ತುಳುನಾಡಿನ ಮಧ್ವರ ಕೊಡುಗೆ ತುಳುನಾಡಿಗೇ ಗೊತ್ತಿಲ್ಲ: ಗೋವಿಂದಾಚಾರ್ಯ
Team Udayavani, Dec 16, 2019, 5:22 AM IST
ಉಡುಪಿ: ತುಳುನಾಡಿನಲ್ಲಿ ಹುಟ್ಟಿ ಜಗತ್ತಿಗೇ ವಿಶಿಷ್ಟ ತಣ್ತೀಜ್ಞಾನವನ್ನು ನೀಡಿದ ಮಧ್ವಾಚಾರ್ಯರ ಕೊಡುಗೆ ಕುರಿತು ತುಳುನಾಡಿನ ಜನರಿಗೇ ಗೊತ್ತಿಲ್ಲ ಎಂದು ಹಿರಿಯ ವಿದ್ವಾಂಸ ಡಾ|ಬನ್ನಂಜೆ ಗೋವಿಂದಾಚಾರ್ಯ ವಿಷಾದ ವ್ಯಕ್ತಪಡಿಸಿದರು.
ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದಲ್ಲಿ ರವಿವಾರ ಪಾಲ್ಗೊಂಡು ಅವರು ಮಾತನಾಡಿದರು.
ಮಧ್ವರ ಸರ್ವಮೂಲ ಪಾಠವನ್ನು ಪಲಿಮಾರು ಮಠದ ಮೊದಲ ಯತಿ ಶ್ರೀ ಹೃಷಿಕೇಶತೀರ್ಥರು ಬರೆದ ಮೂಲಪ್ರತಿ ಇದೆ. ಮಧ್ವವಿಜಯ ಎಂಬ ಜೀವನಚರಿತ್ರೆಯನ್ನು ಬರೆದ ನಾರಾಯಣ ಪಂಡಿತಾಚಾರ್ಯರು ತುಳುವರು. ಆಕಾಶದಲ್ಲಿ ಕಣ್ಣಿಗೆ ಕಾಣದ ನೀಲವರ್ಣವಿದೆ ಎಂಬ ಅಲ್ಟ್ರಾವಯಲೆಟ್
ನ್ನು ಪ್ರಥಮವಾಗಿ ಸೂಚಿಸಿದವರು ಮಧ್ವರು. ಪರಮಾಣುವನ್ನು ವಿಭಜಿಸ ಬಹುದು ಎಂದು ಹೇಳಿದವರೂ ಇವರೇ ಎಂದು ಬನ್ನಂಜೆ ಅವರು ಈ ಮೂಲಕ ಹೇಳಿದರು.
ಗಂಧರ್ವಗಾನ-ಯಕ್ಷಗಾನ
ಕರ್ಣಾಟಕ ಸಂಗೀತವನ್ನು ಕೊಟ್ಟದ್ದು ಮಧ್ವರು. ಇದನ್ನು ಗಂಧರ್ವ ಗಾನ ಎನ್ನುತ್ತಿದ್ದರು. ಸ್ವತಃ ಅವರು ಸಂಗೀತಕಾರ ರಾಗಿದ್ದರು. ಯಕ್ಷಗಾನವನ್ನು ಆರಂಭಿಸಿದ್ದೂ ಇವರೇ. ಇದಕ್ಕೆ ಹಿಂದೆ ಭಾಗವತರ ಆಟ ಎಂಬ ಹೆಸರು ಇತ್ತು. ಅಂದರೆ ಭಗವಂತನ ಗುಣಗಾನ ಮಾಡುವ ಕಲೆ. ಹಿಂದೆಲ್ಲ ಕೃಷ್ಣನ ಕಥೆ, ಪೌರಾಣಿಕ ಕಥೆಯನ್ನು ಮಾತ್ರ ಆಡುತ್ತಿದ್ದರು. ಈಗ ಗಾಂಧಿ ಕಥೆ, ನೆಹರೂ ಕಥೆ ಎಲ್ಲ ಬಂದಿದೆ. ಯಕ್ಷಗಾನದ ವೇಷಧಾರಿಗಳಿಗೆ ದೇವಸ್ಥಾನಗಳಲ್ಲಿರುವಂತೆ ಪ್ರಭಾವಳಿ ಅಲಂಕಾರ, ಅಂಗಾರ ಅಕ್ಷತೆಯನ್ನು ಹೋಲುವ ಲಾಂಛನ ಇತ್ಯಾದಿಗಳು ಕಾಸರಗೋಡಿನಿಂದ ಹಿಡಿದು ಎಲ್ಲ ಕಡೆ ಕಂಡುಬರುತ್ತವೆ ಎಂದು ಬನ್ನಂಜೆ ಹೇಳಿದರು.
ಗ್ರಂಥ ರಚನೆ
ಉಜಿರೆ ಜನಾರ್ದನ ದೇವಸ್ಥಾನದಲ್ಲಿ ಮಧ್ವರು ರಚಿಸಿದ ಯಾÿಕ ಪ್ರಕ್ರಿಯೆ ಗ್ರಂಥಕ್ಕೆ ಸಂಸ್ಕೃತ ವ್ಯಾಖ್ಯಾನವನ್ನು ಬರೆದಿದ್ದು ಇದನ್ನು ಶೀಘ್ರದಲ್ಲಿ ಉಜಿರೆ ಯಲ್ಲಿಯೇ ಬಿಡುಗಡೆ ಮಾಡಬೇಕೆಂಬ ಇರಾದೆ ಇದೆ ಎಂದು ಬನ್ನಂಜೆ ಹೇಳಿದರು.
ಯುವ ವಿಭಾಗ ಸಮಾವೇಶ
ಯುವ ವಿಭಾಗದ ಸಮಾವೇಶದ ಅಧ್ಯಕ್ಷತೆಯನ್ನು ಉಜಿರೆ ದೇವಸ್ಥಾನದ ಪ್ರತಿನಿಧಿ ಶರತ್‌ಕೃಷ್ಣ ಪಡ್ವೆಟ್ನಾಯ ವಹಿಸಿದ್ದರು. ದಂಡತೀರ್ಥದ ಡಾ| ಸೀತಾರಾಮ ಭಟ್ ವಿಷಯ ಮಂಡಿಸಿ ದರು. ಶಾಸ್ತ್ರೀಯ ಆಚರಣೆಗಳ ಹಿಂದಿರುವ ವೈಚಾರಿಕತೆಯನ್ನು ಅರಿತು ಕೊಳ್ಳಬೇಕು ಎಂದು ಉಡುಪಿಯ ಡಾ| ಆನಂದ ತೀರ್ಥಾಚಾರ್ಯ ತಿಳಿಸಿದರು. ತುಳುಲಿಪಿ ಕುರಿತು ವಿಷ್ಣುಮೂರ್ತಿ ಮಂಜಿತ್ತಾಯ ಮಾತನಾಡಿದರು. ಜನಾರ್ದನ ಕೊಡವೂರು ವಂದಿಸಿದರು. ಶ್ರೀನಿವಾಸ ಬಲ್ಲಾಳ್ ಕಾರ್ಯಕ್ರಮ ನಿರ್ವಹಿಸಿದರು.
ಮಹಿಳಾ ಸಮಾವೇಶ
ಉಡುಪಿ ಶೋಭಾ ಉಪಾಧ್ಯಾಯರ ಅಧ್ಯಕ್ಷತೆಯಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಸಮಾಜ ರಕ್ಷಣೆಯಲ್ಲಿ ಮಹಿಳೆಯರ ಪಾತ್ರದ ಕುರಿತು ವಿಷಯ ಮಂಡನೆ ಮಾಡಲಾಯಿತು. ಉಡುಪಿಯ ಶಾಂತಾ ಉಪಾಧ್ಯಾಯ, ಕಾಸರಗೋಡಿನ ಪ್ರೇಮಾ ಬಾರಿತ್ತಾಯ, ಸುಳ್ಯದ ಮಮತಾ ಮೂಡಿತ್ತಾಯ, ಬೆಂಗಳೂರಿನ ಸುಜಾತ ತಂತ್ರಿ ಮಾತನಾಡಿದರು. ಪ್ರಮಲತಾ ಸ್ವಾಗತಿಸಿ ಪ್ರಿಯಂವದಾ ಐತಾಳ್ ಪುತ್ತೂರು ವಂದಿಸಿದರು. ಪೂರ್ಣಿಮಾ ಜನಾರ್ದನ ಕಾರ್ಯಕ್ರಮ ನಿರ್ವಹಿಸಿದರು.
“ತುಳು ಶಿವಳ್ಳಿ ಸಮಾಜ: ಅಂದು -ಇಂದು-ಮುಂದು’ ಗೋಷ್ಠಿಯ ಅಧ್ಯಕ್ಷತೆಯನ್ನು ಮಂಗಳೂರಿನ ಪ್ರದೀಪಕುಮಾರ ಕಲ್ಕೂರ ವಹಿಸಿದ್ದರು. ಶ್ರೀಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಶ್ರೀಪಲಿಮಾರು ಮಠದ ಉಭಯ ಶ್ರೀಗಳು ಆಶೀರ್ವಚನ ನೀಡಿದರು. ಉಡುಪಿಯ ಪ್ರೊ| ಶ್ರೀಪತಿ ತಂತ್ರಿ, ಕುಂಟಾರು ರವೀಶ ತಂತ್ರಿ, ಉಡುಪಿಯ ಬಾಲಾಜಿ ರಾಘವೇಂದ್ರ ಆಚಾರ್ಯ, ಅರವಿಂದ ಆಚಾರ್, ಉಜಿರೆಯ ಡಾ| ದಯಾಕರ ಎಂ.ಎಂ., ಪುತ್ತೂರಿನ ಹರೀಶ ಪುತ್ತೂರಾಯ, ಉಡುಪಿಯ ಪ್ರದೀಪಕುಮಾರ್ ಅಭ್ಯಾಗತರಾಗಿ ವಿಚಾರ ಮಂಡಿಸಿದರು.
ಸುಳ್ಳು ಪ್ರಚಾರ
ಮಧ್ವರು ಬಂಗಾಳದಲ್ಲಿಯೋ ಬೇರೆಲ್ಲೋ ಹುಟ್ಟಿದ್ದರೆ ಅಲ್ಲಿನವರು ಕುಣಿದು ಕುಪ್ಪಳಿ ಸುತ್ತಿದ್ದರು. ತುಳುನಾಡಿನ ತುಳು ಸಮ್ಮೇಳನಗಳಲ್ಲಿಯೂ ಮಧ್ವರ ಹೆಸರು ಬಾರದಂತೆ ಉದ್ದೇಶ ಪೂರ್ವಕವಾಗಿ ನೋಡುತ್ತಾರೆ. ಇದಕ್ಕೆ ಕಾರಣ ಮಧ್ವರು ಬ್ರಾಹ್ಮಣೇತರರಿಗೆ ಮೋಕ್ಷ ಇಲ್ಲ ಎಂದು ಹೇಳಿದ್ದಾರೆನ್ನುವ ಸುಳ್ಳು ಪ್ರಚಾರ. ಇವರೊಬ್ಬರೇ ಎಲ್ಲ ಜಾತಿಯವರಿಗೂ ಮೋಕ್ಷ ಇದೆ ಎಂದು ಹೇಳಿದವರು, ಬೇರೆ ಯಾವ ಆಚಾರ್ಯರೂ ಹೇಳಿಲ್ಲ. ಜಾತಿ ಎನ್ನುವುದು ಸಾಮಾಜಿಕ ವ್ಯವಸ್ಥೆ, ವರ್ಣ ಎನ್ನುವುದು ಸ್ವಭಾವಕ್ಕೆ ಸಂಬಂಧಿಸಿದ್ದು. ಜಾತಿಗೂ ವರ್ಣಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಅಪಪ್ರಚಾರವೇ ಮೇಲುಗೈ ಸಾಧಿಸಿದೆ. ಈಗ ಅಮೆರಿಕ, ರಶ್ಯಾ ಮೊದಲಾ ದೆಡೆಗಳಲ್ಲಿ ಇವರ ಚಿಂತನೆ ನಿಧಾನವಾಗಿ ಬೆಳಕು ಕಾಣುತ್ತಿದೆ ಎಂದು ಬನ್ನಂಜೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.