24ರಿಂದ 10 ದಿನಗಳ ಮೈಸೂರು ಮಾಗಿ ಉತ್ಸವ
Team Udayavani, Dec 18, 2019, 3:00 AM IST
ಮೈಸೂರು: ದಸರಾ ನಂತರ ವರ್ಷಾಂತ್ಯ-2020ರ ಹೊಸ ವರ್ಷಾರಂಭದಲ್ಲಿ ವಿಶಿಷ್ಟವಾಗಿ ಪ್ರವಾಸಿಗರನ್ನು ಆಕರ್ಷಿಸಲು ಮೈಸೂರು ಜಿಲ್ಲಾಡಳಿತ, ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಡಿ.24 ರಿಂದ ಹತ್ತು ದಿನಗಳ ಕಾಲ ಮೈಸೂರು ಮಾಗಿ ಉತ್ಸವ ಆಯೋಜಿಸಿದೆ. ಮಾಗಿ ಉತ್ಸವ ಅಂಗವಾಗಿ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಮೈಸೂರು ಉಪ ವಿಭಾಗಾಧಿಕಾರಿ ವೆಂಕಟರಾಜು, ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫಲಪುಷ್ಪ ಪ್ರದರ್ಶನಕ್ಕೆ ಈ ವರ್ಷ ಮೆರಿಗೋಲ್ಡ್, ಸಾಲ್ವಿಯ, ಡೇಲಿಯ, ಕಾಕ್ಸೂಂಬ್, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಲೋಷಿಯ, ನಸ್ಟರ್‌ಸಿಯಂ, ಆಂಟಿರೈನಂ, ಬೋನ್ಸಾಯ್ ಗಿಡಗಳು ಸೇರಿದಂತೆ 32 ಬಗೆಯ ಹೂವಿನ ಗಿಡಗಳು ಸೇರಿದಂತೆ ಸುಮಾರು 20 ಸಾವಿರ ವಿಭಿನ್ನ ರೀತಿಯ ಅಲಂಕಾರಿಕ ಹೂವಿನ ಕುಂಡಗಳು, ಗುಲಾಬಿ, ಕ್ರೈಸಾಂಥಿಯಮ್, ಪಿಂಗ್‌ಪಾಂಗ್, ಕಾರ್ನೆಷನ್, ಆಸ್ಟ್ರಮೇರಿಯ, ಜರ್ಬೆರಾ, ಆಂಥೋರಿಯಮ್, ಆರ್ಕಿಡ್ಸ್, ಬ್ಲೂ ಡೈಸಿ, ಡ್ರೆಸಿನಾ ಮತ್ತಿತರೆ ಅಂದಾಜು 4 ಲಕ್ಷ ಅಲಂಕಾರಿಕ ಹೂವುಗಳು ಹಾಗೂ ಊಟಿ ಕಟ್ ಹೂವುಗಳಿಂದ ಅಲಂಕರಿಸಲಾಗುತ್ತದೆ.
ಸಾಂಸ್ಕೃತಿಕ ಕಾರ್ಯಕ್ರಮ: ಫಲಪುಷ್ಪ ಪ್ರದರ್ಶನದ ನಿಮಿತ್ತ ಡಿ.28ರಿಂದ 30ರವರೆಗೆ ಅರಮನೆ ಆವರಣದಲ್ಲಿ ಸಂಜೆ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಡಿ.31ರಂದು ರಾತ್ರಿ 11 ರಿಂದ 12ಗಂಟೆವರೆಗೆ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ, ಹೊಸ ವರ್ಷಾಚರಣೆ ಪ್ರಯುಕ್ತ ಅರಮನೆ ಮಂಡಳಿವತಿಯಿಂದ 31ರ ರಾತ್ರಿ 12 ರಿಂದ 12.15ರವರೆಗೆ ಬಣ್ಣಗಳ ಚಿತ್ತಾರದಿಂದ ಕೂಡಿದ ಶಬ್ದ ರಹಿತ ಪಟಾಕಿಗಳನ್ನು ಸಿಡಿಸಲಾಗುವುದು.
ಪಕ್ಷಿ ಹಬ್ಬ: ಮಾಗಿ ಉತ್ಸವದ ಅಂಗವಾಗಿ 28 ಮತ್ತು 29ರಂದು ಪಕ್ಷಿ ಹಬ್ಬವನ್ನು ಏರ್ಪಡಿಸಲಾಗಿದ್ದು, 28ರ ಮಧ್ಯಾಹ್ನ ಮತ್ತು 29ರಂದು ಬೆಳಗ್ಗೆ ಪಕ್ಷಿ ವೀಕ್ಷಣೆಗಾಗಿ ಕಾಮನಹುಂಡಿ ಕೆರೆ, ರಾಯನಕೆರೆ, ವರಕೋಡು ಅರಣ್ಯ ಮತ್ತು ಗಿರಿಬೆಟ್ಟದ ಕೆರೆ, ಹೆಬ್ಟಾಳ ಕೆರೆ, ತಿಪ್ಪಯ್ಯನ ಕೆರೆಗಳಿಗೆ ಕರೆದೊಯ್ಯಲಾಗುವುದು. ನೋಂದಾಯಿಸಿಕೊಂಡು 100 ಸದಸ್ಯರಿಗೆ ಪಕ್ಷಿ ವೀಕ್ಷಣೆಗೆ ಅವಕಾಶ ಕಲ್ಪಿಸುತ್ತಿದ್ದು, ಆಸಕ್ತರು 300 ರೂ. ಶುಲ್ಕ ಪಾವತಿಸಿ. ಆನ್‌ಲೈನ್ www.mysorezoo.info/birdfestival ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ಕೇಕ್ ಉತ್ಸವ: 27,28 ಮತ್ತು 29ರಂದು ರಾಜೇಂದ್ರ ಕಲಾಮಂದಿರದಲ್ಲಿ ಆಹಾರ, ನಾಗರಿಕ ಸರಬರಾಜು ಇಲಾಖೆವತಿಯಿಂದ ಕೇಕ್ ಉತ್ಸವ ಆಯೋಜಿಸಲಾಗುತ್ತಿದೆ.
ಪ್ಯಾರಾ ಮೋಟಾರಿಂಗ್: ಮಹಾರಾಜ ಕ್ರಿಕೆಟ್ ಮೈದಾನದಲ್ಲಿ ಬೆಂಗಳೂರು ಏವಿಯೇಷನ್ ಮತ್ತು ಸ್ಫೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಸಾಹಸ ಪ್ರಿಯರಿಗಾಗಿ ಪ್ಯಾರಾ ಮೋಟಾರಿಂಗ್ ನಡೆಸಲಿದ್ದು, ಪ್ರತಿ ರೈಡ್ ಹತ್ತು ನಿಮಿಷವಿದ್ದು, 2 ಸಾವಿರ ರೂ. ಶುಲ್ಕ ನಿಗದಿಪಡಿಸಿದೆ. ಆಸಕ್ತರು ಮೊ.9341253607 ಸಂಪರ್ಕಿಸಬಹುದು ಎಂದು ತಿಳಿಸಿದರು. ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜನಾರ್ದನ್, ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಆರ್. ಸುದ್ದಿಗೋಷ್ಠಿಯಲ್ಲಿದ್ದರು.
ಉಚಿತವಾಗಿ ಔಷಧ ಸಸಿಗಳ ವಿತರಣೆ: ರಾಷ್ಟ್ರಪಕ್ಷಿ ನವಿಲು ಮಾದರಿ ಚಿತ್ರ, ಮನೆಯ ಅಂಗಳದ ರೀತಿಯ ಫೋಟೋ ಝೋನ್ ನಿರ್ಮಾಣ, ಶಿವಲಿಂಗ ಮಾದರಿ ಚಿತ್ರವನ್ನು ನಿಂಬೆಹಣ್ಣು ಮತ್ತು ಬಿಲ್ವಪತ್ರೆಗಳಿಂದ ಅಲಂಕರಿಸಲಾಗುವುದು. ಚಾರಿಯೇಟ್ ಗಾಡಿ ಮಾದರಿ, ಒಂದು ಕುದುರೆ ಚಿತ್ರವನ್ನು ನಿರ್ಮಿಸಿ ಹೂವುಗಳಿಂದ ಅಲಂಕರಿಸಲಾಗುವುದು. ಮಕ್ಕಳ ಉದ್ಯಾನದಲ್ಲಿ ಅಕರ್ಷಣೆಗಾಗಿ ಮರಳುಗಾಡಿನಲ್ಲಿ ವಾಸಿಸುವ ಪ್ರಾಣಿಗಳು ಮತ್ತು ಪಕ್ಷಿಗಳ ಚಿತ್ರಗಳನ್ನು ನಿರ್ಮಿಸಿ ಹೂವು-ತರಕಾರಿಗಳಿಂದ ಅಲಂಕರಿಸಲಾಗುವುದು. ಪುಷ್ಪ ಪ್ರದರ್ಶನದಲ್ಲಿ ವರ್ಟಿಕಲ್ ಗಾರ್ಡನ್ ಅಲಂಕರಿಸಲು ಹತ್ತು ಸಾವಿರ ಪಿಟೋನಿಯ ಹೂವಿನ ಗಿಡಗಳನ್ನು ಬಳಸಲಾಗುವುದು. ಪುಷ್ಪ ಪ್ರದರ್ಶನ ವೀಕ್ಷಿಸಲು ಬರುವ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಔಷಧಿಯುಕ್ತ ಗಿಡಗಳಾದ ಅಲೋವೆರ, ತುಳಸಿ, ವಿಳೈದೆಲೆ ಗಿಡಗಳನ್ನು ವಿತರಿಸಲಾಗುವುದು.
ಫಲಪುಷ್ಪ ಪ್ರದರ್ಶನದಲ್ಲಿ ಏನೇನು ಇರುತ್ತೆ?: ಬೆಂಗಳೂರು ಅರಮನೆ ಮಾದರಿಯ ವಿನ್ಯಾಸವನ್ನು ವಿವಿಧ ಅಲಂಕಾರಿಕ ಹೂವುಗಳಿಂದ ಅಲಂಕರಿಸಲಾಗುತ್ತದೆ. ಮೈಸೂರಿನ ಹಳೆಯ ಮರದ ಅರಮನೆಯ ಹಾಗೂ ಆನೆಗಾಡಿ ವಿನ್ಯಾಸವನ್ನು ವಿವಿಧ ಅಲಂಕಾರಿಕ ಹೂವುಗಳಿಂದ ಅಲಂಕರಿಸಲಾಗುತ್ತದೆ. ಫಲಪುಷ್ಪ ಪ್ರದರ್ಶನದ ಪ್ರವೇಶ ದ್ವಾರದಲ್ಲಿ ನಮಸ್ಕರಿಸುತ್ತಿರುವ ಎರಡು ಆನೆಗಳ ಮಾದರಿ ಚಿತ್ರಗಳನ್ನು ಹೂವುಗಳಿಂದ ಅಲಂಕರಿಸಲಾಗುವುದು. ಭಾರತದ ರಕ್ಷಣಾ ದಳಗಳಾದ ಭೂ ಸೇನೆ, ವಾಯು ಸೇನೆ, ನೌಕದಳಗಳಿಗೆ ಗೌರವ ಸಲ್ಲಿಸುವ ಮಾದರಿಯನ್ನು ಪಿಂಗ್‌ಪಾಂಗ್ ಹೂವುಗಳಿಂದ ಅಲಂಕರಿಸಲಾಗುತ್ತದೆ.
ಇಸ್ರೋ ಉಪಗ್ರಹ ಉಡಾವಣೆಯ ಮಾದರಿ ಚಿತ್ರ ನಿರ್ಮಿಸಿ ಹೂವುಗಳಿಂದ ಅಲಂಕರಿಸಲಾಗುವುದು. ಕಾಳಿಂಗ ಸರ್ಪ ಮರ್ದನದ ಮಾದರಿ, ಸ್ವಾಮಿ ವಿವೇಕಾನಂದರ ಧ್ಯಾನದ ಭಂಗಿಯ ಚಿತ್ರವನ್ನು ಹೂವು ಮತ್ತು ತರಕಾರಿಗಳಿಂದ ಅಲಂಕರಿಸಲಾಗುವುದು. ಜಯಚಾಮರಾಜ ಒಡೆಯರ್ ಅವರು ಸಿಂಹಾಸನದಲ್ಲಿ ಕುಳಿತಿರುವ ಮಾದರಿ ಚಿತ್ರ, ಡಾ.ಶಿವಕುಮಾರ ಸ್ವಾಮೀಜಿ ಅವರ ಜೊತೆಯಲ್ಲಿ ಜಯಚಾಮರಾಜ ಒಡೆಯರ್ ಅವರು ಇರುವ ಮಾದರಿ ಚಿತ್ರಗಳನ್ನು ನಿರ್ಮಿಸಿ ಹೂವುಗಳಿಂದ ಅಲಂಕರಿಸಲಾಗುವುದು. ಅರಮನೆ ದರ್ಬಾರ್ ಸಭಾಂಗಣದ ಒಂದು ಭಾಗದ ಮಾದರಿ ಚಿತ್ರವನ್ನು ನಿರ್ಮಿಸಿ ಹೂವುಗಳಿಂದ ಅಲಂಕರಿಸಿ ಸೆಲ್ಫಿಝೋನ್ ನಿರ್ಮಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.