ಮಂಗಳೂರು-ಬೆಳಗಾವಿ, ಮೈಸೂರಲ್ಲೂ ಗ್ಲೋಬಲ್ ಹಿಂದೂ ಯೋಗ ಕಾಲೇಜು
Team Udayavani, Dec 16, 2019, 3:08 AM IST
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ವಿಶ್ವಕ್ಕೆ ಅತ್ಯುತ್ತಮ ಯೋಗ ತರಬೇತುದಾರರನ್ನು ರೂಪಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಆರಂಭವಾಗಿರುವ ಅಮೆರಿಕದ ಫ್ಲೋರಿಡಾದ ಯೋಗ ವಿಶ್ವವಿದ್ಯಾಲಯ ರಾಜ್ಯದ ಮಂಗಳೂರು, ಬೆಳಗಾವಿ, ಮೈಸೂರುಗಳಲ್ಲಿ ಗ್ಲೋಬಲ್ ಹಿಂದೂ ಯೋಗ ಕಾಲೇಜು ಆರಂಭಿಸಲು ಮುಂದಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗವನ್ನು ಇನ್ನಷ್ಟು ಜನಪ್ರಿಯ ಗೊಳಿಸುವ, ಯೋಗದ ತವರಾದ ಭಾರತದಲ್ಲಿ ಪ್ರತಿ ಹಳ್ಳಿ-ನಗರಗಳಲ್ಲೂ ಯೋಗದ ಮಹತ್ವ, ಯೋಗದಲ್ಲಿ ಅಡಗಿದ ಆರೋಗ್ಯ ಸತ್ವ, ಆಯು ರ್ವೇದ, ಅಧ್ಯಾತ್ಮ, ಭಾರತೀಯ ಸಂಸ್ಕೃತಿ- ಪರಂಪರೆ, ಸಂಸ್ಕಾರವನ್ನು ಮನದಟ್ಟು ಮಾಡುವ ನಿಟ್ಟಿನಲ್ಲಿ ಯೋಗ ವಿಶ್ವವಿದ್ಯಾಲಯ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಅದಕ್ಕೆ ಪೂರಕವಾಗಿ ಗ್ಲೋಬಲ್ ಹಿಂದೂ ಕಾಲೇಜುಗಳ ಆರಂಭಕ್ಕೆ ಮುಂದಾಗಿದೆ.
ಬೆಂಗಳೂರಲ್ಲಿ ತಲೆ ಎತ್ತುತ್ತಿದೆ ಹಿಂದೂ ಯೋಗ ಕಾಲೇಜು ಕಟ್ಟಡ: ಬೆಂಗಳೂರಿನಲ್ಲಿ ಈಗಾಗಲೇ ಗ್ಲೋಬಲ್ ಹಿಂದೂ ಯೋಗ ಕಾಲೇಜು ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಅದೇ ರೀತಿ ಬೆಳಗಾವಿ, ಮಂಗಳೂರು ಹಾಗೂ ಮೈಸೂರಿನಲ್ಲಿಯೂ ಕಾಲೇಜು ಆರಂಭಕ್ಕೆ ಯೋಜಿಸಲಾಗಿದೆ. ಜತೆಗೆ, ಹುಬ್ಬಳ್ಳಿಯಲ್ಲೂ ಕಾಲೇಜು ಆರಂಭಕ್ಕೆ ಚಿಂತನೆ ನಡೆಸಲಾಗಿದೆ.
ಯೋಗ ವಿವಿ ಅಡಿಯಲ್ಲಿನ ಗ್ಲೋಬಲ್ ಹಿಂದೂ ಯೋಗ ಕಾಲೇಜುಗಳಲ್ಲಿ ಯೋಗದ ವಿಸ್ತೃತ ಪರಿಕಲ್ಪನೆಯಡಿ ತರಬೇತಿ ನೀಡಲಾಗುತ್ತಿದೆ. ಯೋಗ ಎಂದರೆ ಕೇವಲ ಆಸನಗಳ ಪರಿಚಯ ಇಲ್ಲವೇ, ತರಬೇತಿ ಅಷ್ಟೇ ಅಲ್ಲ. ಯೋಗದಲ್ಲಿ ಜೀವನಶೈಲಿ, ಆಯು ರ್ವೇದ, ಆರೋಗ್ಯ, ಆಹಾರ, ಸದ್ವಿಚಾರ-ಚಿಂತನೆ, ಅಧ್ಯಾತ್ಮ…ಹೀಗೆ ವಿವಿಧ ವಿಷಯಗಳೊಂದಿಗೆ ಸಮಗ್ರ ಕಲಿಕೆಗೆ ಒತ್ತು ನೀಡಲಾಗುತ್ತಿದೆ.
ಮುಂದಿನ ಶತಮಾನದ ದೃಷ್ಟಿಕೋನ: ನಮ್ಮದೇ ಶಾಸ್ತ್ರವಾದ ಯೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ, ಯೋಗವನ್ನು ಪ್ರತಿಯೊಬ್ಬರ ಜೀವನದ ಭಾಗವಾಗಿಸುವ ನಿಟ್ಟಿನಲ್ಲಿ ಯೋಗ ವಿವಿ ಹಲವು ಯೋಜನೆಗಳನ್ನು ಕೈಗೊಂಡಿದೆ. ಯೋಗ ತರಬೇತಿಗೆ ಏಕರೂಪತೆ ಜತೆಗೆ, ಮುಂದಿನ ಶತಮಾನದಲ್ಲಿ ಯೋಗದ ದೃಷ್ಟಿಕೋನ ಹೇಗಿರಬೇಕು ಎಂಬುದರ ಬಗ್ಗೆ ಸಹ ಯೋಗ ವಿಶ್ವವಿದ್ಯಾಲಯ ತನ್ನದೇ ಯತ್ನಗಳಿಗೆ ಮುಂದಾಗಿದೆ.
ಯೋಗ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಯೋಗದ ಜತೆಗೆ, ಸಂಸ್ಕೃತಿ, ಅಂತಾ ರಾಷ್ಟ್ರೀಯ ಸಂಬಂಧ, ಬಹುಭಾಷೆ, ಕೌಶಲ, ಆಯುರ್ವೇದ…ಇನ್ನಿತರ ವಿಷಯಗಳ ಮನನ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಭಾರತ ದಿಂದ ವಿಶ್ವದ ವಿವಿಧ ದೇಶಗಳಿಗೆ ಗುಣಮಟ್ಟದ, ಪರಿಪೂರ್ಣ ಯೋಗ ತರಬೇತುದಾರರನ್ನು ಕಳುಹಿಸುವ ಮಹದಾಸೆಯನ್ನು ವಿವಿ ಹೊಂದಿದೆ.
ಆಯುರ್ವೇದ, ಆರೋಗ್ಯ, ಉತ್ತಮ ನಡವಳಿಕೆ, ಹೀಲಿಂಗ್, ಕೌನ್ಸೆಲಿಂಗ್, ನಾದಯೋಗ…ಹೀಗೆ ವಿವಿಧ 100ಕ್ಕೂ ಹೆಚ್ಚು ವಿಷಯಗಳ ಡಿಪ್ಲೊಮಾ ಕೋರ್ಸ್‌ಗಳನ್ನು ಬೆಂಗಳೂರಿನ ಯಲಹಂಕದಲ್ಲಿರುವ ಯೋಗ ವಿವಿ ಹೊಂದಿದೆ. ಯೋಗ ತಜ್ಞರನ್ನು ರೂಪಿಸುವುದರ ಜತೆಗೆ ಸಂಶೋಧನಾಧಾರಿತ ಕಲಿಕೆಗೆ ಆದ್ಯತೆ ನೀಡಲಾಗುತ್ತಿದೆ.
ಯೋಗ ವಿವಿ ಇತರ ವಿವಿಗಳಲ್ಲಿ ಒಂದಾಗದೆ ಪ್ರತ್ಯೇಕ ಹೆಗ್ಗುರುತಿನೊಂದಿಗೆ ಸಾಗಲು ಯೋಜಿಸಿದೆ. ಇಂದಿನ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆ, ಅನ್ವೇಷಣೆಗಳಲ್ಲಿ ಶೇ.1ರಷ್ಟು ಸಹ ಗ್ರಾಮೀಣ ಭಾಗಕ್ಕೆ ತಲುಪುತ್ತಿಲ್ಲವೆಂಬ ನೋವು ಅನೇಕರದ್ದಾಗಿದೆ. ಆದರೆ, ಯೋಗ ವಿವಿಯ ಲಾಭವನ್ನು ಗ್ರಾಮೀಣ ಭಾಗಕ್ಕೆ ಪರಿಣಾಮಕಾರಿಯಾಗಿ ತಲುಪಿಸುವ ನಿಟ್ಟಿನಲ್ಲಿ ಯೋಗ ವಿವಿ ಗಂಭೀರ ಚಿಂತನೆಗೆ ಮುಂದಾಗಿದೆ.
ಏ.3ರಿಂದ 5ರವರೆಗೆ ಅಂತಾರಾಷ್ಟ್ರೀಯ ಯೋಗ ಸಮಾವೇಶ: ವಿಶ್ವದ ವಿವಿಧ ಯೋಗ ವಿಶ್ವವಿದ್ಯಾಲಯಗಳು, ಯೋಗ ತಜ್ಞರು, ಅನುಭವಿಗಳು ಒಂದೆಡೆ ಸೇರಿ ಚಿಂತನ-ಮಂಥನ ನಡೆಸುವ ನಿಟ್ಟಿನಲ್ಲಿ ಏ.3ರಿಂದ 5ರವರೆಗೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಕೆನಡಾ ಪ್ರಧಾನಿ ಸೇರಿದಂತೆ ವಿಶ್ವದ ವಿವಿಧೆಡೆಯ ಸುಮಾರು 10 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು, 250ಕ್ಕೂ ಹೆಚ್ಚು ಯೋಗ ತಜ್ಞರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಮುಂದಿನ ಶತಮಾನದಲ್ಲಿ ಯೋಗದ ದೃಷ್ಟಿಕೋನ, ಸಾಗಬೇಕಾದ ಮಾರ್ಗದ ಕುರಿತಾಗಿ ನಡೆಯುವ ಚಿಂತನ-ಮಂಥನದಲ್ಲಿ ವಿಶ್ವದ ಯೋಗ ತಜ್ಞರು ಬೆಳಕು ಚೆಲ್ಲಲಿದ್ದಾರೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. 21ರಂದು ಸಿಎಂ ಸಮ್ಮುಖದಲ್ಲಿ ವೀರಭದ್ರಾಸನ ಗಿನ್ನಿಸ್ ದಾಖಲೆ ಯತ್ನ: ಡಿ.21ರಂದು ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ವೀರಭದ್ರಾಸನ ಪ್ರದರ್ಶನ ನಡೆಯಲಿದ್ದು, ಇದು ಗಿನ್ನಿಸ್ ದಾಖಲೆ ಯತ್ನವಾಗಿರಲಿದೆ. ಫ್ಲೋರಿಡಾದ ಯೋಗ ವಿವಿ, ಬೆಂಗಳೂರು ಕುಲಪತಿ ಯೋಗಿ ದೇವರಾಜ ಅವರ ಮಾರ್ಗದರ್ಶನದಲ್ಲಿ ನಡೆಯುವ ವೀರಭದ್ರಾಸನ ವಿರಾಟ ಸ್ವರೂಪದಲ್ಲಿ 10ಕ್ಕೂ ಹೆಚ್ಚು ಜನ ಭಾಗವಹಿಸಲಿದ್ದು, ದಾಖಲೆ ಪ್ರದರ್ಶನ ನೀಡಲಿದೆ.
ಮೋದಿಯವರ ಯತ್ನದಿಂದಾಗಿ ವಿಶ್ವದ 210ಕ್ಕೂ ಹೆಚ್ಚು ದೇಶಗಳು ಯೋಗ ದಿನಾಚರಣೆ ಕೈಗೊಳ್ಳುತ್ತಿವೆ. ಯೋಗ ಆಸನಗಳ ತರಬೇತಿಗೆ ಸೀಮಿತವಾಗದೆ ಭಾರತೀಯ ಸಂಸ್ಕೃತಿ, ಪರಂಪರೆ, ಸಂಸ್ಕಾರ, ಜೀವನ ಶೈಲಿ, ಆಯುರ್ವೇದ ಪದ್ಧತಿಯ ಪುನರುತ್ಥಾನದ ಕಾರ್ಯ ಮಾಡಬೇಕಾಗಿದೆ. ಯೋಗದಲ್ಲಿ ಏಕರೂಪತೆ ಯೂ ಅವಶ್ಯವಾಗಿದೆ. ಆ ಕಾರ್ಯವನ್ನು ಬೆಂಗಳೂರಿನಲ್ಲಿರುವ ಅಮೆರಿಕ ಫ್ಲೋರಿಡಾದ ಯೋಗ ವಿವಿ ಮಾಡಲಿದೆ.
-ಡಾ| ಅರಳುಮಲ್ಲಿಗೆ ಪಾರ್ಥಸಾರಥಿ, ಗೌರವ ಚೇರ್ಮನ್, ಯೋಗ ವಿವಿ ಬೆಂಗಳೂರು
* ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
MUST WATCH
ಹೊಸ ಸೇರ್ಪಡೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Discipline: ಬದುಕಿನಲ್ಲಿ ಶಿಸ್ತಿರಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.