ಬೇಡಿಕೆ ಕುಸಿದು ನೇಪಥ್ಯದತ್ತ ಐತಿಹಾಸಿಕ ಕೋಟ ಹೋರಿಪೈರು

ಕಂಬಳಕ್ಕೆ ಸೀಮಿತವಾದ ಕೋಣಗಳು; ಮರೆಯಾಗುತ್ತಿದೆ ಸಾಂಸ್ಕೃತಿಕ ನಂಟು

Team Udayavani, Dec 19, 2019, 4:59 AM IST

XC-22

ಕೋಟ: ಕೃಷಿ ಸಂಪೂರ್ಣ ಯಾಂತ್ರೀಕೃತಗೊಂಡ ಪರಿಣಾಮ ಸಾಂಪ್ರದಾಯಿಕ ಪದ್ಧತಿ ಮರೆಯಾಗುತ್ತಿದೆ. ಹೀಗಾಗಿ ಹಿಂದೆ ಉಳುಮೆಗೆ ಬಳಕೆಯಾಗುತ್ತಿದ್ದ ಕೋಣಗಳು ಕೇವಲ ಕಂಬಳಕ್ಕೆ ಸೀಮಿತಗೊಳ್ಳುತ್ತಿದೆ. ಇದರ ಪರಿಣಾಮ ನೂರಾರು ವರ್ಷ ಇತಿಹಾಸವಿರುವ ಕೋಟ ಹೋರಿ ಪೈರು ನೇಪಥ್ಯಕ್ಕೆ ಸರಿಯುತ್ತಿದೆ.

ಹಿಂದೆ ಕೋಟದಲ್ಲಿ ಮಳೆಗಾಲ ಮುಕ್ತಾ ಯಗೊಂಡು ಕೃಷಿ ಕಾರ್ಯ ಆರಂಭವಾದಾಗ (ಅಕ್ಟೋಬರ್‌ ಮೊದಲ ವಾರದಲ್ಲಿ) ಕೋಣಗಳ ಪೈರು ಆರಂಭಗೊಳ್ಳುತಿತ್ತು. ಮಹಾರಾಷ್ಟ್ರದ ಫ‌ಂಡರಾಪುರ, ಹೊಳೆ ಸಾಲು, ಬೈಲುಹೊಂಗಲ, ಅಕ್ಕಿ ಆಲೂರು ಗಳಿಂದ ತಂದ ಕೋಣಗಳನ್ನು ಇಲ್ಲಿ ಮಾರಾಟ ಮಾಡಲಾ ಗುತ್ತಿತ್ತು. ಆದರೆ ಕೋಣಗಳಿಗೆ ಬೇಡಿಕೆ ಕುಸಿದಿದ್ದರಿಂದ ಈ ಬಾರಿ ಇದುವರೆಗೆ ಪೈರು ಆರಂಭಗೊಂಡಿಲ್ಲ.

ಶತಮಾನದ ಇತಿಹಾಸ
ಈ ಪೈರಿಗೆ ಮೂರು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಜಿಲ್ಲೆಯ ಏಕೈಕ ಅತಿ ದೊಡ್ಡ ಕೋಣಗಳ ಜಾತ್ರೆ ಇದಾಗಿದೆ. ಕೋಟ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಕೋಣಗಳ ಜಾತ್ರೆ ಹಿಂದೆ ನಡೆಯುತಿತ್ತು. ಐದಾರು ಮಂದಿ ವ್ಯಾಪಾರಿಗಳು ಕೋಣ ತಂದು ವ್ಯಾಪಾರ ನಡೆಸುತ್ತಿದ್ದರು.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಮುಂತಾದ ಕಡೆಗಳಿಂದ ಕೃಷಿಕರು ಕೋಣ ಖರೀದಿಗೆ ಇಲ್ಲಿಗೆ ಆಗಮಿಸುತ್ತಿದ್ದರು. ಇಲ್ಲಿನ ಕೋಣಗಳು ಕೃಷಿ ಕಾರ್ಯ ಹಾಗೂ ಕಂಬಳದ ಓಟಕ್ಕೆ ಹೆಚ್ಚು ಸೂಕ್ತ ಎನ್ನುವ ನಂಬಿಕೆ ಇತ್ತು.

ಕಂಬಳಕ್ಕೆ ಸೀಮಿತವಾದ ಕೋಣಗಳು
ಗದ್ದೆ ಉಳುಮೆಗೆ ಯಂತ್ರಗಳನ್ನು ಬಳಸುವುದರಿಂದ ಕೋಣಗಳು ಕೇವಲ ಶೇಂಗಾ ಬಿತ್ತನೆ ಮುಂತಾದ ಬೆರಳೆಣಿಕೆಯ ಕೃಷಿ ಚಟುವಟಿಕೆಗೆ ಹಾಗೂ ಕಂಬಳಕ್ಕೆ ಮಾತ್ರ ಸೀಮಿತವಾಗಿದೆ. ಹೀಗಾಗಿ ವರ್ಷದಲ್ಲಿ ಸಾವಿರಾರು ಮಾರಾಟವಾಗುತ್ತಿದ್ದ ಕೋಣಗಳು ನೂರಾರು ಸಂಖ್ಯೆಗೆ ಇಳಿದಿದೆ. ಓಟಕ್ಕೆ ಕೋಣಗಳನ್ನು ಆರಿಸುವಾಗ ಸಾಕಷ್ಟು ಅಳೆದು-ತೂಗಿ ಆಯ್ಕೆ ಮಾಡುವುದರಿಂದ ಕೋಣಗಳು ಮಾರಾಟವಾಗದೆ ಹಾಗೇ ಉಳಿಯುತಿತ್ತು.

ವರ್ಷದಲ್ಲಿ ಕನಿಷ್ಠ 400ಕ್ಕಿಂತ ಕಡಿಮೆ ಕೋಣ ಮಾರಾಟವಾದರೆ ವ್ಯಾಪಾರಿಗಳಿಗೆ ನಷ್ಟವಾಗುತಿತ್ತು.
ಸೌಕರ್ಯ ನೀಡಿದರೂ ನಡೆಸಲಾಗುತ್ತಿಲ್ಲ ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡ ಪರಿಣಾಮ ಸ್ಥಳಾವಕಾಶವಿಲ್ಲದೆ ಹೋರಿ ಪೈರು ನಿಲ್ಲುವ ಹಂತಕ್ಕೆ ಬಂದಿತ್ತು ಅನಂತರ ಎ.ಪಿ.ಎಂ. ಜಾಗದಲ್ಲಿ ಸ್ಥಳಾವಕಾಶ ನೀಡಿದ್ದರು. ಮೂಲಸೌಕರ್ಯಗಳಿಲ್ಲದೆ ವ್ಯಾಪಾರಿಗಳು ಹಿಂದೇಟು ಹಾಕಿದಾಗ ಸ್ಥಳೀಯ ಕೋಟ ಗ್ರಾ.ಪಂ. ಪೈರಿಗೆ ಬೇಕಾದ ಎಲ್ಲ ವ್ಯವಸ್ಥೆ ನೀಡಿತ್ತು. ಇದೀಗ ಎ.ಪಿ.ಎಂ.ಸಿ. ವತಿಯಿಂದ ಅಗತ್ಯ ಸಹಕಾರದ ಭರವಸೆ ನೀಡಿದೆ.

ಮರೆಯಾಗುವುದೇ ಸಾಂಸ್ಕೃತಿಕ ನಂಟು ?
ಕೋಣಗಳ ಪೈರು ಇಲ್ಲಿನ ಸಾಂಸ್ಕೃತಿಕ ನಂಟಾಗಿ ಬೆಳೆದು ಬಂದಿದೆ. ಇಲ್ಲಿನ ವ್ಯವಹಾರಗಳು ನಂಬಿಕೆಯ ಆಧಾರದಲ್ಲಿ ನಡೆಯುತಿತ್ತು. ಹಿಂದೆ ರೈತರ ಕೈಯಲ್ಲಿ ಕೋಣ ಖರೀದಿಗೆ ಹಣವಿರುತ್ತಿರಲಿಲ್ಲ. ಆದರೂ ಇಲ್ಲಿನ ವ್ಯಾಪಾರಸ್ಥರು ಚಿಕ್ಕ ಮೊತ್ತದ ಮುಂಗಡ ಪಡೆದು ಕೋಣಗಳನ್ನು ನೀಡುತ್ತಿದ್ದರು. ಮುಂಗಾರು ಫಸಲು ಮಾರಾಟವಾದ ಮೇಲೆ ನಾಲ್ಕೈದು ತಿಂಗಳ ಅನಂತರ ಹಣವನ್ನು ವ್ಯಾಪಾರಿಗಳಿಗೆ ನೀಡಲಾಗುತಿತ್ತು. ಖರೀದಿ ಮಾಡಿದ ಕೋಣದಲ್ಲಿ ಯಾವುದೇ ದೋಷವಿದ್ದರು ಅದನ್ನು ವಾಪಾಸು ನೀಡುವ ಕ್ರಮವಿತ್ತು. ಪೈರಿನ ಯಜಮಾನ ಹಾಗೂ ರೈತನ ನಡುವೆ ಸಮನ್ವಯಕಾರನಾಗಿ ವ್ಯಾಪಾರ ಕುದುರಿಸುವ ಮಧ್ಯವರ್ತಿಯ ವ್ಯಾಪಾರ ಕ್ರಮ ಅತ್ಯಂತ ಸ್ವಾರಸ್ಯಕರವಾಗಿರುತಿತ್ತು.

ಬೇಡಿಕೆ ಇಲ್ಲದಿರುವುದರಿಂದ ಸ್ಥಗಿತ
ಹಿಂದೆ ನಾಲ್ಕು ತಿಂಗಳಲ್ಲಿ 1ಸಾವಿರಕ್ಕೂ ಹೆಚ್ಚು ಕೋಣ ಮಾರಾಟವಾಗುತಿತ್ತು. ಕಳೆದ ವರ್ಷ 200-300ಕೋಣ ಮಾರಾಟವಾಗಿ ನಷ್ಟವಾಗಿತ್ತು. ಪ್ರತಿ ವರ್ಷ ರೈತರು, ಕಂಬಳದ ಯಜಮಾನರು ಕೋಣಗಳಿಗೆ ಮುಂಗಡ ಬುಕ್ಕಿಂಗ್‌ ಮಾಡುತ್ತಾರೆ. ಆದರೆ ಈ ಬಾರಿ ಬೆರಳೆಣಿಕೆಯ ಸಂಖ್ಯೆಯಲ್ಲಿ ಬೇಡಿಕೆ ಬಂದಿದೆ. ಹೀಗಾಗಿ ಪೈರು ನಡೆಸಲು ಸಾಧ್ಯವಾಗಲಿಲ್ಲ. ಹೆಚ್ಚಿನ ಬೇಡಿಕೆ ಬಂದರೆ ಮಾರ್ಚ್‌ ತಿಂಗಳಲ್ಲಿ ಶಿವರಾತ್ರಿ ಪೈರು ನಡೆಯಲಿದೆ.
– ಮೋಹನದಾಸ್‌ ಭಂಡಾರಿ, ಶಿವಗಿರಿ ಗಿಳಿಯಾರು, ಪೈರಿನ ಉಸ್ತವಾರಿ

ಟಾಪ್ ನ್ಯೂಸ್

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

1-libbb

Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ

sidda dkshi

CM-DCM ಮಹಾರಾಷ್ಟ್ರ ಚುನಾವಣ ಪ್ರಚಾರದಲ್ಲಿ ಭಾಗಿ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ

HDK (3)

Siddaramaiah; ಕೊಳ್ಳೆ ಹೊಡೆಯುತ್ತಿದ್ದರೂ ನಿಮ್ಮನ್ನು ಮುಟ್ಟಬಾರದಾ: ಎಚ್‌ಡಿಕೆ

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

1-libbb

Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ

sidda dkshi

CM-DCM ಮಹಾರಾಷ್ಟ್ರ ಚುನಾವಣ ಪ್ರಚಾರದಲ್ಲಿ ಭಾಗಿ

police

Kumbala: ಸಂತ್ರಸ್ತೆಯ ತಾಯಿ ಆತ್ಮಹ*ತ್ಯೆ: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.