ಮಂಗಳೂರು: ಅಂಚೆ ಇಲಾಖೆ ಮೂಲಕ ಮೆಸ್ಕಾಂ ಬಿಲ್ ಸ್ವೀಕಾರದ ಒಪ್ಪಂದದ ನವೀಕರಣ
Team Udayavani, Dec 13, 2019, 4:28 PM IST
ಮಂಗಳೂರು: ಅಂಚೆ ಇಲಾಖೆ ಮೂಲಕ ಮೆಸ್ಕಾಂ ಬಿಲ್ ಸ್ವೀಕೃತಿಯ ಒಪ್ಪಂದವು ಎರಡು ವರ್ಷದ ಅವಧಿಗೆ ನವೀಕರಣಗೊಂಡಿದ್ದು, ದ.ಕ. ಹಾಗೂ ಉಡುಪಿ ಜಿಲ್ಲೆಯ ಮೆಸ್ಕಾಂ ಗ್ರಾಹಕರು ತಮ್ಮ ವಿದ್ಯುಚ್ಛಕ್ತಿ ಬಿಲ್ ನ್ನು ತಮ್ಮ ಸಮೀಪದ ಯಾವುದೇ ಅಂಚೆ ಕಚೇರಿಯಲ್ಲಿ ಪಾವತಿಸಬಹುದಾಗಿದೆ.
ಕಳೆದ ವರ್ಷದಲ್ಲಿ ತಾಂತ್ರಿಕ ತೊಂದರೆಗಳಿಂದಾಗಿ ಮೆಸ್ಕಾಂಗೆ ಕ್ಲಪ್ತ ಸಮಯದಲ್ಲಿ ಕೆಲವು ಬಿಲ್ಲಿನ ಮೊತ್ತವನ್ನು ಸಂದಾಯ ಮಾಡುವುದರಲ್ಲಿದ್ದ ಎಲ್ಲಾ ತೊಂದರೆಗಳು ಈಗ ನಿವಾರಣೆಯಾಗಿದ್ದು, ಗ್ರಾಹಕರು ಯಾವುದೇ ಹಿಂಜರಿಕೆಯಿಲ್ಲದೆ ಅಂಚೆ ಕಚೇರಿಗಳಲ್ಲಿ ಮೆಸ್ಕಾಂ ಬಿಲ್ ನ ಮೊತ್ತವನ್ನು ಪಾವತಿಸಬಹುದು ಹಾಗೂ ಮೆಸ್ಕಾಂ ಬಿಲ್ ನ ಕೊನೆಯ ದಿನಾಂಕದ ಬಳಿಕವೂ ಗ್ರಾಹಕರು ವಿದ್ಯುಚ್ಛಕ್ತಿ ಬಿಲ್ ನ್ನು ಅಂಚೆ ಕಚೇರಿಗಳಲ್ಲಿ ಕಟ್ಟಬಹುದಾಗಿದೆ.
ಈಗಾಗಲೇ ಪ್ರತಿ ತಿಂಗಳು 89,000 ಸಂತೃಪ್ತ ಗ್ರಾಹಕರು ಮಂಗಳೂರು, ಪುತ್ತೂರು, ಉಡುಪಿ ವಿಭಾಗದ ಅಂಚೆ ಕಚೇರಿಗಳಲ್ಲಿ ಮೆಸ್ಕಾಂ ಬಿಲ್ ಅನ್ನು ಪಾವತಿಸುತ್ತಿದ್ದು, ಉಳಿದ ಮೆಸ್ಕಾಂ ಗ್ರಾಹಕರು ಈ ಸೌಲಭ್ಯವನ್ನು ಪಡೆಯುವಂತೆ ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ ಇವರ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.