ಕಸ ಚೆಲ್ಲುವಲ್ಲಿ ರಂಗೋಲಿ ಬಿಡಿಸಿ ಜಾಗೃತಿ

ರಸ್ತೆ ಬದಿ ತಾಜ್ಯದಿಂದ ಅನೈರ್ಮಲ್ಯಸ್ವಚ್ಛ ನಗರಕ್ಕಾಗಿ ವಿನೂತನ ಪ್ರಯೋಗ! ನಗರಸಭೆಯಿಂದ ಕ್ರಮ

Team Udayavani, Dec 14, 2019, 11:45 AM IST

14-December-5

„ಶಶಿಕಾಂತ ಬಂಬುಳಗೆ
ಬೀದರ:
“ಸ್ವಚ್ಛ ಮತ್ತು ಸುಂದರ’ ಬೀದರ ನಗರಕ್ಕಾಗಿ ಪಣ ತೊಟ್ಟಿರುವ ನಗರಸಭೆ ಇಲ್ಲಿನ ರಸ್ತೆಬದಿಗಳಲ್ಲಿ ಕಸ ಹಾಕುವುದನ್ನು ತಡೆಗಟ್ಟಲು ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಕಸ ಹಾಕುವ ಸ್ಥಳವನ್ನು ಸ್ವಚ್ಛಗೊಳಿಸಿ, ಅಲ್ಲಿ ರಂಗೋಲಿ ಬಿಡಿಸುವ ಮೂಲಕ ಜಾಗೃತಿಗೆ ಮುಂದಾಗಿದೆ.

ದಿನ ನಿತ್ಯ ರಸ್ತೆಗಳನ್ನು ಶುಚಿಗೊಳಿಸುವ ಕಾಯಕದಲ್ಲಿ ತೊಡಗುವ ಪೌರ ಕಾರ್ಮಿಕರು ಗುರುವಾರದಿಂದ ಬಣ್ಣ ಬಣ್ಣದ ರಂಗೋಲಿಯ ಚಿತ್ತಾರ ಬಿಡಿಸುತ್ತಿದ್ದಾರೆ. ಇದಕ್ಕೆ ಮಹಿಳಾ ಸಿಬ್ಬಂದಿ ಸಾಥ್‌ ನೀಡುತ್ತಿದ್ದಾರೆ. ದಿನಕ್ಕೊಂದು ವಾರ್ಡ್‌ನಲ್ಲಿ ಈ ಜಾಗೃತಿ ಕಾರ್ಯ ನಡೆಸುತ್ತಿದ್ದಾರೆ. ತ್ಯಾಜ್ಯ ಎಸೆಯೋ ಮುನ್ನ ಒಮ್ಮೆ ಈ ರಂಗೋಲಿನಾದ್ರು ನೋಡ್ರಪ್ಪಾ, ನಿಮಗೆ ಕಸ ಬಿಸಾಡುವ ಮನಸ್ಸು ಆಗುವುದಿಲ್ಲ ಎಂದು ಹೇಳುತ್ತಾ ನಿತ್ಯ ತ್ಯಾಜ್ಯ ಎಸೆಯುವ ಜಾಗದಲ್ಲಿ ರಂಗೋಲಿ ಬಿಡಿಸಿ ಅರಿವು ಮೂಡಿಸುತ್ತಿದ್ದಾರೆ.

ನಗರದ ಕೆಇಬಿ ರಸ್ತೆಯ ಬಳಿ ಗುರುವಾರ ವಿನೂತನ ಪ್ರಯೋಗ ಮಾಡಿದ್ದ ನಗರಸಭೆ ಶುಕ್ರವಾರ ಇಲ್ಲಿನ ಜನವಾಡಾ ರಸ್ತೆಯಲ್ಲಿ ಕೈಗೊಂಡಿದೆ. ಕಸ ಚೆಲ್ಲುವ ಗಲ್ಲಿ ಜಾಗದಲ್ಲಿ ರಂಗೋಲಿ ಬಿಡಿಸಿ ಸುತ್ತಮುತ್ತಲಿನ ಮನೆಗಳಲ್ಲಿ ಜಾಗೃತಿ ಮೂಡಿಸಿದ್ದಾರೆ. ತಾಜ್ಯದಿಂದ ನೈರ್ಮಲ್ಯ ವ್ಯವಸ್ಥೆ ಹದಗೆಡುವುದುರ ಜತೆಗೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಕಸವನ್ನು ನಗರಸಭೆ ವಾಹನದಲ್ಲಿ ಹಾಕಿ, ನಿಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ ಎಂದು ತಿಳಿ ಹೇಳಿದ್ದಾರೆ.

ಕಾರ್ಮಿಕರು-ನಿರೀಕ್ಷಕರಿಗೆ ಸನ್ಮಾನ: ನಗರಸಭೆಯ ವಿನೂತನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಲ್ಲಿನ ಸ್ಥಳೀಯ ಜನರು ಆರೋಗ್ಯ ನಿರೀಕ್ಷಕರು ಮತ್ತು ಪೌರ ಕಾರ್ಮಿಕರಿಗೆ ಹೂ ಹಾರ ಹಾಕಿ ಕೃತಜ್ಞತೆ ಸಲ್ಲಿಸಿದ್ದಾರೆ. ಇನ್ನುಮುಂದೆ ರಸ್ತೆ ಬದಿಗಳಲ್ಲಿ ಕಸವನ್ನು ಹಾಕುವುದಿಲ್ಲ ಎಂದು ಭರವಸೆ ಕೊಟ್ಟಿದ್ದಾರೆ.

ಕಸದ ರಾಶಿಯಿಂದಾಗಿ ಸದಾ ಗಬ್ಬು ನಾರುತ್ತಿದ್ದ ಪ್ರದೇಶಗಳಲ್ಲಿ ಜನ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇತ್ತು. ಆದರೆ, ಗುರುವಾರ ನಗರಸಭೆಯ ವಿಶೇಷ ಕಾರ್ಯಕ್ರಮದಿಂದಾಗಿ ಈ ತಾಣಗಳ ಪರಿಸ್ಥಿತಿ ಕೊಂಚ ಬದಲಾಗಿತ್ತು. ಕಸ ಮಾಯವಾಗಿ ಅಲ್ಲಿ ಬಣ್ಣ ಬಣ್ಣದ ರಂಗೋಲಿ ಕಂಗೊಳಿಸುತ್ತಿತ್ತು. ಜನರಲ್ಲಿ ಪರಿಸರದ ಬಗೆಗೆ ಜಾಗೃತಗೊಂಡು, ನಗರಸಭೆ ಆರಂಭಿಸಿರುವ ವಿನೂತನ ಪ್ರಯತ್ನಕ್ಕೆ ಕೈಜೋಡಿಸಬೇಕಿದೆ. ಆಗ ಮಾತ್ರ ಮತ್ತೆ ಸ್ವಚ್ಛ ಬೀದರರನ್ನಾಗಿ ಕಾಣಲು ಸಾಧ್ಯವಿದೆ.

ಸ್ವಚ್ಛ ಬೀದರಗೆ ಅಪಖ್ಯಾತಿ
ಪ್ರವಾಸೋದ್ಯಮ ನಗರಿ ಬೀದರ ಈ ಹಿಂದೆ ಭಾರತದ 22ನೇ ಸ್ವಚ್ಛ ನಗರ ಮತ್ತು ಕರ್ನಾಟಕ ರಾಜ್ಯದ 5ನೇ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಪಡೆದಿತ್ತು. ಆದರೆ, ನಂತರದ ದಿನಗಳಲ್ಲಿ ಎಲ್ಲೆಂದರಲ್ಲಿ ರಾಶಿ ರಾಶಿ ತ್ಯಾಜ್ಯ, ಅದರ ನಿರ್ವಹಣೆ ಕೊರತೆಯಿಂದಾಗಿ ಬೀದರ ಈಗ ಅಸ್ವಚ್ಚತೆ ನಗರ ಎಂಬ ಅಪಖ್ಯಾತಿಗೆ ಒಳಗಾಗಿದೆ. ಮುಖ್ಯ ರಸ್ತೆ ಮತ್ತು ಜನನಿಬಿಡ ರಸ್ತೆಗಳ ಬದಿಗಳಲ್ಲಿ ಸಾರ್ವಜನಿಕರು ತಮ್ಮ ಮನೆಗಳಲ್ಲಿನ ಕಸ ತಂದು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ನಗರಸಭೆಯಿಂದ ಕಸ ಸಂಗ್ರಹಿಸಲು ವಾಹನಗಳ ಮನೆ ಬಾಗಿಲಿಗೆ ಬಂದರೂ ಜನ ಮಾತ್ರ ಕಸವನ್ನು ಬೀದಿಗೆ ಚಲ್ಲುತ್ತಾರೆ. ಇದರಿಂದ ಕಸದ ರಾಶಿಗಳು ತುಂಬಿ ದುರ್ವಾಸನೆ ಬೀರುತ್ತಿದೆ. ಹಾಗಾಗಿ ಇದೀಗ ನಗರಸಭೆ ಕಸಮುಕ್ತ ಬೀದರರನ್ನಾಗಿ ಮಾಡಲು ಗುರುವಾರದಿಂದ ರಸ್ತೆ ಬದಿಗಳಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದೆ. ರಸ್ತೆ ಬದಿಗಳಲ್ಲಿ ತಾಜ್ಯ ಹಾಕುವ ಜಾಗಗಳನ್ನು ಗುರುತಿಸಿ ಅಲ್ಲಿನ ಕಸವನ್ನು ಸ್ವಚ್ಛ ಮಾಡಿ, ಸಾರ್ವಜನಿಕರು ಮತ್ತೆ ಕಸ ಸುರಿಯದಂತೆ ಜಾಗೃತಿ ಮೂಡಿಸಲು ಆ ಸ್ಥಳದಲ್ಲಿ ನಗರಸಭೆಯ ಪೌರಕಾರ್ಮಿಕರಿಂದಲೇ ರಂಗೋಲಿ ಹಾಕಿಸಿ ರಸ್ತೆಯನ್ನು ಸುಂದರಗೊಳಿಸಿ ಗಮನ ಸೆಳೆಯಲಾಗುತ್ತಿದೆ.

ತಾಜ್ಯ ನಿರ್ವಹಣೆ ನೀಗಿಸಲು ರಂಗೊಲಿ ಒಂದು ಹೊಸ ಅಸ್ತ್ರವಾಗಿದೆ. ಕಸದ ರಾಶಿಯನ್ನು ಪೌರ ಕಾರ್ಮಿಕರು ಎಷ್ಟೇ ಬಾರಿ ತೆರವು ಮಾಡಿದರೂ ಜನ ಮತ್ತೆ ಅಲ್ಲಿ ಕಸ ಹಾಕುತ್ತಾರೆ. ಆದರೆ, ಅದೇ ಜಾಗದಲ್ಲಿ ರಂಗೋಲಿ ಇದ್ದರೆ, ದೈವಿಕ ಭಾವನೆಯಿಂದಾದರೂ ಕಸ ಹಾಕಲು ಯಾರಿಗೂ ಮನಸ್ಸು ಬರುವುದಿಲ್ಲ. ಈ ಪ್ರಯತ್ನ ಕೆಲವು ದಿನ ಮುಂದುವರೆದರೆ ರಸ್ತೆ ಬದಿಗಳಲ್ಲಿ ಕಸದ ರಾಶಿ ಉಂಟಾಗುವುದು ತಪ್ಪಬಹುದು ಎಂಬುದು ನಗರಸಭೆ ಉದ್ದೇಶ.
ಬಿ. ಬಸಪ್ಪ,
ನಗರಸಭೆ ಆಯುಕ್ತ, ಬೀದರ

ಟಾಪ್ ನ್ಯೂಸ್

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್‌

3

Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ

3-vitla

Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

1-mundaragi

Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

4

ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್‌

3

Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ

3-vitla

Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.