ಕೇಂದ್ರ ಬಜೆಟ್ ಗೆ ಡೇಟ್ ಫಿಕ್ಸ್ : ಇಂದಿನಿಂದ ಪೂರ್ವ ಸಮಾಲೋಚನೆ ಸಭೆ ಪ್ರಾರಂಭ
Team Udayavani, Dec 16, 2019, 5:22 PM IST
ಹೊಸದಿಲ್ಲಿ: 2020ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ದಿನಾಂಕ ನಿಗದಿಯಾಗಿದ್ದು, ಬಜೆಟ್ ಪೂರ್ವ ಸಮಾಲೋಚನೆ ಸಭೆ ಸೋಮವಾರದಿಂದ ಪ್ರಾರಂಭವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮುಂಬರುವ ಫೆಬ್ರವರಿ1ಕ್ಕೆ ಕೇಂದ್ರ ಬಜೆಟ್ ಮಂಡಣೆ ನಡೆಯಲಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉದ್ಯಮ, ಕೃಷಿ, ಹಣಕಾಸು ಸೇರಿದಂತೆ ನಾನಾ ವಲಯಗಳ ತಜ್ಞರ ಜತೆ ಸಮಾಲೋಚನೆ ನಡೆಸಲಿದ್ದಾರೆ. ಇನ್ನೂ ಈ ಪೂರ್ವ ಸಮಾಲೋಚನೆ ಸಭೆ ಡಿಸೆಂಬರ್ 23ರ ತನಕ ನಡೆಯಲಿದ್ದು, ವಿತ್ತ ಸಚಿವೆಗೆ ಇದು ಎರಡನೇ ಬಜೆಟ್ ಮಂಡನೆಯಾಗಿದೆ.
ಆರ್ಥಿಕ ಬೆಳವಣಿಗೆ ಆದ್ಯತೆ
ಪ್ರಧಾನಿಯವರ ಕಚೇರಿ (ಪಿಎಂಒ), ಹಣಕಾಸು ಇಲಾಖೆ, ನೀತಿ ಆಯೋಗ ಮತ್ತು ಇತರ ಇಲಾಖೆಗಳು ಸರಣಿ ಸಭೆಗಳನ್ನು ನಡೆಸಲಿದ್ದು, ಆರ್ಥಿಕ ಬೆಳವಣಿಗೆಗೆ ಹೆಚ್ಚು ಆದ್ಯತೆಯನ್ನು ಹೊಂದುವ ಉದ್ದೇಶ ಇಟ್ಟುಕೊಂಡಿದೆ. ಕಳೆದ 6 ವರ್ಷಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ, ಅಂದರೆ ಶೆ.4.5ಕ್ಕೆ ಬೆಳವಣಿಗೆ ದರ ಕುಸಿದಿದ್ದು, ವವೋದ್ಯಮ, ಫಿನೆrಕ್, ಡಿಜಿಟಲ್ ವಲಯಗಳ ಪ್ರಮುಖರ ಜತೆಗೆಬ ದೀರ್ಘವಾದ ಸಮಾಲೋಚನೆ ನಡೆಯಲಿದೆ.
ಉದ್ಯಮ ಸ್ನೇಹಿ ವಾತಾವರಣಕ್ಕೆ ಸಲಹೆ
ಉದ್ಯಮದ ಮೂಲಗಳ ಪ್ರಕಾರ ಸರಕಾರ ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಗೆ ಸಲಹೆಗಳನ್ನು ನಿರೀಕ್ಷಿಸಿದ್ದು, ಸಭೆಯಲ್ಲಿ ಖಾಸಗಿ ಹೂಡಿಕೆಯ ಉತ್ತೇಜನ, ರಫ್ತು, ರಾಜ್ಯಗಳ ಪಾತ್ರ ಇತ್ಯಾದಿ ವಿಚಾರಗಳ ವಿಮರ್ಶೆಯೂ ನಡೆಯಲಿದೆ.
19ರಂದು ಉದ್ಯಮ ವಲಯದ ಪ್ರಮುಖರೊಡನೆ ಸಮಾಲೋಚನೆ
ಡಿಸೆಂಬರ್ 19ರಂದು ಉದ್ಯಮ ವಲಯದ ಪ್ರಮುಖರೊಡನೆ ಸಮಾಲೋಚನೆ ನಡೆಸಲಿದ್ದು, ಕೈಗಾರಿಕಾ ಮಂಡಳಿಗಳು ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿಯ ಮಿತಿಯನ್ನು ಈಗಿನ 2.5 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಏರಿಸಬೇಕು. ಇದರಿಂದ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಸೃಷ್ಟಿಯಾಗಲಿದೆ ಎನ್ನುವ ದೃಷ್ಟಿಯಿಂದ ಬೇಡಿಕೆಯನ್ನು ಮುಂದಿಟ್ಟಿದ್ದೇವೆ.
ಸಬ್ಸಿಡಿ ಸುಧಾರಣೆ
ಇನ್ನೂ ಈ ಸಲ ಬಜೆಟ್ ಅಲ್ಲಿ ಸಬ್ಸಿಡಿ ಸುಧಾರಣೆ, ಡಿಜಿಟಲ್ ಯೋಜನೆಗಳ ವಿಸ್ತರಣೆ, ಆಯುಷ್ಮಾನ್ ಭಾರತ್, ಸ್ವಚ್ಛ ಭಾರತ್ ಯೋಜನೆಗಳಿಗೆ ತಂತ್ರಜ್ಞಾನ ನೆರವು ಇತ್ಯಾದಿ ವಿಷಯಗಳಿಗೆ ಸಂಬಂಧಪಟ್ಟಂತೆ ಹತ್ತು ಹಲವಾರು ನಿರೀಕ್ಷೆಗಳಿದ್ದು, ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ತೆರಿಗೆ ರದ್ದು, ವೇತನದಾರರಿಗೆ ತೆರಿಗೆ ರಿಲೀಫ್, ಸಣ್ಣ, ಮಾಧ್ಯಮ ಉದ್ದಿಮೆಗೆ ತೆರಿಗೆ ಕಡಿತ ಅನುಕೂಲವನ್ನು ನಿರೀಕ್ಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.