
“ಕಲಿತದ್ದು ಕಲಿಸಿದ್ದು’ ಆಕರ ಕೋಶ: ಪ್ರೊ| ನಾವಡ
ಡಾ| ಬಿ.ಎ. ವಿವೇಕ ರೈ ಅವರ ಕೃತಿ ಬಿಡುಗಡೆ
Team Udayavani, Dec 16, 2019, 5:52 AM IST

ಮಂಗಳೂರು: ಕರಾವಳಿಯ ಸಾಂಸ್ಕೃತಿಕ ಮತ್ತು ಸಾಹಿತ್ಯ ಚರಿತ್ರೆಯ ದಾಖಲಾತಿ ಕೊರತೆ ಇದೆ. ಅದನ್ನು ನೀಗಿಸುವಲ್ಲಿ ಡಾ| ಬಿ.ಎ. ವಿವೇಕ ರೈ ಅವರ “ಕಲಿತದ್ದು ಕಲಿಸಿದ್ದು’ ಕೃತಿ ಆಕರ ಕೋಶವಾಗಲಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ| ಎ.ವಿ. ನಾವಡ ಹೇಳಿದರು.
ಬೆಂಗಳೂರಿನ ಸಾವಣ್ಣ ಪ್ರಕಾಶನ, ಮಂಗಳೂರಿನ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಆಕೃತಿ ಆಶಯ ಪಬ್ಲಿಕೇಶನ್ಸ್ ವತಿಯಿಂದ ಕೊಡಿಯಾಲಬೈಲ್ ಕರ್ಣಾಟಕ ಬ್ಯಾಂಕ್ ಸಭಾಂಗಣದಲ್ಲಿ ರವಿವಾರ ಜರಗಿದ “ಕಲಿತದ್ದು ಕಲಿಸಿದ್ದು’ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಮಾಜಿಕ ಬದಲಾವಣೆಯ ನಿರೂಪಣೆ
ಕೃತಿ ಬಿಡುಗಡೆಗಳಿಸಿದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಡಾ| ಪಿ. ಈಶ್ವರ ಭಟ್ ಮಾತನಾಡಿ, ಈ ಕೃತಿಯು ಕಲಿಕೆ, ಕಲಿಸುವಿಕೆಯ ನಿರೂಪಣೆಯ ಜತೆಗೆ ಅಂದಿನ ಕಾಲದಿಂದ ಬೆಳೆದುಬಂದ ಸಾಮರಸ್ಯದ ಬದುಕನ್ನು ಕೂಡ ಅನಾವರಣಗೊಳಿಸುತ್ತದೆ ಎಂದರು.
ವಿವೇಕ ರೈ ಅವರ ಸಹಪಾಠಿಗಳಾದ ಪುಣಚದ ಪ್ರಗತಿಪರ ಕೃಷಿಕ ಬೈಲುಗುತ್ತು ಮಾರಪ್ಪ ಶೆಟ್ಟಿ ಮತ್ತು ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ. ಗೋಪಾಲಕೃಷ್ಣ ಪುತ್ತೂರು ಅತಿಥಿಗಳಾಗಿದ್ದರು. ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ, ಆಕೃತಿ ಪ್ರಕಾಶನದ ಕಲ್ಲೂರು ನಾಗೇಶ್ ಉಪಸ್ಥಿತರಿದ್ದರು. ಶಶಿರಾಜ್ ರಾವ್ ಕಾವೂರು ವಂದಿಸಿದರು. ಡಾ| ಆರ್. ನರಸಿಂಹ ಮೂರ್ತಿ ನಿರ್ವಹಿಸಿದರು.
ಸಮ್ಮಾನ
ವಿವೇಕ ರೈ ಅವರು ಕಲಿತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಕುಟುಂಬದವ ರಾದ ಪುಣಚ ಪರಿಯಾಲ್ತಡ್ಕ ಅನು ದಾನಿತ ಹಿ.ಪ್ರಾ. ಶಾಲೆಯ ಮುಖ್ಯೋ ಪಾಧ್ಯಾಯ ಸಿ. ಶ್ರೀಹರ್ಷ ಶಾಸಿŒ, ಪುತ್ತೂರು ಬೋರ್ಡ್ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯರಾಗಿದ್ದ ಎಂ. ಅಣ್ಣಪ್ಪ ಅವರ ಮಗ ರತನ್ ಕುಮಾರ್ ಕೆ. ಪುತ್ತೂರು, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಪ್ರೊ| ಲಿಯೋ ನೊರೊನ್ಹ, ಮಂಗಳೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಮತ್ತು ಮಂಗಳಗಂಗೋತ್ರಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ| ಎಸ್.ವಿ. ಪರಮೇಶ್ವರ ಭಟ್ಟ ಅವರ ಪುತ್ರ ಎಸ್.ಪಿ. ರಾಮಚಂದ್ರ ಬೆಂಗಳೂರು ಅವರನ್ನು ಸಮ್ಮಾನಿಸಲಾಯಿತು.
“ಕಲಿತದ್ದು ಕಲಿಸಿದ್ದು’ ಕೃತಿ ಹುಟ್ಟಿದ್ದು ಆಕಸ್ಮಿಕ. “ಉದಯವಾಣಿ’ ಸಾಪ್ತಾಹಿಕ ಸಂಪದದ ಒತ್ತಾಸೆಗಾಗಿ ಎರಡು ಮೂರು ಕಂತು ಬರೆಯಲು ಆರಂಭಿಸಿದೆ. ಜನ ಓದುತ್ತಾರೆ, ಸಂಭ್ರಮಿಸುತ್ತಾರೆ ಎಂದು ತಿಳಿದು 21 ಕಂತು ಬರೆದೆ. ನಾನು ಶಿಕ್ಷಣ, ಸಾಹಿತ್ಯಕ್ಕೆ ಬಂದು 50 ವರ್ಷವಾಗಿ 50ಕ್ಕೂ ಅಧಿಕ ಪುಸ್ತಕ ಬರೆದಿದ್ದೆ. ಆದರೆ ನನ್ನ ಯಾವುದೇ ಪುಸ್ತಕ ಓದದವರು ಕೂಡ “ಉದಯವಾಣಿ’ಯಲ್ಲಿ ಪ್ರಕಟವಾದ ಈ ಅಂಕಣ ಓದಿರುವುದು ನನ್ನಲ್ಲಿ ಬೆರಗು ಮೂಡಿಸಿತು. ಕೃತಿಯಾಗಿ ಪ್ರಕಟಿಸುವಾಗ ಮತ್ತಷ್ಟು ವಿಚಾರಗಳನ್ನು ಸೇರಿಸಿದ್ದೇನೆ.
– ಡಾ| ಬಿ.ಎ. ವಿವೇಕ ರೈ
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.