ನಗರಸಭೆಯಿಂದ ನಾಗರಿಕರಿಗೆ ಅಸಮರ್ಪಕ ಸೇವೆ


Team Udayavani, Dec 18, 2019, 2:11 PM IST

hv-tdy-1

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ನಗರಸಭೆ ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು, ಸಿಬ್ಬಂದಿ ಕಾರಣದಿಂದಾಗಿ ನಗರದ ಜನತೆಗೆ ಸಮರ್ಪಕ ಮೂಲಸೌಲಭ್ಯ ಹಾಗೂ ಸೇವೆ ಮರೀಚಿಕೆಯಾಗಿದೆ. ನಾಗರಿಕರು ಸಕಾಲಕ್ಕೆ ನಗರಸಭೆ ಸೇವೆ ಸಿಗದೆ ಪರದಾಡುವಂತಾಗಿದೆ.

ನಗರಸಭೆಯಲ್ಲಿ ಒಟ್ಟು 236 ಮಂಜೂರಾತಿ ಹುದ್ದೆಗಳಿದ್ದು ಅವುಗಳಲ್ಲಿ ಕೇವಲ 63 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 173 ಹುದ್ದೆ ಖಾಲಿ ಇವೆ. ಹೀಗಾಗಿ ಹೊರಗುತ್ತಿಗೆ ಸಿಬ್ಬಂದಿ ನೇಮಕ ಅನಿವಾರ್ಯವಾಗಿದ್ದರಿಂದ 126 ಹೊರಗುತ್ತಿಗೆ ಸಿಬ್ಬಂದಿ ನೇಮಕ ಮಾಡಿಕೊಂಡು ಕಾರ್ಯನಿರ್ವಹಿಸಲಾಗುತ್ತಿದ್ದು 47 ಹುದ್ದೆಗಳು ಖಾಲಿ ಇವೆ.

ನಗರಸಭೆಗೆ ಒಟ್ಟು 100ಪೌರಕಾರ್ಮಿಕ ಹುದ್ದೆ ಮಂಜೂರಾಗಿದ್ದು, ಇವರಲ್ಲಿ 23 ಜನ ಮಾತ್ರ ಕಾಯಂ ಪೌರಕಾರ್ಮಿಕರಿದ್ದಾರೆ. 75 ಜನರು ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಜೂರಾದ ಹುದ್ದೆಗಳಿಗೆ ಹೋಲಿಸಿದರೆ ಇನ್ನೂ ಎರಡು ಹುದ್ದೆಗಳು ಖಾಲಿ ಇವೆ. ಸ್ವತ್ಛತಾ ಸಿಬ್ಬಂದಿ ನಾಲ್ಕು ಇರಬೇಕಿತ್ತು ಎಲ್ಲ ನಾಲ್ಕು ಹುದ್ದೆ ಖಾಲಿ ಇವೆ. ನೀರು ಸರಬರಾಜು ನಿರ್ವಹಣೆಗೆ ಎಂಟು ಜನರು ಇರಬೇಕಿತ್ತು. ಒಬ್ಬರೂ ಇಲ್ಲ. ನೀರು ಸರಬರಾಜು ನಿರ್ವಹಣೆ ಸಹಾಯಕರು ಎಂಟು ಜನ ಇರಬೇಕಿತ್ತು ಅವರಲ್ಲಿಯೂ ಒಬ್ಬರೂ ಇಲ್ಲ. ಹೀಗೆ ಸಮರ್ಪಕ ಸಿಬ್ಬಂದಿ ಇಲ್ಲದೇ ಸೇವೆ ಜನರಿಗೆ ಮರೀಚಿಕೆಯಾಗಿದೆ.

ಕಾಯಂ ಸಿಬ್ಬಂದಿ: ಪೌರಾಯುಕ್ತರು ಗ್ರೇಡ್‌ -2 ಹುದ್ದೆ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌, ಪರಿಸರ ಅಭಿಯಂತರರು, ಲೆಕ್ಕ ಅಧೀಕ್ಷಕರು, ಸಮುದಾಯ ಅಧಿಕಾರಿ, ಹಿರಿಯ ಆರೋಗ್ಯ ಅ ಧಿಕಾರಿ, ಇಬ್ಬರು ಪ್ರಥಮದರ್ಜೆ ಸಹಾಯಕರು, ಒಬ್ಬ ಕಿರಿಯ ಆರೋಗ್ಯ ಸಹಾಯಕ, ಒಬ್ಬ ಇಲೆಕ್ಟ್ರಿಶಿಯನ್‌, ಏಳು ಜನ ದ್ವಿತೀಯದರ್ಜೆ ಸಹಾಯಕರು, ನಾಲ್ವರು ತೆರಿಗೆ ಸಂಗ್ರಾಹಕರು,ಒಬ್ಬ ಗ್ರೇಡ್‌-2ರ ಇಲೆಕ್ಟ್ರಿಶಿಯನ್‌, ಇಬ್ಬರು ಸ್ವತ್ಛತಾ ಉಸ್ತುವಾರಿ ಅಧಿಕಾರಿ, ಎಂಟು ಜನ ಸಹಾಯಕರು, 23 ಪೌರಕಾರ್ಮಿಕರು, ಗಾರ್ಡನ್‌ ನಿರ್ವಾಹಕರು, ಸಹಾಯಕರು, ವಾಲ್ವಮನ್‌ ಸೇರಿ ಎಂಟು ಸಹಾಯಕರು ಕಾಯಂ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೌರಾಯುಕ್ತರು, ಲೆಕ್ಕ ಅಧಿಧೀಕ್ಷಕರು, ದ್ವಿತೀಯ ದರ್ಜೆ ಸಹಾಯಕರು ಹಾಗೂ ಕಚೇರಿ ಸಹಾಯಕರು ಹುದ್ದೆಗಳು ಮಾತ್ರ ಭರ್ತಿಯಾಗಿದ್ದು ಉಳಿದೆಲ್ಲ ಹುದ್ದೆಗಳಲ್ಲಿ ಖಾಲಿ ಹುದ್ದೆಗಳು ರಾರಾಜಿಸುತ್ತಿವೆ.

ಹೊರಗುತ್ತಿಗೆ ಸಿಬ್ಬಂದಿ: ಹೊರಗುತ್ತಿಗೆಯಲ್ಲಿ ಒಟ್ಟು 126 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಇವರಲ್ಲಿ 75 ಜನ ಪೌರಕಾರ್ಮಿಕರಿದ್ದಾರೆ. ಉಳಿದಂತೆ ಒಬ್ಬ ಲೆಕ್ಕಪತ್ರ, ಗಣಕಯಂತ್ರ ಆಪರೇಟರ್‌ ಮೂವರು, ಮುಖ್ಯನಿರ್ವಾಹಕ, ನಾಲ್ವರು ವಾಹನ ಚಾಲಕರು, ಮೂವರು ಸ್ವತ್ಛತಾ ಉಸ್ತುವಾರಿ, ಇಬ್ಬರು ವಾಲ್ವಮನ್‌, ಗಾರ್ಡನ್‌ ನಿರ್ವಾಹಕರು, ಸಹಾಯಕರು, ವಾಲ್ವಮನ್‌ ಕೆಲಸಕ್ಕಾಗಿ 36ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟಾರೆ ಜಿಲ್ಲಾ ಕೇಂದ್ರ ಹಾವೇರಿ ನಗರದ ನಗರಸಭೆ ಸಿಬ್ಬಂದಿ ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರ ಶೀಘ್ರ ಖಾಲಿ ಹುದ್ದೆ ತುಂಬುವ ಮೂಲಕ ಜನರಿಗೆ ಸಮರ್ಪಕ ಸೇವೆ ಸಿಗುವ ವ್ಯವಸ್ಥೆ ಮಾಡಬೇಕಾಗಿದೆ.

 

-ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-bbb

Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ

ajjamper-Qadri

Adi Jambava Samavesha: ಅಂಬೇಡ್ಕರ್‌ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ

Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ

CM-Siddu–Hubballi

By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

7-bng

Bengaluru: ಉದ್ಯೋಗ, ಹೂಡಿಕೆ ನೆಪದಲ್ಲಿ ಜನರಿಗೆ ವಂಚನೆ: ನಾಲ್ವರ ಸೆರೆ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.