ಮೀನುಗಾರರಿಗೆ ಹೊಸ ತಂತ್ರಜ್ಞಾನ ಅಗತ್ಯ
Team Udayavani, Dec 12, 2019, 2:19 PM IST
ಮೂಡಲಗಿ: ದೇಶದಲ್ಲಿ ಕೃಷಿಯ ನಂತರ ಮತ್ತೂಂದು ಉತ್ಪಾದನೆಯ ಮಹಾ ಪರ್ವವೆಂದರೆ ಮಿನುಗಾರಿಕೆ ಉತ್ಪಾದನೆಯವಾಗಿದೆ. ಮೀನುಗಾರು ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಕೊಚ್ಚಿನ್ ಕೇಂದ್ರೀಯ ಮೀನುಗಾರಿಕೆ ತಂತ್ರಜ್ಞಾನಗಳ ಸಂಸ್ಥೆಯ ಮುಂಬೈ ಶಾಖೆ ವಿಜ್ಞಾನಿ ಡಾ. ಎಲ್. ನರಸಿಂಹ ಮೂರ್ತಿ ಹೇಳಿದರು.
ಬುಧವಾರ ತುಕ್ಕಾನಟ್ಟಿ ಐಸಿಏಆರ್–ಬರ್ಡ್ಸ್ ಕೃಷಿ ವಿಜ್ಞಾನಕೇಂದ್ರ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮತ್ತು ಕೊಚ್ಚಿನ್ ಕೇಂದ್ರೀಯ ಮೀನುಗಾರಿಕೆ ತಂತ್ರಜ್ಞಾನಗಳ ಸಂಸ್ಥೆ ಮುಂಬೈ ಶಾಖೆ ಹಾಗೂ ಬೆಳಗಾವಿ ಮೀನುಗಾರಿಕೆ ಇಲಾಖೆಯ ಆಶ್ರಯದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ಪ್ರವಾಹ ಪೀಡಿತ ಪರಿಶಿಷ್ಟ ಜಾತಿ ಮೀನುಗಾರರಿಗೆ ಜೀವನಾಧಾರಕ್ಕಾಗಿ ನೆರವಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಐದು ಕೋಟಿ ಜನರು ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಪ್ರತಿ ವರ್ಷ ಐದು ಲಕ್ಷ ಕೋಟಿ ವ್ಯವಹಾರ ಹೊಂದಿ, 1.14 ಲಕ್ಷ ಕೋಟಿ ಟನ್ ಮೀನು ಉತ್ಪಾದನೆಯಾದರೆ ಅದರಲ್ಲಿ 10 ಲಕ್ಷ ಟನ್ ಮೀನು ವಿದೇಶಕ್ಕೆ ರಫು¤ ಆಗಿ ಉಳಿದಿದು ದೇಶದಲ್ಲಿ ಆಹಾರವಾಗುತ್ತಿದೆ ಎಂದರು. ಮೀನನಲ್ಲಿ ಕೇವಲ ಎರಡು ತರನಾದ ಅಡಿಗೆ ತಯಾರಿಸುತ್ತಿರುವರು ಈಗ 10-15 ತೇರನಾದ ಆಹಾರ ಖಾದ್ಯಗಳನ್ನು ತಯಾರಿಸುತ್ತಿದ್ದಾರೆ. ಮೀನಿನ ಖಾದ್ಯಗಳಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದೆ ಎಂದರು.
ವಿಜಯಪುರ ಮೀನುಗಾರಿಕೆ ಸಂಶೋಧನಾ ಕೇಂದ್ರ ಮುಖ್ಯಸ್ಥ ಡಾ. ವಿಜಯಕುಮಾರ್ ಮಾತನಾಡಿ, ಮೀನು ಉತ್ಪಾದನೆಯಲ್ಲಿ ಜಗತ್ತಿನಲ್ಲಿಯೇ ಭಾರತ ಎರಡನೇ ಸ್ಥಾನದಲ್ಲಿದರೆ ಕರ್ನಾಟಕ 10ನೇ ಸ್ಥಾನದಲ್ಲಿದು, ಒಳನಾಡಿನಲ್ಲಿ ಮೀನುಗಾರಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದ್ದು, ಆಹಾರಕ್ಕಾಗಿ ಬಳಸುವ ಜೀವಂತ ಮೀನಿಗೆ 280 ರಿಂದ 350 ರೂ. ಒಂದು ಕೆಜಿಗೆ ಇದೆ ಎಂದರು.
ಬೆಳಗಾವಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಪಾದ ಕಲಕರ್ಣಿ ಮಾತನಾಡಿ, ಕೇಂದ್ರ ಸರ್ಕಾರದ ನೀಲಿ ಕಾಂತ್ರಿ ಯೋಜನೆಯಲ್ಲಿ ಮೀನುಗಾರರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಒಂದು ಹೆಕ್ಟೇರ ಪ್ರದೇಶದಲ್ಲಿ ಹತ್ತು ಸಾವಿರ ಮೀನು ಕೃಷಿ ಮಾಡುವದಕ್ಕೆ ಯಾವುದೆ ತೊಂದರೆ ಇಲ್ಲ, ರೈತರು ಕೃಷಿ ಹೊಂಡದಲ್ಲಿ ಮೀನುಗಾರಿಕೆ ಮಾಡುವರಿಗೆ ಇಲಾಖೆ ಮಾಹಿತಿ ನೀಡಲಾಗುವುದು ಎಂದರು.
ಬರ್ಡ್ಸ್ ಕೃಷಿ ವಿಜ್ಞಾನ ಕೇಂದ್ರ ಚೇರಮನ್ ಆರ್. ಎಂ. ಪಾಟೀಲ ಅಧ್ಯಕ್ಷತೆ ವಹಿದ್ದರು. ಮೀನುಗಾರಿಕೆ ಇಲಾಖೆ ಜಿಲ್ಲೆಯ ತಾಲೂಕು ಸಹಾಯಕ ನಿರ್ದೇಶಕರಾದ ಸಂಜೀವ ಅರಕೇರಿ, ಶ್ರೀನಿವಾಸ್, ಸಿದ್ಧಪ್ಪ ಕುರಗಹಳ್ಳಿ ಮಾತನಾಡಿದರು. ಇದೇ ಸಂಧರ್ಭದಲ್ಲಿ ಬರ್ಡ್ಸ್ ಕೃಷಿ ವಿಜ್ಞಾನಕೇಂದ್ರ ಮೀನುಗಾರಿಕೆ ವಿಜ್ಞಾನಿ ಆದರ್ಶ ಹೆಚ್ ಅವರು ಬೆಳಗಾವಿ ಜಿಲ್ಲಿಯಲ್ಲಿ ಮೀನುಗಾರಿಕೆ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬರ್ಡ್ಸ್ ಕೃಷಿ ವಿಜ್ಞಾನ ಕೇಂದ್ರ ಕಾರ್ಯಗಳನ್ನು ಮತ್ತು ಮೀನುಗಾರಿಕೆ ಉತ್ಪಾದನಾ ಸ್ಥಳಗಳನ್ನು ಹಾಗೂ ಮುಂದೆ ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ತಾಯಾರಿಸಿದ ಸಾಕ್ಷಚಿತ್ರದ ಸಿಡಿಯನ್ನು ಅ ಧಿಕಾರಿಗಳು ಬಿಡುಗಡೆ ಮಾಡಿದರು. ಬರ್ಡ್ಸ್ ಕೃಷಿ ವಿಜ್ಞಾನಕೇಂದ್ರ ಹಿರಿಯ ವಿಜ್ಞಾನಿ ಡಿ.ಸಿ. ಚೌಗಲಾ ಸ್ವಾಗತಿಸಿದರು. ಆದರ್ಶ. ಹೆಚ್ ನಿರೂಪಿಸಿದರು. ಎನ್.ಆರ್. ಸಾಲಿಮಠ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
ನಮ್ಮಲ್ಲಿಗೆ ಬಂದರೆ ಇಸ್ರೇಲ್ ಪ್ರಧಾನಿ ಬಂಧನ: ಬ್ರಿಟನ್!
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.