ನಡುಗಡ್ಡೆ ಸ್ಥಳಾಂತರಕ್ಕೆ ಆಗ್ರಹ
Team Udayavani, Dec 18, 2019, 12:14 PM IST
ಬಾಗಲಕೋಟೆ: ಆಲಮಟ್ಟಿ ಜಲಾಯಶವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಿದಾಗ ಸಂಪೂರ್ಣ ನಡುಗಡ್ಡೆಯಾಗಿ ಸಂಪರ್ಕ ಕಳೆದುಕೊಳ್ಳುವ ನಗರದ ಕಿಲ್ಲಾ ಭಾಗದ ನಡುಗಡ್ಡೆ ಪ್ರದೇಶ ಸ್ಥಳಾಂತರಿಸಬೇಕು ಎಂದು ನಡುಗಡ್ಡೆ ಹೋರಾಟ ಸಮಿತಿ ಒತ್ತಾಯಿಸಿದೆ.
ಮಂಗಳವಾರ ಕೃಷ್ಣಾ ಮೇಲ್ದಂಡೆ ಯೋಜನೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಎನ್. ಜಯರಾಮ್ ಅವರಿಗೆ ಹೋರಾಟ ಸಮಿತಿಯಪದಾಧಿಕಾರಿಗಳು, ಸುಮಾರು 45ಕ್ಕೂ ಹೆಚ್ಚು ಸಂತ್ರಸ್ತರು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡರು. ನೂತನ ಆಯುಕ್ತರೊಂದಿಗೆ ಸುಮಾರು ಅರ್ಧ ಗಂಟೆಗಳ ಕಾಲ ಚರ್ಚೆ ನಡೆಸಿದ ಹೋರಾಟ ಸಮಿತಿ ಪದಾಧಿಕಾರಿಗಳು ಸಂತ್ರಸ್ತರು, ವಿವಿಧ ಸಮಸ್ಯೆ ಗಮನಕ್ಕೆ ತಂದರು.
ಈ ವೇಳೆ ಹೋರಾಟ ಸಮಿತಿಯ ಕಾರ್ಯದರ್ಶಿ ಅರವಿಂದ ಮುಚಖಂಡಿ ಮಾತನಾಡಿ, ನಡುಗಡ್ಡೆ ಪ್ರದೇಶದ ಸುಮಾರು 1120 ಮನೆಗಳು, ಇಡೀ ಬಾಗಲಕೋಟೆಯ ಸಂಪರ್ಕ ಕಳೆದುಕೊಳ್ಳಲಿವೆ. ಅವುಗಳನ್ನು ಮುಳುಗಡೆ ವ್ಯಾಪ್ತಿಗೆ ತಂದು ಸ್ಥಳಾಂತರಿಸಬೇಕು ಎಂಬುದು ಬಹಳ ದಿನಗಳ ಬೇಡಿಕೆ. ಬಿಟಿಡಿಎದಿಂದ ಈ ಪ್ರಕ್ರಿಯೆ ನಡೆಸಿತ್ತು. ಆದರೆ, ಜಲ ಸಂಪನ್ಮೂಲ ಇಲಾಖೆ, ಕಾರ್ಯ ಭಾರದ ಒತ್ತಡದ ನೆಪ ಹೇಳಿ, ನಡುಗಡ್ಡೆ ಸ್ಥಳಾಂತರ ಕಾರ್ಯವನ್ನು ಕೈಬಿಟ್ಟಿದೆ. ಇದರಿಂದ ಹಲವು ವರ್ಷಳಿಂದ ನಡೆದ ಹೋರಾಟಕ್ಕೆ ಜಲ ಸಂಪನ್ಮೂಲ ಇಲಾಖೆ ಮಾನ್ಯತೆ ನೀಡಿಲ್ಲ. ಈ ವಿಷಯದ ಸ್ವತಃ ಸ್ಥಳೀಯ ಶಾಸಕರ ಗಮನಕ್ಕೂ ಅಧಿಕಾರಿಗಳು ತಂದಿಲ್ಲ ಎಂದು ತಿಳಿಸಿದರು.
ಸಂತ್ರಸ್ತರಿಗೆ ಮುದ್ರಾಂಕ ಶುಲ್ಕ ವಿನಾಯಿತಿ ನಾಲ್ಕು ವರ್ಷಗಳ ಕಾಲ ಮಾತ್ರವಿದೆ. ವರ್ಷಗಳ ಗಡವು ತೆಗೆಯಬೇಕು. 1991ರಲ್ಲಿ ಬಾಗಲಕೋಟೆ ನಗರಸಭೆಗೆ ಸರ್ಕಾರ, ಲಿಖೀತ ಆದೇಶ ಹೊರಡಿಸಿ, ಮುಳುಗಡೆ ವ್ಯಾಪ್ತಿಗೆ ಬರುವ ಕಟ್ಟಡ, ಖಾಲಿ ನಿವೇಶನ ಸಹಿತ ನಗರದಲ್ಲಿ ಭೂ ಕಂದಾಯ ತೆರಿಗೆ ಯಾವುದೇ ಕಾರಣಕ್ಕೂ ಹೆಚ್ಚಳ ಮಾಡಬಾರದು ಎಂದು ಆದೇಶ ಹೊರಡಿಸಿತ್ತು. ಇದನ್ನು ಉಲ್ಲಂಘಿಸಿ, ಮುಳುಗಡೆ ವ್ಯಾಪ್ತಿಯ ಜಾಗೆಗೂ ಭೂ ಕಂದಾಯ ಹೆಚ್ಚಳ ಮಾಡಲಾಗಿದೆ. ಇದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಸಂತ್ರಸ್ತರ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಮೀಸಲಾತಿ ಕಲ್ಪಿಸಿದೆ. ಆದರೆ, ಇದನ್ನು ಜೆಓಡಿಸಿ, ಐಟಿಐ, ಡಿಪ್ಲೋಮಾ ಶಿಕ್ಷಣಕ್ಕೆ ಮಾತ್ರ ಸಿಮೀತಗೊಳಿಸಿದೆ. ಸರ್ಕಾರ ಶಿಕ್ಷಣ ಮೀಸಲಾತಿ ವ್ಯಾಖ್ಯಾನ ಬದಲಿಸಿ, ಎಲ್ಲ ರೀತಿಯ ಶಿಕ್ಷಣಕ್ಕೂ ಮೀಸಲಾತಿ ಕಲ್ಪಿಸಬೇಕು. ಯುಕೆಪಿಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಡುಗಡ್ಡೆ ಹೋರಾಟ ಸಮಿತಿಯ ಅಧ್ಯಕ್ಷ ಎ.ಎ. ದಂಡಿಯಾ, ಸಹ ಕಾರ್ಯದರ್ಶಿ ದೀಪಕ ಹಂಚಾಟೆ, ಪ್ರಮುಖರಾದ ವೀರಣ್ಣ ಹೊಸೂರ, ಅಶೋಕ ಘಾಟಗೆ ಉಪಸ್ಥಿತರಿದ್ದರು.
ಶಾಸಕರ ಭೇಟಿ: ಇದೇ ವೇಳೆ ಶಾಸಕ ಡಾ|ವೀರಣ್ಣ ಚರಂತಿಮಠ ಕೂಡ, ಯುಕೆಪಿ ನೂತನ ಆಯುಕ್ತ ಎನ್. ಜಯರಾಮ್ ಅವರನ್ನು ಭೇಟಿ ಮಾಡಿ, ಜಿಲ್ಲೆಗೆ ಬರಮಾಡಿಕೊಂಡರು. ನಡುಗಡ್ಡೆ ಸಹಿತ ಸಂತ್ರಸ್ತರ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.