ಮಾರುತಿ: ಮತ್ತೆ ಡೀಸೆಲ್ ಕಾರ್? ಉತ್ಪಾದನೆ ಇಲ್ಲ ಎಂಬ ನಿರ್ಣಯ ಮರು ಪರಿಶೀಲನೆ
Team Udayavani, Dec 14, 2019, 1:26 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮುಂಬಯಿ: ದೇಶದ ಪ್ರಮುಖ ಕಾರು ಉತ್ಪಾದನ ಸಂಸ್ಥೆ ಮಾರುತಿ ಸುಜುಕಿ ಡೀಸೆಲ್ ಕಾರುಗಳ ಉತ್ಪಾದನೆ ಮಾಡುವುದಿಲ್ಲವೆಂದು ಘೋಷಿಸಿತ್ತು. ಆದರೆ ಅದು ತನ್ನ ನಿರ್ಧಾರ ಬದಲು ಮಾಡಿಕೊಳ್ಳುವ ಸಾಧ್ಯತೆ ಇದೆ.
ಇತರ ಕಾರು ಕಂಪೆನಿಗಳು ಆ ರೀತಿಯ ನಿರ್ಧಾರ ಮಾಡಿಕೊಳ್ಳದೆ, 2020ರ ಎ. 1ರಿಂದ ಬಿಎಸ್ 6 ಮಾದರಿಯ ಹೊಸ ಎಂಜಿನ್ ಅಭಿ ವೃದ್ಧಿಯತ್ತ ಆಸಕ್ತಿ ತೋರಿವೆ. ಅದನ್ನು ಅಳವಡಿಸಿಕೊಳ್ಳದೆ, ಡೀಸೆಲ್ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸಿದ್ದರಿಂದ ದೇಶದ ಕಾರು ಮಾರುಕಟ್ಟೆಯಲ್ಲಿರುವ ಅಗ್ರಸ್ಥಾನ ಕಳೆದುಕೊಳ್ಳಬೇಕಾದೀತು ಎಂದು ಕಂಪೆನಿ ಅಭಿಪ್ರಾಯ ಪಟ್ಟಿದೆ. ಈ ಬಗ್ಗೆ ಮೂಲಗಳನ್ನು ಉಲ್ಲೇಖೀಸಿ ‘ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ.
ಆ ವರದಿಯ ಪ್ರಕಾರ ಮಾರುತಿ ಸುಜುಕಿ ಬಿಎಸ್ 6 ಮಾದರಿಯ 1.5 ಲೀಟರ್ ಸಾಮರ್ಥ್ಯದ ಎಂಜಿನ್ ಅಭಿವೃದ್ಧಿ ಶುರು ಮಾಡಿದೆ. ಹ್ಯುಂಡೈ, ಟಾಟಾ ಮೋಟರ್ಸ್ ಈಗಾಗಲೇ ಮಧ್ಯಮ ವರ್ಗದ ಕಾರುಗಳಿಗಾಗಿ ಎಂಜಿನ್ ಅಪ್‌ಡೇಟ್ ಮಾಡಿವೆ.
ಸಿಯಾಜ್, ಎರ್ಟಿಗಾ, ಎಸ್-ಕ್ರಾಸ್‌ಗಳಲ್ಲಿ ಅದನ್ನು ಅಳವಡಿಸಲಾಗುತ್ತದೆ. ಅನಂತರ ವಿಟಾರಾ ಬ್ರೆಝಾ ಸೇರಿದಂತೆ ಹಲವು ಕಾರುಗಳಲ್ಲಿ ಅಳವಡಿಕೆಯಾಗಲಿದೆ. ಇದರ ಜತೆಗೆ ಸಿಎನ್‌ಜಿ ಅಥವಾ ಹೈಬ್ರಿಡ್ ಆವೃತ್ತಿಯ ಕಾರುಗಳತ್ತಲೂ ಮಾರುತಿ ಮುಂದಾಗಿದೆ ಎಂದಿದೆ.
ವಿಟಾರಾ ಬ್ರೆಝಾ, ಡಿಸೈರ್ ಕಾರುಗಳನ್ನು ಹೊರತುಪಡಿಸಿ ಉಳಿದಂತೆ ಮಾರುತಿ ತನ್ನ ಇತರ ಬಿಎಸ್ 4 ಎಂಜಿನ್‌ನ ಡೀಸೆಲ್ ಕಾರು ಗಳನ್ನು ಹಂತ ಹಂತವಾಗಿ ನಿಲ್ಲಿಸುತ್ತಾ ಬರುತ್ತಿದೆ. ಉಳಿದಂತೆ ರೆನೋ-ನಿಸಾನ್, ಹ್ಯುಂಡೈ, ಮಹೀಂದ್ರಾ, ಟಾಟಾ ಮೋಟರ್ಸ್ ಮತ್ತು ಹೋಂಡಾ ಕಾರ್ಸ್ ಈಗಾಗಲೇ ಬಿಎಸ್ 6 ಮಾದರಿಯ ಎಂಜಿನ್‌ಗಳತ್ತ ದೃಷ್ಟಿ ಹಾಯಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.