“ಪಂಚ’ ಸೂತ್ರಗಳ ಯಶಸ್ವಿ ಗೇರು ಕೃಷಿಕ ಕಡಮಜಲು ಸುಭಾಸ್ ರೈ
ಕಳೆದ ವರ್ಷದಲ್ಲಿ 5 ಲಕ್ಷ ರೂ. ಮೌಲ್ಯದ ಗೇರು ಫಸಲು
Team Udayavani, Dec 18, 2019, 5:37 AM IST
ಹೆಸರು: ಕಡಮಜಲು ಸುಭಾಸ್ ರೈ
ಏನೇನು ಕೃಷಿ: ಗೇರು, ರಬ್ಬರ್, ಅಡಿಕೆ, ಇತ್ಯಾದಿ
ಎಷ್ಟು ವಯಸ್ಸು: 70
ಕೃಷಿ ಪ್ರದೇಶ: 50 ಎಕ್ರೆ
ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ “ಉದಯವಾಣಿ’ಯು ಕಿಸಾನ್ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.
ಪುತ್ತೂರು: ಸಾಂಪ್ರದಾಯಿಕ ಮಿಶ್ರ ಕೃಷಿಯ ಜತೆಗೆ ವೈಜ್ಞಾನಿಕ ಹಾಗೂ ವ್ಯವಸ್ಥಿತ ಗೇರು ಕೃಷಿಯನ್ನು ಅಳವಡಿಸಿಕೊಂಡು ತಮ್ಮ ಕೃಷಿ ಕ್ಷೇತ್ರವನ್ನು ದೇಶದ ವಿವಿಧ ರಾಜ್ಯಗಳ ಅಧ್ಯಯನಕಾರರು, ಕೃಷಿಕರಿಗೆ ಅಧ್ಯಯನ ಕೇಂದ್ರವಾಗಿ ರೂಪಿಸಿದ ಹೆಗ್ಗಳಿಕೆಯ ಪ್ರಗತಿಪರ ಕೃಷಿಕ ಕಡಮಜಲು ಸುಭಾಸ್ ರೈ.
ಸುಮಾರು 50 ಎಕ್ರೆ ಕೃಷಿ ಭೂಮಿ ಹೊಂದಿರುವ ಸುಭಾಸ್ ರೈ, 18 ಎಕ್ರೆ ರಬ್ಬರ್, 14 ಎಕ್ರೆ ಗೇರು ಕೃಷಿ, 14 ಎಕ್ರೆ ಅಡಿಕೆ ತೋಟ, 1 ಎಕ್ರೆಯಲ್ಲಿ ತೆಂಗು ಹಾಗೂ ಉಪ ಬೆಳೆಯಾಗಿ ಕೊಕ್ಕೋ, ಕರಿಮೆಣಸು, ಬಾಳೆ, ಕೃಷಿಗೆ ಪೂರಕವಾಗಿ 4 ದನ, ಊರಿನ ಕೋಳಿ ಸಾಕಾಣಿಕೆ, ಗೋಬರ್ ಗ್ಯಾಸ್, ಸ್ಲರಿ, ಅಸ್ತ್ರ ಒಲೆ, ಸ್ಮೋಕಿಂಗ್ ಹೌಸ್ ಹೊಂದಿದ್ದಾರೆ.
ಕಳೆದ ವರ್ಷದಲ್ಲಿ 5 ಲಕ್ಷ ರೂ. ಮೌಲ್ಯದ ಗೇರು ಫಸಲು ಪಡೆದಿರುವ ಸುಭಾಸ್ ರೈ, ಖರ್ಚು ಕಳೆದ 3 ಲಕ್ಷ ರೂ. ಲಾಭ ಮಾಡಿಕೊಂಡಿದ್ದಾರೆ. ಈ ಬಾರಿ 150 ಕ್ವಿಂಟಲ್ ಗೇರು ಫಸಲಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಒಟ್ಟು ಕೃಷಿ ಭೂಮಿಯಲ್ಲಿ ಎಲ್ಲ ರೀತಿಯ ಖರ್ಚುಗಳನ್ನು ಕಳೆದು ವಾರ್ಷಿಕ 10 ಲಕ್ಷ ರೂ. ಲಾಭ ನಿಶ್ಚಿತವಾಗಿ ಪಡೆಯುತ್ತೇನೆ ಮತ್ತು ಎಲ್ಲಕ್ಕಿಂತ ಮೇಲಾಗಿ ಕೃಷಿಯಲ್ಲಿ ಖುಷಿ ಕಾಣುತ್ತಿದ್ದೇನೆ ಎನ್ನುವ ಅಭಿಪ್ರಾಯ ಸುಭಾಸ್ ರೈ ಅವರದ್ದು.
ಕೃಷಿಯ ಪ್ರೇರಣೆ, ಸಾಧನೆ
1950 ರಲ್ಲಿ ಮುಂಡಾಳಗುತ್ತು ಮಾçಲ ರೈ ಮತ್ತು ಕರಿಯಾಳ ಪೊçಲ ಪದ್ಮಾವತಿ ರೈ ಅವರ ಪುತ್ರನಾಗಿ ಜನಿಸಿದ ಕಡಮಜಲು ಸುಭಾಸ್ ರೈ ಪದವೀಧರ. ಸೋದರಮಾವ ಸ್ವಾತಂತ್ರÂ ಹೋರಾಟಗಾರ ಎನ್.ಎಸ್. ಕಿಲ್ಲೆ ಹಾಗೂ ಬಾಕತ್ತಿಮಾರುವಿನ ಕೃಷಿ ಸಾಧಕ ಚಿಲ್ಮೆತ್ತಾರು ರಾಮಣ್ಣ ರೈ ಅವರಿಂದ ಕೃಷಿ ಬದುಕಿನ ಪ್ರೇರಣೆ ಪಡೆದು 15ನೇ ಹರೆಯದಲ್ಲಿ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. 1968ರಿಂದ ಕೃಷಿ ಆರಂಭಿಸಿ ಕೃಷಿ ಬದುಕಿನ 52 ವರ್ಷಗಳಲ್ಲಿ ಸಾಧಕ, ಕೃಷಿಯ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಸ್ವೇದಬಿಂದು ಗೇರು ತೋಟ
14 ಎಕ್ರೆ ಜಾಗದಲ್ಲಿ ಸ್ವೇದಬಿಂದು ಗೇರು ತೋಟ ಹೆಸರಿನಲ್ಲಿ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿರುವ ಕಡಮಜಲು ಸುಭಾಸ್ ರೈ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. 2013ರಿಂದ ಅವರು ಗೇರು ಕೃಷಿಯಲ್ಲಿ ತೊಡಗಿಕೊಂಡಿದ್ದು, ಗೇರು ಸಂಶೋಧನ ನಿರ್ದೇಶನಾಲಯಗಳು, ಕೃಷಿ ವಿಶ್ವವಿದ್ಯಾನಿಲಯ ಗಳಿಗೆ ಅಧ್ಯಯನ ಯೋಗ್ಯ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ದೇಶದ ವಿವಿಧ ರಾಜ್ಯಗಳಿಂದ ಕೃಷಿ ತಜ್ಞರು, ಕೃಷಿ ವಿಜ್ಞಾನಿಗಳು, ರೈತರು ಇಲ್ಲಿಗೆ ಅಧ್ಯಯನ ಭೇಟಿ ಕೈಗೊಳ್ಳುತ್ತಿದ್ದಾರೆ. ವಿವಿಗಳಲ್ಲಿ ಗೇರು ಹಾಗೂ ಇತರ ಕೃಷಿಯ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಕಡಮಜಲು ಸುಭಾಸ್ ರೈ ಅವರು ಭಾಗವಹಿಸುತ್ತಿದ್ದಾರೆ.
ಕೃಷಿ ಸಾಧನೆಗೆ ಪ್ರಶಸ್ತಿ
ಗೋವಾದಲ್ಲಿ ನಡೆದ ರಾಷ್ಟ್ರೀಯ ಗೇರು ಮತ್ತು ಕೊಕ್ಕೋ ವಿಚಾರಗೋಷ್ಠಿ ಸಮಾವೇಶದಲ್ಲಿ ಉತ್ತಮ ಕೃಷಿಕ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ
ರಾಜ್ಯ ತೋಟಗಾರಿಕೆ ಇಲಾಖೆಯಿಂದ ಉತ್ತಮ ತೋಟಗಾರಿಕಾ ಪ್ರಶಸ್ತಿ.
ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಿಂದ ಅರಣ್ಯ ಮಿತ್ರ ಪ್ರಶಸ್ತಿ
ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಕೃಷಿ ಸಾಧನೆಗಾಗಿ ಕಾಪು ಮುದ್ದಣ್ಣ ಶೆಟ್ಟಿ ಚಿನ್ನದ ಪದಕ.
ಮೈಸೂರಿನ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ನಡೆದ ಗೇರು ಅಧ್ಯಯನ ಕಾರ್ಯಾಗಾರದಲ್ಲಿ ಕುಲಪತಿ ಡಾ| ಡಿ.ಎಲ್. ಮಹೇಶ್ವರ್ ಅವರಿಂದ ಕೃಷಿ -ಋಷಿ ಬಿರುದು ಹಾಗೂ ರಾಜ್ಯಮಟ್ಟದ ವೈಜ್ಞಾನಿಕ ಕೃಷಿ ರಾಯಭಾರಿಯಾಗಿ ಘೋಷಣೆ.
ಬೀದರ್ ತೋಟಗಾರಿಕಾ ವಿವಿ, ಮಂಡ್ಯ, ಮಂಗಳೂರು, ಬ್ರಹ್ಮಾವರ ಸೇರಿದಂತೆ ದೇಶದ ವಿವಿಧೆಡೆ ಕೃಷಿ ವಿಚಾರಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿಚಾರ ಮಂಡನೆ.
ಹಲವು ಸಂಘ ಸಂಸ್ಥೆಗಳಿಂದ ಕೃಷಿ ಸಾಧನೆಗಾಗಿ ಸಮ್ಮಾನ.
ಕೃಷಿಯಿಂದ ಬದುಕು ಕಟ್ಟಿಕೊಳ್ಳಬಹುದು
ಕೃಷಿಯಲ್ಲಿ ಬದುಕಬಹುದು ಎಂಬ ದೃಢನಿಲುವಿನಿಂದ ಸಣ್ಣ ವಯಸ್ಸಿನಲ್ಲೇ ಕೃಷಿಯಲ್ಲಿ ತೊಡಗಿಸಿಕೊಂಡು ನಿಶ್ಚಿಂತೆಯಿಂದ ಬದುಕುತ್ತಿದ್ದೇನೆ. ಕೃಷಿಕ ಕೃಷಿಯಲ್ಲಿ ಆಸಕ್ತಿ, ಶ್ರಮದಿಂದ ಕೆಲಸ ಮಾಡಬೇಕು. ಕೃಷಿಕನ ಯಶಸ್ಸಿನಲ್ಲಿ 5 “ಪ ‘ಗಳ ಪ್ರಮುಖ ಪಾತ್ರ ವಹಿಸುತ್ತವೆ. ಪರಿಣತಿ (ಅಧ್ಯಯನ), ಪರಿಜ್ಞಾನ (ಆಳ ಜ್ಞಾನ), ಪರಿಶ್ರಮ, ಪರಿಪೂರ್ಣ ನಿರ್ವಹಣೆಯಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಈ ಕಾರಣದಿಂದ 70ರ ವಯಸ್ಸಿನಲ್ಲೂ ನಾನು ಕೃಷಿಯಲ್ಲಿ ಯಶಸ್ವಿಯಾಗಿದ್ದೇನೆ.
– ಕಡಮಜಲು ಸುಭಾಸ್ ರೈ, ಪ್ರಗತಿಪರ ಕೃಷಿಕರು
ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.