ರಾಗಿ ಕೊಯ್ಲಿಗೆ ತುಂತುರು ಮಳೆ ಅಡ್ಡಿ


Team Udayavani, Dec 16, 2019, 4:50 PM IST

kolar-tdy-1

ಬೇತಮಂಗಲ: ಹೋಬಳಿಯಲ್ಲಿ ಕಳೆದ 15 ದಿನಗಳಿಂದ ಮೋಡ ಮುಸುಕಿದ ವಾತಾವರಣ ಇದ್ದು, ಆಗಾಗ ಸುರಿಯುವ ತುಂತರು ಮಳೆ ಸುರಿಯುತ್ತಿದೆ. ಇದರಿಂದ ರಾಗಿ ಕೊಯ್ಲಿಗೆ ಅಡ್ಡಿಯಾಗಿದೆ. ತೊಗರಿ, ಕಡಲೆ, ಮಳೆಯಾಶ್ರದಲ್ಲಿ ಬೆಳೆದ ಬೆಳೆಗಳಿಗೆ ಕೀಟಬಾಧೆಯೂ ಕಾಣಿಸಿಕೊಂಡು, ರೈತರಿಗೆ ಕೈಬಂದ ತುತ್ತು ಬಾಯಿಗೆ ಬರದಂತಾಗಿ ನಷ್ಟ ಅನುಭವಿಸುವಂತಾಗಿದೆ. ತುಂತುರು ಮಳೆ ತೊಗರಿ, ಅಲಸಂದಿ, ಅವರೆ, ಹುರುಳಿ ಬೆಳೆಗೆ ಅನುಕೂಲ ಕಲ್ಪಿಸಿದ್ರೆ, ಮೋಡ ಕವಿದ ವಾತಾವರಣ ರೋಗ, ಕೀಟ ಬಾಧೆಗೆ ಕಾರಣವಾಗಿದೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮನೆ ತುಂಬಿದ್ದ ಕಾಳು: ಬರಪೀಡಿತ ಪ್ರದೇಶದ ಜಿಲ್ಲೆಯ ರೈತರು 10 ವರ್ಷಗಳಿಂದಲೂ ಸಮರ್ಪಕ ಮಳೆ ಬಾರದೇ, ಬೆಳೆ ಬೆಳೆಯಲಾಗದೇ ನಷ್ಟವನ್ನು ಅನುಭವಿಸಿದ್ದರು. ಆದರೆ, ಈ ಬಾರಿ ಆಗಾಗ ಮಳೆ ಕೈಕೊಟ್ಟರೂ ಜನಜಾನುವಾರುಗಳ ಮೇವಿಗೆ ಯಾವುದೇ ತೊಂದರೆ ಇಲ್ಲ. ಹಲವು ವರ್ಷಗಳ ನಂತರ ದವನ ಧಾನ್ಯ ಮನೆಯನ್ನು ತುಂಬಿಸಿದೆ. ಆದಾಯ ಬರದೇ ಇದ್ರೂ, ಕನಿಷ್ಠ ಮನೆಗಾದ್ರೂ ಅಲ್ಪ ಸ್ವಲ್ಪ ಕಾಳಾಯ್ತಲ್ಲ ಎಂದು ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಕೊಯ್ಲು ವಿಳಂಬ: ಮುಂಗಾರು ಪೂರ್ವದಲ್ಲಿ ಉತ್ತಮ ಸುರಿದ ಮಳೆ, ನಂತರ ಬಿತ್ತನೆ ಸಮಯಕ್ಕೆ ಕೈಕೊಟ್ಟಿತ್ತು. ನಂತರ ತಡವಾಗಿ ಬಂದ ಹದಮಳೆಗೆ ಕೆಲವು ರೈತರು ಶೇಂಗಾ, ರಾಗಿ, ಸಾಮೆ, ಸಜ್ಜೆ, ಕಡಲೆ ಹೀಗೆ.. ಮಳೆಯಾಶ್ರಿತ ಏಕದಳ, ದ್ವಿದಳ ಧಾನ್ಯಗಳ ಬಿತ್ತನೆ ಮಾಡಿದ್ದರು. ಬಿತ್ತನೆ ಹಿಂದುಳಿದ ಕಾರಣ ಫ‌ಸಲು ಕೂಡ ಕೊಯ್ಲಿಗೆ ಬರಲು ವಿಳಂಬವಾಗಿದೆ.

ಕೊಯ್ಲು, ಒಕ್ಕಣೆಗೆ ಅಡ್ಡಿ: ಮುಂಗಾರು ಪೂರ್ವದಲ್ಲಿ ಬಿತ್ತನೆ ಮಾಡಿದ್ದ ಬೆಳೆ ಕಾರ್ತೀಕ ಮಾಸದ ಮುನ್ನವೇ ಕೊಯ್ಲಿಗೆ ಬಂದಿತ್ತು. ಆಗ ಜಡಿ ಮಳೆ ಸುರಿದು ಕಾರಣ ಅಲ್ಪ ಸ್ಪಲ್ಪ ಬೆಳೆ ಮಳೆಗೆ ತೊಯ್ದು ಹೋಗಿತ್ತು. ಕೆಲವು ರೈತರು ನಷ್ಟ ಅನುಭವಿಸುವಂತಾಗಿತ್ತು. ಆದರೆ, ಈಗ ಜಡಿ ಮಳೆ ಸುರಿಯದಿದ್ದರೂ ಮೋಡ ಕವಿದ ವಾತಾವರಣ, ತುಂತುರು ಮಳೆ ಆಗುತ್ತಿರುವ ಕಾರಣ ಹಿಂದುಳಿದು ಬಿತ್ತನೆ ಮಾಡಿದ್ದ ಬೆಳೆ ಕೊಯ್ಲಿಗೆ ತೀವ್ರ ತೊಂದರೆಯಾಗಿದೆ.

ಕಾಳು ಒಣಗಿಸಲು ಬಿಸಿಲು ಇಲ್ಲ: ಹೋಬಳಿಯ ಕೆಲವು ಭಾಗದ ರೈತರು ಈಗಾಗಲೇ ಬೆಳೆ ಕೊಯ್ಲು ಮಾಡಿ ದ್ದಾರೆ. ಇನ್ನು ಕೆಲವು ಕಡೆ ಕೊಯ್ಲು ಪ್ರಾರಂಭಿಸಿದ್ದಾರೆ. ಕೊಯ್ಲು ಮಾಡಿದವರು ಒಕ್ಕಣೆಗಾಗಿ ಬೆಳೆಯನ್ನು ಗೂಡು ಕಟ್ಟಿದ್ದಾರೆ. ಇನ್ನು ಕೆಲವರು ಕೊಯ್ಲು ಆರಂಭಿಸಿದ್ದು, ಎಲ್ಲಿ ಮಳೆ ಬಂದು ರಾಗಿ ತೆನೆ ನೆನೆಯುತ್ತದೋ ಎಂಬ ಆತಂಕದಲ್ಲಿದ್ದಾರೆ. ಇವೆಲ್ಲದರ ನಡುವೆ ಕೊಯ್ಲು ಮಾಡಿ, ಒಕ್ಕಣೆಯೂ ಮುಗಿಸಿದ ರೈತರು ದವಸ ಧಾನ್ಯವನ್ನು ಒಣಗಿಸಲು ಮೋಡ ಮುಸುಕಿದ್ದು, ಆಗಾಗ ಸುರಿಯುವ ತುಂತುರು ಮಳೆ ಅಡ್ಡಿಯಾಗಿದೆ.

ಮೊಳೆಕೆ ಹೊಡೆದ ತೆನೆ: ಈಗಾಗಲೇ ಫ‌ಸಲಿಗೆ ಬಂತು ನಿಂತಿರುವ ತೆನೆಯೂ ಮಾಗಿ ನೆಲಕ್ಕೆ ಬಿದ್ದಿದ್ದು, ತಂಪು ವಾತಾವರಣ, ತುಂತುರು ಮಳೆಗೆ ಕಡ್ಡಿಯಲ್ಲೇ ಮೊಳಕೆ ಹೊಡೆಯಲಾರಂಭಿಸಿದೆ.

ರೋಗ ಬಾಧೆ: ಶೇಂಗಾ, ರಾಗಿ ಬೆಳೆಯ ನಡುವೆ ಹಾಕಿದ್ದ ತೊಗರಿ, ಅಲಸಂದೆ, ಅವರೆ, ಹುರುಳಿ ಹಾಗೂ ಕಡಲೆ ಬೆಳೆಗೆ ತುಂತುರು ಮಳೆಯಿಂದ ಜೀವ ಕಳೆ ಬಂದರೆ, ಮೋಡ ಮುಸುಕಿದ ವಾತಾವರಣ ಗಿಡದಲ್ಲಿನ ಹೂ ಉದುರಿಸುವುದರ ಜೊತೆಗೆ ರೋಗ, ಕೀಟ ಬಾಧೆಯನ್ನೂ ತಂದೊಡ್ಡಿದೆ. ಇದು ರೈತರನ್ನು ಚಿಂತೆಗೀಡು ಮಾಡಿದೆ.

ಟಾಪ್ ನ್ಯೂಸ್

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police crime

Gangolli, Ajekaru; ಮಹಿಳೆಯರಿಗೆ ಜೀವ ಬೆದರಿಕೆ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

death

Belthangady : ಸೊಪ್ಪು ತರಲು ಹೋಗಿದ್ದ ವ್ಯಕ್ತಿ ಆಕಸ್ಮಿಕ ಸಾ*ವು

baby

Sullia: ಒಂಟಿಯಾಗಿ ಪತ್ತೆಯಾದ ಮಗು ಪೋಷಕರ ಮಡಿಲಿಗೆ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.