ನದಿಪಾತ್ರ ಸ್ವಚ್ಛತೆಗೆ ಉತ್ತಮ ಜನಸ್ಪಂದನೆ

ವಾಟ್ಸ್‌ಆ್ಯಪ್‌ ಮೆಸೇಜ್‌ಗೆ ಸ್ಪಂದಿಸಿದ ಸಮಾನ ಮನಸ್ಕರುಕುಟುಂಬ ಸಮೇತರಾಗಿ ಸ್ವಚ್ಛತೆಯಲ್ಲಿ ಭಾಗಿ

Team Udayavani, Dec 16, 2019, 11:44 AM IST

16-December-4

ಹರಿಹರ: ನಗರದ ತುಂಗಭದ್ರಾ ನದಿ ಪಾತ್ರವನ್ನು ಸ್ವಚ್ಛ -ಸುಂದರಗೊಳಿಸಲೆಂದೇ ಉದಯಿಸಿರುವ ಸಮಾನ ಮನಸ್ಕ ಗೆಳೆಯರ ಬಳಗ ನೀಡಿದ್ದ ಕರೆಯ ಮೇರೆಗೆ ಭಾನುವಾರ ಬೆಳಗ್ಗೆ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ನಾಗರಿಕರು ನದಿ ತಟಕ್ಕೆ ಆಗಮಿಸಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

ಕಳೆದ ಕೆಲ ದಿನಗಳ ಹಿಂದಷ್ಟೆ “ನಮ್ಮೂರು ನಮ್ಮ ಹೊಣೆ’ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ ಆರಂಭಿಸಿದ್ದ ಪತ್ರಕರ್ತ ರಾಘವೇಂದ್ರ, ಅಂಜಲಿ ಸುರೇಶ್‌ ಮತ್ತಿತರರು ಮಲೀನಗೊಂಡಿದ್ದ ನದಿಪಾತ್ರ ಸ್ವಚ್ಛತೆಗೆ ಸಮಾನ ಮನಸ್ಕರು ಕೈಜೋಡಿಸುವಂತೆ ಕರೆ ನೀಡಿದ್ದರು.

ವಾಟ್ಸ್‌ಆ್ಯಪ್‌ ಕರೆಗೆ ಸ್ಪಂದಿಸಿದ ಸಮಾನ ಮನಸ್ಕರು, ಭಾನುವಾರ ಬೆಳಗ್ಗೆ 7ಕ್ಕೆ ನಗರ ಸಮೀಪದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಎದುರಿನ ನದಿ ತಟಕ್ಕೆ ಆಗಮಿಸಿ ಸ್ವತ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಕಾರ್ತಿಕ ಮಾಸದ ಚಳಿಯನ್ನು ಲೆಕ್ಕಿಸದೇ, ಕುಟುಂಬ ಸಮೇತರಾಗಿ ಬಂದು ಭಾಗವಹಿಸಿದ್ದರು.

ನದಿ ದಡದ ತುಂಬೆಲ್ಲ ಬಿದ್ದಿದ್ದ ಮದ್ಯದ ಬಾಟಲ್‌, ಪ್ಲಾಸ್ಟಿಕ್‌ ಮತ್ತಿತರೆ ತ್ಯಾಜ್ಯಗಳನ್ನು ಆಯ್ದು ಒಟ್ಟುಗೂಡಿಸಿ, ಸುಮಾರು 6-7 ಟನ್‌ ಕಸವನ್ನು ನಗರಸಭೆ ಟ್ರ್ಯಾಕ್ಟರ್‌ ಗೆ ತುಂಬಿ ಹೊರಕ್ಕೆ ಸಾಗಿಸಲಾಯಿತು. ಸ್ವಚ್ಛತೆ ಕಾರ್ಯದಲ್ಲಿ ಮಾಜಿ ಶಾಸಕ ಬಿ.ಪಿ.ಹರೀಶ್‌, ನಗರಸಭೆ ಪೌರಾಯುಕ್ತೆ ಎಸ್‌.ಲಕ್ಷ್ಮೀ ಸೇರಿದಂತೆ ಹಲವು ಜನಪ್ರತಿನಿಧಿಗಳು, ಅಧಿ ಕಾರಿಗಳು ಸಹ ಸ್ವಯಂ ಪ್ರೇರಿತರಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸ್ವಚ್ಛತಾ ಅಭಿಯಾನಕ್ಕೆ ಸಾರ್ವಜನಿಕರಿಂದ ಅಭುತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಸಮಾಜದಲ್ಲಿ ಸ್ವಚ್ಛತೆ ಬಗೆಗಿನ ಪ್ರಜ್ಞೆಯ ಪ್ರತಿಬಿಂಬವಾಗಿ ಹೊರಹೊಮ್ಮಿತು.

ಪರಿಸರ ಸಂರಕ್ಷಣೆ ಸಾರ್ವಜನಿಕರ ಹೊಣೆ ಎಂಬ ಘೋಷ ವ್ಯಾಕ್ಯ ಈ ಅಭಿಯಾನದ ಮೂಲಕ ಸಾರ್ಥಕಗೊಂಡಿತು. ನಗರದ ಪ್ರತಿ ಬಡಾವಣೆ, ಉದ್ಯಾನವನಗಳಲ್ಲಿ ಸ್ವತ್ಛತೆಗೊಳಿಸಬೇಕು ಇಂತಹ ಕಾರ್ಯವನ್ನು ನಿರಂತರವಾಗಿ ನಡೆಸುವ ಮೂಲಕ ಜನರಲ್ಲಿ ಪರಿಸರ ಪ್ರಜ್ಞೆ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು ಎಂದು ಭಾಗವಹಿಸಿದ್ದ ಸ್ವಯಂ ಸೇವಕರು ಅಭಿಪ್ರಾಯಪಟ್ಟರು.

ನಗರಸಭಾ ಸದಸ್ಯರಾದ ರಜನಿಕಾಂತ್‌, ಪಾರ್ವತಮ್ಮ ಐರಣಿ, ನೀತಾ ಮೆಹಾರ್ವಾಡೆ, ಅಶ್ವಿ‌ನಿ, ಮಾಜಿ ಸದಸ್ಯರಾದ ಬಿ.ಕೆ. ಸಯ್ಯದ್‌ ರೆಹಮಾನ್‌, ರಾಜು ರೋಕಡೆ, ನಾಗರಾಜ್‌ ಮೆಹಾರ್ವಾ ಡೆ, ಅಂಬುಜಾ ರಾಜೋಳಿ, ತಾಪಂ ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ, ಪರಿಸರ ಅಭಿಯಂತರ್‌ ಮಹೇಶ್‌, ಆರೋಗ್ಯ ನೀರಿಕ್ಷಕರಾದ ಕೋಡಿ ಭೀಮರಾಯ್‌, ಸಂತೋಷ ಮುಖಂಡರಾದ ನಿಜಗುಣ, ಹೆಚ್‌. ಕೆ.ಕೊಟ್ರಪ್ಪ, ತಿಪ್ಪೇಸ್ವಾಮಿ, ಕಿರಣ್‌ ಭೂತೆ, ಅಜಿತ್‌ ಸಾವಂತ್‌, ಎಚ್‌.ಎಸ್‌. ರಾಘವೇಂದ್ರ, ಮಾರುತಿ ಶೆಟ್ಟಿ, ಆರ್‌.ಟಿ. ವೆಂಕಟೇಶ್‌, ಎಚ್‌.ಪಿ. ಬಾಬಣ್ಣ, ಅಂಜು, ನವ್ಯ, ಪ್ರವೀಣ್‌, ರಾಘವೇಂದ್ರ ತೇಲ್ಕರ್‌, ಪ್ರಶಾಂತ್‌ ಸಿಂಧೆ, ಅಲಿ ಉದ್ಗಟ್ಟಿ, ಸುನೀಲ್‌, ಗಂಗಾಧರ್‌ ದುರುಗೋಜಿ, ಕೊಂಡಜ್ಜಿ ರಾಘವೇಂದ್ರ, ವಸಿಷ್ಠ, ಜಿ.ಕೆ. ವಿನಾಯಕ ಮತ್ತಿತರರು ಭಾಗವಹಿಸಿದ್ದರು.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

missing

ಬರಿಮಾರು ವ್ಯಕ್ತಿ ನಾಪತ್ತೆ; ನದಿ ಕಿನಾರೆಯಲ್ಲಿ ಪಾದರಕ್ಷೆ, ಮೇವಿನ ಕಟ್ಟು ಪತ್ತೆ

Kambala

Kambala; ದೇವರ ಕಂಬಳ ಖ್ಯಾತಿಯ ಹೊಕ್ಕಾಡಿಗೋಳಿ ಕಂಬಳ 

POlice

Kokkada: ಕಳ್ಳತನ; ಇಬ್ಬರು ಆರೋಪಿಗಳು ವಶಕ್ಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.