ದೇವಹಳ್ಳಿ ತಾ.ಕಚೇರಿಯಲ್ಲಿ ಇ-ಆಫೀಸ್ ವ್ಯವಸ್ಥೆ
Team Udayavani, Dec 13, 2019, 12:15 PM IST
ದೇವನಹಳ್ಳಿ : ನೆಲಮಂಗಲ ತಾಲೂಕಿನ ನಂತರ ಜಿಲ್ಲಾ ಕೇಂದ್ರ ದೇವನಹಳ್ಳಿ ತಾಲೂಕು ಕಚೇರಿಯಲ್ಲೂ ಕಾಗದ ರಹಿತ ಆಡಳಿತಕ್ಕೆ ಸಜ್ಜಾಗಿದ್ದು, ಇನ್ಮುಂದೆ ಎಲ್ಲಾ ವ್ಯವಹಾರಗಳು ಇ-ಆಫೀಸ್ ಮೂಲಕವೇ ನಡೆಯಲಿವೆ ಎಂದು ತಹಶೀಲ್ದಾರ್ ಅನಿಲ್ ಕುಮಾರ್ ತಿಳಿಸಿದರು.
ರಾಜ್ಯ ಸರ್ಕಾರ ಕಾಗದ ರಹಿತ ಆಡಳಿತಕ್ಕಾಗಿ ಜಾರಿಗೆ ತಂದಿರುವ ಇ-ಆಫೀಸ್ ತಂತ್ರಾಂಶವನ್ನು ಜಾರಿಗೆ ತಂದಿದ್ದು, ಅದರಂತೆ ತಾಲೂಕು ಕಚೇರಿ ಸಂಪೂರ್ಣ ಇ -ಆಫೀಸ್ ವ್ಯಾಪ್ತಿಗೆ ಒಳ ಪಡುವಂತೆ ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್ ತಿಳಿಸಿದರು. ನಗರದ ತಾಲೂಕು ಕಚೇರಿಯಲ್ಲಿ ಕಂಪ್ಯೂಟರ್ ನಲ್ಲಿ ಇ-ಆಫೀಸ್ ಅರ್ಜಿಯನ್ನು ಅಪ್‌ಲೋಡ್ ಮಾಡುವುದರ ಇ-ಆಫೀಸ್ ವ್ಯವಸ್ಥೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ ನೆಲಮಂಗಲ ತಾ.ಕಚೇರಿಯಲ್ಲಿ ಇ-ಆಫೀಸ್ ತಂತ್ರಾಂಶದ ಮೂಲಕ ಕಾರ್ಯನಿರ್ವಹಿಸಲಾಗುತ್ತಿದೆ. ಈ ವವ್ಯಸ್ಥೆಯಿಂದ ತಾಲೂಕು ಕಚೇರಿಯ ಟಪಾಲಿಗೆ ಬಂದ ಅರ್ಜಿಯು ನನಗೆ ತಕ್ಷಣ ತಿಳಿಯುತ್ತದೆ. ಸಾರ್ವಜನಿಕರು ನೀಡುವ ಅರ್ಜಿಯನ್ನು ಸ್ಕ್ಯಾನ್ ಮಾಡುವುದರ ಮೂಲಕ ಇ-ಆಫೀಸ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಯಾವ ಶಾಖೆಗೆ ತಲುಪಬೇಕೋ ಆ ಶಾಖೆ ವ್ಯಾಪ್ತಿಗೆ ಬರುತ್ತದೆ. ಸಾರ್ವಜನಿಕರಿಗೆ ಒಂದು ನಂಬರ್ ಅನ್ನು ನೀಡುತ್ತೇವೆ. ಆ ನಂಬರ್ ಅನ್ನು ಮೊಬೈಲ್ ನಲ್ಲಿಯೇ ಕೂತ ಜಾಗದಲ್ಲಿ ಪರಿಶೀಲಿಸಿ ತಮ್ಮ ಅರ್ಜಿ ನೀಡಿರುವುದು ಯಾವ ಹಂತದಲ್ಲಿ ಇದೆ ಎಂಬುವುದರ ಬಗ್ಗೆ ತಿಳಿದುಕೊಳ್ಳಬಹುದು. ಇ -ಆಫೀಸ್ ಮೂಲಕ ಪಾರದರ್ಶಕ , ಜನಸ್ನೇಹಿ ಕಚೇರಿಯಾಗಿ ಮಾರ್ಪಾಡಾಗಲು ಸಹಕಾರಿಯಾಗಲಿದ್ದು, ಮಧ್ಯವರ್ತಿಗಳ ಹಾವಳಿಗೆ ಬ್ರೇಕ್‌ಬ ಬೀಳಲಿದೆ ಎಂದರು.
ದಲ್ಲಾಳಿಗಳ ಹಾವಳಿಗೆ ಬ್ರೇಕ್: ಇನ್ಮುಂದೆ ಅಧಿಕಾರಿಗಳು ಯಾವುದೇ ಸಬೂಬು ಹೇಳುವುದು ಕಡಿಮೆ ಆಗುತ್ತದೆ. ನಿಗದಿತ ವೇಳೆಗೆ ಅರ್ಜಿಗಳು ವಿಲೇವಾರಿ ಆಗುತ್ತವೆ. ಪತ್ರ ವ್ಯವಹಾರ ಕಡಿಮೆಯಾಗಿ ಇ -ಆಫೀಸ್ ತಂತ್ರಾಂಶದಲ್ಲಿಯೇ ವ್ಯವಹಾರ ಮಾಡಬಹುದು ಎಂದರು.
ಅಲೆದಾಟ ತಪ್ಪಲಿದೆ: ಇ-ಆಫೀಸ್‌ನಿಂದ ಸಾರ್ವಜನಿಕರು ಮತ್ತು ರೈತರು ಕಚೇರಿಗೆ ಅಲೆದಾಡುವುದು ತಪ್ಪಲಿದೆ. ಕಡತ, ಅರ್ಜಿಗಳ ವಿಲೇವಾರಿ ವಿಳಂಬ ತಪ್ಪಿಸಲು ಈ ಸೌಲಭ್ಯ ಉತ್ತಮವಾಗಿದೆ. ಇ ಆಫೀಸ್ ನಲ್ಲಿ ಸರಿಯಾದ ಸಮಯಕ್ಕೆ ಅರ್ಜಿಗಳನ್ನು ವಿಲೇವಾರಿ ಮಾಡದಿದ್ದರೆ ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈ ಗೊಳ್ಳಬೇಕಾಗುತ್ತದೆ. ಟಪಾಲಿನಲ್ಲಿ ಸಲ್ಲಿಸಿದ ಅರ್ಜಿ ಕೇಸ್ ಗಳು ಸಿಬ್ಬಂಧಿಗಳು, ಶಿರಸ್ಥೆದಾರ್, ತಹಶೀಲ್ದಾರ್ ಅವರಿಗೆ ನೇರವಾಗಿ ಮಾಹಿತಿ ತಿಳಿಯಲಿದೆ ಎಂದು ಹೇಳಿದರು. ಈ ವೇಳೆ ಶಿರಸ್ಥೆದಾರ್ ನಿಸಾರ್ ಅಹಮದ್, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್, ಹನುಮಂತ ರಾಯಪ್ಪ, ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.