19 ವರ್ಷದ ಹಿಂದೆ ಸಿಕ್ಕಿದ್ದ ಅಭಿಮಾನಿಯನ್ನು ನೆನೆದ ಸಚಿನ್‌ ತೆಂಡುಲ್ಕರ್‌

ಮೊಳಕೈ ಗಾರ್ಡ್‌ ವಿನ್ಯಾಸ ಬದಲಾಯಿಸಲು ಸೂಚಿಸಿದ್ದ ಗುರುಪ್ರಸಾದ್‌ ಭೇಟಿಗೆ ಕ್ರಿಕೆಟ್‌ ದೇವರ ಕಾತುರ

Team Udayavani, Dec 17, 2019, 12:33 PM IST

guruprasad

ಸಚಿನ್‌ ತೆಂಡುಲ್ಕರ್‌ರನ್ನು ಕ್ರಿಕೆಟ್‌ ದೇವರು ಎಂದು ಕರೆಯಲಾಗುತ್ತದೆ. ಇಂದು ಕೊಹ್ಲಿ, ರೋಹಿತ್‌, ಸ್ಟೀವ್‌ ಸ್ಮಿತ್‌ರಂತಹ ಆಟಗಾರರೆಲ್ಲರೂ ಸೇರಿ ಮುರಿಯುತ್ತಿರುವ ದಾಖಲೆಗಳು ಈ ಒಬ್ಬನೇ ಕ್ರಿಕೆಟಿಗನಿಗೆ ಸೇರಿದ್ದು ಎನ್ನುವುದು ಅವರ ಸಾಧನೆಯ ಮೌಲ್ಯವನ್ನು ಹೇಳುತ್ತದೆ. ಅಂತಹ ತೆಂಡುಲ್ಕರ್‌ 19 ವರ್ಷದ ಹಿಂದೆ ಕೆಲವು ನಿಮಿಷಗಳ ಮಟ್ಟಿಗೆ ಭೇಟಿಯಾಗಿದ್ದ, ಗುರುಪ್ರಸಾದ್‌ ಎಂಬ ಅಭಿಮಾನಿಯನ್ನು ತಾವಾಗಿಯೇ ನೆನಪಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ ಅವರನ್ನು ಭೇಟಿಯಾಗುವ ಹಂಬಲ ವ್ಯಕ್ತಪಡಿಸಿದ್ದಾರೆ. ಅದಾದ ನಂತರ ಅದುವರೆಗೆ ಅನಾಮಿಕರಾಗಿದ್ದ ಆ ಅಭಿಮಾನಿ, ರಾತ್ರೋರಾತ್ರಿ ಜನಪ್ರಿಯರಾಗಿದ್ದಾರೆ. ಅವರ ಮನೆಮುಂದೆ ಟೀವಿವಾಹಿನಿಗಳು ಸಾಲುಗಟ್ಟಿವೆ. ಈ ವೇಳೆ ರೋಚಕ ಕಥೆಯೊಂದು ತೆರೆದುಕೊಂಡಿದೆ.

ಮೊನ್ನೆ 14ನೇ ತಾರೀಕು ಸಚಿನ್‌ ತೆಂಡುಲ್ಕರ್‌ ಮಾಡಿರುವ ಟ್ವೀಟ್‌ ಹೀಗಿದೆ: “ಅದೊಂದು ಭೇಟಿ ಬಹಳ ಸ್ಮರಣೀಯ. ಟೆಸ್ಟ್‌ ಸರಣಿಯೊಂದರ ವೇಳೆ ಚೆನ್ನೈನ ತಾಜ್‌ ಕೊರೊಮಂಡೆಲ್‌ ಹೋಟೆಲ್‌ ಸಿಬ್ಬಂದಿ ಜೊತೆಗೆ ಚರ್ಚೆ ನಡೆಸಿದ್ದೆ. ನನ್ನ ಮೊಳಕೈ ಗಾರ್ಡ್‌ ಬಗ್ಗೆ ಆಗ ನಡೆಸಿದ ಚರ್ಚೆ ಪರಿಣಾಮ, ನಾನು ಗಾರ್ಡ್‌ ವಿನ್ಯಾಸವನ್ನೇ ಬದಲಿಸಿದ್ದೆ.  ಆ ವ್ಯಕ್ತಿ ಎಲ್ಲಿದ್ದಾನೆಂಬ ಕುತೂಹಲ ನನ್ನದು. ಅವರನ್ನು ಭೇಟಿಯಾಗುವ ಉತ್ಸಾಹದಲ್ಲಿದ್ದೇನೆ. ನೆಟಿಜನ್‌ಗಳೇ ಅವರನ್ನು ಹುಡುಕಲು ಸಹಾಯ ಮಾಡುತ್ತೀರಾ?’ ಈ ಮೇಲಿನ ಟ್ವೀಟನ್ನು ನೋಡಿ ಸಾವಿರಾರು ಮಂದಿ ಕುತೂಹಲಪಟ್ಟಿದ್ದಾರೆ. ಅಂತಹ ವ್ಯಕ್ತಿ ಯಾರೆಂದು ಹುಡುಕಲು ಆರಂಭಿಸಿದ್ದಾರೆ. ಆಗ ಗುರುಪ್ರಸಾದ್‌ ಅವರ ಸೋದರಳಿಯ ಎನ್‌.ಶ್ಯಾಮಸುಂದರ್‌ ಎನ್ನುವವರು ಒಂದು ಟ್ವೀಟ್‌ ಮಾಡಿ, ಸಚಿನ್‌ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಅದುಹೀಗಿದೆ: “ನೀವು ಹುಡುಕುತ್ತಿರುವ ಆ ವ್ಯಕ್ತಿ ನನ್ನ ಅಂಕಲ್‌. ಆ ವ್ಯಕ್ತಿಯನ್ನು ನೀವು 2ನೇ ಮಹಡಿಯಲ್ಲಿ ಭೇಟಿ ಮಾಡಿದ್ದಿರಿ. ಆಗ ನೀವು ನೆಲಮಹಡಿಗೆ ಹೊರಟಿದ್ದಿರಿ. ಅವರೇ ನಿಮ್ಮ ಮೊಳಕೈ ಗಾರ್ಡ್‌ ಬದಲಿಸಲು ಸಲಹೆ ನೀಡಿದ್ದು. ನೀವು ಅವರಿಗೆ ಹಸ್ತಾಕ್ಷರ ನೀಡಿದ ಹಾಳೆಯನ್ನೂ ಇಲ್ಲಿ ಲಗತ್ತಿಸಿದ್ದೇನೆ’.

ಆ ರೋಚಕ ಕಥೆ: ಈ ವಿಚಾರ ಬಹಿರಂಗವಾಗುತ್ತಲೇ ಚೆನ್ನೈನ ಗುರುಪ್ರಸಾದ್‌ ನಿವಾಸಕ್ಕೆ ಟೀವಿಗಳುದಾಂಗುಡಿಯಿಟ್ಟು ಸರಣಿ ಸಂದರ್ಶನ ನಡೆಸಿವೆ. ಸದ್ಯ ಗುರುಪ್ರಸಾದ್‌ ಅವರು ಬಿಡುವಿಲ್ಲದಷ್ಟು ಕಾರ್ಯ ಮಗ್ನರಾಗಿದ್ದಾರೆ. 19 ವರ್ಷದ ಹಿಂದೆ ತೆಂಡುಲ್ಕರ್‌ರನ್ನು ಭೇಟಿ ಮಾಡಿದ್ದಾಗ ಗುರುಪ್ರಸಾದ್‌ಗೆ 27 ವರ್ಷ. ಈಗ 46 ವರ್ಷ. ಅದಾದ ನಂತರ ಹಲವು ದುರ್ಘ‌ಟನೆಗಳು ಅವರ ಜೀವನದಲ್ಲಿ ನಡೆದಿವೆ. 2003ರಲ್ಲಿ ಅವರು ತಮ್ಮ ತಂದೆತಾಯಿಯನ್ನು ಕಳೆದು ಕೊಂಡಿದ್ದಾರೆ. ಪ್ರಸ್ತುತ ಶೇರು ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ

2001ರಲ್ಲಿ ಸಚಿನ್‌ ತೆಂಡುಲ್ಕರ್‌ ತಾಜ್‌ ಕೊರೊಮಂಡೆಲ್‌ ಹೋಟೆಲ್‌ನಲ್ಲಿ ಉಳಿದು ಕೊಂಡಿದ್ದರು. ಆಗ ಗುರು 2ನೇ ಮಹಡಿಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದರು. ತೆಂಡುಲ್ಕರ್‌ ಕೊಠಡಿಯಿಂದ ಹೊರಬಂದ ಕೂಡಲೇ ಓಡಿ ಹೋಗಿ, ಹಸ್ತಾಕ್ಷರಕ್ಕೆ ಮನವಿ ಮಾಡಿದರು. ನಿಮ್ಮೊಂದಿಗೆ ತುಸು ಮಾತನಾಡಬಹುದೇ ಎಂದರು. ತೆಂಡುಲ್ಕರ್‌ ಆಯಿತು ಎಂದಾಗ ಮುಂದುವರಿದ ಗುರು, ನಿಮ್ಮ ಮೊಳಕೈ ಗಾರ್ಡ್‌ ವಿನ್ಯಾಸ ಬದಲಿಸಿ. ಅದೇ ನಿಮ್ಮ ಬ್ಯಾಟ್‌ ಚಲನೆಗೆ ಅಡ್ಡಿಯಾಗುತ್ತಿದೆ ಎಂಬ ಸಲಹೆ ನೀಡಿದರು.

ಅದು ಹೇಗೆ ಅಷ್ಟು ನಿಖರವಾಗಿ ಹೇಳುತ್ತೀರಿ ಎಂದು ಸಚಿನ್‌ ಮರುಪ್ರಶ್ನಿಸಿದರು. ನಾನು ನಿಮ್ಮ ಅಪ್ಪಟ ಅಭಿಮಾನಿ. ನಿಮ್ಮ ಪ್ರತಿಯೊಂದು ಚಲನೆಯನ್ನೂ ವೀಕ್ಷಿಸಿದ್ದೇನೆ. ಅದನ್ನು ನೋಡಿಯೇ ಹೇಳುತ್ತಿದ್ದೇನೆ ಎಂದರು. ಮುಂದೆ ಕೆಲವೇ ದಿನಗಳಲ್ಲಿ ತಮ್ಮ ಮೊಳಕೈ ಗಾರ್ಡ್‌ ವಿನ್ಯಾಸ ಬದಲಿಸಿಕೊಂಡಿದ್ದರು. ಈಗ ತೆಂಡುಲ್ಕರ್‌ ತನ್ನನ್ನು ಭೇಟಿ ಮಾಡಿದರೆ, ತನ್ನ ಜೀವನದಲ್ಲಿ ಅದಕ್ಕಿಂತ ಮಹತ್ವದ ಕ್ಷಣ ಇನ್ನೊಂದು ಇರಲಿಕ್ಕಿಲ್ಲ ಎಂದು ಗುರುಪ್ರಸಾದ್‌ ಹೇಳಿಕೊಂಡಿದ್ದಾರೆ.

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.