ಬಿಬಿಎಂಪಿ ಪ್ರಾರಂಭಿಸಿರುವ ಸ್ಮಾರ್ಟ್‌ ಪಾರ್ಕಿಂಗ್‌ಗೆ ಪ್ರಯೋಗಿಕ ಚಾಲನೆ


Team Udayavani, Dec 14, 2019, 7:23 PM IST

parking

ಬೆಂಗಳೂರು: ನಗರದ 85 ಪ್ರದೇಶಗಳಲ್ಲಿ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಬಿಬಿಎಂಪಿ ಪ್ರಾರಂಭಿಸಿರುವ “ಸ್ಮಾರ್ಟ್‌ ಪಾರ್ಕಿಂಗ್‌’ಯೋಜನೆಯ ಪ್ರಾಯೋಗಿಕ ಪಾರ್ಕಿಂಗ್‌ಗೆ ಮೇಯರ್‌ ಎಂ.ಗೌತಮ್‌ಕುಮಾರ್‌ ಅವರು ಕಸ್ತೂರಬಾ ರಸ್ತೆಯಲ್ಲಿ ಶನಿವಾರ ಚಾಲನೆ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಒಂದು ತಿಂಗಳ ಕಾಲ ಉಚಿತವಾಗಿ ಸೇವೆ ನೀಡಲಾಗುವುದು ಎಂದರು.

ಈ ಯೋಜನೆಯಿಂದ ಸಾರ್ವಜನಿಕರಿಗೆ ಅನುಕೂಲವಾಗುವುದರ ಜತೆಗೆ ಪಾಲಿಕೆಗೆ ಪ್ರತಿ ವರ್ಷ 31 ಕೋಟಿ ರೂ. ಆದಾಯ ಬರಲಿದೆ. ಸ್ಮಾರ್ಟ್‌ ಪಾರ್ಕಿಂಗ್‌ ಪ್ರದೇಶದಲ್ಲಿ ವಾಹನಗಳು ನಿಂತರೆ ಮಾತ್ರ ಸೆನ್ಸಾರ್‌ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ನಗರದಲ್ಲಿ ಎಲ್ಲೆಲ್ಲಿ ಪಾರ್ಕಿಂಗ್‌ಗೆ ಅವಕಾಶವಿದೆ ಎಂದು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ “ನಮ್ಮ ಬೆಂಗಳೂರು ಆ್ಯಪ್‌’ ಆಭಿವೃದ್ಧಿಪಡಿಸಲಾಗುತ್ತಿದ್ದು, ಸಾರ್ವಜನಿಕರು ಮನೆ ಬಿಡುವ ಮುನ್ನವೇ ಈ ಆ್ಯಪ್‌ನ ಮೂಲಕ ಪಾರ್ಕಿಂಗ್‌ ಮಾಡುವುದಕ್ಕೆ ಇರುವ ಜಾಗಗಳನ್ನು ಗುರುತಿಸುವುದಕ್ಕೆ ಸಹಾಯವಾಗಲಿದೆ. ನಗರದ 85 ಕಡೆಗಳಲ್ಲಿ ಪ್ರಾರಂಭವಾಗುವ ಸ್ಮಾರ್ಟ್‌ ಪಾರ್ಕಿಂಗ್‌ಗೆ ಸಂಬಂಧಿಸಿದಂತೆ ಕಂಟ್ರೋಲ್‌ ರೂಮ್‌ ಸ್ಥಾಪನೆ ಆಗಲಿದೆ ಎಂದು ಮಾಹಿತಿ ನೀಡಿದರು.

ಸಿಲಿಕಾನ್‌ ಸಿಟಿಯ ಹೃದಯ ಭಾಗದಲ್ಲಿನ ಆಯ್ದ 85 ರಸ್ತೆಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ಗೆ ಅನುವು ಮಾಡಿಕೊಡಲಾಗುತ್ತಿದೆ. ಈ ರಸ್ತೆಗಳನ್ನು “ಎ’ (ಪ್ರೀಮಿಯಂ), “ಬಿ’ (ವಾಣಿಜ್ಯ) ಮತ್ತು “ಸಿ’ (ಸಾಮಾನ್ಯ) ಎಂಬ ಮೂರು ವರ್ಗಗಳಲ್ಲಿ ವಿಂಗಡಿಸಲಾಗಿದೆ. ಈ ವರ್ಗದ ರಸ್ತೆಗಳಿಗೆ ಅನುಗುಣವಾಗಿ ಪಾರ್ಕಿಂಗ್‌ ಶುಲ್ಕ ನಿಗದಿಪಡಿಸಲಾಗಿದೆ. ಈ ರಸ್ತೆಗಳಲ್ಲಿ ಒಟ್ಟು 3333 ಕಾರುಗಳು, 10 ಸಾವಿರ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತಿದೆ.
ಈ ಯೋಜನೆ ಜಾರಿಗೆ ಬಂದ ನಂತರ ಪಾರ್ಕಿಂಗ್‌ ತಾಣಗಳಲ್ಲಿ ಸುಮಾರು 13500 ವಾಹನಗಳ ನಿಲುಗಡೆಗೆ ಅವಕಾಶ ಸಿಗಲಿದೆ. ಶುಲ್ಕ ಪಾವತಿಸಿ ವಾಹನ ನಿಲುಗಡೆ ಮಾಡುವ ಸೌಲಭ್ಯ ಕಲ್ಪಿಸುವ ಸಲುವಾಗಿ ಒಟ್ಟು 85 ಪ್ರಮುಖ ರಸ್ತೆಗಳನ್ನು ಗುರುತಿಸಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.

24 ತಾಸು ಪಾರ್ಕಿಂಗ್‌ ಸೌಲಭ್ಯ: ಪಾರ್ಕಿಂಗ್‌ ತಾಣಗಳಲ್ಲಿ ಪ್ರತಿ ಅಂಕಣಕ್ಕೂ ಪ್ರತ್ಯೇಕ ಸಂಖ್ಯೆ ನಮೂದಿಸಿ, ಎಲೆಕ್ಟ್ರಾನಿಕ್‌ ಸೆನ್ಸರ್‌ಗಳನ್ನು ಅಳವಡಿಸಲಾಗಿರುತ್ತದೆ. ಇದರಿಂದ ವಾಹನ ಬಂದು ನಿಂತ ಸಮಯ, ಎಷ್ಟು ತಾಸು ಅಲ್ಲಿತ್ತು ಎಂಬ ಮಾಹಿತಿಯು ನಿಯಂತ್ರಣ ಕೊಠಡಿಗೆ ರವಾನೆಯಾಗುತ್ತದೆ. ವಾಹನ ನಿಲುಗಡೆ ತಾಣಗಳಲ್ಲಿ ಮೀಟರ್‌ಗಳನ್ನು ಹಾಕಲಾಗುತ್ತದೆ. ವಾಹನ ನಿಲುಗಡೆ ಬಳಿಕ ಖುದ್ದು ಸವಾರರೇ ಮೀಟರ್‌ ಯಂತ್ರದ ಬಳಿ ತೆರಳಿ ಅಂಕಣದ ಸಂಖ್ಯೆ, ವಾಹನ ನೋಂದಣಿ ಸಂಖ್ಯೆ ಮತ್ತು ನಿಲುಗಡೆ ಅವ ಧಿಯನ್ನು ದಾಖಲಿಸಬೇಕು. ಬಳಿಕ ನಿಗದಿತ ಶುಲ್ಕ ಪಾವತಿಸಿದರೆ, ಮುದ್ರಿತ ಚೀಟಿ ಬರುತ್ತದೆ. ಅಲ್ಲದೆ, ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಮೂಲಕವೂ ಪಾರ್ಕಿಂಗ್‌ ಶುಲ್ಕ ಪಾವತಿ ಮಾಡಬಹುದು.

ಸ್ಮಾರ್ಟ್‌ ಪಾರ್ಕಿಂಗ್‌ ಸೌಲಭ್ಯ ದಿನದ 24 ಗಂಟೆಯೂ ಬಳಸಿಕೊಳ್ಳಬಹುದು. ಒಂದೊಮ್ಮೆ ಶುಲ್ಕ ಪಾವತಿಸದೆ ವಾಹನ ನಿಲುಗಡೆ ಮಾಡಿ ಹೋಗಿದ್ದರೆ, ಆ ಮಾಹಿತಿಯು ಕ್ಷಣ ಮಾತ್ರದಲ್ಲಿ ನಿಯಂತ್ರಣ ಕೊಠಡಿಗೆ ರವಾನೆಯಾಗುತ್ತದೆ. ಬಳಿಕ ಸಿಬ್ಬಂದಿಯು ಸ್ಥಳಕ್ಕಾಗಮಿಸಿ ಚಕ್ರಗಳಿಗೆ ಕ್ಲಾಂಪ್‌ ಹಾಕುತ್ತಾರೆ.

ಸ್ಮಾರ್ಟ್‌ ಪಾರ್ಕಿಂಗ್‌ನಲ್ಲಿ ನಿಗದಿ ಮಾಡಿರುವ ದರ
ವಾಣಿಜ್ಯ ಪ್ರದೇಶಗಳಲ್ಲಿ 30ರೂ.
ಬಿ ಜೋನ್‌ನಲ್ಲಿ 20ರೂ.
ಸಿ ಜೋನ್‌ನಲ್ಲಿ 10ರೂ.ದರ ನಿಗದಿ ಮಾಡಲಾಗಿದೆ.

ಎಲ್ಲೆಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ
“ಎ’ ಪ್ಯಾಕೇಜ್‌ ರಸ್ತೆಗಳು: ಅವೆನ್ಯೂ ರಸ್ತೆ, ಎಸ್‌ಸಿ ರಸ್ತೆ, ರೇಸ್‌ಕೋರ್ಸ್‌ ರಸ್ತೆ, ಕನ್ನಿಂಗ್‌ಹ್ಯಾಂ ರಸ್ತೆ, ಕಮರ್ಷಿಯಲ್‌ ಸ್ಟ್ರೀಟ್‌, ಡಿಕನ್‌ಸನ್‌ ರಸ್ತೆ, ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ರಾಜರಾಂಮೋಹನ್‌ ರಾಯ್‌ ರಸ್ತೆ, ವಿಠuಲ್‌ ಮಲ್ಯ ರಸ್ತೆ, ಕಸ್ತೂರಬಾ ರಸ್ತೆ, ರೆಸಿಡೆನ್ಸಿ ರಸ್ತೆ, ಲಾಲ್‌ಬಾಗ್‌ ರಸ್ತೆ, ಎನ್‌.ಆರ್‌.ರಸ್ತೆ.

“ಬಿ’ ಪ್ಯಾಕೇಜ್‌ ರಸ್ತೆಗಳು: ಎಸ್‌.ಪಿ.ರಸ್ತೆ, 6ನೇ ಕ್ರಾಸ್‌ ರಸ್ತೆ, 5ನೇ ಮುಖ್ಯರಸ್ತೆ, ಧನ್ವಂತರಿ ರಸ್ತೆ, ನೃಪತುಂಗ ರಸ್ತೆ, ಕಸ್ತೂರಬಾ ರಸ್ತೆ, ಅರಮನೆ ರಸ್ತೆ, ಎಸ್‌.ಸಿ.ರಸ್ತೆ, ಶೇಷಾದ್ರಿ ರಸ್ತೆ, ಡಿಸ್ಟ್ರಿಕ್ಟ್ ಆಫೀಸ್‌ ರಸ್ತೆ, ರಾಮಚಂದ್ರ ರಸ್ತೆ, ಲಿಂಕ್‌ ರಸ್ತೆ, ಕಾಳಿದಾಸ ರಸ್ತೆ , ರೈಲ್ವೆ ಸಮಾನಾಂತರ ರಸ್ತೆ, ಮೇನ್‌ಗಾರ್ಡ್‌ ರಸ್ತೆ, ಲೇಡಿ ಕರ್ಜನ್‌ ರಸ್ತೆ, ಕ್ರೆಸೆಂಟ್‌ ರಸ್ತೆ, ಮಿಲ್ಲರ್ ರಸ್ತೆ, ಮಿಲ್ಲರ್ ಟ್ಯಾಂಕ್‌ ಬಂಡ್‌ ರಸೆ, ಅಲಿಅಸYರ್‌ ರಸ್ತೆ , ಸೇಂಟ್‌ಜಾನ್ಸ್‌ ಚರ್ಚ್‌ ರಸ್ತೆ, ಕೆನ್ಸಿಂಗ್‌ಟನ್‌ ರಸ್ತೆ, ವೀರಪಿಳ್ಳೈ ಸ್ಟ್ರೀಟ್‌, ಡಿಸ್ಪೆನ್ಸರಿ ರಸ್ತೆ, ಇಬ್ರಾಹಿಂ ಸಾಹೇಬ್‌ ಸ್ಟ್ರೀಟ್‌, ಮೀನಾಕ್ಷಿ ದೇವಸ್ಥಾನ ಸ್ಟ್ರೀಟ್‌, ನಾರಾಯಣ ಪಿಳ್ಳೈ ಸ್ಟ್ರೀಟ್‌, ಸೆಪ್ಪಿಂಗ್ಸ್‌ ರಸ್ತೆ, ಧರ್ಮರಾಯ ದೇವಸ್ಥಾನ ಸ್ಟ್ರೀಟ್‌, ಹೇನ್ಸ್‌ ರಸ್ತೆ, ಆಸ್ಪತ್ರೆ ರಸ್ತೆ, ಕಾಮರಾಜ ರಸ್ತೆ, ಗಂಗಾಧರ ಚೆಟ್ಟಿ ರಸ್ತೆ, ವುಡ್‌ ಸ್ಟ್ರೀಟ್‌ ಬ್ರಂಟನ್‌ ರಸ್ತೆ, ಕ್ಯಾಸ್ಟಲ್‌ ಸ್ಟ್ರೀಟ್‌, ಲ್ಯಾವೆಲ್ಲೆ ರಸ್ತೆ, ಸೇಂಟ್‌ಮಾರ್ಕ್ಸ್ ರಸ್ತೆ, ಚರ್ಚ್‌ಸ್ಟ್ರೀಟ್‌, ಗ್ರಾಂಟ್‌ ರಸ್ತೆ, ಹೇಯ್ಸ ರಸ್ತೆ, ಕಾನ್ವೆಂಟ್‌ ರಸ್ತೆ, ಪಂಪ ಮಹಾಕವಿ ರಸ್ತೆ, 2ನೇ ಮುಖ್ಯರಸ್ತೆ, ಮಿಷನ್‌ ರಸ್ತೆಯ 3ನೇ ಕ್ರಾಸ್‌.

“ಸಿ’ ಪ್ಯಾಕೇಜ್‌ ರಸ್ತೆಗಳು: ಬಿವಿಕೆ ಅಯ್ಯಂಗಾರ್‌ ರಸ್ತೆ, ಚಿಕ್ಕಪೇಟೆ ಮುಖ್ಯರಸ್ತೆ, ಎಎಸ್‌ ಚಾರ್‌ ಸ್ಟ್ರೀಟ್‌, ಬಳೇಪೇಟೆ ಮುಖ್ಯರಸ್ತೆ, ಬನ್ನಪ್ಪ ಉದ್ಯಾನ ರಸ್ತೆ, ಕಬ್ಬನ್‌ಪೇಟೆ ಮುಖ್ಯರಸ್ತೆ, ಆಸ್ಪತ್ರೆ ರಸ್ತೆ, ಕೆವಿ ದೇವಸ್ಥಾನ ಸ್ಟ್ರೀಟ್‌, ಕಿಲಾರಿ ಸ್ಟ್ರೀಟ್‌, ನಗರ್ತಪೇಟೆ ಮುಖ್ಯರಸ್ತೆ, ಪೊಲೀಸ್‌ ಠಾಣೆ ರಸ್ತೆ, ಆರ್‌ಟಿ ಸ್ಟ್ರೀಟ್‌, ಸುಲ್ತಾನ್‌ಪೇಟೆ ಮುಖ್ಯರಸ್ತೆ, ಸ್ಯಾಂಕಿ ರಸ್ತೆ, 8ನೇ ಮುಖ್ಯರಸ್ತೆ, ಜಸ್ಮಾಭವನ ರಸ್ತೆ, ಎಡ್ವರ್ಡ್‌ ರಸ್ತೆ, ಅಣ್ಣಾಸ್ವಾಮಿ ರಸ್ತೆ, ತಿಮ್ಮಯ್ಯ ರಸ್ತೆ, ಬ್ರಾಡ್‌ವೇ ರಸ್ತೆ, ಸೇಂಟ್‌ಜಾನ್ಸ್‌ ರಸ್ತೆ, ಶಿವಾಜಿ ರಸ್ತೆ, ಚಿಕ್‌ಬಜಾರ್‌ ರಸ್ತೆ, ಜೈನ್‌ ಟೆಂಪಲ್‌ ರಸ್ತೆ.

ಟಾಪ್ ನ್ಯೂಸ್

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

3-plane-crash

Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

2-bbk11

BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

bjp-congress

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

gold

D.K.Suresh ಹೆಸರಲ್ಲಿ 14 ಕೆಜಿ ಚಿನ್ನ ವಂಚನೆ

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

3-plane-crash

Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

2-bbk11

BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.