ವಾಟ್ಸ್ಯಾಪ್ ನಲ್ಲಿ ಬಂದಿದೆ 3 ಹೊಸ ಫೀಚರ್: ಇನ್ಮುಂದೆ ಚಾಟಿಂಗ್-ಟಾಕಿಂಗ್ ಮತ್ತಷ್ಟು ಆಕರ್ಷಕ!
Team Udayavani, Dec 18, 2019, 9:15 AM IST
ನವದೆಹಲಿ: ತಂತ್ರಜ್ಞಾನ ದೈತ್ಯ ವಾಟ್ಸ್ಯಾಪ್ ತನ್ನ ಹೊಸ ಹೊಸ ಫೀಚರ್ ಗಳಿಂದಲೇ ಬಳಕೆದಾರರ ಮನಗೆಲ್ಲುತ್ತಿದೆ. ಇದೀಗ ಯುವ ಜನರನ್ನು ಆಕರ್ಷಿಸಲು ಮತ್ತಷ್ಟು ಹೊಸ ಫೀಚರ್ ಗಳನ್ನು ತನ್ನ ಅಪ್ ಡೇಟ್ ವರ್ಷನ್ ನಲ್ಲಿ ನೀಡಿದ್ದು ಬಳಕೆದಾರರಿಗೆ ಚಾಟಿಂಗ್-ಟಾಕಿಂಗ್ ಅನುಭವ ಮತ್ತಷ್ಟು ಉತ್ತಮಗೊಳ್ಳಲಿದೆ ಎಂದು ಫೇಸ್ಬುಕ್ ಇಂಕ್ ಕಂಪೆನಿ ಹೇಳಿದೆ.
ಹೌದು ! ವಾಟ್ಸ್ಯಾಪ್ ಇದೀಗ ನೂತನ ಮೂರು ಫೀಚರ್ ಗಳನ್ನು ಪರಿಚಿಯಿಸಿದೆ. ಅದು ಬಳಕೆದಾರರಿಗೆ ಮತ್ತಷ್ಟು ಸಂತಸ ತರುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
1) ಕಾಲ್ ವ್ಯೆಟಿಂಗ್(waiting) ಆಯ್ಕೆ: ನೀವು ವಾಟ್ಸ್ಯಾಪ್ ಕರೆಯಲ್ಲಿ ನಿರತರಾಗಿದ್ದಾಗಲೇ ಮತ್ತೊಂದು ಕರೆ ಬಂದರೆ ವ್ಯೆಟಿಂಗ್ ನಲ್ಲಿ ಕಾಣಿಸಿಕೊಳ್ಳಲಿದೆ. ಅಂದರೆ ಒಬ್ಬರೊಂದಿಗೆ ಮಾತನಾಡುವ ವೇಳೆ ಅವರನ್ನು ಹೋಲ್ಡ್ ಮಾಡಿ ಮತ್ತೊಂದು ಕರೆಯನ್ನು ಸ್ವೀಕರಿಸುವ ಸೌಲಭ್ಯ ವಾಟ್ಸ್ಯಾಪ್ ಕಾಲ್ನಲ್ಲಿ ಲಭ್ಯವಾಗಲಿದೆ.
2) ವಾಟ್ಸ್ಯಾಪ್ ರಿಮೈಂಡರ್ ಫೀಚರ್ (WhatsApp Reminder Feature) : ಈ ಫೀಚರ್ ಸಹಾಯದಿಂದ ಅಗತ್ಯ ಕಾರ್ಯಕ್ರಮಗಳು, ಪ್ರಮುಖ ದಿನಾಂಕಗಳನ್ನು ನೆನಪಿಟ್ಟುಕೊಳ್ಳುವಂತೆ ಮಾಡಬಹುದು. ಇದಕ್ಕಾಗಿ ಬಳಕೆದಾರರು ತಮ್ಮ ವಾಟ್ಸ್ಯಾಪ್ ಅಕೌಂಟ್ನ್ನು Any.do ಜೊತೆ ಲಿಂಕ್ ಮಾಡಬೇಕಾಗಿದೆ. ಆ ಬಳಿಕ ರಿಮೈಂಡರ್ ಸೇವೆಯನ್ನು ಬಳಕೆದಾರರು ಪಡೆದುಕೊಳ್ಳಬಹುದು.
#) ವಾಟ್ಸ್ಯಾಪ್ ಗ್ರೂಪ್ ಗೌಪ್ಯತೆ ಸೆಟ್ಟಿಂಗ್: ಈ ಹಿಂದೆ ತಿಳಿಸಲಾಗಿರುವ ವಾಟ್ಸ್ಯಾಪ್ ಗೌಪ್ಯತೆ ಸೆಟ್ಟಿಂಗ್ ಎಲ್ಲಾ ಮೊಬೈಲ್ಗಳಲ್ಲೂ ಜಾರಿಗೆ ಬಂದಿದೆ. ಇದರಿಂದ ಇನ್ನು ಮುಂದೆ ವಾಟ್ಸ್ಯಾಪ್ ನಲ್ಲಿ ಬೇರೆ ಗುಂಪಿಗೆ ಸೇರುವ ಮುನ್ನ ಬಳಕೆದಾರರ ಅನುಮತಿ ಕೇಳುವುದನ್ನು ಕಡ್ಡಾಯಗೊಳಿಸಿದೆ. ವಾಟ್ಸ್ಯಾಪ್ ಪರಿಚಯಿಸಿರುವ ನೂತನ ಫೀಚರ್ ಗ್ರೂಪ್ ಗೌಪ್ಯತೆ ಅಳವಡಿಸುವವರು ಆ್ಯಪ್ನಲ್ಲಿ Settings ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ Account ಆ ಬಳಿಕ Privacy ಇದಾದ ಮೇಲೆ Groups ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ Who can add me to groups (ಯಾರು ನಿಮ್ಮನ್ನು ಗುಂಪಿಗೆ ಸೇರಿಸಬಹುದು) ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ. ಇಲ್ಲಿ ನಿಮಗೆ Everyone , my contacts my contacts except ಮೂರು ಆಯ್ಕೆಗಳು ಕಾಣಿಸುತ್ತದೆ. ಬಳಕೆದಾರರು ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್ ಪೇ ಇನ್ನು ಎಲ್ಲರಿಗೂ ಲಭ್ಯ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.