ಹಣ್ಣು ತರಕಾರಿ ಒಣಗಿಸೋ ಯಂತ್ರ
Team Udayavani, Dec 16, 2019, 6:00 AM IST
ದ್ರಾಕ್ಷಿ ಮತ್ತಿತರ ಹಣ್ಣು, ಕೆಲವಾರು ತರಕಾರಿಗಳನ್ನು ಒಣಗಿಸಿ ಮಾರಾಟ ಮಾಡುವ ಕಾರ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮಳೆಗಾಲದಲ್ಲಿ ಅವುಗಳನ್ನು ಅಂಗಳದಲ್ಲಿ ಒಣಗಿಸಲು ಸಾಧ್ಯವಿಲ್ಲ. ಮಲೆನಾಡು ಭಾಗಗಳಲ್ಲಂತೂ ಚಳಿಗಾಲ, ಮಳೆಗಾಲದಲ್ಲಿ ಶೀತ ವಾತಾವರಣವೇ ಹೆಚ್ಚು. ಇಂಥ ಸಂದರ್ಭಗಳಲ್ಲಿ ಒಣಹಣ್ಣು, ತರಕಾರಿಗಳಿಗೆ ಹೆಚ್ಚು ಬೇಡಿಕೆಯಿರುತ್ತದೆ.
ಇದನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ತಜ್ಞರು ಯಂತ್ರವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಯಂತ್ರದ ವಿಶೇಷತೆ ಎಂದರೆ ಸೌರಶಕ್ತಿ ಮತ್ತು ಬಯೋಮಾಸ್(ಸಸ್ಯ ತ್ಯಾಜ್ಯ) ಎರಡನ್ನೂ ಬಳಸಿಯೂ ಚಾಲನೆ ಮಾಡಬಹುದು. ಬೇಸಿಗೆ ಕಾಲದಲ್ಲಿ ಸೌರಶಕ್ತಿ ಬಳಸಿದರೆ ಮಳೆಗಾಲದಲ್ಲಿ ಬಯೋಮಾಸ್ ಬಳಸಬಹುದು. ಬಯಲುಸೀಮೆಯಲ್ಲಿ ಚಳಿಗಾಲದಲ್ಲಿಯೂ ಸೌರಶಕ್ತಿ ಬಳಸಬಹುದು.
ಈ ಡ್ರೈಯರ್‌ನಲ್ಲಿ ಒಂದು ಬಾರಿಗೆ 10- 15 ಕೆ.ಜಿ. ಹಣ್ಣು ಅಥವಾ ತರಕಾರಿ ಒಣಗಿಸಬಹುದು. ಶೀಘ್ರವಾಗಿಯೂ ಒಣಗುತ್ತದೆ. ಡೀಸೆಲ್, ವಿದ್ಯುತ್ ಶಕ್ತಿ ಬಳಕೆಗೆ ಹೋಲಿಸಿದರೆ ಇದು ಮಿತವ್ಯಯಕಾರಿ. ಇದರ ಬೆಲೆ ಮತ್ತಿತರ ಹೆಚ್ಚಿನ ವಿವರಗಳಿಗೆ ಬೆಳಗ್ಗೆ 10 ರಿಂದ ಸಂಜೆ 5 ರ ನಡುವೆ ಕರೆ ಮಾಡಿ ತಿಳಿದುಕೊಳ್ಳಬಹುದು. ಸಂಪರ್ಕ: 080- 23330153
* ಕುಮಾರ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.