ಭಾರತ-ವೆಸ್ಟ್ ಇಂಡೀಸ್ ಏಕದಿನ: ಅಯ್ಯರ್, ಪಂತ್ ಹೋರಾಟ ; ವೆಸ್ಟ್ ಇಂಡೀಸ್ ಗೆಲುವಿಗೆ 288 ಗುರಿ
ಸ್ಲ್ಯಾಗ್ ಓವರ್ ಗಳಲ್ಲಿ ಸಿಡಿದ ಜಾಧವ್ – ಜಡೇಜಾ
Team Udayavani, Dec 15, 2019, 5:42 PM IST
ಚೆನ್ನೈ: ಇಲ್ಲಿನ ಚಿಪಾಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಪ್ರಥಮ ಏಕದಿನ ಮುಖಾಮುಖಿಯಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡದ ಗೆಲುವಿಗೆ 288 ರನ್ ಗುರಿ ನಿಗದಿಯಾಗಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡಕ್ಕೆ ಯುವ ಬ್ಯಾಟ್ಸ್ ಮನ್ ಗಳಾದ ಶ್ರೇಯಸ್ ಅಯ್ಯರ್ (70), ವಿಕೆಟ್ ಕೀಪರ್ ರಿಷಭ್ ಪಂತ್ (71) ಮತ್ತು ಕೇಧಾರ್ ಜಾಧವ್ (40) ಅವರು ಆಸರೆಯಾದರು. ಇವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ನಿಗದಿತ 50 ಓವರುಗಳಲ್ಲಿ 07 ವಿಕೆಟ್ ಗಳ ನಷ್ಟಕ್ಕೆ 287 ರನ್ ಗಳನ್ನು ಕಲೆಹಾಕಿತು.
ಭಾರತದ ಆರಂಭ ನಿರಾಶಾದಾಯಕವಾಗಿತ್ತು. ತಂಡದ ಮೊತ್ತ ಕೇವಲ 21 ರನ್ ಗಳಾಗುವಷ್ಟರಲ್ಲಿ ಕೆ.ಎಲ್. ರಾಹುಲ್ (06) ಅವರು ಕಾಟ್ರೆಲ್ ಬೌಲಿಂಗ್ ನಲ್ಲಿ ಔಟಾದರು. ಇದರ ಬೆನ್ನಲ್ಲೇ ಕೇವಲ ನಾಲ್ಕು ರನ್ ಗಳಿಸಿ ವಿರಾಟ್ ಕೊಹ್ಲಿ ಕೂಡಾ ಪೆವಿಲಿಯನ್ ಸೇರಿದ್ದು ಟೀಂ ಇಂಡಿಯಾದ ಬ್ಯಾಟಿಂಗ್ ಸಂಕಟವನ್ನು ಹೆಚ್ಚಿಸಿತು. ಆದರೆ ಈ ಹಂತದಲ್ಲಿ ಆರಂಭಿಕ ಆಟಗಾರ ರೋಹಿತ್ ಶರ್ಮಾ (36) ಅವರಿಗೆ ಜೊತೆಯಾದ ಶ್ರೇಯಸ್ ಅಯ್ಯರ್ (70) ಎಚ್ಚರಿಕೆಯ ಆಟಕ್ಕೆ ತೊಡಗಿದರು. ಈ ಜೋಡಿ ಮೂರನೇ ವಿಕೆಟಿಗೆ ಅಮೂಲ್ಯ 55 ರನ್ ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ 36 ರನ್ ಗಳಿಸಿದ್ದ ಶರ್ಮಾ ಜೋಸೆಫ್ ಬೌಲಿಂಗ್ ನಲ್ಲಿ ಔಟಾದರು.
ನಾಲ್ಕನೇ ವಿಕೆಟಿಗೆ ಬ್ಯಾಟ್ ಹಿಡಿದು ಬಂದ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಅಯ್ಯರ್ ಜೊತೆ ಸೇರಿಕೊಂಡು ತಂಡದ ಮೊತ್ತವನ್ನು ಹೆಚ್ಚಿಸುತ್ತಾ ಸಾಗಿದರು. ವೆಸ್ಟ್ ಇಂಡೀಸ್ ಬೌಲರ್ ಗಳನ್ನು ದಿಟ್ಟವಾಗಿ ಎದುರಿಸಿದ ಈ ಯುವ ಜೋಡಿ ನಾಲ್ಕನೇ ವಿಕೆಟಿಗೆ ಅತ್ಯಮೂಲ್ಯ 114 ರನ್ ಭಾಗೀದಾರಿಕೆ ನೀಡಿದರು. ವೇಗದ ಆಟವಾಡಿದ ಪಂತ್ 69 ಎಸೆತೆಗಳಲ್ಲಿ 01 ಸಿಕ್ಸರ್ ಹಾಗೂ 07 ಬೌಂಡರಿ ನೆರವಿನಿಂದ 71 ರನ್ ಬಾರಿಸಿದರೆ ಶ್ರೇಯಸ್ ಅಯ್ಯರ್ ಅವರು 88 ಎಸೆತೆಗಳಲ್ಲಿ 70 ರನ್ ಬಾರಿಸಿದರು. ಇದರಲ್ಲಿ 05 ಬೌಂಡರಿ ಹಾಗೂ 01 ಸಿಕ್ಸರ್ ಒಳಗೊಂಡಿತ್ತು.
ಶ್ರೇಯಸ್ ಐಯರ್ ವಿಕೆಟ್ ಬಿದ್ದ ಮೇಲೆ ಕ್ರೀಸಿಗೆ ಆಗಮಿಸಿದ ಇನ್ನೋರ್ವ ಯುವ ಬ್ಯಾಟ್ಸ್ ಮನ್ ಕೇದಾರ್ ಜಾಧವ್ (40) ಅವರು ಸ್ಲ್ಯಾಗ್ ಓವರ್ ನಲ್ಲಿ ಸಿಡಿದು ನಿಂತರು. ಅನುಭವಿ ರವೀಂದ್ರ ಜಡೇಜಾ (21) ಅವರೊಂದಿಗೆ ಸೇರಿಕೊಂಡು 59 ರನ್ ಗಳ ಜೊತೆಯಾಟ ನೀಡಿದರು. ಈ ಜೋಡಿ ಕ್ರೀಸಿನಲ್ಲಿರುವವರೆಗೆ ಭಾರತ 300ರ ಗಡಿ ದಾಟಬಹುದೆಂಬ ನಿರೀಕ್ಷೆ ಇತ್ತು. ಆದರೆ ಜಾಧವ್ ಹಾಗೂ ಜಡೇಜಾ ಒಟ್ಟಿಗೇ ಔಟಾಗುವುದರೊಂದಿಗೆ ಈ ನಿರೀಕ್ಷೆ ಹುಸಿಯಾಯಿತು.
ಶಿಸ್ತಿನ ಬೌಲಿಂಗ್ ಮತ್ತು ಫೀಲ್ಡಿಂಗ್ ಸಂಘಟಿಸಿದ ವೆಸ್ಟ್ ಇಂಡೀಸ್ ಭಾರತದ ಘಟಾನುಘಟಿ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಭಾರತವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವ ಕೆರಿಬಿಯನ್ನರ ಪ್ರಯತ್ನಕ್ಕೆ ಅಡ್ಡಗಾಲಾಗಿದ್ದು ಅಯ್ಯರ್ ಮತ್ತು ಪಂತ್ ಜವಾಬ್ದಾರಿಯುತ ಜೊತೆಯಾಟ.
ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಶೆಲ್ಡ್ರನ್ ಕಾಟ್ರೆಲ್ 10 ಓವರ್ ಗೆ 46 ರನ್ ನೀಡಿ 2 ವಿಕೆಟ್ ಪಡೆದರು. ಇದರಲ್ಲಿ 3 ಮೇಡೆನ್ ಓವರ್ ಇದ್ದಿದ್ದೂ ವಿಶೆಷ. ಇನ್ನುಳಿದಂತೆ ಕೀಮೋ ಪೌಲ್ ಮತ್ತು ಅಲ್ಜಾರಿ ಜೋಸೆಫ್ ತಲಾ 02 ವಿಕೆಟ್ ಪಡೆದರೆ ಕೈರೆನ್ ಪೊಲಾರ್ಡ್ 01 ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
FIFA ಸೌಹಾರ್ದ ಫುಟ್‌ಬಾಲ್ ಪಂದ್ಯ: ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ 11-1 ಗೆಲುವು
450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ
BGT Finale: ಪಂದ್ಯಕ್ಕಿಲ್ಲ ರೋಹಿತ್ ಶರ್ಮ? ಬುಮ್ರಾ ನಾಯಕತ್ವಕ್ಕೆ ಸಿದ್ಧ!
Khel Ratna: ಮನು ಭಾಕರ್,ಗುಕೇಶ್ ಸೇರಿ ನಾಲ್ವರಿಗೆ ಖೇಲ್ ರತ್ನ; ಇಲ್ಲಿದೆ ಸಂಪೂರ್ಣ ಪಟ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.