ಚೇಸ್ ಗೆ ತುಳು ಕಾಮಿಡಿ ಕಿಂಗ್ ಬೋಳಾರ್ ಸಾಥ್!
Team Udayavani, Dec 16, 2019, 1:09 PM IST
ರಂಗಿತರಂಗ ಖ್ಯಾತಿಯ ರಾಧಿಕಾ ನಾರಾಯಣ್ ಮತ್ತು ಅವಿನಾಶ್ ನರಸಿಂಹರಾಜು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರ ಚೇಸ್. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಟೀಸರ್ ಮೂಲಕವೇ ಇದೀಗ ಎಲ್ಲೆಡೆ ಈ ಸಿನಿಮಾ ಬಗ್ಗೆ ಚರ್ಚೆಗಳಾಗುತ್ತಿವೆ. ಒಂದು ರೋಚಕ ಕ್ರೈಂ ಥ್ರಿಲ್ಲರ್ ಕಥಾ ಹಂದರದ ಸುಳಿವಿನೊಂದಿಗೆ, ಹೊಸತನದ ಕಂಪಿನೊಂದಿಗೆ ಮೂಡಿ ಬಂದಿರೋ ಈ ಟೀಸರ್ ಅಂತೂ ಇದೀಗ ವೈರಲ್ ಆಗಿ ಬಿಟ್ಟಿದೆ. ಯೂಟ್ಯೂಬ್‌ನಲ್ಲಿಯೂ ಹೆಚ್ಚಿನ ವೀಕ್ಷಣೆ ಪಡೆದುಕೊಳ್ಳುತ್ತಾ ಸಾಗುತ್ತಿರುವ ಈ ಟೀಸರ್ ಮೂಲಕವೇ ಚೇಸ್ ಚಿತ್ರ ಮತ್ತಷ್ಟು ಕಳೆಗಟ್ಟಿಕೊಂಡಿದೆ. ಈ ಮೂಲಕವೇ ಚೇಸ್ ಭಾಗವಾಗಿರೋ ಕಲಾವಿದರ ಪಾತ್ರ ಪರಿಚಯವೂ ಆಗಿದೆ. ಆದರೆ ಅದರಲ್ಲಿ ಕಾಣಿಸದ ಮತ್ತೊಂದು ಪಾತ್ರದ ಸುಳಿವೀಗ ಚಿತ್ರತಂಡದ ಕಡೆಯಿಂದಲೇ ಜಾಹೀರಾಗಿದೆ.
ಅದು ತುಳುನಾಡ ಮಾಣಿಕ್ಯ ಎಂದೇ ಖ್ಯಾತರಾಗಿರುವ ಖ್ಯಾತ ಹಾಸ್ಯನಟ ಅರವಿಂದ ಬೋಳಾರ್ ನಟಿಸಿದ್ದಾರೆನ್ನಲಾಗಿರೋ ಪಾತ್ರ. ಈ ಸಿನಿಮಾ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಕಥಾನಕವನ್ನೊಳಗೊಂಡಿದೆ ಎಂಬ ವಿಚಾರ ಗೊತ್ತೇ ಇದೆ. ಇದರ ಜೊತೆಜೊತೆಗೇ ಕಾಮಿಡಿ ಕಚಗುಳಿ ಇಡುವಲ್ಲಿ ಅರವಿಂದ ಬೋಳಾರ್ ಪಾತ್ರವನ್ನು ಸೃಷ್ಟಿಸಲಾಗಿದೆ. ರಜನೀಕಾಂತ್ ನಟನೆಯ ರೋಬೋ 2.0 ಚಿತ್ರದಲ್ಲಿ ಅಕ್ಷಯ್ ಕುಮಾರ್ ನಿರ್ವಹಿಸಿದ್ದ ಪಕ್ಷಿರಾಜನ ಪಾತ್ರದಂಥಾದ್ದೇ ಕ್ಯಾರೆಕ್ಟರ್ ಒಂದರಲ್ಲಿ ಬೋಳಾರ್ ನಟಿಸಿದ್ದಾರಂತೆ. ಆ ಪಾತ್ರವೂ ಚೇಸ್ ಚಿತ್ರದ ಪ್ರಧಾನ ಆಕರ್ಷಣೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಅರವಿಂದ ಬೋಳಾರ್ ಇದ್ದಾರೆಂದರೆ ಅಲ್ಲಿ ಭರಪೂರ ನಗು ಇದ್ದೇ ಇರುತ್ತದೆಂದರ್ಥ. ಅದನ್ನು ನಿಜ ಮಾಡುವಂಥಾ ಸನ್ನಿವೇಶಗಳು ಈ ಸಿನಿಮಾದಲ್ಲಿ ಯಥೇಚ್ಛವಾಗಿವೆಯಂತೆ.
ಈ ಚಿತ್ರದಲ್ಲಿ ಅವಿನಾಶ್ ನರಸಿಂಹರಾಜು, ರಾಧಿಕಾ ನಾರಾಯಣ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಶೆಟ್ಟಿ, ಅರವಿಂದ್ ರಾವ್, ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ, ವೀಣಾ ಸುಂದರ್, ಉಷಾ ಭಂಡಾರಿ, ಸುಂದರ್ ಮುಂತಾದವರ ತಾರಗಣವಿದೆ. ರೆಹಮಾನ್ ಹಾಸನ್ ಇನ್ನೊಂದು ಮುಖ್ಯ ಪಾತ್ರದಲ್ಲಿದ್ದಾರೆ. ಸಿಂಪ್ಲಿಫನ್ ಮೀಡಿಯಾ ನೆಟ್ವರ್ಕ್ ಪ್ರೈ ಲಿಮಿಟೆಡ್ ಬ್ಯಾನರ್‌ನಲ್ಲಿ ಅಡಿಯಲ್ಲಿ ಚೇಸ್ ಚಿತ್ರ ನಿರ್ಮಾಣಗೊಂಡಿದೆ. ಮಂಗಳೂರಿನವರೇ ಆದ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ ಮತ್ತು ಪ್ರಶಾಂತ್ ಶೆಟ್ಟಿ ನಿರ್ಮಾಪಕರಾಗಿ, ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ
Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್
BBK11: ಚೈತ್ರಾಳನ್ನು ದೂಡಿದ ರಜತ್.. ಮೈ ಮುಟ್ಟಿದ್ದಕ್ಕೆ ಫೈಯರ್ ಬ್ರ್ಯಾಂಡ್ ಗರಂ
Beguru Colony Movie: ಟೀಸರ್‌ನಲ್ಲಿ ಬೇಗೂರು ಕಾಲೋನಿ
MUST WATCH
ಹೊಸ ಸೇರ್ಪಡೆ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
Cold Weather: ಕೊನೆಗೂ ಚಳಿ ಶುರು ಆಯ್ತು ಗುರು
Ambedkar remarks; ಅಮಿತ್ ಶಾ ರಾಜೀನಾಮೆ ನೀಡಬೇಕು: ಕಾಂಗ್ರೆಸ್ ಒತ್ತಾಯ
BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.