7ನೇ ತರಗತಿ ಪಬ್ಲಿಕ್ ಪರೀಕ್ಷೆ ಇದ್ದರೂ ಉತ್ತೀರ್ಣ-ಅನುತ್ತೀರ್ಣ ಇಲ್ಲ
ಬಂಟ್ವಾಳದಲ್ಲಿ "ಉದಯವಾಣಿ' ಜತೆ ಶಿಕ್ಷಣ ಸಚಿವರ ಮಾತುಕತೆ
Team Udayavani, Dec 18, 2019, 4:22 AM IST
ಬಂಟ್ವಾಳ: ಪ್ರಸಕ್ತ ಸಾಲಿನಲ್ಲಿ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಿದರೂ ಯಾವುದೇ ವಿದ್ಯಾರ್ಥಿಯನ್ನು ಈ ವರ್ಷ ಫೇಲ್ ಮಾಡುವುದಿಲ್ಲ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಅವರು ಪೋಷಕರಿಗೆ ಭರವಸೆ ನೀಡಿದ್ದಾರೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಶಿಕ್ಷಣ ಸಚಿವರು ಬಂಟ್ವಾಳ ನಿರೀಕ್ಷಣ ಮಂದಿರದಲ್ಲಿ “ಉದಯವಾಣಿ’ ಜತೆ ಮಾತನಾಡಿದರು. ಇನ್ನುಳಿದ ಕಡಿಮೆ ಅವಧಿಯಲ್ಲಿ ಪಬ್ಲಿಕ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಾಧ್ಯವೇ, ನಮ್ಮ ಮಕ್ಕಳಲ್ಲಿ ಅದನ್ನು ಎದುರಿಸುವಷ್ಟು ಸಾಮರ್ಥ್ಯ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಇಲ್ಲಿ ಮಕ್ಕಳನ್ನು ಪಾಸು-ಫೇಲ್ ಮಾಡುವ ಬದಲು ಅವರಿಗೆ ಪಬ್ಲಿಕ್ ಪರೀಕ್ಷೆ ಎದುರಿಸುವ ಅನುಭವ ನೀಡುವ ಉದ್ದೇಶ ಇದೆ. ಹೀಗಾಗಿ ಸಿದ್ಧತೆ, ಸಾಮರ್ಥ್ಯದ ವಿಚಾರ ಬರುವುದಿಲ್ಲ ಎಂದರು.
ಮಕ್ಕಳ ಅನುಭವಕ್ಕಾಗಿ ಪರೀಕ್ಷೆ
ಪರೀಕ್ಷೆ ಅಂದರೆ ಹೇಗಿರುತ್ತದೆ, ಪರೀಕ್ಷಾ ಕೊಠಡಿಯ ವಾತಾವರಣ ಹೇಗಿರುತ್ತದೆ ಎಂಬುದು ಮಕ್ಕಳ ಅನುಭವಕ್ಕೆ ಬರಬೇಕು ಎಂಬ ಉದ್ದೇಶದಿಂದ ಈ ಯೋಚನೆ ಮಾಡಲಾಗಿದೆ. ಎಸೆಸೆಲ್ಸಿಯಂತಹ ಪ್ರಮುಖ ಹಂತದಲ್ಲಿ ಅವರು ಗಲಿಬಿಲಿಗೊಳ್ಳದಂತೆ ಅವರಿಗೆ ಪಬ್ಲಿಕ್ ಪರೀಕ್ಷೆ ಎದುರಿಸುವ ಅನುಭವ ಇರಬೇಕು ಎನ್ನುವುದು ಮಾತ್ರ ನಮ್ಮ ಉದ್ದೇಶ ಎಂದರು. ಆದರೆ ಅದಕ್ಕೂ ಒಂದಷ್ಟು ಮಂದಿ ತಕರಾರು ಮಾಡಿದ್ದಾರೆ. ಅವರ ಜತೆ ಸಾಕಷ್ಟು ಚರ್ಚೆ ನಡೆಸಿ, ಅವರ ಮನವೊಲಿಸುವ ಕಾರ್ಯವನ್ನೂ ಮಾಡಿದ್ದೇವೆ. ಇನ್ನು 3 ದಿನಗಳಲ್ಲಿ ಪಬ್ಲಿಕ್ ಪರೀಕ್ಷೆಯ ಕುರಿತು ಸ್ಪಷ್ಟ ತೀರ್ಮಾನವನ್ನು ಕೈಗೊಳ್ಳಲಿದ್ದೇವೆ. ಪಬ್ಲಿಕ್ ಪರೀಕ್ಷೆಯನ್ನು ನಡೆಸುವ ತೀರ್ಮಾನಕ್ಕೆ ಬಂದರೂ ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ ಎಂದರು.
ಚುನಾವಣಾಧಿಕಾರಿಗೆ ಪತ್ರ
ಶಾಲಾ ಶಿಕ್ಷಕರಿಗೆ ಚುನಾವಣೆ- ತರಬೇತಿಗಳಿಂದ ಪಾಠಕ್ಕೆ ತೊಂದರೆ ಯಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಿಕ್ಷಕರನ್ನು ಚುನಾವಣ ಕರ್ತವ್ಯದಿಂದ ಮುಕ್ತಿ ಗೊಳಿಸಬೇಕು ಎಂದು ತಾನು ಈಗಾಗಲೇ ಚುನಾವಣ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಉತ್ತರ ಬರಬೇಕಿದೆ. ಶಿಕ್ಷಕರ ಮೇಲಿನ ಇತರ ಹೊರೆಗಳನ್ನೂ ಕಡಿಮೆ ಮಾಡುವ ಕುರಿತಾಗಿಯೂ ಯೋಚನೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಮತ್ತೆ ಮತ್ತೆ ತರಬೇತಿ ಇಲ್ಲ ಶಿಕ್ಷಕರಿಗೆ ಏನೇ ತರಬೇತಿ ನೀಡುವುದಾದರೂ ವಿದ್ಯಾರ್ಥಿಗಳ ಪಾಠ, ಪರೀಕ್ಷೆಗಳಿಗೆ ತೊಂದರೆಯಾಗದ ರೀತಿಯಲ್ಲಿ ಡಿಸೆಂಬರ್ ಒಳಗೆ ಮುಗಿಸುವಂತೆ ತಿಳಿಸಲಾಗಿದೆ. ಜತೆಗೆ ಮತ್ತೆ ಮತ್ತೆ ತರಬೇತಿ, ಮೀಟಿಂಗ್‌ಗಳನ್ನು ಕರೆಯಬಾರದು ಎಂಬ ಸೂಚನೆಯನ್ನೂ ನೀಡಿದ್ದೇನೆ. ಶಿಕ್ಷಕರು ಹೆಚ್ಚು ಹೆಚ್ಚು ಶಾಲೆಗಳಲ್ಲಿ ನಿಲ್ಲಬೇಕು, ತರಬೇತಿಗಳನ್ನು ಅವರ ವಿರಾಮದ ಸಮಯದಲ್ಲಿ ನಡೆಸಬೇಕು. ಡಿಸೆಂಬರ್ ಬಳಿಕ ಯಾವುದೇ ತರಬೇತಿ ಹಮ್ಮಿಕೊಳ್ಳಬಾರದು, ಆ ಬಳಿಕದ ಶಾಲಾವಧಿಯನ್ನು ಪೂರ್ತಿಯಾಗಿ ಶೈಕ್ಷಣಿಕ ಚುಟುವಟಿಕೆಗಳಿಗೆ ನೀಡಬೇಕು ಎಂಬ ನಿರ್ದೇಶನವನ್ನೂ ನೀಡಿದ್ದೇನೆ ಎಂದು ಶಿಕ್ಷಣ ಸಚಿವರು “ಉದಯವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.