ಹ್ಯಾಟ್ರಿಕ್ ಗುರಿ!
ಮುಂದುವರೆದ ಗೆಳೆಯರ ಕಾಂಬಿನೇಷನ್
Team Udayavani, Dec 18, 2019, 7:01 AM IST
ಸಾಮಾನ್ಯವಾಗಿ ಒಂದು ಸಿನಿಮಾ ನಂತರ ಮತ್ತೆ ಅದೇ ಕಾಂಬಿನೇಷನ್‌ನಲ್ಲಿ ಸಿನಿಮಾ ಆಗುವುದು ಹೊಸದೇನಲ್ಲ. ಎಂಬತ್ತರ ದಶಕದಲ್ಲಿ ಸಾಲು ಸಾಲು ಕಾಂಬಿನೇಷನ್ ಸಿನಿಮಾಗಳು ಬಂದಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ, ಈಗಂತೂ ಅದು ದೂರದ ಮಾತು. ಒಂದು ಸಿನಿಮಾ ಬಳಿಕ ನಿರ್ದೇಶಕ, ಹೀರೋ ಮತ್ತೆ ಸೇರಿ ಸಿನಿಮಾ ಮಾಡುವುದು ಕಷ್ಟ. ಆದರೆ ಈಗ ನಿರ್ದೇಶಕ ಹಾಗು ಹೀರೋ ಜೊತೆಗೂಡಿ ಮೂರು ಸಿನಿಮಾ ಮಾಡಿದ್ದಾರೆ ಎಂಬುದು ಸದ್ಯದ ಮಟ್ಟಿಗೆ ವಿಶೇಷವೇ ಸರಿ.
ಹೌದು, ನಿರ್ದೇಶಕ ಕಮ್ ಸಂಕಲನಕಾರ ನಾಗೇಂದ್ರ ಅರಸ್ ಮತ್ತು ನಾಯಕ ಜೆಕೆ (ಜಯಕಾರ್ತಿಕ್) ಕಾಂಬಿನೇಷನ್‌ನಲ್ಲಿ ಮೂರು ಸಿನಿಮಾಗಳು ಆಗಿವೆ ಎನ್ನುವುದು ವಿಶೇಷ. ಈ ಇಬ್ಬರು ಗೆಳೆಯರು ಮೊದಲು ಶುರುಮಾಡಿದ್ದು, “ಫಸ್ಟ್ ಲವ್’ ಅದಾದ ಬಳಿಕ ಮತ್ತೊಂದು ಕಾಂಬಿನೇಷನ್‌ನಲ್ಲಿ “ಮೇ 1′ ಸಿನಿಮಾ ಮಾಡಿದರು. ಅದಾದ ಬಳಿಕ ಈ ಜೋಡಿ ಸುಮ್ಮನೆ ಕೂರಲಿಲ್ಲ. ಪುನಃ ಜೊತೆಗೂಡಿ “ನನ್ನ ಗುರಿ ವಾರೆಂಟ್’ ಎಂಬ ಸಿನಿಮಾ ಮಾಡಿದೆ. ಈಗ ಆ ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ನಾಗೇಂದ್ರ ಅರಸ್ ಸಂಕಲನಕಾರರಾಗಿ ಈಗಾಗಲೇ ಶತಕ ಬಾರಿಸಿದ್ದಾರೆ. ಸಂಕಲನದ ಜೊತೆ ಜೊತೆಯಲ್ಲೇ ಅವರು ನಿರ್ದೇಶನದತ್ತವೂ ತಮ್ಮ ಚಿತ್ತ ಹರಿಸಿದ್ದು, ಜೆಕೆ ಜೊತೆ ಯಶಸ್ವಿ ಪಯಣ ಮಾಡುತ್ತಿದ್ದಾರೆ. “ಫಸ್ಟ್ ಲವ್’ ಸಿನಿಮಾ ಮೂಲಕ ಪ್ರೀತಿ ಕಥೆ ಹೇಳಿದ್ದ ಅವರು, “ಮೇ 1′ ಚಿತ್ರದಲ್ಲಿ ಹಾರರ್ ವಿಷಯ ಇಟ್ಟುಕೊಂಡು ಬೆಚ್ಚಿಬೀಳುವ ಪ್ರಯತ್ನ ಮಾಡಿದ್ದರು. ಈಗ “ನನ್ನ ಗುರಿ ವಾರೆಂಟ್’ ಮೂಲಕ ಮತ್ತೂಮ್ಮೆ ಸಸ್ಪೆನ್ಸ್ ವಿಷಯ ಇಟ್ಟಿದ್ದಾರೆ.
ಸದ್ಯಕ್ಕೆ ಜೆಕೆ ಹಾಗು ನಾಗೇಂದ್ರ ಅರಸ್ “ನನ್ನ ಗುರಿ ವಾರೆಂಟ್’ ಚಿತ್ರ ಮಾಡಿದ್ದಾರೆ. ಮುಂದೆ ಕೂಡ ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿಬರಲಿವೆ ಎಂಬುದು ಅವರ ಮಾತು. ಅಂದಹಾಗೆ, ಈ ಚಿತ್ರಕ್ಕೆ ಸೆನ್ಸಾರ್ ಆಗಿದ್ದು ಯಾವುದೇ ಕಟ್ಸ್ ಇಲ್ಲದೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರವಾಗಿದ್ದು, ಸಿನಿಮಾದಲ್ಲಿ ಜೆಕೆ ಮತ್ತು ತಾಂಡವ್ ನಟಿಾªರೆ. ಇವರೊಂದಿಗೆ ಮನೀಶ ವೈಗನ್‌ಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಿರ್ಮಾಣದ ಜವಾಬ್ದಾರಿಯನ್ನೂ ಇವರೇ ವಹಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.