ಟೆಂಡರ್‌ ಶ್ಯೂರ್‌ ರಸ್ತೆಯಲ್ಲಿ ಯಮಯಾತನೆ


Team Udayavani, Dec 17, 2019, 10:58 AM IST

huballi-tdy-1

ಧಾರವಾಡ: ಹಳೆಯ ಡಿಎಸ್‌ಪಿ ವೃತ್ತದಿಂದ ಸವದತ್ತಿ ರಸ್ತೆವರೆಗೆ ನಿರ್ಮಾಣ ಆಗುತ್ತಿರುವ 2.4 ಕಿಮೀ ಟೆಂಡರ್‌ ಶ್ಯೂರ್‌ ರಸ್ತೆ ಕಾಮಗಾರಿ ಆಮೆಗತಿ ವೇಗದಿಂದ ಈ ಭಾಗದಲ್ಲಿ ಟ್ರಾಫಿಕ್‌ ಕಿರಿ ಕಿರಿ, ವ್ಯಾಪಾರ ವಹಿವಾಟು ಕುಸಿತದೊಂದಿಗೆ ದಿನ ನಿತ್ಯದ ಜನಜೀವನವೇ ಅಸ್ತವ್ಯಸ್ತ ಆಗುವಂತಾಗಿದೆ.

ವಿಶ್ವಬ್ಯಾಂಕ್‌ನ 18 ಕೋಟಿ ಆರ್ಥಿಕ ಸಹಕಾರದೊಂದಿಗೆ 23 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಈ ರಸ್ತೆ ಕಾಮಗಾರಿ ಆರಂಭಗೊಂಡು 2 ವರ್ಷವಾದರೂ ಸಾಧಿಸಿದ್ದು ಮಾತ್ರ ಇನ್ನೂ ಶೇ.50ರಷ್ಟು. 2018ರ ಡಿಸೆಂಬರ್‌ ಅಂತ್ಯಕ್ಕೆ ಅಂತಿಮ ಗಡುವು ನೀಡಿದ್ದ ವಿಶ್ವಸಂಸ್ಥೆ ಇಲ್ಲವಾದರೆ ಅನುದಾನಕಡಿತಗೊಳಿಸುವುದಾಗಿ ಎಚ್ಚರಿಸಿತ್ತು. ಆದರೆ ಶಾಸಕ ಅರವಿಂದ ಬೆಲ್ಲದ, ಈಗ ಕೇಂದ್ರ ಸಚಿವರಾಗಿರುವ ಸಂಸದ ಪ್ರಹ್ಲಾದ ಜೋಶಿ ಅವರ ಮನವಿ ಮೇರೆಗೆ ಮತ್ತೆ ಮತ್ತೂಂದು ಅವಕಾಶ ನೀಡಿತ್ತು. ಆದರೆ ಈಗ ಆ ಡಿಸೆಂಬರ್‌ ಮುಗಿದು ಮತ್ತೂಂದು ಡಿಸೆಂಬರ್‌ ಮುಗಿಯುತ್ತ ಬಂದರೂ ಕಾಮಗಾರಿ ಮುಗಿಯುವ ಲಕ್ಷಣವೇ ಕಾಣುತ್ತಿಲ್ಲ. ಟೆಂಡರ್‌ ಶ್ಯೂರ್‌ ರಸ್ತೆ ಕಾಮಗಾರಿಯ ಬಗ್ಗೆ ಅಧಿಕಾರಿಗಳೇ ಹೇಳುವ ಪ್ರಕಾರ, ಒಳ ಚರಂಡಿ, ಪೈಪ್‌ಲೈನ್‌ ಸೇರಿದಂತೆ ನೆಲ ಹಂತದ ಕಾಮಗಾರಿಗಳಿಂದ ವಿಳಂಬವಾಗಿದೆ. ಈವರೆಗೆ ಶೇ.50 ಕಾಮಗಾರಿ ಮುಗಿದಿದ್ದು, 2020 ಮಾರ್ಚ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬುದು ಅವರ ಅನಿಸಿಕೆ. ಆದರೆ ರಸ್ತೆ ಕಾಮಗಾರಿಯ ವೇಗ ನೋಡಿದರೆ 2020 ಮುಗಿದರೂ ಕಾಮಗಾರಿ ಮುಗಿಯಲ್ಲ ಎಂಬುದು ಸಾರ್ವಜನಿಕರ ಅಳಲು.

ಮುರುಘಾ ಮಠದ ರಸ್ತೆ ಬಂದ್‌: ಈ ಹಿಂದೆ ಹಳೆಯ ಡಿಎಸ್‌ಪಿ ವೃತ್ತದಿಂದ ಶಿವಾಜಿ ವೃತ್ತದವರೆಗಿನ ರಸ್ತೆ ಕಾಮಗಾರಿಗಾಗಿ ಇಲ್ಲಿ ಸಂಚಾರ ಬಂದ್‌ ಮಾಡಲಾಗಿತ್ತು. ಈಗ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ಈಗ ಡಿಪೋ ಸರ್ಕಲ್‌ನಿಂದ ಮುರುಘಾ ಮಠದ ಮುಂದೆ ನೀರಿನ ಟ್ಯಾಂಕ್‌ವರೆಗೆ ಅಂದರೆ ಹೊಸ ಎಪಿಎಂಸಿ ಪ್ರವೇಶ ದ್ವಾರದವರೆಗಿನ ಅರ್ಧ ಕಿಮೀ ರಸ್ತೆ ಕಾಮಗಾರಿಯನ್ನು ನವೆಂಬರ್‌ನಲ್ಲಿ ಕೈಗೆತ್ತಿಕೊಂಡಿದ್ದು, ಹೀಗಾಗಿ ಈ ರಸ್ತೆಯಲ್ಲಿ ಸಂಚಾರ ಬಂದ್‌ ಮಾಡಲಾಗಿದೆ. ಇಡೀ ರಸ್ತೆಯನ್ನು ಸಂಪೂರ್ಣ ಜೆಸಿಬಿ ಮೂಲಕ ಅಗೆದಿದ್ದು, ರಸ್ತೆ ಅಗಲೀಕರಣದ ಜೊತೆಗೆ ಒಳಚರಂಡಿ ಹಾಗೂ ನೀರಿನ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಸಾಗಿದೆ.

ಟ್ರಾಫಿಕ್‌ ಕಿರಿ ಕಿರಿ: ಮುರುಘಾ ಮಠದ ರಸ್ತೆಯಲ್ಲಿ ಸಂಚಾರ ಬಂದ್‌ ಮಾಡಿರುವ ಕಾರಣ ಸವದತ್ತಿ ರಸ್ತೆ ಮಾರ್ಗವಾಗಿ ಹೋಗುವ ಹಾಗೂ ಅಮ್ಮಿನಬಾವಿ ಸೇರಿದಂತೆ ವಿವಿಧ ಗ್ರಾಮಕ್ಕೆ ತೆರಳುವ ಸಾರಿಗೆ ಬಸ್‌ಗಳು ಕಮಲಾಪುರದ ಮೂಲಕ ಹೊಸ ಎಪಿಎಂಸಿ ರಸ್ತೆಯ ಮೂಲಕವೇ ಸಾಗುತ್ತಿವೆ. ಹೀಗಾಗಿ ಬಸ್‌ಗಳ ಸಂಚಾರ ಹೆಚ್ಚಳದ ಜೊತೆಗೆ ಧೂಳುಮಯದ ಈ ರಸ್ತೆ ಕಿರಿದಾಗಿರುವ ಕಾರಣ ದಿನನಿತ್ಯ ಟ್ರಾಫಿಕ್‌ ಸಮಸ್ಯೆ ಉಲ್ಬಣಗೊಳ್ಳುತ್ತಲೇ ಸಾಗಿದೆ. ಹೊಸ ಎಪಿಎಂಸಿ ಆವರಣದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯುವ ಹೋಲ್‌ಸೇಲ್‌ ತರಕಾರಿ ವ್ಯಾಪಾರದ ಜಾಗದಲ್ಲಿ ತಲೆಯೆತ್ತಿರುವ ಡಬ್ಟಾ ಅಂಗಡಿಗಳು ಹಾಗೂ ಬೇಕಾಬಿಟ್ಟಿ ಆಗಿ ನಿಲ್ಲಿಸುವ ಟಂಟಂ, ಆಟೋ ಸೇರಿದಂತೆ ಇನ್ನಿತರ ವಾಹನಗಳಿಂದಲೂ ಟ್ರಾಫಿಕ್‌ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.  ಇದಲ್ಲದೇ ಮುರುಘಾ ಮಠದ ಹಿಂಬದಿಯ ರಸ್ತೆಯಲ್ಲೂ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತಲಿದೆ. ಇದರೊಂದಿಗೆ ಖಾಸಗಿ ಶಾಲೆ-ಕಾಲೇಜುಗಳ ಬಸ್ಸುಗಳ ಸಂಚಾರ ಮಾರ್ಗ ಹಾಗೂ ನಿಲ್ಲುವ ಸ್ಥಳಗಳು ಬದಲಾಗಿರುವ ಕಾರಣ ಈ ಭಾಗದ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ವ್ಯಾಪಾರಕ್ಕೂ ಹೊಡೆತ: ರಸ್ತೆ ಎರಡೂ ಬದಿಯಲ್ಲಿ ವ್ಯಾಪಾರವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ನೂರಾರು ಕುಟುಂಬಗಳಿಗೂ ವ್ಯಾಪಾರದಲ್ಲಿ ಆಗಿರುವ ಕುಸಿತದಿಂದ ಆತಂಕ ಮನೆ ಮಾಡಿದೆ. ಈ ರಸ್ತೆ ಬದಿಯ ವ್ಯಾಪಾರ ವಹಿವಾಟುಗಳಲ್ಲಿ ಶೇ.50 ಕುಸಿತವಾಗಿದೆ. ದಿನಕ್ಕೆ 15 ಸಾವಿರ ರೂ. ವ್ಯಾಪಾರ ಆಗುತ್ತಿದ್ದ ಹೋಟೆಲ್‌, ಬೇಕರಿಗಳಲ್ಲಿ ದಿನಕ್ಕೆ 2 ಸಾವಿರ ವ್ಯಾಪಾರ ಆಗುವುದೇ ದೊಡ್ಡದಾಗಿದೆ. ಕಳೆದ 2 ವರ್ಷಗಳಿಂದ ನಷ್ಟ ಅನುಭವಿಸುತ್ತಿರುವ ಕೆಲವರು ಅಂಗಡಿ ಬಂದ್‌ ಮಾಡಿದ್ದರೆ ಕೆಲವರು ಸ್ಥಳಾಂತರವೇ ಮಾಡಿದ್ದಾರೆ. ಉಳಿದವರು ಅನಿವಾರ್ಯವಾಗಿ ಇದ್ದಲ್ಲಿಯೇ ಮುಂದುವರಿದಿದ್ದು, ಆದಷ್ಟು ಬೇಗ ಈ ಕಾಮಗಾರಿ ಮುಗಿಯಲಿ ಎಂಬ ಪ್ರಾರ್ಥನೆಯಲ್ಲಿಯೇ ವ್ಯಾಪಾರ ಮುಂದುವರಿಸಿದ್ದಾರೆ.

 

-ಶಶಿಧರ್‌ ಬುದ್ನಿ

ಟಾಪ್ ನ್ಯೂಸ್

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

4

BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

Yathanaa

Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ಷೇಪ

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

4

BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.