ಮರೆಯಾಗುತ್ತಿರುವ ಆಲೆಮನೆಗೆ ಮರುಜೀವ ನೀಡಿದ ರೈತರು
ರಾಸಾಯನಿಕ ಮುಕ್ತ ಬೆಲ್ಲ ತಯಾರಿಕಾ ಘಟಕ ; ತಾಲೂಕಿನಲ್ಲಿಯೇ ಮೊದಲ ಯಾಂತ್ರಿಕೃತ ಆಲೆಮನೆ
Team Udayavani, Dec 16, 2019, 11:35 PM IST
ವಿಶೇಷ ವರದಿ– ತೆಕ್ಕಟ್ಟೆ: ಆಧುನಿಕ ಭರಾಟೆಗೆ ಸಿಲುಕಿ ನಲುಗುತ್ತಿರುವ ಗ್ರಾಮೀಣ ಕೃಷಿ ಸಂಸ್ಕೃತಿ ಜತೆಗೆ ಗ್ರಾಮೀಣ ಭಾಗದ ರೈತರು ನೂರಾರು ಎಕರೆ ಕೃಷಿಭೂಮಿಯಲ್ಲಿ ಬೆಳೆದಿದ್ದ ಕಬ್ಬು ಕಟಾವಿಗೆ ಸಿದ್ಧವಾಗಿದ್ದು, ಕಬ್ಬು ಮಾರಾಟ ಮಾಡಲು ಸಮರ್ಪಕವಾದ ವ್ಯವಸ್ಥೆಯ ಕೊರತೆಯಿಂದಾಗಿ ಕೆದೂರು ಗ್ರಾ.ಪಂ. ವ್ಯಾಪ್ತಿಯ ಶಾನಾಡಿಯ ಪ್ರಗತಿಪರ ಸಾವಯವ ಕೃಷಿಕರಾದ ಶಾನಾಡಿ ರಾಮಚಂದ್ರ ಭಟ್ ಹಾಗೂ ಉಮಾನಾಥ ಶೆಟ್ಟಿ ಅವರು ಗ್ರಾಮೀಣ ಭಾಗದಲ್ಲಿ ಮರೆಯಾಗುತ್ತಿರುವ ಕಬ್ಬಿನ ಆಲೆಮನೆ (ಬೆಲ್ಲದ ಗಾಣ) ಮರುಜೀವ ತುಂಬುವ ಕೈಂಕರ್ಯದಲ್ಲಿ ತೊಡಗಿ ಮಾದರಿಯಾಗಿದ್ದಾರೆ.
ವಾರಾಹಿ ಕಾಲುವೆ ನೀರಿನಲ್ಲೇ ಬೆಳೆದ ಕಬ್ಬು
ಉಡುಪಿ ಜಿಲ್ಲೆಯಲ್ಲಿ 1980ರಲ್ಲಿ ಸಕ್ಕರೆ ಕಾರ್ಖಾನೆ ಹಾಗೂ ವಾರಾಹಿ ಯೋಜನೆಗೆ ಏಕಕಾಲದಲ್ಲಿಯೇ ಚಾಲನೆ ದೊರಕಿದ್ದು, ವಾರಾಹಿ ಯೋಜನೆ ಮಾತ್ರ ಕುಂಟುತ್ತ ಸಾಗಿದ್ದು ರೈತರ ಕೃಷಿ ಭೂಮಿಗೆ ನೀರು ಹರಿದು ಬರುವಾಗ ಸಕ್ಕರೆ ಕಾರ್ಖಾನೆಗೆ ಮೂಲವಸ್ತುವಾದ ಕಬ್ಬು ಇಲ್ಲದೆ ಅನಿವಾರ್ಯವಾಗಿ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ರೈತರ ಬಹು ದಿನದ ಕನಸಾಗಿ ಉಳಿದಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರಾರಂಭಗೊಳ್ಳುವುದು ಎನ್ನುವ ಭರವಸೆಯಲ್ಲಿದ್ದಾರೆ. ಬೆಳೆದು ನಿಂತ ಕಬ್ಬಿನ ಬೆಳೆಯನ್ನು ಏನು ಮಾಡಬೇಕು ಎನ್ನುವ ಆತಂಕ ಗ್ರಾಮೀಣ ಭಾಗದ ಅದೆಷ್ಟೋ ರೈತರಲ್ಲಿ ಕಾಡತೊಡಗಿರುವುದು ವಾಸ್ತವ ಸತ್ಯ. ಪರಿಣಾಮ ರೈತರು ಸಮೂಹ ವೈಜ್ಞಾನಿಕವಾಗಿ ಚಿಂತನೆ ಮಾಡಿ ತಮ್ಮ ಹೊಲದ ಸಮೀಪದಲ್ಲಿಯೇ ಬೆಳೆದು ನಿಂತ ಕಬ್ಬುಗಳನ್ನು ಅರೆಯಲು ಕಬ್ಬಿನ ಆಲೆಮನೆಗೆ (ಬೆಲ್ಲದ ಗಾಣ) ಸ್ಥಾಪಿಸಿ ಬೆಲ್ಲ ಉತ್ಪಾದನೆಗೆ ಮುಂದಾಗಿದ್ದಾರೆ.
ಗ್ರಾಮಕ್ಕೆ ಹರಿದು ಬಂದ ವಾರಾಹಿ ಕಾಲುವೆ ನೀರನ್ನೇ ಸಮರ್ಪಕವಾಗಿ ಬಳಸಿಕೊಂಡ ರೈತರು ಸುಮಾರು 12 ಎಕರೆ ವಿಸ್ತೀರ್ಣದಲ್ಲಿ ಬೆಳೆದು ನಿಂತ ಕಬ್ಬು ಹೊರಜಿಲ್ಲೆಗಳಿಗೆ ಮಾರಾಟ ಮಾಡಿದ್ದರು ಕೂಡ ಸರಿಯಾದ ಬೆಂಬಲ ಬೆಲೆ ಸಿಗುವುದೋ ಇಲ್ಲವೋ ಎನ್ನುವ ಆತಂಕ ಒಂದೆಡೆಯಾದರೆ ಮತ್ತೂಂದೆಡೆಯಲ್ಲಿ ಸಾಗಾಟ ವೆಚ್ಚವೇ ಅಧಿಕವಾಗುವುದನ್ನು ಅರಿತ ರೈತರು ಸುಮಾರು 6ಲಕ್ಷ ರೂ. ವ್ಯಯಿಸಿ ಯಂತ್ರೋಪಕರಣ ಹಾಗೂ ಘಟಕ ನಿರ್ಮಿಸುವ ಮೂಲಕ ರಾಸಾಯನಿಕ ಮುಕ್ತ ಬೆಲ್ಲ ತಯಾರಿಸುವ ನಿಟ್ಟಿನಿಂದ ಅನುಭವಿ ತಂಡಗಳ ಮಾರ್ಗದರ್ಶನ ಪಡೆದು ಡಿ.16ರಂದು ಬೆಲ್ಲ ತಯಾರಿಕಾ ಘಟಕ ಆರಂಭಿಸಲಾಗಿದೆ.
ರಾಸಾಯನಿಕ ಮುಕ್ತ ಬೆಲ್ಲ ತಯಾರಿಯ ಉದ್ದೇಶ
ಬೆಲ್ಲದ ಗಾಣ ಗ್ರಾಮದಲ್ಲಿ ನಿರ್ಮಿಸಬೇಕು ಎನ್ನುವ ಮಹದಾಸೆಯನ್ನು ಹೊಂದಿದ ನನ್ನ ಸಹಪಾಠಿ ಸಾವಯವ ಕೃಷಿಕ ಉಮಾನಾಥ ಶೆಟ್ಟಿ ಅವರ ಯೋಚನೆಗೆ ಬೆನ್ನೆಲುಬಾಗಿ ನಿಂತೆ. ಹಿಂದೆ ನಮ್ಮ ಗ್ರಾಮದಲ್ಲಿದ್ದ ಅದೆಷ್ಟೋ ಆಲೆ ಮನೆಗಳು ಮರೆಯಾಗಿದ್ದು, ಇಂತಹ ಘಟಕಗಳು ನಮ್ಮ ಗ್ರಾಮದಲ್ಲಿ ಸ್ಥಾಪಿತವಾಗುವುದರಿಂದ ಮುಂದಿನ ದಿನಗಳಲ್ಲಿ ಪರಿಸರದಲ್ಲಿನ ಕಬ್ಬು ಬೆಳೆಗಾರರಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುವುದು. ಒಟ್ಟಾರೆಯಾಗಿ ನಮ್ಮ ಗ್ರಾಮದಲ್ಲಿ ರಾಸಾಯನಿಕ ಮುಕ್ತ ಬೆಲ್ಲವನ್ನು ತಯಾರಿಸಬೇಕು ಎನ್ನುವುದೇ ನಮ್ಮ ಮೂಲ ಉದ್ದೇಶ ಜತೆಗೆ ರೈತರ ಸಹಕಾರವೂ ಕೂಡ ಬಹಳ ಮುಖ್ಯ.
-ಶಾನಾಡಿ ರಾಮಚಂದ್ರ ಭಟ್,
ಬೆಲ್ಲದ ಗಾಣವನ್ನು ಸ್ಥಾಪಿಸಿದವರು
ಗ್ರಾಮಕ್ಕೆ ವರ
ಹಿಂದೆ ಕೋಣಗಳ ಸಹಾಯದಿಂದ ಬೆಲ್ಲದ ಗಾಣವನ್ನು ಬಾರಕೂರಿನ ಬೆಣ್ಣೆಕುದ್ರು ಪರಿಸರದಲ್ಲಿ ಸ್ಥಾಪಿಸಲಾಗಿದ್ದು, ಇಂದಿಗೂ ಬೆಣ್ಣೆಕುದ್ರು ಬೆಲ್ಲಕ್ಕೆ ಅತಿಯಾದ ಬೇಡಿಕೆ ಇದೆ. 40 ವರ್ಷದಿಂದ ನೈಸರ್ಗಿಕ ಬೆಲ್ಲ ಉತ್ಪಾದನೆ ಕಾಯಕದಲ್ಲಿ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡಿದ್ದೇನೆ. ಬದಲಾದ ಕಾಲದಲ್ಲಿ ಯಂತ್ರಗಳನ್ನು ಉಪಯೋಗಿಸಿ ಕೆದೂರಿನ ಶಾನಾಡಿ ಗ್ರಾಮದಲ್ಲಿ ಕಬ್ಬು ಅರೆಯಲಾಗುತ್ತಿದ್ದು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ನಿಟ್ಟಿನಿಂದ ಇಲ್ಲಿಗೆ ಬಂದಿದ್ದೇನೆ. ಮರೆಯಾದ ಆಲೆಮನೆಗಳು ಮತ್ತೆ ಮರುಜೀವ ಪಡೆದಿರುವುದು ಮುಂದಿನ ದಿನಗಳಲ್ಲಿ ಈ ಗ್ರಾಮಕ್ಕೆ ವರವಾಗಲಿದೆ. ಸುಮಾರು 12 ಡಬ್ಬ ಕಬ್ಬಿನ ಹಾಲಿನಲ್ಲಿ ಸರಾಸರಿ 50 ಕೆಜಿ ಬೆಲ್ಲ ತಯಾರಿಸಬಹುದು. ಇಂತಹ ಘಟಕಗಳ ಸ್ಥಾಪನೆಗೆ ಯುವ ಸಮುದಾಯಗಳು ಆಸಕ್ತಿ ತಳೆಯಬೇಕು.
-ರಾಜು ಪೂಜಾರಿ ಕುಮ್ರಗೋಡು ಬೆಣ್ಣೆಕುದ್ರು,
ಅನುಭವಿ ನೈಸರ್ಗಿಕ ಬೆಲ್ಲ ತಯಾರಕರು
ಯಂತ್ರ ಜೋಡಣೆ
ಇಂತಹ ಬೆಲ್ಲದ ತಯಾರಿಕಾ ಘಟಕದಲ್ಲಿ ಶೇ.75 ರಷ್ಟು ಯಂತ್ರಜೋಡಣಾ ಕಾರ್ಯವನ್ನೇ ನಮ್ಮ ತಂಡ ಮಾಡುತ್ತದೆ. 30 ವರ್ಷಗಳಿಂದ ಈ ಕಾರ್ಯದಲ್ಲಿ ನಾವು ತೊಡಗಿಕೊಂಡಿದ್ದು ಈಗಾಗಲೇ ಹಲವು ಭಾಗಗಳಲ್ಲಿ ರೈತರು ಇಂತಹ ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ.
-ಶ್ರೀನಿವಾಸ್ ಬ್ರಹ್ಮಾವರ,
ಯಂತ್ರಗಳನ್ನು ಸಿದ್ದಪಡಿಸಿದವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.