಷದ ಪುಟ್ಟ ಮಗುವಿನ ತಲೆ ಸ್ಟೀಲ್ ಪಾತ್ರೆಯೊಳಗೆ ಸಿಲುಕಿಕೊಂಡಿದ್ದು, ಕೊನೆಗೂ ಗ್ರಾಮಸ್ಥರ ನೆರವಿನೊಂದಿಗೆ ಪಾತ್ರೆಯನ್ನು ಕತ್ತರಿಸಿ ಮಗುವನ್ನು ರಕ್ಷಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಆಟವಾಡುತ್ತಿದ್ದ ಮಗು ಸ್ಟೀಲ್ ಪಾತ್ರೆಯನ್ನು ತಲೆಯೊಳಗೆ ತೂರಿಸಿಕೊಂಡಿತ್ತು. ಆದರೆ ಪಾತ್ರೆ ಹೊರತೆಗೆಯಲಾಗದೆ ಮಗು ಅಳುತ್ತಿರುವುದನ್ನು ಕಂಡ ತಾಯಿ ನೆರವಿಗಾಗಿ ಸ್ಥಳೀಯರಲ್ಲಿ ವಿನಂತಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ನಂತರ ಸ್ಥಳೀಯರು ಪಾತ್ರೆಯನ್ನು ಜಾಗರೂಕತೆಯಿಂದ ಕತ್ತರಿಸುವ ಮೂಲಕ ಮಗುವಿನ ಪ್ರಾಣ ಉಳಿಸಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯದ ನಂತರ ಪಾತ್ರೆಯನ್ನು ಕತ್ತರಿಸಲಾಯ್ತು. ಇದು ತುಂಬಾ ಕಠಿಣವಾದ ಕೆಲಸವಾಗಿತ್ತು. ಆದರೆ ಕೊನೆಗೂ ಮಗು ಸುರಕ್ಷಿತವಾಗಿದೆ ಎಂದು ಸ್ಥಳೀಯರೊಬ್ಬರು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್ಗೆ ಸಾಲ: ಜಾಗತಿಕ ಬ್ಯಾಂಕ್ಗಳಿಂದ ತಾತ್ಕಾಲಿಕ ಬ್ರೇಕ್?
India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.