ಹರಿಹರ-ಚಿತ್ರದುರ್ಗ ರೈಲು ಸಂಚಾರ ಒಂದು ತಿಂಗಳು ರದ್ದು


Team Udayavani, Dec 15, 2019, 2:35 PM IST

dg-tdy-1

ಹರಿಹರ: ರೈಲ್ವೆ ಹಳಿ ಡಬ್ಲಿಂಗ್‌ ಕಾಮಗಾರಿ ಹಿನ್ನೆಲೆಯಲ್ಲಿ ಡಿ.15ರಿಂದ ಜ.13ರವರೆಗಿನ ಸುಮಾರು ಒಂದು ತಿಂಗಳವ ರೆಗೆ ಹರಿಹರ-ಚಿತ್ರದುರ್ಗ ಪ್ಯಾಸೆಂಜರ್‌ ಗಾಡಿ ಸಂಚಾರ ರದ್ದುಪಡಿಸಲಾಗಿದೆ. ಅಲ್ಲದೆ ಹರಿಹರ-ಹೊಸಪೇಟೆ ಪ್ಯಾಸೆಂಜರ್‌ ಗಾಡಿ ಹರಿಹರದ ಬದಲಿಗೆ ದಾವಣಗೆರೆಯಿಂದ ಸಂಚಾರ ಆರಂಭಿಸಲಿದೆ.

ಹರಿಹರ ರೈಲ್ವೆ ನಿಲ್ದಾಣದವರೆಗೆ ಈಗಾಗಲೆ ರೈಲ್ವೆ ಹಳಿಗಳ ಡಬ್ಲಿಂಗ್‌ ಕಾರ್ಯ ಮುಗಿದಿದ್ದರೂ, ಬಾಕಿ ಉಳಿದಿದ್ದ ನಿಲ್ದಾಣದಲ್ಲಿನ ಯಾರ್ಡ್‌ಗಳಲ್ಲಿ ಹಳಿಗಳ ಮರು ವಿನ್ಯಾಸ ಮಾಡುವ ಕಾಮಗಾರಿ ನಿಮಿತ್ತ ಈ ಬದಲಾವಣೆ   ಮಾಡಲಾಗಿದೆ ಎಂದು ನಿಲ್ದಾಣದ ಹಿರಿಯ ವ್ಯವಸ್ಥಾಪಕ ಪ್ಯಾಟಿ ತಿಳಿಸಿದ್ದಾರೆ.

ಪ್ರತಿ ದಿನ ಹರಿಹರ ನಿಲ್ದಾಣದಿಂದ ಬೆಳಗ್ಗೆ 7.15ಕ್ಕೆ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಹಾಗೂ ಚಿತ್ರದುರ್ಗದಿಂದ ಸಂಜೆ 6.10ಕ್ಕೆ ಬಿಟ್ಟು ರಾತ್ರಿ 8.55ಕ್ಕೆ ಹರಿಹರಕ್ಕೆ ತಲುಪುತ್ತಿದ್ದ ಪ್ಯಾಸೆಂಜರ್‌ ರೈಲಿನ ಸಂಚಾರ ಒಂದು ತಿಂಗಳು ಕಾಲ ರದ್ದುಪಡಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 6.30ಕ್ಕೆ ಹರಿಹರ ನಿಲ್ದಾಣದಿಂದ ಹೊಸಪೇಟೆಗೆ ಹೊರಡುತ್ತಿದ್ದ ರೈಲು ಬೆಳಗ್ಗೆ 7ಕ್ಕೆ ದಾವಣಗೆರೆ ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ. ನಂತರ ಅಮರಾವತಿ ನಿಲ್ದಾಣಕ್ಕೆ ಬಂದು ಹರಪನಹಳ್ಳಿ ಕಡೆಗೆ ಸಂಚರಿಸಲಿದೆ. ಅದೇ ರೀತಿ ಹೊಸಪೇಟೆಯಿಂದ ಹರಿಹರಕ್ಕೆ ಬರುತ್ತಿದ್ದ ರೈಲು ಅಮರಾವತಿ ಮೂಲಕ ದಾವಣಗೆರೆಗೆ

ತಲುಪಿ ಅಲ್ಲಿಯೇ ನಿಲುಗಡೆಯಾಗಲಿದೆ. ಡಬ್ಲಿಂಗ್‌ ಕಾಮಗಾರಿ ನಿಮಿತ್ತ ನಗರದ ರೈಲ್ವೆ ನಿಲ್ದಾಣದಲ್ಲಿ ಇನ್ನೊಂದು ಹೊಸ ಪ್ಲಾಟ್‌ಫಾರಂ ನಿರ್ಮಾಣ ಹಾಗೂ ಎರಡು ಮತ್ತು ಮೂರನೆ ಪ್ಲಾಟ್‌ಫಾರಂ ವಿಸ್ತರಣೆಯಾಗಲಿದೆ. ಎರಡನೇ ಪ್ಲಾಟ್‌ಫಾರಂ ಈಗ 285 ಮೀ ಉದ್ದವಿದ್ದು, ಒಂದನೆ ಪ್ಲಾಟ್‌ಫಾರಂನಂತೆಯೆ 370 ಮೀ ವರೆಗೆ ವಿಸ್ತರಣೆ ಮಾಡಲಾಗುತ್ತದೆ. ಜೊತೆಗೆ ನಿಲ್ದಾಣದಲ್ಲಿ ಯಾರ್ಡ್‌ ಸೇರಿದಂತೆ ಒಟ್ಟು ಏಳು ಹಳಿಗಳಿವೆ. ಈ ಪೈಕಿ ರೈಲುಗಳ ಸಂಚಾರಕ್ಕಾಗಿ ಎರಡು ಹಳಿಗಳನ್ನು ಉಳಿಸಿಕೊಂಡು ಉಳಿದ ಐದು ಹಳಿಗಳನ್ನು ತೆರವುಗೊಳಿಸಲಾಗುತ್ತದೆ. ನಿಲ್ದಾಣದ ಏಳು ಹಳಿಗಳ ಜೊತೆಗೆ ಇನ್ನೊಂದು ಹೊಸ ಳಿಯನ್ನು ನಿರ್ಮಿಸಿ ಯಾರ್ಡ್‌ನ ಹಳಿಗಳ ಮರುವಿನ್ಯಾಸ ನಡೆಯಲಿದೆ ಎಂದು ಪ್ಯಾಟಿ ಹೇಳಿದ್ದಾರೆ.

ಟಾಪ್ ನ್ಯೂಸ್

Ayodhya: Ram temple inauguration celebrations to be held on January 11 instead of January 22!

Ayodhya: ರಾಮಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ ಜ.22ರ ಬದಲು 11ಕ್ಕೆ!

old lady digital arrest for a month: Thieves who looted 3.8 crores!

Cyber Fraud: 1 ತಿಂಗಳು ವೃದ್ದೆ ಡಿಜಿಟಲ್‌ ಅರೆಸ್ಟ್‌: 3.8 ಕೋಟಿ ಲೂಟಿ ಹೊಡೆದ ಕಳ್ಳರು!

IPl-RCb

IPL Auction: ಆರ್‌ಸಿಬಿ ಫ್ರಾಂಚೈಸಿಯಿಂದ ಬಹಳ ಯೋಚಿಸಿ ಸಂತುಲಿತ ತಂಡ

Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Vidhana-Soudha-CM

Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ

Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!

Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!

We are investigating Rahul’s British citizenship: Government to High Court!

ರಾಹುಲ್‌ ಬ್ರಿಟನ್‌ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

8-

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

Waqf Protest: People will overthrow the state government: Protest in Davangere

Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Ayodhya: Ram temple inauguration celebrations to be held on January 11 instead of January 22!

Ayodhya: ರಾಮಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ ಜ.22ರ ಬದಲು 11ಕ್ಕೆ!

old lady digital arrest for a month: Thieves who looted 3.8 crores!

Cyber Fraud: 1 ತಿಂಗಳು ವೃದ್ದೆ ಡಿಜಿಟಲ್‌ ಅರೆಸ್ಟ್‌: 3.8 ಕೋಟಿ ಲೂಟಿ ಹೊಡೆದ ಕಳ್ಳರು!

IPl-RCb

IPL Auction: ಆರ್‌ಸಿಬಿ ಫ್ರಾಂಚೈಸಿಯಿಂದ ಬಹಳ ಯೋಚಿಸಿ ಸಂತುಲಿತ ತಂಡ

Dina Bhavishya

Daily Horoscope; ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ…

Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.