ರಸ್ತೆ ಕಾಮಗಾರಿ ವಿರೋಧಿಸಿ ಕರವೇ ಪ್ರತಿಭಟನೆ
Team Udayavani, Dec 18, 2019, 3:17 PM IST
ದೊಡ್ಡಬಳ್ಳಾಪುರ : ನಗರದ ಜಯಚಾಮರಾಜೇಂದ್ರ ವೃತ್ತದಿಂದ ಗಗನಾರ್ಯ ಮಠದವರೆಗೂ ಮುಖ್ಯರಸ್ತೆ ವಿಸ್ತರಣೆ ಮಾಡಲು ಕ್ರಮ ಕೈಗೊಳ್ಳದೆ ಚರಂಡಿ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದ್ದು, ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಕಾರ್ಯಕರ್ತರು ಚಿಕ್ಕಪೇಟೆ ಗಾಂಧಿ ವೃತ್ತದಲ್ಲಿ ಪ್ರತಿ ಭಟನೆ ನಡೆಸಿದರು.
ಪ್ರಭಾವಿಗಳ ಒತ್ತಡ:ಈ ಸಂದರ್ಭದಲ್ಲಿ ಮಾತನಾಡಿದ ವೇದಿಕಯೆ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ, ನಗರದ ಹƒದಯ ಭಾಗವಾದ ಶ್ರೀ ಜಯಚಾಮರಾಜೇಂದ್ರ ವೃತ್ತದಿಂದ ಗಗನಾರ್ಯ ಮಠದವರೆಗೆ ಚರಂಡಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ರಸ್ತೆಯ ನಕ್ಷೆಯ ಅನ್ವಯ ಕಾಮಗಾರಿ ನಡೆಸದೇ ಪ್ರಭಾವಿಗಳು ಒತ್ತುವರಿ ಮಾಡಿ ಕೊಂಡಿದ್ದರೂ, ಯಾವುದೇ ಕ್ರಮಕೈಗೊಳ್ಳದೆ ಕೇವಲ ಅನುದಾನ ಬಳಸಲೇಬೇಕೆಂಬ ಹಠದಿಂದ ಕಾಮಗಾರಿ ನಡೆಸಲಾಗುತ್ತಿದೆ. ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದು ಒತ್ತುವರಿಗೆ ತಕ್ಕಂತೆ ಚರಂಡಿ ಯನ್ನು ಲೋಕೋಪಯೋಗಿ ಇಲಾಖೆ ನಿರ್ಮಿಸುತ್ತಿದ್ದರೂ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪ್ರಭಾವಿಗಳ ಮಾಡಿಕೊಂಡಿ ರುವ ಒತ್ತುವರಿಯನ್ನು ರಕ್ಷಿಸುವ ಸಲುವಾಗಿ ಅವೈಜ್ಞಾನಿಕವಾಗಿ ಚರಂಡಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್ ಮಾತನಾಡಿ,ಮೊದಲೇ ಕಿರಿದಾದ ರಸ್ತೆಯ ಎರಡು ಬದಿಯಲ್ಲಿ ಅಗೆದಿದ್ದು ಐದು ತಿಂಗಳು ಕಳೆದರು ಕಾಮಗಾರಿ ಪೂರ್ಣಗೊಳಿಸದೇ, ವಾಹನ ಸವಾರರಿಗೆ ತೀವ್ರ ತೊಂದರೆ ನೀಡಲಾಗುತ್ತಿದೆ ಎಂದರು. ಉತ್ತಮವಾಗಿದ್ದ ಚರಂಡಿಯನ್ನು ತೆರವುಗೊಳಿಸಿ ಮತ್ತೆ ಚರಂಡಿ ನಿರ್ಮಿಸುವ ಮೂಲಕ ಸಾರ್ವಜನಿಕರ ತೆರಿಗೆ ಹಣವನ್ನು ಅನಾವಶ್ಯವ ಪೋಲುಮಾಡುವ ಅವಶ್ಯಕತೆ ಏನಿತ್ತು ಎಂಬುದು ಪ್ರಶ್ನೆಯಾಗಿದೆ. ರಸ್ತೆ ಅವ್ಯವಸ್ತೆಯಿಂದಾಗಿ ಸಾರ್ವಜನಿಕರಿಗೆ ಓಡಾಡಲು ತೊಂದರೆ ಯಾಗುತ್ತಿದೆ.ಈ ವಿಷಯ ತಿಳಿದಿದ್ದರು ಶಾಸಕರಾಗಲಿ,ನಗರಸಭೆ ಅಧಿಕಾರಿಗಳಾಗಲಿ ತುಟಿ ಬಿಚ್ಚದೆ ಮೌನಕ್ಕೆ ಶರಣಾಗಿರುವುದು ಖಂಡನೀಯ.ರಸ್ತೆ ಅಗಲೀಕರಣಕ್ಕೆ ತ್ವರಿತವಾಗಿ ಮುಂದಾಗಬೇಕಿದೆ ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಚ್ಚರಿಕೆ ನೀಡಿದರು. ಈ ವೇಳೆ ಸ್ಥಳಕ್ಕೆ ಬಂದ ಲೋಕೊಪಯೋಗಿ ಇಲಾಖೆ ಎಇಇ ಶಿವಕುಮಾರ್ ಹಾಗೂ ನಗರಸಭೆ ಪೌರಾಯುಕ್ತರನ್ನು ತರಾಟೆ ತಗೆದುಕೊಂಡ ಪ್ರತಿಭಟನಾಕಾರರು.ಅಧಿಕಾರಿಗಳೇ ಒತ್ತುವರಿದಾರರಿಗೆ ಬೆಂಬಲವಾಗಿದ್ದೀರಾ ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿಗೆ ವರದಿ: ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ನಗರಸಭೆ ಪೌರಾಯುಕ್ತ ಆರ್.ಮಂಜುನಾಥ್ ಮಾತ ನಾಡಿ,ರಸ್ತೆ ಅಗಲೀಕರಣ ಹಾಗೂ ಒತ್ತುವರಿ ತೆರವು ಮಾಡುವ ಮುನ್ನ ನ್ಯಾಯಾಲಯ ನೀಡಿರುವ ಆದೇಶದಂತೆ ಪರಿಹಾರ ನೀಡಬೇಕಿದ್ದು, ಹಣದ ಕೊರತೆಯಿಂದ ಅಗಲೀ ಕರಣ ವಿಳಂಬವಾಗಿದೆ. ತ್ಯಾಜ್ಯ ನೀರು ಸಮರ್ಪಕವಾಗಿ ಹರಿಯಲಿ ಎಂದು ಚರಂಡಿ ನಿರ್ಮಿಸಲಾಗುತ್ತಿದೆ ಹೊರತು, ಅನ್ಯ ಉದ್ದೇಶ ದಿಂದಲ್ಲ.ಕಿರಿದಾದ ರಸ್ತೆಯಿಂದ ಉಂಟಾ ಗುತ್ತಿರುವ ಸಮಸ್ಯೆಯ ಕುರಿತು ಜಿಲ್ಲಾಧಿಕಾರಿಗೆ ವರದಿ ನೀಡಿ ರಸ್ತೆ ಅಗಲೀಕರಣ ಕುರಿತಂತೆ ಮನವಿ ಸಲ್ಲಿಸಲಾಗುವುದೆಂದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ರಮೇಶ್ ವೀರೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್‌ಎಲ್‌ಎನ್ ವೇಣು,ಕಾರ್ಯದರ್ಶಿ ಅಮ್ಮ,ಕಾನೂನು ಸಲಹೆಗಾರ ಆನಂದ ಕುಮಾರ್,ತಾಲೂಕು ಗೌರವಾಧ್ಯಕ್ಷ ಪು. ಮಹೇಶ್,ನಗರ ಅಧ್ಯಕ್ಷರು ಬಶೀರ್,ನಗರ ಕಾರ್ಯದರ್ಶಿ ಸುಬ್ರಮಣಿ, ಕಾರ್ಮಿಕ ಘಟಕದ ಅಧ್ಯಕ್ಷ ರವಿ, ಕೆಂಪೇಗೌಡ,ತಾಲೂಕು ಸಂಚಾಲಕ ಮಂಜು,ಡಿ. ಕ್ರಾಸ್ ಬಾಲು, ಕೋಡಿಹಳ್ಳಿ ಬಾಬು,ದಯಾನಂದ್ ,ಸೂರಿ, ತುಫೇಲ್ ವಾಸಿಂ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.